Ovarian Cancer: ಪ್ರಾಣಕ್ಕೆ ಸಂಚಕಾರಿ ಈ ಅಂಡಾಶಯದ ಕ್ಯಾನ್ಸರ್​​...ಲಕ್ಷಣಗಳೇನು, ಈ ಸಮಸ್ಯೆಗೆ ಚಿಕಿತ್ಸೆ ಇದೆಯೇ...?
ಕನ್ನಡ ಸುದ್ದಿ  /  ಜೀವನಶೈಲಿ  /  Ovarian Cancer: ಪ್ರಾಣಕ್ಕೆ ಸಂಚಕಾರಿ ಈ ಅಂಡಾಶಯದ ಕ್ಯಾನ್ಸರ್​​...ಲಕ್ಷಣಗಳೇನು, ಈ ಸಮಸ್ಯೆಗೆ ಚಿಕಿತ್ಸೆ ಇದೆಯೇ...?

Ovarian Cancer: ಪ್ರಾಣಕ್ಕೆ ಸಂಚಕಾರಿ ಈ ಅಂಡಾಶಯದ ಕ್ಯಾನ್ಸರ್​​...ಲಕ್ಷಣಗಳೇನು, ಈ ಸಮಸ್ಯೆಗೆ ಚಿಕಿತ್ಸೆ ಇದೆಯೇ...?

ಅಂಡಾಶಯದ ಕ್ಯಾನ್ಸರ್​​​ ರೋಗ ಲಕ್ಷಣಗಳು ಆರಂಭದಲ್ಲೇ ತಿಳಿಯದೆ ಇರಬಹುದು. ಆರೋಗ್ಯಕರ ಜೀವಕೋಶಗಳು ಸತ್ತ ನಂತರವೂ ಕ್ಯಾನ್ಸರ್ ಕೋಶಗಳು ಬದುಕಬಲ್ಲವು. ಇವು ಹತ್ತಿರದ ಅಂಗಾಂಶಗಳನ್ನು ಆಕ್ರಮಿಸುತ್ತದೆ ಮತ್ತು ದೇಹದ ಇತರ ಭಾಗಗಳಿಗೆ ಹರಡುತ್ತದೆ. ಆದರೆ ಆರಂಭದಲ್ಲೇ ಕ್ಯಾನ್ಸರ್ ಪತ್ತೆ ಹಚ್ಚಿದರೆ ಅಪಾಯ ಕಡಿಮೆ ಮಾಡಬಹುದು.

<p>ಅಂಡಾಶಯದ ಕ್ಯಾನ್ಸರ್ ರೋಗಲಕ್ಷಣಗಳು</p>
ಅಂಡಾಶಯದ ಕ್ಯಾನ್ಸರ್ ರೋಗಲಕ್ಷಣಗಳು

ಮಹಿಳೆಯರನ್ನು ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಅಂಡಾಶಯದ ಕ್ಯಾನ್ಸರ್ ಕೂಡಾ ಒಂದು. ಈ ಸಮಸ್ಯೆಯನ್ನು ಬೇಗ ಗುರುತಿಸದಿದ್ದರೆ ಮುಂದಿನ ದಿನಗಳಲ್ಲಿ ಇದು ಕ್ಯಾನ್ಸರ್ ಹಾಗೂ ಇನ್ನಿತರ ಅಪಾಯಗಳಿಗೆ ಕಾರಣವಾಗಬಹುದು. ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಅನೇಕ ಮಹಿಳೆಯರು ಸಾಯುತ್ತಿದ್ದಾರೆ.

ಅಂಡಾಶಯದ ಕ್ಯಾನ್ಸರ್ ಸಾಮಾನ್ಯವಾಗಿ ಸ್ಟ್ರೋಮಲ್ ಅಥವಾ ಎಪಿತೀಲಿಯಲ್ ಕೋಶಗಳಲ್ಲಿ ಉದ್ಭವಿಸುತ್ತದೆ. ಸ್ಟ್ರೋಮಲ್ ಕೋಶಗಳು ಅಂಡಾಶಯದ ಒಳಪದರವನ್ನು ರೂಪಿಸುತ್ತವೆ. ಎಪಿಥೇಲಿಯಲ್ ಕೋಶಗಳು ಅಂಡಾಶಯದ ಹೊರ ಪದರವಾಗಿದೆ. ಅದು ಅಂಡಾಶಯದ ವಿವಿಧ ಭಾಗಗಳಲ್ಲಿ ಜೀವಕೋಶಗಳ ಮೇಲೆ ದಾಳಿ ಮಾಡುತ್ತದೆ. ಈ ಜೀವಕೋಶಗಳು ಅಂಡಾಣುಗಳಾಗಿ ಬದಲಾಗುತ್ತವೆ ಮತ್ತು ಕ್ಯಾನ್ಸರ್​​​ಗೆ ಕಾರಣವಾಗುತ್ತವೆ. ಈ ಅಪಾಯಕಾರಿ ಅಂಡಾಶಯದ ಕ್ಯಾನ್ಸರ್​​ಗೆ ಕಾರಣವೇನು..? ಅದರ ಲಕ್ಷಣಗಳೇನು ರೋಗನಿರ್ಣಯ ಮತ್ತು ಚಿಕಿತ್ಸೆಯ ಬಗ್ಗೆ ತಿಳಿಯೋಣ.

ಅಂಡಾಶಯದ ಕ್ಯಾನ್ಸರ್ ಲಕ್ಷಣಗಳು

ಅಂಡಾಶಯದ ಕ್ಯಾನ್ಸರ್​​​ ರೋಗ ಲಕ್ಷಣಗಳು ಆರಂಭದಲ್ಲೇ ತಿಳಿಯದೆ ಇರಬಹುದು. ಮೇಯೊ ಕ್ಲಿನಿಕ್ ವೈದ್ಯರ ಪ್ರಕಾರ, ಅಂಡಾಶಯದ ಕ್ಯಾನ್ಸರ್ ಚಿಹ್ನೆಗಳು ಮತ್ತು ರೋಗಲಕ್ಷಣಗಳು ಈ ಕೆಳಗಿನ ಅಂಶವನ್ನು ಒಳಗೊಂಡಿರಬಹುದು.

1. ಹೊಟ್ಟೆ ಉಬ್ಬುವುದು ಅಥವಾ ಊತ

2. ಊಟ ಮಾಡುವಾಗ ಹೊಟ್ಟೆ ತುಂಬಿದ ಅನುಭವ

3. ದಿಢೀರ್ ತೂಕ ಇಳಿಕೆ

4. ಆಯಾಸ

5. ಬೆನ್ನು ನೋವು

6. ಜೀರ್ಣಾಂಗ ವ್ಯವಸ್ಥೆಯಲ್ಲಿ ಬದಲಾವಣೆ

7. ಪದೇ ಪದೇ ಮೂತ್ರ ವಿಸರ್ಜನೆ

8. ಲೈಂಗಿಕ ಸಮಯದಲ್ಲಿ ನೋವು

9. ಸರಿಯಾದ ಸಮಯಕ್ಕೆ ಮುಟ್ಟಾಗದಿರುವುದು

ಅಂಡಾಶಯದ ಕ್ಯಾನ್ಸರ್​​​​​​​​ ಕಾರಣಗಳು

ಕ್ಲೀವ್ಲ್ಯಾಂಡ್ ಕ್ಲಿನಿಕ್ ವೈದ್ಯರ ಪ್ರಕಾರ, ಅಂಡಾಶಯದ ಕ್ಯಾನ್ಸರ್​​ಗೆ ನಿಖರ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಆದರೆ ವೈದ್ಯರು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಅಂಶಗಳನ್ನು ಕಂಡುಹಿಡಿದಿದ್ದಾರೆ.

40-63 ವರ್ಷ ವಯಸ್ಸಿನ ಮಹಿಳೆಯರಲ್ಲಿ ಅಂಡಾಶಯದ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಸ್ಥೂಲಕಾಯದ ಮಹಿಳೆಯರಲ್ಲೂ ಈ ಅಪಾಯ ಹೆಚ್ಚು

35 ವರ್ಷಗಳ ನಂತರ ಮೊದಲ ಗರ್ಭ ಧರಿಸುವ ಮಹಿಳೆಯರು ಅಂಡಾಶಯದ ಕ್ಯಾನ್ಸರ್​​​​​ನಿಂದ ಬಳಲುವ ಸಾಧ್ಯತೆ ಹೆಚ್ಚು.

ಹಾರ್ಮೋನ್ ಥೆರಪಿ ತೆಗೆದುಕೊಳ್ಳುವ ಮಹಿಳೆಯರಿಗೆ ಅಂಡಾಶಯದ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗಿರುತ್ತದೆ.

ಅಂಡಾಶಯದಲ್ಲಿ ಅಥವಾ ಅದರ ಸಮೀಪವಿರುವ ಜೀವಕೋಶಗಳ ಡಿಎನ್‌ಎಯಲ್ಲಿ ಬದಲಾವಣೆಗಳು ಸಂಭವಿಸಿದಾಗ ಅಂಡಾಶಯದ ಕ್ಯಾನ್ಸರ್ ಪ್ರಾರಂಭವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಈ ಬದಲಾವಣೆಗಳು ಜೀವಕೋಶಗಳು ವೇಗವಾಗಿ ಬೆಳೆಯಲು ಕಾರಣವಾಗುತ್ತವೆ. ಕ್ಯಾನ್ಸರ್ ಕೋಶಗಳು ಗೆಡ್ಡೆಯನ್ನು ರೂಪಿಸುತ್ತವೆ. ಆರೋಗ್ಯಕರ ಜೀವಕೋಶಗಳು ಸತ್ತ ನಂತರವೂ ಕ್ಯಾನ್ಸರ್ ಕೋಶಗಳು ಬದುಕಬಲ್ಲವು. ಇವು ಹತ್ತಿರದ ಅಂಗಾಂಶಗಳನ್ನು ಆಕ್ರಮಿಸುತ್ತದೆ ಮತ್ತು ದೇಹದ ಇತರ ಭಾಗಗಳಿಗೆ ಹರಡುತ್ತದೆ. ಆದರೆ ಆರಂಭದಲ್ಲೇ ಕ್ಯಾನ್ಸರ್ ಪತ್ತೆ ಹಚ್ಚಿದರೆ ಅಪಾಯ ಕಡಿಮೆ ಮಾಡಬಹುದು.

Whats_app_banner