ಅಯ್ಯೋ! ನಾನು ಏನೂ ಮಾಡ್ತಾ ಇಲ್ಲ ಅಂತ ಅನಿಸ್ತಿದ್ಯಾ? ಹಾಗಾದ್ರೆ ಖಂಡಿತ ನೀವು ಈಗಿನಿಂದಲೇ ನಿಮ್ಮ ಗೋಲ್ ಸೆಟ್ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅಯ್ಯೋ! ನಾನು ಏನೂ ಮಾಡ್ತಾ ಇಲ್ಲ ಅಂತ ಅನಿಸ್ತಿದ್ಯಾ? ಹಾಗಾದ್ರೆ ಖಂಡಿತ ನೀವು ಈಗಿನಿಂದಲೇ ನಿಮ್ಮ ಗೋಲ್ ಸೆಟ್ ಮಾಡಿ

ಅಯ್ಯೋ! ನಾನು ಏನೂ ಮಾಡ್ತಾ ಇಲ್ಲ ಅಂತ ಅನಿಸ್ತಿದ್ಯಾ? ಹಾಗಾದ್ರೆ ಖಂಡಿತ ನೀವು ಈಗಿನಿಂದಲೇ ನಿಮ್ಮ ಗೋಲ್ ಸೆಟ್ ಮಾಡಿ

ನೀವು ಸಮಯ ಸಿಕ್ಕಾಗೆಲ್ಲ ಏನಾದರೊಂದು ಹೊಸತನ್ನು ಕಲಿಯುತ್ತಾ ಹೋದರೆ ಮಾತ್ರ ನಿಮಗೆ ನಾನು ಏನೋ ಮಾಡುತ್ತಾ ಇದ್ದೇನೆ. ನಾನು ಎಲ್ಲರಂತೆ ಬದುಕುತ್ತಿದ್ದೇನೆ ಎನಿಸುತ್ತದೆ. ಇಲ್ಲದೇ ಇದ್ದರೆ. ಅಯ್ಯೋ! ನಾನು ಏನೂ ಮಾಡ್ತಾ ಇಲ್ಲ ಅಂತ ತಲೆಕೆಡಿಸಿಕೊಳ್ಳಬೇಕಾಗುತ್ತದೆ.

ಸಮಯ ಸಿಕ್ಕಾಗೆಲ್ಲ ಏನಾದರೊಂದು ಹೊಸತನ್ನು ಕಲಿಯಿರಿ
ಸಮಯ ಸಿಕ್ಕಾಗೆಲ್ಲ ಏನಾದರೊಂದು ಹೊಸತನ್ನು ಕಲಿಯಿರಿ

ಎಲ್ಲರೂ ಒಂದೇ ಸಮಯದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಒಂದೇ ಪ್ರಯತ್ನದಲ್ಲಿ ಮಾಡಲು ಸಾಧ್ಯವಿಲ್ಲ. ಆದರೆ ನಮ್ಮಷ್ಟಕ್ಕೆ ನಾವು ಏನೂ ಮಾಡದೆಯೇ. ನನ್ನಿಂದ ಏನೂ ಸಾಧಿಸಲು ಆಗಲಿಲ್ಲ ಎಂದು ಅಂದುಕೊಳ್ಳುವುದು ತುಂಬಾ ತಪ್ಪು. ಪ್ರಯತ್ನ ಪಟ್ಟು ಆಗದೇ ಹೋದರೆ ಮತ್ತೆ ಪ್ರಯತ್ನ ಮಾಡಬೇಕು. ನೀವು ಸಮಯ ಸಿಕ್ಕಾಗೆಲ್ಲ ಏನಾದರೊಂದು ಹೊಸತನ್ನು ಕಲಿಯುತ್ತಾ ಹೋದರೆ ಮಾತ್ರ ನಿಮಗೆ ನಾನು ಏನೋ ಮಾಡುತ್ತಾ ಇದ್ದೇನೆ. ನಾನು ಎಲ್ಲರಂತೆ ಬದುಕುತ್ತಿದ್ದೇನೆ ಎನಿಸುತ್ತದೆ. ಇಲ್ಲದೇ ಇದ್ದರೆ. ಅಯ್ಯೋ! ನಾನು ಏನೂ ಮಾಡ್ತಾ ಇಲ್ಲ ಅಂತ ತಲೆಕೆಡಿಸಿಕೊಳ್ಳಬೇಕಾಗುತ್ತದೆ.

ನಾವು ಏನನ್ನಾದರೂ ಸಾಧಿಸಲು ವಿಫಲವಾದಾಗ ನಾವು ಖಂಡಿತವಾಗಿಯೂ ನಿರಾಶೆಗೊಳ್ಳುತ್ತೇವೆ. ಏಕೆಂದರೆ ನಾವು ಕಷ್ಟಪಟ್ಟು ಪ್ರಯತ್ನಿಸಿದಾಗ ಅದು ನಮಗೆ ಸಿಗದಿದ್ದಾಗ ಸ್ವಲ್ಪ ನಿರಾಶೆ ಉಂಟಾಗುತ್ತದೆ. ಆದರೆ ಶೀಘ್ರದಲ್ಲೇ ನಾವು ಇನ್ನೊಂದು ಪ್ರಯತ್ನಕ್ಕೆ ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. ಆ ಸಮಯದಲ್ಲಿ ಎದುರಾಗುವ ಸಮಸ್ಯೆಯನ್ನು ಮತ್ತು ಸವಾಲುಗಳನ್ನು ನಾವೇ ಪರಿಹರಿಸಿಕೊಳ್ಳಬೇಕು.

ಖಿನ್ನತೆಯಿಂದ ಹೊರಬನ್ನಿ

ಖಿನ್ನತೆಗೆ ಒಳಗಾದಾಗ ನಕಾರಾತ್ಮಕ ಆಲೋಚನೆಗಳು ಹೆಚ್ಚು ಸಾಮಾನ್ಯವಾಗಿದೆ. ಅವುಗಳನ್ನು ಜಯಿಸಬೇಕು. ನಾನೇನೂ ಮಾಡತ್ತಾ ಇಲ್ಲ ಎಂಬುದರ ಬದಲಾಗಿ ನಾನು ಎಲ್ಲವನ್ನೂ ಮಾಡಬಲ್ಲೆ ಎಂದು ಮುನ್ನುಗ್ಗಬೇಕು. ಇಲ್ಲವಾದರೆ ನೀವು ಬರಿ ನಕಾರಾತ್ಮಕ ಆಲೋಚನೆಗಳಲ್ಲೇ ಮುಳುಗಬೇಕಾಗುತ್ತದೆ.

ನಿಮ್ಮ ಗುರಿ ಸೆಟ್ ಮಾಡಿ

ನಮ್ಮ ಸ್ವಂತ ಇಚ್ಛೆ ಮಾತ್ರ ನಮ್ಮನ್ನು ಪ್ರೇರೇಪಿಸುತ್ತದೆ. ಹಾಗಾಗಿ ಮೊದಲು ನೀವು ಸುವಿಚಾರಗಳನ್ನು ಹಂಚಿಕೊಳ್ಳಿ. ನಿಮ್ಮಲ್ಲೇ ನಿಮಗೆ ಒಳ್ಳೆಯ ಮಾತುಗಳನ್ನು ಹೇಳಿಕೊಳ್ಳಿ. ಹೀಗೆ ಮಾಡಿದರೆ ಮಾತ್ರ ನೀವು ಏಳಿಗೆ ಸಾಧಿಸಲು ಸಾಧ್ಯವಾಗುತ್ತದೆ. ಅನವಶ್ಯಕವಾಗಿ ಬೇಸರ ಮಾಡಿಕೊಳ್ಳುವುದು ತಪ್ಪುತ್ತದೆ. ನಾವು ಮಾಡಬೇಕೆ ಅಥವಾ ಬೇಡವೇ ಎಂದು ನಿರ್ಧರಿಸುವಾಗ ನಮಗೆ ನಮ್ಮ ಮೇಲೆ ಎಂದಿಗೂ ಗೊಂದಲ ಇರಬಾರದು.

ಈ ರೀತಿ ಮಾಡಿ
1. ನಿಮ್ಮ ಗುರಿಗಳನ್ನು ಬರೆಯಿರಿ.

2. ನಿಮ್ಮ ಗುರಿಗಳನ್ನು ಕಾರ್ಯರೂಪಕ್ಕೆ ತನ್ನಿ

3. ನಿಮ್ಮ ಗುರಿಗಳನ್ನು ಸ್ನೇಹಿತರು ಅಥವಾ ಮಾರ್ಗದರ್ಶಕರೊಂದಿಗೆ ಹಂಚಿಕೊಳ್ಳಿ.

4. ಪ್ರಗತಿಯತ್ತ ಗಮನವಿರಲಿ ಪರಿಪೂರ್ಣತೆ ತಾನಾಗೇ ಬರುತ್ತದೆ

5. ನಿಮ್ಮನ್ನು ನೀವು ಹುರಿದುಂಬಿಸಿಕೊಳ್ಳಿ.

ನಿಮ್ಮ ಗುರಿಗಳು ಹೀಗಿರಲಿ
ಈ ವರ್ಷ ನಾನು ಕಾರ್ ಓಡಿಸುತ್ತೇನೆ (ಇದೊಂದು ಉದಾಹರಣೆ)
1. ವೃತ್ತಿ

2. ಶಿಕ್ಷಣ

3. ಆರೋಗ್ಯ

4. ಸಂಬಂಧಗಳು

5. ವೈಯಕ್ತಿಕ ಬೆಳವಣಿಗೆ

6. ಹಣಕಾಸು

7. ಪ್ರಯಾಣ

8. ಹವ್ಯಾಸಗಳು

ಹೀಗೆ ಇದರಲ್ಲಿ ನೀವು ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಆಸಕ್ತಿ ಯಾವುದು ಎಂದು ಮೊದಲು ತಿಳಿದುಕೊಂಡು ನಂತರ ಆ ಗುರಿಯನ್ನು ಸಾಧಿಸಿಕೊಳ್ಳಿ. ಆಗ ನಿಮಗೆ ನಿಮ್ಮ ಮೇಲೆ ಆತ್ಮವಿಶ್ವಾಸ ಹೆಚ್ಚುತ್ತದೆ.

Whats_app_banner