Kitchen Tips: ರೆಫ್ರಿಜರೇಟರ್‌ ಬಾಗಿಲು ತೆಗೆದರೆ ಕೆಟ್ಟ ವಾಸನೆ ಬರ್ತಿದ್ಯಾ‌, ಇದನ್ನು ಹೋಗಲಾಡಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kitchen Tips: ರೆಫ್ರಿಜರೇಟರ್‌ ಬಾಗಿಲು ತೆಗೆದರೆ ಕೆಟ್ಟ ವಾಸನೆ ಬರ್ತಿದ್ಯಾ‌, ಇದನ್ನು ಹೋಗಲಾಡಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

Kitchen Tips: ರೆಫ್ರಿಜರೇಟರ್‌ ಬಾಗಿಲು ತೆಗೆದರೆ ಕೆಟ್ಟ ವಾಸನೆ ಬರ್ತಿದ್ಯಾ‌, ಇದನ್ನು ಹೋಗಲಾಡಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

Remove bad smell from your fridge: ಸ್ವಲ್ಪ ಆಹಾರ ಉಳಿದರೂ ಸಾಕು ಪ್ರತಿದಿನ ಅದನ್ನು ರೆಫ್ರಿಜರೇಟರ್‌ಗೆ ತುಂಬುತ್ತೇವೆ. ಆದರೆ ಮರುದಿನ ಅದನ್ನು ಬಳಸುವುದನ್ನು ಮರೆಯುತ್ತೇವೆ. ಹೀಗೆ ಮಾಡುವುದರಿಂದ ರೆಫ್ರಿಜರೇಟರ್‌ ಪೂರ್ತಿ ಕೆಟ್ಟ ವಾಸನೆ ಹರಡುತ್ತದೆ, ನೀವು ಒಮ್ಮೆಲೇ ಫ್ರಿಡ್ಜ್‌ ಬಾಗಿಲು ತೆರೆದರೆ ವಾಸನೆ ಮೂಗಿಗೆ ಬಡಿಯುತ್ತದೆ. 

ಈಗಂತೂ ಬಹುತೇಕ ಎಲ್ಲರ ಮನೆಯಲ್ಲೂ ರೆಫ್ರಿಜರೇಟರ್‌ ಇರುತ್ತದೆ. ಇದೂ ಕೂಡಾ ನಮ್ಮ ಜೀವನದ ಒಂದು ಭಾಗವಾಗಿದೆ. ನಾನಾ ರೀತಿಯ ತರಕಾರಿ, ಹಣ್ಣು, ಅಡುಗೆ ಪದಾರ್ಥಗಳು ಸೇರಿದಂತೆ ಎಲ್ಲವನ್ನೂ ರೆಫ್ರಿಜರೇಟರ್‌ನಲ್ಲಿಡುತ್ತೇವೆ. ಇವೆಲ್ಲವೂ ಸೇರಿ ಒಳಗೆ ಕೆಟ್ಟ ವಾಸನೆ ಹರಡುತ್ತದೆ. ಆದರೆ ಈ ವಾಸನೆ ಹೋಗಲು ಇಲ್ಲಿ ಕೆಲವೊಂದು ಟಿಪ್ಸ್‌ಗಳಿವೆ ಅದನ್ನು ಪಾಲಿಸಿದರೆ ಸಾಕು. 
icon

(1 / 8)

 ನಿಮಗೆ ಸಮಯವಾದಾಗಲೆಲ್ಲಾ ರೆಫ್ರಿಜರೇಟರನ್ನು ಕ್ಲೀನ್‌ ಮಾಡುವುದನ್ನು ಮರೆಯಬೇಡಿ. ಆಗಲೇ ವಾಸನೆ ಬಂದಿರುವ ಆಹಾರವನ್ನು, ತರಕಾರಿ ಸೇರಿದಂತೆ ಯಾವುದೇ ವಸ್ತುಗಳನ್ನು ಒಳಗೆ ಇಡಬೇಡಿ. ಒಂದು ವೇಳೆ ಫ್ರಿಡ್ಜ್‌ ಒಳಗೆ ಇಟ್ಟ ಯಾವುದೇ ತರಕಾರಿ ಅಥವಾ ಯಾವುದೇ ಆಹಾರ ಪದಾರ್ಥ ವಾಸನೆ ಬರುತ್ತಿದ್ದರೆ ಕೂಡಲೇ ಅದರನ್ನು ತೆಗೆದು ಹೊರಗೆ ಇಡಿ. 
icon

(2 / 8)

ಓಟ್ಸ್‌ ಬಳಸುವುದರಿಂದ ರೆಫ್ರಿಜರೇಟರ್‌ನಲ್ಲಿ ಕೆಟ್ಟ ವಾಸನೆ ತೊಲಗಿಸಿಬಹುದು. ಕೇಳಲು ಆಶ್ಚರ್ಯವಾದರೂ ಇದು ನಿಜ. ಒಂದು ಅಲ್ಯುಮಿನಿಯಂ ಪಾತ್ರೆಯಲ್ಲಿ ಸ್ವಲ್ಪ ಓಟ್ಸ್‌ ತುಂಬಿ ರೆಫ್ರಿಜರೇಟರ್‌ನಲ್ಲಿ ಇಟ್ಟರೆ ಅದು ಕೆಟ್ಟ ವಾಸನೆಯನ್ನು ಹೀರಿಕೊಳ್ಳುತ್ತದೆ.  
icon

(3 / 8)

ಇದ್ದಿಲು ಒಂದು ಅದ್ಭುತ ಡಿಯೋಡೈಜರ್.‌ ಓಂದು ಪಾತ್ರೆ ತುಂಬಾ ಇದ್ದಿಲು ತುಂಬಿ ರೆಫ್ರಿಜರೇಟರ್‌ನಲ್ಲಿಟ್ಟು ತಾಪಮಾನವನ್ನು ಕನಿಷ್ಠ ಮಟ್ಟಕ್ಕೆ ಸೆಟ್‌ ಮಾಡಿ. ಒಂದು ಗಂಟೆ ನಂತರ ರೆಫ್ರಿಜರೇಟರ್‌ ಬಾಗಿಲು ತೆಗೆದು ನೋಡಿ. 
icon

(4 / 8)

ರೆಫ್ರಿಜರೇಟರ್‌ನಲ್ಲಿ ವಾಸನೆಯನ್ನು ಹೋಗಲಾಡಿಸಲು ಎಸೆನ್ಷಿಯಲ್‌ ಆಯಿಲ್‌ ಕೂಡಾ  ಬಳಸಬಹುದು.  ಹತ್ತಿ ಉಂಡೆಗಳನ್ನು ನಿಮಗೆ ಇಷ್ಟವಾದ ಎಸೆನ್ಷಿಯಲ್‌ ಆಯಿಲ್‌ನಲ್ಲಿ  ನೆನೆಸಿ ಅದನ್ನು ಫ್ರಿಡ್ಜ್‌ ಒಳಗೆ ಇಡಿ. ಕೆಲವು ಗಂಟೆಗಳ ನಂತರ ಫ್ರಿಡ್ಜ್ ಬಾಗಿಲು ತೆಗೆದರೆ ಕೆಟ್ಟ ವಾಸನೆ ಹೋಗಿರುತ್ತದೆ. ಮತ್ತು ಒಳಗಿನಿಂದ ಉತ್ತಮ ಪರಿಮಳ ಬರುತ್ತದೆ.  ಮತ್ತು ವಾಸನೆಯು ಉತ್ತಮವಾಗಿರುತ್ತದೆ. ಆದರೆ ಎಸೆನ್ಷಿಯಲ್‌ ಆಯಿಲ್‌ ಫ್ರಿಡ್ಜ್‌ ಒಳಗೆ ಇಟ್ಟಾಗ ಆಹಾರ ಪದಾರ್ಥಗಳನ್ನು ಸ್ವಲ್ಪ ಹೊತ್ತು ಹೊರಗೆ ತೆಗೆದಿಡಿ. ಎಸೆನ್ಷಿಯಲ್‌ ಆಯಿಲ್‌ ಹೊರ ತೆಗೆದಾಗ ಆಹಾರ ಪದಾರ್ಥಗಳನ್ನು ಒಳಗೆ ಇಡಿ. 
icon

(5 / 8)

ಫ್ರಿಡ್ಜ್‌ನ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ವಿನೆಗರ್ ಕೂಡಾ ಪರಿಣಾಮಕಾರಿಯಾಗಿದೆ. ಒಂದು ಕಪ್ ವೈಟ್‌ ವಿನೆಗರನ್ನು ಫ್ರಿಜ್ ಒಳಗೆ ಇಡಿ, ಒಂದು ಗಂಟೆ ನಂತರ ಅದರನ್ನು ಹೊರಗೆ ತೆಗೆಯಿರಿ. 
icon

(6 / 8)

ನಿಂಬೆಹಣ್ಣಿನ ಚೂರುಗಳನ್ನು ಫ್ರಿಡ್ಜ್‌ನ ಒಳಭಾಗ ಅಲ್ಲಲ್ಲಿ ಇಡಿ. ಇದು ಒಳಗಿನ ಕೆಟ್ಟ ವಾಸನೆಯನ್ನು ಹೀರಿಕೊಂಡು ತಾಜಾ ವಾಸನೆ ಸೂಸುತ್ತದೆ. 
icon

(7 / 8)

ಹಾಗೇ ಕೆಟ್ಟ ದುರ್ವಾಸನೆಯನ್ನು ಹೋಗಲಾಡಿಸಲು ಬೇಕಿಂಗ್‌ ಸೋಡಾ ಕೂಡಾ ಬಹಳ ಉತ್ತಮವಾದದ್ದು. ಒಂದು ಕಪ್‌ನಲ್ಲಿ ಬೇಕಿಂಗ್‌ ಸೋಡಾ ಸೇರಿಸಿ ಅದರನ್ನು ರೆಫ್ರಿಜರೇಟರ್‌ನಲ್ಲಿಟ್ಟು ಒಂದು ಗಂಟೆ ಬಿಟ್ಟರೆ ಒಳಗಿನ ವಾಸನೆ ತೊಲಗುತ್ತದೆ. 
icon

(8 / 8)

ಇತರ ಗ್ಯಾಲರಿಗಳು