ಅರ್ಥ ಮಾಡ್ಕೊಳ್ರೀ, ಅಣ್ಣಂಗೆ ಲವ್ ಆಗಿದೆ ಅಂತ ಬಾಡಿ ಲಾಂಗ್ವೇಜ್‌ನಲ್ಲೇ ಗೊತ್ತಾಗುತ್ತೆ; ಇವು ಪ್ರೇಮದ ದೇಹ ಭಾಷೆ
Love language of Men: ಹುಡುಗರು ಬೇಗನೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದಿಲ್ಲ. ಆದರೆ ಅವರ ದೇಹಭಾಷೆಯಿಂದಲೇ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬುದನ್ನು ತಿಳಿಯಬಹುದು. ಒಬ್ಬ ಹುಡುಗ ನಿಮ್ಮನ್ನು ಪ್ರೀತಿಸುತ್ತಾನೆ ಎಂಬುದನ್ನು ಹೇಳುವ ನಡೆ-ನುಡಿ ಸಾಮಾನ್ಯವಾಗಿರುತ್ತವೆ. ಅವು ಯಾವುದು ಎಂಬುದನ್ನು ನೋಡೋಣ.
ಪ್ರೀತಿಯನ್ನು ಮಾತಿನಲ್ಲೇ ವ್ಯಕ್ತಪಡಿಸಬೇಕು ಎಂದೇನಿಲ್ಲ. ಕೆಲವೊಮ್ಮೆ ಮಾತಿಗೂ ಮೀರಿ ಪ್ರೀತಿ ಬೆಳೆದಿರುತ್ತದೆ. ಪ್ರೇಮಾಂಕುರವಾದ ಬಳಿಕ ಅದನ್ನು ವ್ಯಕ್ತಪಡಿಸಲು ಕೆಲವೊಬ್ಬರಿಗೆ ಹಿಂಜರಿಕೆ ಇರಬಹುದು, ಅಥವಾ ಧೈರ್ಯ ಸಾಲದೇ ಇರಬಹುದು. ಹಾಗಂತಾ ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ಆಗೋದೇ ಇಲ್ಲ ಎಂದೇನಿಲ್ಲ. ಒಬ್ಬರು ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ ಎಂದು ತಿಳಿಯಲು ಅವರಲ್ಲಿನ ಕೆಲವು ಬದಲಾವಣೆಗಳು, ನಡೆ -ನುಡಿ, ಮಾಡುವ ಕ್ರಿಯೆಗಳ ಮೂಲಕವೇ ಅವರನ್ನು ಅರ್ಥ ಮಾಡಿಕೊಳ್ಳಬಹುದು. ಯಾರಾದರೂ ಒಬ್ಬ ಹುಡುಗ ನಿಮ್ಮನ್ನು ಪ್ರೀತಿಸುತ್ತಿದ್ದಾನೆ ಎಂಬ ಅನುಮಾನ ನಿಮಗಿದ್ದರೆ, ಅದನ್ನು ಅವರು ಹೇಳುವ ಮುನ್ನವೇ ತಿಳಿಯಬಹುದು. ಅವರ ನಡೆ-ನುಡಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಾತಿಗಿಂತ ಮುನ್ನವೇ ನೀವು ಪ್ರೀತಿಯ ವಿಷಯವನ್ನು ತಿಳಿಯಬಹುದು.
ತಮಗಾದ ಪ್ರೇಮವನ್ನು ವ್ಯಕ್ತಪಡಿಸುವಾಗ ಹುಡುಗರು ಸಾಮಾನ್ಯವಾಗಿ ಗೊಂದಲದಲ್ಲಿದ್ದಂತೆ ಇರುತ್ತಾರೆ. ಅವರ ನಡವಳಿಕೆಯಿಂದಲೇ ನೀವು ಅರ್ಥಮಾಡಿಕೊಳ್ಳಬಹುದು. ಅವು ಏನೇನು ಎಂಬುದನ್ನು ನೋಡೋಣ.
ಕಣ್ಣುಗಳ ನೋಟ
ಎಲ್ಲರೂ ದೀರ್ಘಕಾಲ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದಿಲ್ಲ. ನಿಮ್ಮನ್ನು ಪ್ರೀತಿಸುವ ಯಾರಾದರೂ ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನಿಮ್ಮೊಂದಿಗೆ ಮಾತನಾಡಿದರೆ, ವ್ಯತ್ಯಾಸ ಸ್ಪಷ್ಟವಾಗಿ ತಿಳಿಯುತ್ತದೆ. ಹುಡುಗನು ದೀರ್ಘಕಾಲ ನಿಮ್ಮ ಕಣ್ಣನ್ನೇ ನೋಡಿದರೆ ನಿಮ್ಮನ್ನು ಇಷ್ಟಪಡುತ್ತಾನೆ ಎಂಬುದರ ಸಂಕೇತವಾಗಿದೆ. ಇದೇ ವೇಳೆ ನಿಮ್ಮ ಕಣ್ಣು ಅಥವಾ ಮುಖವನ್ನೇ ನೋಡಲು ಭಯಬಿದ್ದಂತೆ ಮಾಡಿದರೂ, ಆತನಿಗೆ ನಿಮ್ಮ ಮೇಲೆ ಫೀಲಿಂಗ್ಸ್ ಇದೆ ಎಂದರ್ಥ.
ಸ್ಪರ್ಶದಲ್ಲಿ ವ್ಯತ್ಯಾಸ
ಆಧುನಿಕ ಯುಗದಲ್ಲಿ ಹುಡುಗಿಯರಿಗೆ ಬಾಯ್ ಫ್ರೆಂಡ್ಸ್ ತುಂಬಾ ಇರುತ್ತಾರೆ. ಆದರೆ ನಿಮ್ಮನ್ನು ಪ್ರೇಮಿಯಾಗಿ ಇಷ್ಟಪಡುವ ವ್ಯಕ್ತಿ ಸ್ನೇಹಿತರಿಗಿಂತ ಭಿನ್ನ. ಅವರು ನಿಮ್ಮನ್ನು ಸ್ಪರ್ಶಿಸುವಾಗ ಕೈಗಳು ಅಲುಗಾಡುತ್ತವೆ. ಸ್ಪರ್ಶದಲ್ಲಿನ ಆ ವ್ಯತ್ಯಾಸದಿಂದ ನೀವು ಅದನ್ನು ಕಂಡುಹಿಡಿಯಬಹುದು. ಇದು ಹುಡುಗರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಇನ್ನೊಂದು ವಿಧಾನವಾಗಿದೆ.
ನಾಚಿಕೆ - ಅಂಜಿಕೆ
ಸಾಮಾನ್ಯವಾಗಿ ಹುಡುಗರು ಮಾತನಾಡುವಾಗ ಧೈರ್ಯದಿಂದ ಮಾತನಾಡುತ್ತಾರೆ. ಅದೇ ಪ್ರೀತಿಸುವ ಹುಡುಗಿಯೊಂದಿಗೆ ಮಾತನಾಡುವಾಗ ಆ ಧೈರ್ಯ ಇರುವುದಿಲ್ಲ. ಬೇರೆಯವರೊಂದಿಗೆ ಮಾತನಾಡುವಾಗ ಕಾಣುವ ಧೈರ್ಯ ನಿಮ್ಮೊಂದಿಗೆ ಮಾತನಾಡುವಾಗ ಇರುವುದಿಲ್ಲ. ಸಂಕೋಚ, ಅಂಜಿಕೆ ಅವರ ಕಣ್ಣಲ್ಲಿ ಕಾಣುತ್ತದೆ. ಇದು ಅವರು ನಿಮಗೆ ಹತ್ತಿರವಾಗಲು ಬಯಸುವ ಚಿಹ್ನೆಗಳು.
ನಿಮ್ಮ ರಕ್ಷಣೆಗೆ ಸದಾ ಸಿದ್ಧ
ಏನೇ ಸಮಸ್ಯೆ ಬಂದರೂ ನಿಮ್ಮೊಂದಿಗೆ ನಿಲ್ಲಲು ಬಯಸುತ್ತಾರೆ. ಎಲ್ಲರೂ ಎಲ್ಲರ ಮುಂದೆ ಕಾರಣವಿಲ್ಲದೆ ನಿಮ್ಮ ಪರವಾಗಿ ಮಾತನಾಡಲು ಬರುವುದಿಲ್ಲ. ಪ್ರತಿ ಬಾರಿಯೂ ನಿಮ್ಮ ರಕ್ಷಣೆಗೆ ಒಬ್ಬರು ಬರುತ್ತಾರೆ ಎಂದರೆ, ಅವರು ಸದಾ ನಿಮ್ಮ ಜೊತೆ ನಿಲ್ಲಲು ಬಯಸುತ್ತಾರೆ ಎಂದರ್ಥ.
ಗಮನ ಬೇರೆಲ್ಲೂ ಹೋಗುವುದಿಲ್ಲ
ಗುಂಪಿನಲ್ಲಿ ಹಲವು ಹುಡುಗಿಯರಿದ್ದರೂ ಒಬ್ಬರ ಕಣ್ಣುಗಳು ಮತ್ತು ಗಮನ ನಿಮ್ಮ ಮೇಲೆ ಮಾತ್ರ ಇದ್ದರೆ, ಅವರ ಪಾಲಿಗೆ ನೀವು ತುಂಬಾ ಭಿನ್ನ ವ್ಯಕ್ತಿ. ಅವರು ನಿಮ್ಮನ್ನು ಇಷ್ಟಪಡುತ್ತಾರೆ ಎಂಬುದರ ಸ್ಪಷ್ಟ ಸಂಕೇತವಿದು. ನಿಮ್ಮ ಮಾತುಗಳನ್ನು ಸ್ಪಷ್ಟವಾಗಿ ಆಲಿಸುವುದು, ನೀವು ಏನು ಹೇಳಿದರೂ ಅದನ್ನು ಗಮನದಲ್ಲಿಟ್ಟುಕೊಂಡು ಮಾಡುವುದು, ಅವುಗಳನ್ನು ಅರ್ಥಮಾಡಿಕೊಳ್ಳುವುದು, ಇವೆಲ್ಲವೂ ಅವರ ಪ್ರೀತಿಯ ಲಕ್ಷಣ.
ವಿಭಾಗ