Special Recipes: ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸದೇ ಮಾಡಬಹುದಾದ 6 ಸುಲಭ ರೆಸಿಪಿಗಳು ಇಲ್ಲಿವೆ
Recipes without onion and garlic: ಖಿಚಡಿ, ಕರಿ, ಸೂಪ್ ಸೇರಿದಂತೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದೆಯೂ ಬಾಯಿ ನೀರೂರಿಸುವ ಖಾದ್ಯಗಳನ್ನ ತಯಾರಿಸಬಹುದು.
ದಿನವೂ ತಿಂದದ್ದೇ ತಿಂದು ಬೇಜಾರಾಗಿದ್ಯಾ? ಹೊಸತೇನಾದರೂ ಮಾಡಬೇಕು ಅಂದುಕೊಂಡಿದ್ದೀರಾ? ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಲೆ ಜಾಸ್ತಿ ಆಗಿದ್ಯಾ? ಚಿಂತಿಸಬೇಡಿ. ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದೆಯೂ ಬಾಯಿ ನೀರೂರಿಸುವ ಖಾದ್ಯಗಳನ್ನ ತಯಾರಿಸಬಹುದು. ಇಲ್ಲಿದೆ 6 ರೆಸಿಪಿಗಳು..
1. ಅಕ್ಕಿ ಮತ್ತು ಹೆಸರು ಬೇಳೆ ಖಿಚಡಿ:
ಬೇಕಾಗುವ ಪದಾರ್ಥಗಳು: ಬಾಸ್ಮತಿ ಅಕ್ಕಿ, ಹೆಸರು ಬೇಳೆ, ಕ್ಯಾರೆಟ್, ಬಟಾಣಿ, ಶುಂಠಿ ಪೇಸ್ಟ್, ಅರಿಶಿನ, ಜೀರಿಗೆ ಪುಡಿ, ತುಪ್ಪ, ನಿಂಬೆ ರಸ, ತಾಜಾ ಕೊತ್ತಂಬರಿ ಸೊಪ್ಪು, ಉಪ್ಪು.
ಮಾಡುವ ವಿಧಾನ : ಕ್ಯಾರೆಟ್, ಬಟಾಣಿ, ಶುಂಠಿ ಪೇಸ್ಟ್, ಅರಿಶಿನ ಮತ್ತು ಜೀರಿಗೆ ಪುಡಿಯೊಂದಿಗೆ ಅಕ್ಕಿ ಮತ್ತು ಹೆಸರು ಬೇಳೆಯನ್ನು ಬೇಯಿಸಿ. ಬೇಯಿಸುವಾಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ತುಪ್ಪ, ನಿಂಬೆ ರಸ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಕೊನೆಯಲ್ಲಿ ಸೇರಿಸಿ 2 ನಿಮಿಷ ಕಲಕಿ. ಖಿಚಡಿ ರೆಡಿ..
2. ಪಾಲಕ್ ಮತ್ತು ಆಲೂ ಕರಿ:
ಬೇಕಾಗುವ ಪದಾರ್ಥಗಳು: ಕತ್ತರಿಸಿದ ಆಲೂಗಡ್ಡೆ, ಪಾಲಕ್ ಸೊಪ್ಪು, ಟೊಮೆಟೊ, ಶುಂಠಿ ಪೇಸ್ಟ್, ಹಸಿ ಮೆಣಸಿನಕಾಯಿ, ಅರಿಶಿನ, ಜೀರಿಗೆ ಪುಡಿ, ದನಿಯಾ/ಕೊತ್ತಂಬರಿ ಪುಡಿ, ಗರಂ ಮಸಾಲಾ, ಉಪ್ಪು.
ಮಾಡುವ ವಿಧಾನ: ಸಣ್ಣಗೆ ಕತ್ತರಿಸಿದ ಆಲೂಗಡ್ಡೆಯನ್ನು ಎಣ್ಣೆಯಲ್ಲಿ ಹುರಿಯಿರಿ, ನಂತರ ಶುಂಠಿ ಪೇಸ್ಟ್ ಮತ್ತು ಗರಂ ಮಸಾಲೆ ಸೇರಿಸಿ. ಅದಕ್ಕೆ ಟೊಮೆಟೊ ಮತ್ತು ಪಾಲಕ ಸೊಪ್ಪು ಹಾಕಿ. ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತು ಆಲೂಗಡ್ಡೆ ಮೃದುವಾಗುವವರೆಗೆ ಬೇಯಿಸಿ.
3. ಹೂಕೋಸು ಮತ್ತು ಬಟಾಣಿ ಫ್ರೈ:
ಬೇಕಾಗುವ ಸಾಮಾಗ್ರಿಗಳು: ಹೂಕೋಸು, ಬಟಾಣಿ, ಟೊಮೆಟೊ, ಶುಂಠಿ ಪೇಸ್ಟ್, ಹಸಿ ಮೆಣಸಿನಕಾಯಿ, ಅರಿಶಿನ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ, ನಿಂಬೆ ರಸ, ತಾಜಾ ಕೊತ್ತಂಬರಿ ಸೊಪ್ಪು, ಉಪ್ಪು, ಕೆನೆ (ಐಚ್ಛಿಕ)
ಮಾಡುವ ವಿಧಾನ: ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಹೂಕೋಸು ಮತ್ತು ಬಟಾಣಿಗಳನ್ನು ಹುರಿಯಿರಿ. ಶುಂಠಿ ಪೇಸ್ಟ್, ಹಸಿ ಮೆಣಸಿನಕಾಯಿ ಮತ್ತು ಗರಂ ಮಸಾಲೆ ಸೇರಿಸಿ. ನಂತರ ಟೊಮೆಟೊದಲ್ಲಿ ಮಿಶ್ರಣ ಮಾಡಿ. ಹೂಕೋಸು ಮತ್ತು ಬಟಾಣಿ ಮೃದುವಾಗುವವರೆಗೆ ಬೇಯಿಸಿ. ಕೊನೆಯಲ್ಲಿ ನಿಂಬೆ ರಸ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ. ಇದಕ್ಕೆ ಬೇಕಾದರೆ ಕೆನೆ ಸೇರಿಸಿಕೊಳ್ಳಬಹುದು.
4. ಮಸೂರ್ ದಾಲ್ ಸೂಪ್:
ಬೇಕಾಗುವ ಪದಾರ್ಥಗಳು: ಮಸೂರ್ ದಾಲ್ (ಕೆಂಪು ಬೇಳೆ), ಕ್ಯಾರೆಟ್, ಸೆಲರಿ, ಟೊಮೆಟೊ, ಶುಂಠಿ ಪೇಸ್ಟ್, ಅರಿಶಿನ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ವೆಜಿಟೇಬಲ್ ಬ್ರೋತ್, ನಿಂಬೆ ರಸ, ಉಪ್ಪು.
ಮಾಡುವ ವಿಧಾನ: ವೆಜಿಟೇಬಲ್ ಬ್ರೋತ್ನಲ್ಲಿ ಕ್ಯಾರೆಟ್, ಸೆಲರಿ, ಟೊಮೆಟೊ, ಶುಂಠಿ ಪೇಸ್ಟ್, ಅರಿಶಿನ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ ಜೊತೆ ಕೆಂಪು ಬೇಳೆಯನ್ನು ಬೇಯಿಸಿ. ಅದು ನುಣ್ಣಗೆ ಆಗುವ ತನಕ ಕಲುಕುತ್ತಾ ಇರಿ. ಕೊನೆಯಲ್ಲಿ ನಿಂಬೆ ರಸ ಮತ್ತು ಉಪ್ಪು ಸೇರಿಸಿ.
5. ಪಾಲಕ್ ಪನೀರ್
ಬೇಕಾಗುವ ಪದಾರ್ಥಗಳು: ಫ್ರೆಶ್ ಪನೀರ್, ಪಾಲಕ್ ಸೊಪ್ಪು, ಟೊಮೆಟೊ, ಶುಂಠಿ ಪೇಸ್ಟ್, ಹಸಿಮೆಣಸಿನಕಾಯಿ, ಗರಂ ಮಸಾಲಾ, ಜೀರಿಗೆ ಪುಡಿ, ಅರಿಶಿನ, ಕೆನೆ, ಉಪ್ಪು.
ಮಾಡುವ ವಿಧಾನ: ಪಾಲಕ್ ಸೊಪ್ಪು, ಟೊಮೆಟೊ ಮತ್ತು ಹಸಿ ಮೆಣಸಿನಕಾಯಿಗಳನ್ನು ಮಿಶ್ರಣ ಮಾಡಿಟ್ಟುಕೊಳ್ಳಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಶುಂಠಿ ಪೇಸ್ಟ್ ಗರಂ ಮಸಾಲೆ ಹಾಕಿ. ನಂತರ ಅದಕ್ಕೆ ನಂತರ ಪಾಲಕ್-ಟೊಮ್ಯಾಟೊ-ಹಸಿ ಮೆಣಸಿನಕಾಯಿ ಮಿಶ್ರಣ ಸೇರಿಸಿ. ನಂತರ ಪನೀರ್ ಮತ್ತು ಕೆನೆ ಹಾಕಿ ಬೇಯಿಸಿ.
6. ಆಲೂಗಡ್ಡೆ ಮತ್ತು ಬಟಾಣಿ ಕರಿ:
ಬೇಕಾಗುವ ಪದಾರ್ಥಗಳು: ಕತ್ತರಿಸಿದ ಆಲೂಗಡ್ಡೆ, ಬಟಾಣಿ, ಟೊಮೆಟೊ, ಶುಂಠಿ ಪೇಸ್ಟ್, ಹಸಿ ಮೆಣಸಿನಕಾಯಿ, ಅರಿಶಿನ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲಾ, ಕೆನೆ (ಐಚ್ಛಿಕ), ಉಪ್ಪು.
ಮಾಡುವ ವಿಧಾನ: ಬಾಣಲೆಯಲ್ಲಿ ಆಲೂಗಡ್ಡೆ ಚೂರುಗಳನ್ನು ಹುರಿಯಿರಿ. ಶುಂಠಿ ಪೇಸ್ಟ್, ಹಸಿ ಮೆಣಸಿನಕಾಯಿ ಮತ್ತು ಗರಂ ಮಸಾಲೆ ಸೇರಿಸಿ. ನಂತರ ಟೊಮೆಟೊ, ಬಟಾಣಿ ಮಿಶ್ರಣ ಮಾಡಿ. ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತು ಆಲೂಗಡ್ಡೆ-ಬಟಾಣಿ ಮೃದುವಾಗುವವರೆಗೆ ಬೇಯಿಸಿ. ಬೇಕಿದ್ದರೆ ಕೊನೆಯಲ್ಲಿ ಕೆನೆ ಸೇರಿಸಿ.
ವಿಭಾಗ