Bigg Boss Kannada 11: ನಮ್ಮ ಕುಟುಂಬದಲ್ಲಿ ಯಾರಿಗೂ ಸಮಸ್ಯೆ ಇಲ್ಲ, ನಾನೂ ಚೆನ್ನಾಗಿದ್ದೀನಿ ಎಂದ ಗೋಲ್ಡ್ ಸುರೇಶ್ ತಂದೆ
- Bigg Boss Kannada 11: ಬಿಗ್ ಬಾಸ್ ಮನೆಯಿಂದ ಸ್ಪರ್ಧಿ ಗೋಲ್ಡ್ ಸುರೇಶ್ ಹೊರಬಂದಿರುವ ಕಾರಣ ನಿಗೂಢವಾಗಿದೆ. ಗೋಲ್ಡ್ ಸುರೇಶ್ ಬಗ್ಗೆ ಮಾತನಾಡಿದ ಬಿಗ್ ಬಾಸ್, ಮನೆಯಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣ ಆಗಿರುವುದರಿಂದ ನೀವು ಕೂಡಲೇ ಹೊರಡಬೇಕೆಂದು ಆದೇಶ ಮಾಡಿದ್ದರು. ಹೀಗಾಗಿ ತಮ್ಮ ಮನೆಯಲ್ಲಿ ಏನಾಗಿರಬಹುದು ಎಂದು ಆತಂಕದಲ್ಲಿ ಗೋಲ್ಡ್ ಸುರೇಶ್ ಕಣ್ಣೀರು ಹಾಕಿದ್ದರು. ಗೋಲ್ಡ್ ಸುರೇಶ್ ಅವರ ತಂದೆಯ ಅನಾರೋಗ್ಯದ ಬಗ್ಗೆಯೂ ಚರ್ಚೆ ನಡೆದಿತ್ತು. ಆದರೆ ಎಲ್ಲಾ ಚರ್ಚೆಗಳಿಗೆ ಅನುಮಾನಗಳಿಗೆ ಖುದ್ದು ಸ್ಪಷ್ಟನೆ ಕೊಟ್ಟಿರುವ ಸುರೇಶ್ ಅವರ ತಂದೆ ಶಿವಗೌಡ, ತಾನು ಆರೋಗ್ಯವಾಗಿದ್ದು ತಮ್ಮ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೆ ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಹೊರಬರಲು ಅಸಲಿ ಕಾರಣ ಏನು ಎಂಬುದು ಇಂದಿನ ಎಪಿಸೋಡ್ ನಲ್ಲಿ ತಿಳಿಯುವ ಸಾಧ್ಯತೆ ಇದೆ.