Viral News: ಬಿಸಿ ಎಣ್ಣೆಯಲ್ಲಿ ಕೈ ಅದ್ದಿ ಪಕೋಡಾ ತಯಾರಿಸಿದ ವ್ಯಾಪಾರಿ; ವೈರಲ್ ಆಗೋಕೆ ಇಂಥ ಬಿಟ್ಟಿ ಶೋಕಿ ಬೇಕಾ ಅಂದ್ರು ನೆಟ್ಟಿಗರು; ವಿಡಿಯೊ
ಇಲ್ಲೊಬ್ಬ ವ್ಯಕ್ತಿ ಬಿಸಿ ಬಿಸಿ ಎಣ್ಣೆಯಲ್ಲಿ ಕೈ ಅದ್ದಿ ಬಜ್ಜಿ ಮಾಡ್ತಾನೆ. ಬಿಸಿ ಎಣ್ಣೆ ಚೂರು ತಾಕಿದ್ರೂ ಉರಿಯುತ್ತೆ, ಅಂಥದ್ರಲ್ಲಿ ಪೂರ್ತಿ ಕೈ ಎಣ್ಣೆಯಲ್ಲಿ ಅದ್ದೋದು ಅಂದ್ರೆ ತಮಾಷೆನಾ, ಅದು ನಿಜಾನಾ ಸುಳ್ಳಾ? ಅಂತೆಲ್ಲ ಅನ್ಕೋಬೇಡಿ, ಇದು ಖಂಡಿತ ನಿಜ. ಈ ಪಕೋಡಾ ವ್ಯಾಪಾರಿಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೋಲ್ ಮಾಡುವಾಗ ಕಣ್ಣಿಗೆ ಬೀಳುವ ಕೆಲವೊಂದು ವಿಡಿಯೊಗಳು ಮೈ ಜುಮ್ಮೆನ್ನಿಸುವಂತೆ ಮಾಡುವುದು ಸುಳ್ಳಲ್ಲ. ಅಂತಹ ಕೆಲವು ವಿಡಿಯೊಗಳು ಭಾರಿ ವೈರಲ್ ಆಗುತ್ತವೆ. ಇದೀಗ ಅಂತಹದ್ದೇ ವಿಡಿಯೊವೊಂದು ವೈರಲ್ ಆಗಿದೆ. ಈ ವಿಡಿಯೊದಲ್ಲಿ ಅಂತದ್ದೇನಿದೆ ಅಂತೀರಾ? ಇದು ಪಕೋಡಾ ವ್ಯಾಪಾರಿಯೊಬ್ಬನ ವಿಡಿಯೊ. ಪಕೋಡಾ ವ್ಯಾಪಾರಿ ವಿಡಿಯೊ ಯಾಕೆ ವೈರಲ್ ಆಗುತ್ತೆ ಅಂತ ನೀವು ಯೋಚಿಸಬಹುದು, ಆದ್ರೆ ಅದಕ್ಕೆ ಖಂಡಿತ ಕಾರಣ ಇದೆ.
ಈ ವ್ಯಕ್ತಿ ಬಿಸಿ ಬಿಸಿ ಎಣ್ಣೆಯಲ್ಲಿ ಕೈ ಅದ್ದಿ ಬಜ್ಜಿ ಮಾಡ್ತಾನೆ. ಬಿಸಿ ಎಣ್ಣೆ ಚೂರು ತಾಕಿದ್ರೂ ಉರಿಯುತ್ತೆ, ಅಂಥದ್ರಲ್ಲಿ ಪೂರ್ತಿ ಕೈ ಎಣ್ಣೆಯಲ್ಲಿ ಅದ್ದೋದು ಅಂದ್ರೆ ತಮಾಷೆನಾ, ಅದು ನಿಜಾನಾ ಸುಳ್ಳಾ? ಅಂತೆಲ್ಲ ಅನ್ಕೋಬೇಡಿ, ಇದು ಖಂಡಿತ ನಿಜ. ಈ ಪಕೋಡಾ ವ್ಯಾಪಾರಿಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಸುರ್ತಿ ಮಯೂರ್‌ಕುಮಾರ್ ವಸಂತಲಾಲ್ ಎನ್ನುವವರು ಈ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾಖೆಯಲ್ಲಿ ಹಂಚಿಕೊಂಡಿದ್ದಾರೆ. ಇಂಡಿಯಾ ಗಾಟ್ ಟ್ಯಾಲೆಂಟ್ - ಸೂರತ್ ಬೊಂಡ ವ್ಯಾಪಾರಿ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಈತ ಎಣ್ಣೆಯಲ್ಲಿ ಕೈ ಅದ್ದಿ ಅಲ್ಲಿನ ಖ್ಯಾತ ಸ್ನಾಕ್ಸ್ ಆದ ಕುಂಭನಿಯಾ ಬಜಿಯಾವನ್ನು ಮಾಡುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.
ವಿಡಿಯೊದಲ್ಲಿ ಏನಿದೆ?
ಈ ವಿಡಿಯೊ ಓಪನ್ ಆದಾಗ ವ್ಯಕ್ತಿಯೊಬ್ಬ ಬಜ್ಜಿ ಮಾಡುತ್ತಿರುವುದುನ್ನು ನೋಡಬಹುದು. ಮೊದಲು ಬಜ್ಜಿಗೆ ಹಿಟ್ಟು ತಯಾರಿಸಿಕೊಂಡು, ನಂತರ ಆ ಹಿಟ್ಟನ್ನು ಬಾಣಲಿಯಲ್ಲಿರುವ ಎಣ್ಣೆಗೆ ಬಿಡುತ್ತಾನೆ. ಹೀಗೆ ಮಾಡುವಾಗ ಬಜ್ಜಿಯನ್ನು ಮಗಚಲು ಆತ ಸೌಟಿನ ಬದಲು ಕೈ ಬಳಸುತ್ತಾನೆ, ಕುದಿಯುತ್ತಿರುವ ಎಣ್ಣೆಯಲ್ಲಿ ಕೈ ಹಾಕಿ, ಬಜ್ಜಿಯನ್ನು ಮುಗುಚುತ್ತಾನೆ.
ಕೆಲವು ದಿನಗಳ ಹಿಂದೆ ಈ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ಶೇರ್ ಆದಾಗಿನಿಂದ ಸಾಕಷ್ಟು ವೈರಲ್ ಆಗಿದೆ. ಸುಮಾರು 65,000 ಜನ ಲೈಕ್ ಮಾಡಿದ್ದಾರೆ. ಹಲವರು ತಮ್ಮ ಕಾಮೆಂಟ್‌ಗಳ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಾಮೆಂಟ್‌ಗಳು ಹೀಗಿವೆ
ʼಐರನ್ ಮ್ಯಾನ್ʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ʼಇದು ನಿಜಕ್ಕೂ ಡೇಂಜರ್. ನನಗೆ ಇಷ್ಟ ಆಗಿಲ್ಲ. ಇದನ್ನು ಬೇರೆ ಯಾರಾದ್ರೂ ಪ್ರಯತ್ನಿಸಿದ್ರೆ ಕೈ ಸುಡೋದು ಖಂಡಿತ. ಇಂತಹದ್ದನ್ನೆಲ್ಲಾ ಮಕ್ಕಳಿಗೆ ತೋರಿಸುವುದು ಸರಿಯಲ್ಲʼ ಎಂದು ಕೋಪದಿಂದ ಕಾಮೆಂಟ್ ಮಾಡಿದ್ದಾರೆ. ʼಯಪ್ಪಾ, ಈ ವ್ಯಕ್ತಿ ಅದ್ಹೇಗೆ ಬಿಸಿ ಎಣ್ಣೆಯಲ್ಲಿ ಕೈ ಅದ್ದುತ್ತಾನೆ?ʼ ಎಂದು ಮೂರನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ʼಇಂತಹ ಕಲೆಗಳಿಂದ ಏನನ್ನು ಸಾಧಿಸಬೇಕಿದೆʼ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ʼವೈರಲ್ ಆಗೋ ಸಲುವಾಗಿ ಇಷ್ಟೆಲ್ಲಾ ರಿಸ್ಕ್ ಬೇಕಾʼ ಎಂದು 5ನೇ ವ್ಯಕ್ತಿ ಕಾಮೆಂಟ್ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ
Viral Video: ಪಾರ್ಕ್‌ನಲ್ಲಿ ಕುಳಿತಿದ್ದ ಅಮ್ಮ ಮಗನ ಮುಂದೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಯ್ತು ಕರಡಿ; ಮುಂದೆನಾಯ್ತು? ವಿಡಿಯೊ ವೈರಲ್
ಮೆಕ್ಸಿಕೊದ ಚಿಪಿಂಕ್ ಪರಿಸರ ಉದ್ಯಾನವನದಲ್ಲಿ ನಡೆದ ಘಟನೆಯೊಂದರ ವಿಡಿಯೊ ಇದೀಗ ವೈರಲ್ ಆಗಿದ್ದು, ಈ ವಿಡಿಯೊ ನೋಡಿದರೆ ಒಮ್ಮೆ ನಿಮ್ಮ ಮೈ ಜುಮ್ ಎನ್ನಿಸುವುದು ಸುಳ್ಳಲ್ಲ. ಅಲ್ಲದೆ ಮಾತೃಪ್ರೇಮ ಎಂಬುದು ಎಷ್ಟು ಅದ್ಭುತ ಎಂಬುದು ಈ ವಿಡಿಯೊ ನೋಡಿದ್ರೆ ನಿಮಗೆ ಅರ್ಥ ಆಗುತ್ತೆ, ಹಾಗಾದ್ರೆ ಅಂಥದ್ದೇನಿದೆ ಅಂತೀರಾ ಈ ವಿಡಿಯೊ ನೋಡಿ.
ವಿಭಾಗ