ಕನ್ನಡ ಸುದ್ದಿ  /  Lifestyle  /  Uses Of Apple Cider Vinegar In Beauty

Apple cider vinegar for skin: ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುವ ಆಪಲ್ ಸೈಡರ್ ವಿನೆಗರ್‌...ಬಳಸುವ ವಿಧಾನ ಹೇಗೆ ನೋಡಿ

ಆಪಲ್‌ ಸೈಡರ್‌ ವಿನೆಗರ್‌ ಜೊತೆ ಜೇನುತುಪ್ಪ, ಸಕ್ಕರೆ ಬೆರೆಸಿ ನಿಮ್ಮ ಕತ್ತು ಹಾಗೂ ಮುಖಕ್ಕೆ ನಿಧಾನವಾಗಿ ಮಸಾಜ್‌ ಮಾಡಿ. 5-10 ನಿಮಿಷದ ನಂತರ ಮುಖ ತೊಳೆದು ಮಾಯಿಶ್ಚರೈಸರ್‌ ಹಚ್ಚಿ. ದಿನ ಕಳೆದಂತೆ ನಿಮ್ಮ ಮುಖದ ಮೇಲಿನ ಬದಲಾವಣೆಯನ್ನು ನೀವು ಗಮನಿಸಬಹುದು.

ಚರ್ಮಕ್ಕೆ ಆಪಲ್‌ ಸೈಡರ್‌ ವಿನೆಗರ್‌
ಚರ್ಮಕ್ಕೆ ಆಪಲ್‌ ಸೈಡರ್‌ ವಿನೆಗರ್‌ (PC: Freepik)

ನಮ್ಮ ಅಂದವನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳಲು ಅನೇಕ ದಾರಿಗಳಿವೆ. ಅವುಗಳಲ್ಲಿ ಆಪಲ್‌ ಸೈಡರ್‌ ವಿನೆಗರ್‌ ಕೂಡಾ ಒಂದು. ಇದು ಆರೋಗ್ಯಕ್ಕೆ ಮಾತ್ರವಲ್ಲದೆ ಅಂದವನ್ನು ಹೆಚ್ಚಿಸಿಕೊಳ್ಳಲು ಕೂಡಾ ಬಹಳ ಸಹಾಕಾರಿ. ಆಪಲ್‌ ಸೈಡರ್‌ ವಿನೆಗರ್‌ ಜೊತೆ ನೀರು ಬೆರೆಸಿ ಕುಡಿದರೆ ದೇಹದ ತೂಕ ಕಡಿಮೆಯಾಗುತ್ತದೆ. ಹಾಗೇ ಚರ್ಮ ಕಾಂತಿಯುತವಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಆಪಲ್‌ ಸೈಡರ್‌ ವಿನೆಗರ್‌ನಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸೋಡಿಯಂ, ಸತು, ತಾಮ್ರ ಹಾಗೂ ಇನ್ನಿತರ ಖನಿಜಾಂಶಗಳಿವೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಒಳಗೊಂಡಿದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ, ದೇಹದಲ್ಲಿ ಕೊಲೆಸ್ಟ್ರಾಲ್‌ ಕಡಿಮೆ ಆಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವುದಲ್ಲದೆ ಇನ್ನೂ ಅನೇಕ ಸಮಸ್ಯೆಗಳಿಗೆ ಇದರಿಂದ ಮುಕ್ತಿ ಹೊಂದಬಹುದು.ಇದನ್ನು ಚರ್ಮಕ್ಕೆ ಬಳಸುವುದರಿಂದ ಕೂಡಾ ಬಹುತೇಕ ಚರ್ಮದ ಸಮಸ್ಯೆಗಳು ಕಡಿಮೆಯಾಗುತ್ತದೆ.

ಆಪಲ್‌ ಸೈಡರ್‌ ವಿನೆಗರ್‌ ಬಳಸುವುದು ಹೇಗೆ..?

ಆಪಲ್ ಸೈಡರ್ ವಿನೆಗರನ್ನು ಸ್ಕ್ರಬ್

ಆಪಲ್ ಸೈಡರ್ ವಿನೆಗರನ್ನು ಸ್ಕ್ಟಬ್‌ ಆಗಿಯೂ ಬಳಸಬಹುದು. ಈ ಸ್ಕ್ರಬ್‌ ನಿಮ್ಮ ಚರ್ಮವನ್ನು ಮೃದುಗೊಳಿಸುತ್ತದೆ ಹಾಗೂ ಬ್ಲಾಕ್‌, ವೈಟ್‌ ಹೆಡ್ಸ್‌ ನಿವಾರಿಸುತ್ತದೆ. ಆಪಲ್‌ ಸೈಡರ್‌ ವಿನೆಗರ್‌ ಜೊತೆ ಜೇನುತುಪ್ಪ, ಸಕ್ಕರೆ ಬೆರೆಸಿ ನಿಮ್ಮ ಕತ್ತು ಹಾಗೂ ಮುಖಕ್ಕೆ ನಿಧಾನವಾಗಿ ಮಸಾಜ್‌ ಮಾಡಿ. 5-10 ನಿಮಿಷದ ನಂತರ ಮುಖ ತೊಳೆದು ಮಾಯಿಶ್ಚರೈಸರ್‌ ಹಚ್ಚಿ. ದಿನ ಕಳೆದಂತೆ ನಿಮ್ಮ ಮುಖದ ಮೇಲಿನ ಬದಲಾವಣೆಯನ್ನು ನೀವು ಗಮನಿಸಬಹುದು.

ಆಪಲ್ ಸೈಡರ್ ವಿನೆಗರ್‌ ಸ್ಟೀಮ್‌

ಆಪಲ್ ಸೈಡರ್ ವಿನೆಗರ್‌ ಸ್ಟೀಮ್‌ ತೆಗೆದುಕೊಳ್ಳಲು ಕೂಡಾ ಸಹಾಯಕಾರಿ. ಇದರಿಂದ ನಿಮ್ಮ ಚರ್ಮದ ಒಳಗಿನ ಕೊಳೆ ಬೆವರಿನ ಮೂಲಕ ಹೊರ ಬರುತ್ತದೆ. ಓಪನ್‌ ಪೋರ್ಸ್‌ ಸಮಸ್ಯೆ ಕಡಿಮೆಯಾಗುತ್ತದೆ. ನೀರಿಗೆ ಸ್ವಲ್ಪ ಆಪಲ್‌ ಸೈಡರ್‌ ವಿನೆಗರ್‌ ಸೇರಿಸಿ ಅದನ್ನು 5 ನಿಮಿಷದವರೆಗೂ ಮುಖದ ಸುತ್ತಲೂ ಹಬೆ ತೆಗೆದುಕೊಳ್ಳಿ. ಇದರಿಂದ ನಿಮ್ಮ ಮುಖದ ಮೇಲಿನ ಬ್ಲಾಕ್‌ ಹೆಡ್ಸ್‌ ಕೂಡಾ ನಿವಾರಣೆಯಾಗುತ್ತದೆ.

ಆಪಲ್ ಸೈಡರ್ ವಿನೆಗರ್‌ ಪ್ಯಾಕ್‌

ನೀವು ಯಾವುದೇ ಪ್ಯಾಕ್‌ ಮಾಡಲು ಆಪಲ್ ಸೈಡರ್ ವಿನೆಗರ್‌ ಬಳಸಬಹುದು. ಅದರಲ್ಲೂ ಮುಲ್ತಾನಿ ಮುಟ್ಟಿ ಜೊತೆ ಮುಖಕ್ಕೆ ಹಚ್ಚಿದರೆ ಇನ್ನೂ ಉತ್ತಮ ಫಲಿತಾಂಶ ನೀಡುತ್ತದೆ. ಮುಲ್ತಾನಿ ಮಿಟ್ಟಿ, ಹಾಲು, ಆಪಲ್ ಸೈಡರ್ ವಿನೆಗರ್‌ ಎಲ್ಲವನ್ನೂ ಮಿಕ್ಸ್‌ ಮಾಡಿ ಪೇಸ್ಟನ್ನು ಪ್ಯಾಕ್‌ ಆಗಿ ಕುತ್ತಿಗೆವರೆಗೂ ಹಚ್ಚಿ. 20-30 ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ, ವಾರಕ್ಕೆ ಒಂದು - ಎರಡು ಬಾರಿ ಈ ಪ್ಯಾಕ್‌ ಹಚ್ಚಬಹುದು.

ಆದರೆ ಯಾವುದೇ ಕಾರಣಕ್ಕೂ ಆಪಲ್ ಸೈಡರ್ ವಿನೆಗರನ್ನು ನೇರವಾಗಿ ನಿಮ್ಮ ಚರ್ಮಕ್ಕೆ ತಾಗಿಸಬೇಡಿ. ಕಡ್ಲೆಹಿಟ್ಟು, ಮುಲ್ತಾನಿ ಮುಟ್ಟಿ ಹಾಗೂ ಇನ್ನಿತರ ಸಾಮಗ್ರಿಗಗಳೊಂದಿಗೆ ನೀವು ಹಾಲು ಅಥವಾ ರೋಸ್‌ ವಾಟರ್‌ ಬಳಸುವ ಬದಲಿಗೆ ಆಪಲ್ ಸೈಡರ್ ವಿನೆಗರ್‌ ಬಳಸಬಹುದು. ಆದರೆ ಬಳಸುವ ಮುನ್ನ ಒಮ್ಮೆ ಪ್ಯಾಚ್‌ ಟೆಸ್ಟ್‌ ಮಾಡಿ. ಕೆಲವವರ ಚರ್ಮ ಬಹಳ ಸೂಷ್ಮವಾಗಿರುತ್ತದೆ. ಒಂದು ವೇಳೆ ನಿಮ್ಮ ಚರ್ಮ ಕೆಂಪಗಾದರೆ, ಅಥವಾ ಸಣ್ಣ ಗುಳ್ಳೆಗಳು ಕಂಡು ಬಂದರೆ ಬಳಸಬೇಡಿ.

ವಿಭಾಗ