ಕನ್ನಡ ಸುದ್ದಿ / ಜೀವನಶೈಲಿ /
Kitchen Tips: ಸಾಂಬಾರ್‌ಗೆ ತೆಂಗಿನಕಾಯಿ ಬಳಸುವ ವಿಧಾನ ಹೇಗೆ, ತರಕಾರಿ ಹೆಚ್ಚುವ ಸಮಯ ಉಳಿಸೋದ್ಹೇಗೆ; ಇಲ್ಲಿದೆ ಕಿಚನ್ ಟಿಪ್ಸ್
Kitchen Tips: ಪ್ರತಿದಿನ ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯುವ ಗೃಹಿಣಿಯರಿಗೆ ಬೇಗ ಕೆಲಸ ಆದರೆ ರಿಲೀಫ್ ಎನಿಸುತ್ತದೆ. ಆದ್ದರಿಂದ ಗೃಹಿಣಿಯರಿಗೆ ಅನುಕೂಲವಾಗುವ ಕೆಲವೊಂದು ಕಿಚನ್ ಟಿಪ್ಸ್ ಇಲ್ಲಿವೆ.
ಗೃಹಿಣಿಯರಿಗೆ ಅನುಕೂಲವಾಗುವಂಥ ಟಿಪ್ಸ್ (PC: Pixabay)
Kitchen Tips: ಗೃಹಿಣಿಯರನ್ನು ಬಹುಮುಖ ಪ್ರತಿಭೆಗಳು ಎಂದೇ ಕರೆಯಬಹುದು. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಏನಾದರೊಂದು ಕೆಲಸ ಮಾಡುತ್ತಲೇ ಇರುತ್ತಾರೆ. ಬೆಳಗ್ಗೆ ಎದ್ದು ಕಾಫಿ ಮಾಡುವಾಗಿನಿಂದ ಹಿಡಿದು ರಾತ್ರಿ ದಿಂಬಿಗೆ ಒರಗುವವರೆಗೂ ಆಕೆಗೆ ವಿಶ್ರಾಂತಿ ಇರುವುದಿಲ್ಲ. ಇಂಥ ಮಹಿಳೆಯರ ಅಡುಗೆ ಮನೆ ಕೆಲಸ ಸುಲಭವಾಗಲು ಇಲ್ಲಿ ಕೆಲವೊಂದು ಟಿಪ್ಸ್ ನೀಡಲಾಗಿದೆ.
- ಅಡುಗೆ ಮಾಡಲು ನೀವು ರಾತ್ರಿ ಚನಾದಾಲ್/ಕಡ್ಲೆಕಾಳು ನೆನೆಸಬೇಕಿತ್ತು. ಆದರೆ ಅದನ್ನು ಮರೆತಿದ್ದೀರಾ? ಚಿಂತೆ ಬೇಡ, ಅವನ್ನು ಕುದಿಯುವ ನೀರಿನಲ್ಲಿ 1 ಗಂಟೆ ಸಮಯ ಕುದಿಸಿ ನಂತರ ಕುಕ್ಕರ್‌ಗೆ ಸ್ವಲ್ಪ ಸಾಸಿವೆ ಎಣ್ಣೆಯನ್ನು ಸೇರಿಸುವ ಮೂಲಕ ಕುಕ್ ಮಾಡಿ.
- ಪ್ರತಿ ಬಾರಿ ನೀವು ಅಡುಗೆ ಮಾಡುವಾಗ ತೆಂಗಿನಕಾಯಿ ಬಳಸಬೇಕು. ಆದರೆ ಅದನ್ನು ತುರಿಯುತ್ತಾ ಕೂರಲು ಸಮಯ ಇರುವುದಿಲ್ಲ. ಆದ್ದರಿಂದ ಒಂದು ಐಡಿಯಾ ಮಾಡಿ. ನೀವು ಬಿಡುವಾಗಿರುವಾಗಿ ತೆಂಗಿನಕಾಯಿ ಚೂರುಗಳನ್ನು ಸಣ್ಣದಾಗಿ ಕತ್ತರಿಸಿ, ಅದನ್ನು ಫುಡ್ ಪ್ರೊಸೆಸರ್ ಅಥವಾ ಮಿಕ್ಸರ್ ಗ್ರೈಂಡರ್‌ನಲ್ಲಿ (ನೀರು ಹಾಕದೆ) ಗ್ರೈಂಡ್ ಮಾಡಿ. ನಂತರ ಇದನ್ನು ಏರ್ ಟೈಟ್ ಜಾರ್‌ನಲ್ಲಿ ಸೇರಿಸಿ ಫ್ರೀಜರ್‌ನಲ್ಲಿ ಇಡಿ. ನಿಮಗೆ ಅಗತ್ಯ ಇದ್ದಾಗ ತೆಂಗಿನಕಾಯಿ ಬಳಸಬಹುದು.
- ಚಪಾತಿ ಮಾಡುವಾಗ ಪ್ರತಿ ಬಾರಿಯೂ ನೀವು ಹಿಟ್ಟು ಕಲಸಬೇಕು. ಅದರ ಬದಲಿಗೆ ಒಮ್ಮೆ ಹೆಚ್ಚಾಗಿ ಚಪಾತಿ ಹಿಟ್ಟನ್ನು ಮಾಡಿ. ನಿಮಗೆ ಬೇಕಾದಷ್ಟನ್ನು ಮಾತ್ರ ತೆಗೆದುಕೊಂಡು ಉಳಿದದ್ದನ್ನು ಜಿಪ್ ಲಾಕ್ ಬ್ಯಾಗ್‌ನಲ್ಲಿ ಹಾಕಿಡಿ. ಇದನ್ನು ನೀವು 15 ದಿನಗಳವರೆಗೂ ಸ್ಟೋರಿ ಮಾಡಿ ಇಡಬಹುದು.
- ಒಮ್ಮೆ ಒಂದಿಷ್ಟು ಈರುಳ್ಳಿಗಳನ್ನು ಹೆಚ್ಚಿ ಫ್ರೈ ಮಾಡಿಕೊಂಡು ಅದನ್ನು ರೆಫ್ರಿಜರೇಟರ್‌ನಲ್ಲಿ ಸ್ಟೋರಿ ಮಾಡಿ. ನೀವು ಮಾಡುವ ಖಾರ ಅಡುಗೆಗೆ ಈ ಫ್ರೈಡ್ ಆನಿಯನ್ ಬಳಸಬಹುದು. ಇದರಿಂದ ಸಮಯವೂ ಉಳಿತಾಯ ಆಗುತ್ತದೆ. ಅಡುಗೆ ರುಚಿಯೂ ಹೆಚ್ಚುತ್ತದೆ.
- ಬೆಳಗ್ಗೆ ನೀವು ತರಕಾರಿ ಬಳಸಿ ಏನಾದರೂ ಅಡುಗೆ ಮಾಡಬೇಕೆಂದುಕೊಂಡಿದ್ದರೆ, ಹಿಂದಿನ ದಿನವೇ ತರಕಾರಿಗಳನ್ನು ಹೆಚ್ಚಿ, ಜಿಪ್ ಲಾಕ್ ಬ್ಯಾಗ್‌ನಲ್ಲಿ ಹಾಕಿಡಿ. ಇದರಿಂದ ನೀವು ಮರುದಿನ ಅದನ್ನು ಫ್ರೆಶ್ ಆಗಿ ಬಳಸಬಹುದು.
- ಹೋಳು ಮಾಡಿದ ತೆಂಗಿನ ಕಾಯಿ ಹೆಚ್ಚು ಕಾಲ ಬಾಳಿಕೆ ಬರಬೇಕು ಎಂದರೆ ಸ್ಟೌವ್ ಹಚ್ಚಿ ತೆಂಗಿನ ಹೋಳಿನ ಒಳಭಾಗ ಕಪ್ಪಾಗುವವರೆಗೂ ಬಿಸಿ ಮಾಡಿ, ಇದರಿಂದ ನೀವು ರೆಫ್ರಿಜರೇಟರ್‌ನಲ್ಲಿ ಇಡದಿದ್ದರೂ ತೆಂಗಿನಕಾಯಿ ಹೆಚ್ಚು ದಿನ ಬಾಳಿಕೆ ಬರುತ್ತದೆ.
ಇದನ್ನೂ ಓದಿ: ರೆಫ್ರಿಜರೇಟರ್ ಬಾಗಿಲು ತೆಗೆದರೆ ಕೆಟ್ಟ ವಾಸನೆ ಬರ್ತಿದ್ಯಾ, ಇದನ್ನು ಹೋಗಲಾಡಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ವಿಭಾಗ
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ದ ಲೈಫ್ಸ್ಟೈಲ್ ವಿಭಾಗ ನೋಡಿ.