Smartphone Tips: ಈ 5 ಅಭ್ಯಾಸಗಳೇ ನಿಮ್ಮ ಫೋನ್‌ಗೆ ಸ್ಲೋ ಪಾಯ್ಸನ್; ಈಗಿನಿಂದಲೇ ಬದಲಾಯಿಸಿಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Smartphone Tips: ಈ 5 ಅಭ್ಯಾಸಗಳೇ ನಿಮ್ಮ ಫೋನ್‌ಗೆ ಸ್ಲೋ ಪಾಯ್ಸನ್; ಈಗಿನಿಂದಲೇ ಬದಲಾಯಿಸಿಕೊಳ್ಳಿ

Smartphone Tips: ಈ 5 ಅಭ್ಯಾಸಗಳೇ ನಿಮ್ಮ ಫೋನ್‌ಗೆ ಸ್ಲೋ ಪಾಯ್ಸನ್; ಈಗಿನಿಂದಲೇ ಬದಲಾಯಿಸಿಕೊಳ್ಳಿ

ಕೆಲವೊಂದು ಸಣ್ಣ ಕೆಟ್ಟ ಅಭ್ಯಾಸಗಳು ಸ್ಮಾರ್ಟ್‌ಫೋನ್‌ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಸ್ಮಾರ್ಟ್‌ಫೋನ್ ಅನ್ನು ದೀರ್ಘಕಾಲದವರೆಗೆ ಬಳಸಲು ಬಯಸಿದರೆ, ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಫೋನ್‌ ಅನ್ನು ಜಾಗರೂಕವಾಗಿ ಬಳಸಬೇಕು. (ವರದಿ: ವಿನಯ್ ಭಟ್)

ಈ 5 ಅಭ್ಯಾಸಗಳೇ ನಿಮ್ಮ ಫೋನ್‌ಗೆ ಸ್ಲೋ ಪಾಯ್ಸನ್; ಈಗಿನಿಂದಲೇ ಬದಲಾಯಿಸಿಕೊಳ್ಳಿ
ಈ 5 ಅಭ್ಯಾಸಗಳೇ ನಿಮ್ಮ ಫೋನ್‌ಗೆ ಸ್ಲೋ ಪಾಯ್ಸನ್; ಈಗಿನಿಂದಲೇ ಬದಲಾಯಿಸಿಕೊಳ್ಳಿ

ಸ್ಮಾರ್ಟ್​ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಇಂದು ನಾವು ನಮ್ಮ ಅರ್ಧ ಕೆಲಸವನ್ನು ಫೋನ್ ಮೂಲಕವೇ ಪೂರ್ಣಗೊಳಿಸುತ್ತೇವೆ. ಅದು ಕೆಲಸದ ವಿಚಾರ ಆಗಿರಬಹುದು, ಮನರಂಜನೆ ಅಥವಾ ಸಾಮಾಜಿಕ ಮಾಧ್ಯಮ ಹೀಗೆ ಫೋನ್‌ಗಳನ್ನು ಪ್ರತಿ ಕಾರ್ಯಕ್ಕೂ ಬಳಸುತ್ತೇವೆ. ಆದರೆ ನಿಮ್ಮ ಕೆಲವು ಸಣ್ಣ ಕೆಟ್ಟ ಅಭ್ಯಾಸಗಳು ಸ್ಮಾರ್ಟ್‌ಫೋನ್‌ನ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ನಿಜ, ಏಕೆಂದರೆ ನೀವು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ದೀರ್ಘಕಾಲದವರೆಗೆ ಬಳಸಲು ಬಯಸಿದರೆ, ಕೆಲವು ವಿಶೇಷ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ರಾತ್ರಿಯಿಡೀ ಫೋನ್ ಅನ್ನು ಚಾರ್ಜ್ ಮಾಡುವುದು

ಅನೇಕ ಜನರು ತಮ್ಮ ಫೋನ್‌ಗಳನ್ನು ರಾತ್ರಿಯಿಡೀ ಚಾರ್ಜ್‌ನಲ್ಲಿ ಇಡುತ್ತಾರೆ. ಇದು ಬ್ಯಾಟರಿಯನ್ನು ಹೆಚ್ಚು ಒತ್ತಡಕ್ಕೆ ಸಿಲುಕುವಂತೆ ಮಾಡುತ್ತದೆ. ಅಧಿಕ ಚಾರ್ಜ್ ಸಮಸ್ಯೆಗೆ ಕಾರಣವಾಗುತ್ತದೆ. ದಿನ ಕಳೆದಂತೆ ಇದು ಬ್ಯಾಟರಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಬಳಿಕ ಫೋನ್ ವೇಗವಾಗಿ ಡಿಸ್ಚಾರ್ಜ್ ಆಗಲು ಪ್ರಾರಂಭಿಸುತ್ತದೆ.

ಅಗ್ಗದ ಕೇಬಲ್‌ ಬಳಸುವುದು

ಸಾಮಾನ್ಯವಾಗಿ ಜನರು ಮೂಲ ಚಾರ್ಜರ್‌ಗಳ ಬದಲಿಗೆ ಅಗ್ಗದ ಚಾರ್ಜರ್‌ಗಳು ಮತ್ತು ಕೇಬಲ್‌ಗಳನ್ನು ಬಳಸುತ್ತಾರೆ. ಈ ಅಡಾಪ್ಟರ್ ಮತ್ತು ಕೇಬಲ್ ನಿಮ್ಮ ಫೋನ್ ಅನ್ನು ಹಾನಿಗೊಳಿಸಬಹುದು. ಒಂದು ಫೋನಿನ ಬ್ಯಾಟರಿಗೆ ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಚಾರ್ಜರ್ ನೀಡಲಾಗುತ್ತದೆ. ಅದು ಬ್ಯಾಟರಿ ಹಾಗೂ ಚಾರ್ಜರ್​ಗೆ ಸರಿಯಾಗಿ ಸಿಂಕ್ ಆಗದಿದ್ದರೆ ಮೊಬೈಲ್ ಬ್ಲಾಸ್ಟ್ ಆಗುವ ಸಂಭವ ಕೂಡ ಬರಬಹುದು. ಹೀಗಾಗಿ ಈ ವಿಚಾರದಲ್ಲಿ ಎಚ್ಚರ ವಹಿಸಿ.

ನೀರಿನ ಅಡಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವುದು

ನೀವು ಸಮುದ್ರ ಅಥವಾ ಈಜುಕೊಳದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಬಯಸಿದರೆ ಜಾಗರೂಕರಾಗಿರಿ. ನಿಮ್ಮ ಫೋನ್ ಅನ್ನು ನೀರಿನ ಒಳಗೆ ಹಾಕುವುದು ತುಂಬಾ ಅಪಾಯಕಾರಿ. ಫೋನ್‌ಗೆ ನೀರು ಸೇರುವುದರಿಂದ ದೊಡ್ಡ ಹಾನಿಯಾಗುತ್ತದೆ ಮತ್ತು ಅದರ ಡಿಸ್​ಪ್ಲೇ ಮೇಲೂ ಪರಿಣಾಮ ಬೀಳುತ್ತದೆ. ಇಂದು ಹೆಚ್ಚಿನ ಫೋನ್​ನಲ್ಲಿ ವಾಟರ್ ಪ್ರೂಫ್ ಫೀಚರ್ ನೀಡಲಾಗಿದೆ ನಿಜ. ಆದರೆ, ಸಮುದ್ರದ ಉಪ್ಪುನೀರು ಫೋನ್ ಅನ್ನು ಹೆಚ್ಚು ಹಾನಿಗೊಳಿಸುತ್ತದೆ.

ಸಮಯಕ್ಕೆ ಸರಿಯಾಗಿ ಫೋನ್ ಚಾರ್ಜ್ ಮಾಡದಿರುವುದು

ಫೋನ್ ಸಂಪೂರ್ಣವಾಗಿ ಚಾರ್ಜ್ ಖಾಲಿ ಆಗುವವರೆಗೆ ಕಾದು ಬಳಿಕ ಚಾರ್ಜ್​ಗೆ ಹಾಕುವುದು ಹಾನಿಕಾರಕವಾಗಿದೆ. ಬ್ಯಾಟರಿ ಸಂಪೂರ್ಣವಾಗಿ ಡಿಸ್ಚಾರ್ಜ್ ಆಗಿದ್ದರೆ ಅದು ಫೋನ್‌ಗೆ ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ಇದು ಬ್ಯಾಟರಿ ಅವಧಿಯನ್ನು ಕಡಿಮೆ ಮಾಡಬಹುದು. ಆದ್ದರಿಂದ ಬ್ಯಾಟರಿ ಶೂನ್ಯವನ್ನು ತಲುಪುವ ಮೊದಲು ಫೋನ್ ಅನ್ನು ಚಾರ್ಜ್ ಮಾಡಬೇಕು.

ಅಗ್ಗದ ಫೋನ್ ಕೇಸ್ ಮತ್ತು ಟೆಂಪರ್ಡ್ ಗ್ಲಾಸ್ ಬಳಕೆ

ಸಾಮಾನ್ಯವಾಗಿ ಜನರು ತಮ್ಮ ಫೋನ್‌ಗಳನ್ನು ಗೀರುಗಳಿಂದ ರಕ್ಷಿಸಲು ಅಗ್ಗದ ಫೋನ್ ಕೇಸ್ ಮತ್ತು ಟೆಂಪರ್ಡ್ ಗ್ಲಾಸ್ ಅನ್ನು ಬಳಸುತ್ತಾರೆ. ಆದರೆ ಈ ಅಗ್ಗದ ಉತ್ಪನ್ನಗಳು ನಿಮ್ಮ ಫೋನ್ ಅನ್ನು ಹೆಚ್ಚು ಹಾನಿಗೊಳಿಸಬಹುದು. ಕೆಲವು ಅಗ್ಗದ ಟೆಂಪರ್ಡ್ ಗ್ಲಾಸ್​ನಲ್ಲಿ UV ವಕ್ರವಾಗಿರುತ್ತದೆ, ಇದು ನಿಮ್ಮ ಫೋನ್ ಡಿಸ್​ಪ್ಲೇ ಮೇಲೆ ಪರಿಣಾಮ ಬೀಳಬಹುದು.

Whats_app_banner