Coffee Powder for Skin: ಚರ್ಮಕ್ಕೆ ಕಾಫಿಪುಡಿ...ಏನೆಲ್ಲಾ ಉಪಯೋಗ, ಬಳಸುವ ವಿಧಾನ ಹೇಗೆ ನೋಡಿ..!
ಕಾಫಿಪುಡಿಯಿಂದ ನಮ್ಮ ಚರ್ಮಕ್ಕೆ ದೊರೆಯುವ ಪ್ರಯೋಜನ ಕೇಳಿದರೆ ಖಂಡಿತ ನೀವು ಆಶ್ಚರ್ಯಪಡುತ್ತೀರಿ. ಕಾಫಿಪುಡಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಚರ್ಮಕ್ಕೆ ಬಹಳ ಉಪಯುಕ್ತವಾಗಿದೆ. ಸೂರ್ಯನ ನೇರಳಾತೀತ ಕಿರಣಗಳಿಗೆ ಹೆಚ್ಚಾಗಿ ಮೈ ಒಡ್ಡಿಕೊಳ್ಳುವುದರಿಂದ ಚರ್ಮಕ್ಕೆ ಅನೇಕ ರೀತಿಯ ಅಪಾಯಗಳು ಉಂಟು.
ಬೆಳಗ್ಗೆ ಎದ್ದ ಕೂಡಲೇ ಕಾಫಿ, ಹೊರಗಿನಿಂದ ಮನೆಗೆ ಬಂದಾಗ ಕಾಫಿ, ಹೀಗೆ ಕಾಫಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಹೋಗಿದೆ. ಕಾಫಿ ಇಲ್ಲದೆ ಒಂದು ದಿನವನ್ನು ಊಹಿಸಿಕೊಳ್ಳಲು ಕೂಡಾ ಸಾಧ್ಯವಿಲ್ಲ. ಆದರೆ ಈ ಕಾಫಿ ಪಾನೀಯವಾಗಿ ಮಾತ್ರವಲ್ಲ, ನಮ್ಮ ಸೌಂದರ್ಯಕ್ಕೆ ಕೂಡಾ ಬಹಳ ಉಪಯುಕ್ತವಾಗಿದೆ. ನಮ್ಮ ಚರ್ಮದ ಸೌಂದರ್ಯದಲ್ಲಿ ಕೂಡಾ ಕಾಫಿ ಪುಡಿ ಬಹಳ ಮಹತ್ವದ ಸ್ಥಾನ ಪಡೆದಿದೆ.
ಕಾಫಿಪುಡಿಯಿಂದ ನಮ್ಮ ಚರ್ಮಕ್ಕೆ ದೊರೆಯುವ ಪ್ರಯೋಜನ ಕೇಳಿದರೆ ಖಂಡಿತ ನೀವು ಆಶ್ಚರ್ಯಪಡುತ್ತೀರಿ. ಕಾಫಿಪುಡಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಚರ್ಮಕ್ಕೆ ಬಹಳ ಉಪಯುಕ್ತವಾಗಿದೆ. ಸೂರ್ಯನ ನೇರಳಾತೀತ ಕಿರಣಗಳಿಗೆ ಹೆಚ್ಚಾಗಿ ಮೈ ಒಡ್ಡಿಕೊಳ್ಳುವುದರಿಂದ ಚರ್ಮಕ್ಕೆ ಅನೇಕ ರೀತಿಯ ಅಪಾಯಗಳು ಉಂಟು. ಆದರೆ ಈ ಕೆಫೀನ್, ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಇದರಿಂದ ಚರ್ಮಗಳ ಕೋಶಗಳ ಬೆಳವಣಿಗೆ ಉತ್ತಮವಾಗಿರುತ್ತದೆ. ತ್ವಚೆಗೆ ಹೊಳಪು ನೀಡುತ್ತದೆ. ಅಷ್ಟೇ ಅಲ್ಲ, ರಕ್ತಪರಿಚಲನೆಯನ್ನು ಕೂಡಾ ಸುಧಾರಿಸುತ್ತದೆ.
ಚರ್ಮಕ್ಕೆ ಕಾಫಿಯನ್ನು ಬಳಸುವುದು ಹೇಗೆ..?
1. ಫೇಸ್ ಸ್ಕ್ರಬ್
ಕಾಫಿ ಪುಡಿಯನ್ನು ಫೇಸ್ ಸ್ಕ್ರಬ್ ಆಗಿ ಬಳಸಬಹುದು. ಇದನ್ನು ತಯಾರಿಸಲು ಸ್ವಲ್ಪ ಕಾಫಿ ಪುಡಿ, ಸ್ವಲ್ಪ ಬ್ರೌನ್ ಶುಗರ್, ಮತ್ತು ಆಲಿವ್ ಎಣ್ಣೆ ಸೇರಿಸಿ ಎಲ್ಲವೂ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿ. ನಿಮ್ಮ ಬೆರಳುಗಳಿಂದ ಕ್ಲಾಕ್ ವೈಸ್, ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಚರ್ಮದ ಮೇಲಿನ ಡೆಡ್ ಸ್ಕಿನ್ ನಿವಾರಣೆಯಾಗುತ್ತದೆ.
2. ಸ್ಕಾಲ್ಪ್ ಎಫ್ಫೋಲಿಯೇಟರ್
ಕಾಫಿಪುಡಿ ಸ್ಕಾಲ್ಪ್ ಸಮಸ್ಯೆಗೆ ಕೂಡಾ ಸಹಾಯ ಮಾಡುತ್ತದೆ. ಅರ್ಧ ಕಪ್ ಕಾಫಿ ಪುಡಿಯಿಂದ ಒದ್ದೆ ಕೂದಲಿಗೆ 2-3 ನಿಮಿಷ ಮಸಾಜ್ ಮಾಡಿ. ನಂತರ ಎಂದಿನಂತೆ ನಿಮ್ಮ ಶಾಂಪೂ ಮತ್ತು ಕಂಡಿಷನರ್ ಬಳಸಿ ತೊಳೆಯಿರಿ. ಇದು ಸ್ಕಾಲ್ಪ್‌ನಲ್ಲಿ ಸಂಗ್ರಹವಾಗಿರುವ ಡೆಡ್ ಸ್ಕಿನ್‌ಗಳನ್ನು ತೆಗೆಯುತ್ತದೆ.
3. ಬಾಡಿ ಸ್ಕ್ರಬ್
ಕಾಫಿ, ಚರ್ಮವನ್ನು ಬಿಗಿಗೊಳಿಸುತ್ತದೆ. ಕಾಫಿ, ಬ್ರೌನ್ ಶುಗರ್ ಮತ್ತು ಆಲಿವ್ ಎಣ್ಣೆಯಿಂದ ಪೇಸ್ಟ್ ತಯಾರಿಸಿ ಮತ್ತು ಅಗತ್ಯವಿರುವ ಜಾಗಗಳಲ್ಲಿ ಮಸಾಜ್ ಮಾಡಿ. ನಿಮ್ಮ ಚರ್ಮದ ವಿಧವನ್ನು ಅವಲಂಬಿಸಿ ನೀವು ಪ್ರತಿ ದಿನ ಕೂಡಾ ಸ್ಕ್ರಬ್ ಮಾಡಬಹುದು.
4. ತ್ವಚೆಗೆ ಹೊಳಪು ನೀಡುತ್ತದೆ
ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲು ಕಾಫಿ ಮಾಸ್ಕ್ ಟ್ರೈ ಮಾಡಬಹುದು. ಅರ್ಧ ಕಪ್ ಕಾಫಿ ಪುಡಿಯಲ್ಲಿ ಸ್ವಲ್ಪ ಹಾಲು ಸೇರಿಸಿ ಪೇಸ್ಟ್ ಮಾಡಿ. ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿ ಹದಿನೈದು ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ನೀವು ಬದಲಾವಣೆ ಗಮನಿಸಬಹುದು.
5. ಉಬ್ಬಿದ ಕಣ್ಣುಗಳ ಸಮಸ್ಯೆ ನಿವಾರಿಸುತ್ತದೆ
ಬಹಳಷ್ಟು ಜನರಿಗೆ ಕಣ್ಣಿನ ಕೆಳಭಾಗ ಉಬ್ಬಿದಂತೆ ಕಾಣುತ್ತದೆ. ಈ ಸಮಸ್ಯೆಯನ್ನು ಕಾಫಿ ಪುಡಿಯಿಂದ ನಿವಾರಿಸಬಹುದು. ಕಾಫಿಯಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ ಮತ್ತು ಕಣ್ಣಿನ ಸುತ್ತಲಿನ ಊತವನ್ನು ಕಡಿಮೆ ಮಾಡುತ್ತದೆ. ಡಿಕಾಕ್ಷನ್ ಬಳಸಿದ ನಂತರ ಉಳಿದ ಕಾಫಿ ಪುಡಿಯನ್ನು ತಣ್ಣಗಾಗಲು ಬಿಡಿ. ಇದನ್ನು ಕಣ್ಣುಗಳ ಸುತ್ತಲೂ ಹಚ್ಚಿ ಬಹಳ ಮೃದುವಾಗಿ ಕೆಲವು ಸೆಕೆಂಡ್‌ಗಳ ಕಾಲ ಮಸಾಜ್ ಮಾಡಿ. 5 ನಿಮಿಷಗಳ ನಂತರ ತೊಳೆಯಿರಿ. ಅಥವಾ ಕಾಫಿ ಐಸ್ ಕ್ಯೂಬ್‌ಗಳನ್ನು ತಯಾರಿಸಿ ಅದರಿಂದ ಕೂಡಾ ನೀವು ಮಸಾಜ್ ಮಾಡಬಹುದು. ಆದರೆ ಉತ್ತಮ ಕಾಫಿಪುಡಿಯನ್ನು ನಿಮ್ಮ ಚರ್ಮದ ಆರೈಕೆಗೆ ಬಳಸುವುದನ್ನು ಮರೆಯಬೇಡಿ.
ವಿಭಾಗ