New Year 2025: ಹೊಸ ವರ್ಷಕ್ಕೆ ಗಾರ್ಡನಿಂಗ್‌ ಮಾಡುವ ರೆಸಲ್ಯೂಷನ್ ನಿಮ್ಮದಾಗಿದ್ದರೆ ಈ ಟಿಪ್ಸ್‌ ನಿಮಗಾಗಿ
ಕನ್ನಡ ಸುದ್ದಿ  /  ಜೀವನಶೈಲಿ  /  New Year 2025: ಹೊಸ ವರ್ಷಕ್ಕೆ ಗಾರ್ಡನಿಂಗ್‌ ಮಾಡುವ ರೆಸಲ್ಯೂಷನ್ ನಿಮ್ಮದಾಗಿದ್ದರೆ ಈ ಟಿಪ್ಸ್‌ ನಿಮಗಾಗಿ

New Year 2025: ಹೊಸ ವರ್ಷಕ್ಕೆ ಗಾರ್ಡನಿಂಗ್‌ ಮಾಡುವ ರೆಸಲ್ಯೂಷನ್ ನಿಮ್ಮದಾಗಿದ್ದರೆ ಈ ಟಿಪ್ಸ್‌ ನಿಮಗಾಗಿ

New Year 2025: ಮನೆ ಸುತ್ತ ಮುತ್ತ ಒಂದಿಷ್ಟು ಜಾಗ ಇದ್ದರೆ ಅದನ್ನು ಖಾಲಿ ಬಿಡುವ ಬದಲಿಗೆ ಗಾರ್ಡನಿಂಗ್‌ ಮಾಡಿದರೆ ನೋಡಲೂ ಸುಂದರವಾಗಿರುತ್ತದೆ, ಮನಸ್ಸಿಗೂ ಖುಷಿ ಎನಿಸುತ್ತದೆ. ಹೊಸ ವರ್ಷಕ್ಕೆ ಗಾರ್ಡನಿಂಗ್‌ ಮಾಡುವ ರೆಸಲ್ಯೂಷನ್ ನಿಮ್ಮದಾಗಿದ್ದರೆ ಈ ಟಿಪ್ಸ್‌ ನಿಮಗಾಗಿ.

ಹೊಸ ವರ್ಷಕ್ಕೆ ಗಾರ್ಡನಿಂಗ್‌ ಮಾಡುವ ರೆಸಲ್ಯೂಷನ್ ನಿಮ್ಮದಾಗಿದ್ದರೆ ಈ ಟಿಪ್ಸ್‌ ನಿಮಗೆ ಅನುಕೂಲವಾಗಬಹುದು
ಹೊಸ ವರ್ಷಕ್ಕೆ ಗಾರ್ಡನಿಂಗ್‌ ಮಾಡುವ ರೆಸಲ್ಯೂಷನ್ ನಿಮ್ಮದಾಗಿದ್ದರೆ ಈ ಟಿಪ್ಸ್‌ ನಿಮಗೆ ಅನುಕೂಲವಾಗಬಹುದು (PC: Unsplash)

Gardening Tips: ಎಲ್ಲರಿಗೂ ತಮ್ಮದೇ ಆದ ಮನೆ ಇರಬೇಕು, ಮನೆ ಸುತ್ತ ಒಂದು ಪುಟ್ಟ ಕೈತೋಟ ಇರಬೇಕು ಎಂಬ ಆಸೆ ಇರುತ್ತದೆ. ಮನೆ ಸುತ್ತಮುತ್ತ ಜಾಗ ಇದ್ದರೂ ಕಾರಣಾಂತರಗಳಿಂದ ಗಾರ್ಡನಿಂಗ್‌ ಮಾಡಲು ಸಾಧ್ಯವಾಗುವುದಿಲ್ಲ. ಮನೆ ಸುತ್ತಮುತ್ತ ಮನೆಗೆ ಅಗತ್ಯವಿರುವ ತರಕಾರಿ ಸೊಪ್ಪುಗಳನ್ನು ಬೆಳೆಸುವುದು ಅಥವಾ ಉದ್ಯಾನವನ ನಿರ್ಮಿಸಿ, ಸುಂದರವಾದ ಹೂಗಿಡಗಳನ್ನು ಬೆಳೆಸಿದರೆ ಮನೆಯ ಅಂದ ಮತ್ತಷ್ಟು ಹೆಚ್ಚುತ್ತದೆ.

ಪ್ರತಿದಿನ ಹಾ ಹುಲ್ಲುಹಾಸಿನ ಮೇಲೆ ನಡೆಯುವುದು, ಆ ಸುಂದರ ಹೂವಿನ ಗಿಡಗಳನ್ನು ಆರೈಕೆ ಮಾಡುವುದು ಮಾಡಿದರೆ ಅದಕ್ಕಿಂತ ಖುಷಿ ಬೇರೊಂದಿಲ್ಲ. ನಿಮ್ಮ ಮನೆ ಸುತ್ತಲೂ ಜಾಗವಿದ್ದು ಈ ಹೊಸ ವರ್ಷದಂದು ನೀವು ಕೂಡಾ ಗಾರ್ಡನಿಂಗ್‌ ಮಾಡಬೇಕೆಂದುಕೊಂಡಿದ್ದರೆ ನಿಮಗೆ ಇಲ್ಲಿ ಕೆಲವೊಂದು ಟಿಪ್ಸ್‌ ಇದೆ.

ಮೊದಲ ಬಾರಿ ಗಾರ್ಡನಿಂಗ್‌ ಮಾಡುವವರಿಗೆ ಟಿಪ್ಸ್‌

  • ಗಾರ್ಡನ್‌ನಲ್ಲಿ ಬೆಳೆಸಬೇಕೆಂದುಕೊಂಡಿರುವ ಬಹುತೇಕ ಸಸ್ಯಗಳಿಗೆ ಪ್ರತಿದಿನ ಕನಿಷ್ಠ 5-6 ಗಂಟೆಗಳ ಕಾಲ ಸೂರ್ಯನ ಬೆಳಕು ಬೇಕಾಗುತ್ತದೆ. ಆದ್ದರಿಂದ ಆದಷ್ಟು ಸೂರ್ಯನ ಬೆಳಕು ಹೆಚ್ಚಾಗಿ ಬೀಳುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ.
  • ಸಸ್ಯಗಳನ್ನು ಆಯ್ಕೆಮಾಡುವಾಗ ತಾಪಮಾನ, ಸ್ಥಳ, ಮಣ್ಣು ಮತ್ತು ಸೂರ್ಯನ ಬೆಳಕನ್ನು ಪರಿಗಣಿಸಿ. ಹೂವಿನ ಗಿಡಗಳಿಂತ ಸೊಪ್ಪು ಮತ್ತು ತರಕಾರಿಗಳು ಬೆಳೆಯುವುದು ಹಾಗೂ ನಿರ್ವಹಣೆ ಮಾಡುವುದು ಬಹಳ ಸುಲಭ.

ಇದನ್ನೂ ಓದಿ: 2025ರ ಶುಭಾಶಯಗಳು: ಕ್ಯಾಲೆಂಡರ್‌ ಬದಲಾದರೂ ಪ್ರೀತಿ ಶಾಶ್ವತವಾಗಿರಲಿ; ಹೊಸ ವರ್ಷಕ್ಕೆ ನಿಮ್ಮ ಪ್ರಿಯಕರನಿಗೆ ಈ ರೀತಿ ಶುಭ ಕೋರಿ

  • ಯಾವುದೇ ಗಿಡಗಳನ್ನು ನೆಡುವಾಗ ಮತ್ತೊಂದು ಗಿಡಗಳ ನಡುವೆ ಸಾಕಷ್ಟು ಸ್ಥಳವಿರಲಿ, ಹೆಚ್ಚು ಸಸ್ಯಗಳನ್ನು ನೆಡುವ ಆಸೆಯಿಂದ ಸ್ಥಳ ಬಿಡದ ಪಕ್ಕ ಪಕ್ಕದಲ್ಲೇ ಗಿಡಗಳನ್ನು ನೆಡಬೇಡಿ.
  • ಗಿಡಗಳನ್ನು ನೆಟ್ಟ ನಂತರ ಅವುಗಳಿಗೆ ನಿಯಮಿತವಾಗಿ ನೀರು ಹಾಕಿ, ಆದರೆ ಬೇಗ ಸಸ್ಯಗಳು ಬೆಳೆಯಬೇಕೆಂಬ ಆಸೆಯಿಂದ ಅತಿಯಾಗಿ ನೀರು ಹಾಕಬೇಡಿ.
  • ಗಿಡಗಳಿಗೆ ಪ್ರತಿ ವಾರ ಗೊಬ್ಬರ ಬೇಕಾಗುತ್ತದೆ. ನೀವು ಗಿಡಗಳನ್ನು ನೆಟ್ಟಿರುವ ಮಣ್ಣನ್ನು ಆಧರಿಸಿ ನೀವು ಗೊಬ್ಬರ ಆಯ್ಕೆ ಮಾಡಬೇಕಾಗುತ್ತದೆ.
  • ಸಸ್ಯಗಳ ನಡುವೆ ಬೆಳೆದಿರುವ ಕಳೆಯನ್ನು ನಿಯಮಿತವಾಗಿ ತೆಗೆದುಹಾಕಿ, ಇಲ್ಲದಿದ್ದರೆ ಕಳೆಗಳೇ ಬೇಗ ಬೆಳೆದು ಇತರ ಸಸ್ಯಗಳು ಬೆಳೆವಣಿಕೆ ಕುಂಠಿತವಾಗುತ್ತದೆ.
  • ಸಸ್ಯಗಳಿಗೂ ರೋಗ ಬರುವ ಸಾಧ್ಯತೆ ಇದೆ, ಆದ್ದರಿಂದ ಜೊರು ಗಾಳಿ, ಕೀಟಗಳು, ಪ್ರಾಣಿಗಳಿಂದ ಸಸ್ಯಗಳನ್ನು ರಕ್ಷಿಸಲು ರೋ ಕವರ್‌ಗಳನ್ನು ಬಳಸಿ, ನೈಸರ್ಗಿಕ ಕೀಟನಾಶಕಗಳಾದ ಬೇವಿನ ಎಣ್ಣೆ ಬಳಸಬಹುದು.
  • ತರಕಾರಿ, ಸೊಪ್ಪು ಅಥವಾ ಹೂಗಳಾಗಿರಲಿ ಸಸ್ಯಗಳು ಹೆಚ್ಚು ಬೆಳೆ ಬೆಳೆಯಲು ನಿಯಮಿತವಾಗಿ ಕೊಯ್ಲು ಮಾಡುವುದನ್ನು ಮರೆಯಬೇಡಿ.

ಇದನ್ನೂ ಓದಿ: ಅಡುಗೆ ಕಲಿಯುವ ರೆಸಲ್ಯೂಷನ್ ನಿಮ್ಮದಾಗಿದ್ದರೆ ಮೊದಲು ಅಡುಗೆ ಮನೆಯನ್ನು ಹೀಗೆ ರೆಡಿ ಮಾಡಿಕೊಳ್ಳಿ

  • ಮಣ್ಣಿನ ತೇವಾಂಶವನ್ನು ಉಳಿಸಿಕೊಳ್ಳಲು ಮಲ್ಚ್ ಸಹಾಯ ಮಾಡುತ್ತದೆ, ಇದು ಕಳೆಗಳನ್ನು ಕಡಿಮೆ ಮಾಡಿ ಪೋಷಕಾಂಶಗಳೊಂದಿಗೆ ಮಣ್ಣನ್ನು ಪೋಷಿಸುತ್ತದೆ. ಆದ್ದರಿಂದ ಗಿಡದ ಸುತ್ತಲೂ ಮಲ್ಚ್‌ ಬಳಸಿ
  • ಒಂದೇ ಸ್ಥಳದಲ್ಲಿ ವಿವಿಧ ಬೆಳೆಗಳನ್ನು ಬೆಳೆದರೆ ಒಳ್ಳೆಯದು, ಸಸ್ಯಗಳು ಆರೋಗ್ಯಕರವಾಗಿ ಬೆಳೆಯಲು ಟ್ರಿಮ್‌ ಮಾಡುತ್ತಿರಬೇಕು.
  • ಗಿಡಗಳ ಬುಡ ಮಾತ್ರವಲ್ಲ, ಎಳೆಗಳಲ್ಲಿ ಕೂಡಾ ಧೂಳು ಹೆಚ್ಚಾಗಿ ಸಂಗ್ರಹವಾಗುವುದರಿಂದ ಸ್ಪ್ರೇಯರ್‌ ಸಹಾಯದಿಂದ ಅಥವಾ ಕಡಿಮೆ ನೀರು ಹರಿಯುವ ಬಾಟಲ್‌ನಿಂದ ಗಿಡಗಳ ಎಳೆಗಳ ಮೇಲೆ ಕೂಡಾ ನಿಧಾನವಾಗಿ ನೀರು ಹಾಯಿಸಿ.
  • ಒಣ ಎಲೆಗಳು, ತರಕಾರಿ , ಹೂಗಳನ್ನು ಹೆಚ್ಚು ಸಮಯ ಗಿಡಗಳಲ್ಲಿ ಬಿಡದೆ ತೆಗೆಯುತ್ತಿರಿ.

ಈ ಟಿಪ್ಸ್‌ ಅನುಸರಿಸಿದರೆ ನಿಮ್ಮ ಮನೆ ಗಾರ್ಡನ್‌, ತನ್ನ ಸೌಂದರ್ಯದಿಂದಲೇ ಎಲ್ಲರನ್ನೂ ಆಕರ್ಷಿಸುತ್ತದೆ.

Whats_app_banner