2025ರ ಶುಭಾಶಯಗಳು: ಕ್ಯಾಲೆಂಡರ್ ಬದಲಾದರೂ ಪ್ರೀತಿ ಶಾಶ್ವತವಾಗಿರಲಿ; ಹೊಸ ವರ್ಷಕ್ಕೆ ನಿಮ್ಮ ಪ್ರಿಯಕರನಿಗೆ ಈ ರೀತಿ ಶುಭ ಕೋರಿ
New Year 2025 Wishes: ಯಾವುದೇ ಶುಭ ಸಮಾರಂಭ ಇರಲಿ, ಖುಷಿಯ ವಿಚಾರವಾಗಲಿ ಆತ್ಮೀಯರಿಗೆ ಅಭಿನಂದನೆ ಸಲ್ಲಿಸುವುದು, ಶುಭಾಶಯ ಕೋರುವುದು ಸಾಮಾನ್ಯ. ಹೊಸ ವರ್ಷ ಬರುತ್ತಿದೆ. ನೀವು ನಿಮ್ಮ ಪ್ರಿಯಕರನಿಗೆ ವಿಭಿನ್ನವಾಗಿ ಶುಭ ಕೋರಬೇಕು ಎಂದುಕೊಂಡಲ್ಲಿ ಇಲ್ಲಿ ಕೆಲವು ಸುಂದರ ಸಾಲುಗಳಿವೆ. ವಾಟ್ಸಾಪ್ ಸಂದೇಶ ಅಥವಾ ಗ್ರೀಟಿಂಗ್ ಕಾರ್ಡ್ ಮೂಲಕ ನಿಮ್ಮ ಹುಡುಗನಿಗೆ ಶುಭ ಕೋರಿ.
2025ರ ಶುಭಾಶಯಗಳು: ದಿನಗಳು ಕಳೆಯುತ್ತಿವೆ, ವರ್ಷಗಳು ಉರುಳುತ್ತಿವೆ. ಮೊನ್ನೆ ಮೊನ್ನೆಯಷ್ಟೇ 2024ನ್ನು ಸ್ವಾಗತಿಸಿದ್ದೇವೆ ಎನಿಸುತ್ತಿದೆ. ಅಷ್ಟರಲ್ಲಿ ಒಂದು ವರ್ಷ ಮುಗಿದು ಹೊಸ ವರ್ಷ ಬರುತ್ತಿದೆ. 2025 ನ್ನು ಸ್ವಾಗತಿಸಲು ಇನ್ನು 15 ದಿನಗಳಷ್ಟೇ ಬಾಕಿ ಉಳಿದಿದೆ. ಹಿಂದೂಗಳಿಗೆ ಹೊಸ ವರ್ಷ ಎಂದರೆ ಅದು ಯುಗಾದಿ, ಆದರೂ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜನವರಿ 1ನ್ನು ಕೂಡಾ ಹೊಸ ವರ್ಷವನ್ನಾಗಿ ಆಚರಿಸುತ್ತಾ ಬರಲಾಗಿದೆ.
ಹೊಸ ವರ್ಷ ಬರುತ್ತಿದ್ದಂತೆ ಪಾರ್ಟಿ, ಪ್ರವಾಸ, ರೆಸ್ಯುಲೂಷನ್ ಸೇರಿದಂತೆ ನಾನಾ ವಿಚಾರಗಳ ಬಗ್ಗೆ ಪ್ಲ್ಯಾನ್ ಮಾಡಲಾಗುತ್ತದೆ. ಹೋಟೆಲ್, ರೆಸಾರ್ಟ್‌ಗಳಲ್ಲಿ ಹೊಸ ವರ್ಷ ಆಚರಿಸಲು ಈಗಲೇ ತಯಾರಿ ನಡೆದಿದೆ. ಡಿಸೆಂಬರ್ 31 ಮಧ್ಯರಾತ್ರಿ 12 ದಾಟುತ್ತಿದ್ದಂತೆ ಜನರು ಪಟಾಕಿ ಸಿಡಿಸಿ ಹರ್ಷೋದ್ಗಾರದಿಂದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಹೊಸ ಹೊಸ ಕನಸುಗಳು, ಗುರಿಗಳನ್ನು ಇಟ್ಟುಕೊಂಡು ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ನಿಮ್ಮ ಬದುಕಲ್ಲಿ ಸಂತೋಷವೇ ತುಂಬಿರಲಿ ಎಂದು ಆತ್ಮೀಯರಿಗೆ ಹಾರೈಸುತ್ತಾರೆ. ಹಾಗಾದರೆ ಈ ಹೊಸ ವರ್ಷಕ್ಕೆ ಮೊದಲು ಯಾರಿಗೆ ಶುಭ ಕೋರಬೇಕು ಎಂದುಕೊಂಡಿದ್ದೀರ? ಹೊಸ ವರ್ಷದ ಆಚರಣೆಯಲ್ಲಿ ನಿಮ್ಮ ಪ್ರಿಯಕರ ನಿಮ್ಮೊಂದಿಗೆ ಇದ್ದರೆ ಅಥವಾ ಅವರಿಂದ ನೀವು ದೂರ ಇದ್ದರೆ, ಈ ಸುಂದರ ಸಾಲುಗಳ ಮೂಲಕ ವಿಶ್ ಮಾಡಿ.
ಪ್ರಿಯಕರನಿಗೆ ಹೊಸ ವರ್ಷದ ಶುಭಾಶಯಗಳು
- ಹೊಸ ವರ್ಷಕ್ಕೆ ಜೊತೆಯಾಗಿ ಕಾಲಿಡುತ್ತಿದ್ದೇವೆ, ನಿನ್ನ ಪ್ರೀತಿಗೆ ಎಂದೆಂದಿಗೂ ಅಭಾರಿಯಾಗಿರುವೆ, ಇಬ್ಬರೂ ಜೊತೆಯಾಗಿ ಇನ್ನಷ್ಟು ಸುಂದರ ಸಿಹಿ ಕ್ಷಣಗಳನ್ನು ಸೃಷ್ಟಿಸೋಣ, ಹೊಸ ವರ್ಷದ ಶುಭಾಶಯಗಳು ಚೆಲುವ.
- ಹಿಂದಿನ ವರ್ಷ ಸುಂದರ ನೆನಪುಗಳಿಂದ ತುಂಬಿರಲು ನೀನೇ ಕಾರಣ. ಅಸಾಧಾರಣ ಕ್ಷಣಗಳನ್ನು ಒಟ್ಟಿಗೆ ರಚಿಸುವ ಮತ್ತೊಂದು ವರ್ಷ ಇಲ್ಲಿದೆ. ಹೊಸ ವರ್ಷದ ಶುಭಾಶಯಗಳು ನನ್ನ ಪ್ರಿಯ.
- ಮುಂಬರುವ ವರ್ಷವು ಹಿಂದೆಂದಿಗಿಂತಲೂ ನಮ್ಮನ್ನು ಹತ್ತಿರಕ್ಕೆ ತರಲಿ. ಪ್ರೀತಿ ಮತ್ತು ಸಂತೋಷದಿಂದ ತುಂಬಿದ ಹೊಸ ವರ್ಷವನ್ನು ನಾನು ಸ್ವಾಗತಿಸಲು ಬಯಸುತ್ತೇನೆ. ನನ್ನ ಹೃದಯದ ರಾಜನಿಗೆ ಹೊಸ ವರ್ಷದ ಶುಭಾಶಯಗಳು.
- ನಿನ್ನೊಂದಿಗೆ ಕಳೆದ ಪ್ರತಿ ಕ್ಷಣವೂ ಮ್ಯಾಜಿಕ್ ಎನಿಸಿದೆ. ಮೋಡಿ ಮಾಡುವ ಅನುಭವಗಳು ಮತ್ತು ಮಿತಿಯಿಲ್ಲದ ಪ್ರೀತಿಯಿಂದ ತುಂಬಿದ ಮತ್ತೊಂದು ವರ್ಷವನ್ನು ಜೊತೆಯಾಗಿ ಸ್ವಾಗತಿಸೋಣ. ಹೊಸ ವರ್ಷದ ಶುಭಾಶಯಗಳು, ನನ್ನ ಗೆಳೆಯ.
ಇದನ್ನೂ ಓದಿ: ಹೊಸ ವರ್ಷಕ್ಕೆ ಈ 10 ಹಣಕಾಸು ನಿರ್ಣಯಗಳನ್ನು ತೆಗೆದುಕೊಳ್ಳಿ, ಆರ್ಥಿಕ ಸ್ಥಿತಿ ಸುಧಾರಣೆಗೆ ನೆರವು ನೀಡುವ ಸಂಕಲ್ಪ
- ಒಟ್ಟಿಗೆ ಬದುಕುವ, ಪರಸ್ಪರ ಅರ್ಥ ಮಾಡಿಕೊಳ್ಳುವ ಮತ್ತು ನಮ್ಮ ಪ್ರೀತಿಯನ್ನು ಪಾಲಿಸುವ ಇನ್ನೊಂದು ವರ್ಷಕ್ಕಾಗಿ ಕಾಯುತ್ತಿದ್ದೇನೆ, 2025ರ ಹಾರ್ದಿಕ ಶುಭಾಶಯಗಳು ಸುಂದರ.
- ವರ್ಷಗಳು ಉರುಳಿದಂತೆ ಪ್ರೀತಿಯೂ ಗಟ್ಟಿಯಾಗುತ್ತಿದೆ. ಹೊಸ ವರ್ಷದೊಂದಿಗೆ ಪ್ರೀತಿ ಮತ್ತು ಸಂತೋಷದಿಂದ ತುಂಬಿದ ಮತ್ತೊಂದು ಹೊಸ ಪುಸ್ತಕದ ಪುಟ ತೆರೆಯೋಣ, ನಿನ್ನ ಪ್ರೀತಿ ಸದಾ ಹೀಗೇ ಇರಲಿ, ಹೊಸ ವರ್ಷದ ಶುಭಾಶಯಗಳು.
- ನಿನ್ನನ್ನು ನನಗೆ ನೀಡಿದ 2024ಕ್ಕೆ ಪ್ರೀತಿಯಿಂದಲೇ ವಿದಾಯ ಹೇಳುತ್ತಾ 2025ರನ್ನು ಸ್ವಾಗತಿಸೋಣ. ನನ್ನ ನಿನ್ನ ಪ್ರೀತಿ ಯುಗ ಯುಗಗಳು ಕಳೆದರೂ ಶಾಶ್ವತವಾಗಿರಲಿ, ಹ್ಯಾಪಿ ಹ್ಯಾಪಿ ನ್ಯೂ ಇಯರ್ ಮೈ ಲವ್.
- ಜಗತ್ತಿಗೆ ಸೂರ್ಯ ಬೆಳಕು ನೀಡುವಂತೆ ನೀನು ನನ್ನ ಬದುಕನ್ನು ಬೆಳಗಲು ಬಂದಿರುವ ಭಾಸ್ಕರ, ಈ ಹೊಸ ವರ್ಷ ನಮ್ಮ ಬಾಳಲ್ಲಿ ಹೊಸ ಬೆಳಕಿನ ಕಿರಣಗಳನ್ನು ಚೆಲ್ಲಲಿ, ಹೊಸ ವರ್ಷದ ಶುಭ ಹಾರೈಕೆಗಳು ನನ್ನ ಬಾಳಿನ ರಾಜಕುಮಾರ.
ಇದನ್ನೂ ಓದಿ: ಗುರುವಿನ ಆಶೀರ್ವಾದದಿಂದ ಧನಸ್ಸು ರಾಶಿಯವರಿಗೆ ಕಂಕಣ ಬಲ; ಮೀನ ರಾಶಿವರಿಗೂ ಮದುವೆ ಕಾರ್ಯದಲ್ಲಿ ಯಶಸ್ಸು