Viral Video: ಪಾರ್ಕ್‌ನಲ್ಲಿ ಕುಳಿತಿದ್ದ ಅಮ್ಮ ಮಗನ ಮುಂದೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಯ್ತು ಕರಡಿ; ಮುಂದೆನಾಯ್ತು? ವಿಡಿಯೊ ವೈರಲ್‌
ಕನ್ನಡ ಸುದ್ದಿ  /  ಜೀವನಶೈಲಿ  /  Viral Video: ಪಾರ್ಕ್‌ನಲ್ಲಿ ಕುಳಿತಿದ್ದ ಅಮ್ಮ ಮಗನ ಮುಂದೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಯ್ತು ಕರಡಿ; ಮುಂದೆನಾಯ್ತು? ವಿಡಿಯೊ ವೈರಲ್‌

Viral Video: ಪಾರ್ಕ್‌ನಲ್ಲಿ ಕುಳಿತಿದ್ದ ಅಮ್ಮ ಮಗನ ಮುಂದೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಯ್ತು ಕರಡಿ; ಮುಂದೆನಾಯ್ತು? ವಿಡಿಯೊ ವೈರಲ್‌

ಮೆಕ್ಸಿಕೊದ ಚಿಪಿಂಕ್ ಪರಿಸರ ಉದ್ಯಾನವನದಲ್ಲಿ ನಡೆದ ಘಟನೆಯೊಂದರ ವಿಡಿಯೊ ಇದೀಗ ವೈರಲ್‌ ಆಗಿದ್ದು, ಈ ವಿಡಿಯೊ ನೋಡಿದರೆ ಒಮ್ಮೆ ನಿಮ್ಮ ಮೈ ಜುಮ್‌ ಎನ್ನಿಸುವುದು ಸುಳ್ಳಲ್ಲ. ಅಲ್ಲದೆ ಮಾತೃಪ್ರೇಮ ಎಂಬುದು ಎಷ್ಟು ಅದ್ಭುತ ಎಂಬುದು ಈ ವಿಡಿಯೊ ನೋಡಿದ್ರೆ ನಿಮಗೆ ಅರ್ಥ ಆಗುತ್ತೆ, ಹಾಗಾದ್ರೆ ಅಂಥದ್ದೇನಿದೆ ಅಂತೀರಾ ಈ ವಿಡಿಯೊ ನೋಡಿ.

ಪಾರ್ಕ್‌ನಲ್ಲಿ ಕುಳಿತ ಅಮ್ಮ ಮಗನ ಮುಂದೆ ಪ್ರತ್ಯಕ್ಷವಾದ ಕರಡಿ
ಪಾರ್ಕ್‌ನಲ್ಲಿ ಕುಳಿತ ಅಮ್ಮ ಮಗನ ಮುಂದೆ ಪ್ರತ್ಯಕ್ಷವಾದ ಕರಡಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೊವೊಂದು ನಿಮಗೆ ಭಯ ಹುಟ್ಟಿಸದೇ ಇರದು. ಒಮ್ಮೆ ಊಹಿಸಿಕೊಳ್ಳಿ. ನೀವು ಕುಟುಂಬ ಸಮೇತರಾಗಿ ಎಲ್ಲಿಗೋ ಪಿಕ್‌ನಿಕ್‌ ಹೋಗಿರುತ್ತೀರಿ. ಪಿಕ್‌ನಿಕ್‌ ಮಜಾ ಮಾಡುತ್ತಾ ಫ್ಯಾಮಿಲಿಯವರೆಲ್ಲ ಜೊತೆಯಾಗಿ ಫೋಟೊ ತೆಗಿಸಿಕೊಳ್ಳುತ್ತಿರಬೇಕಾದ್ರೆ ಮಧ್ಯೆ ಕರಡಿ ನುಗ್ಗಿದ್ರೆ ಹೇಗಿರುತ್ತೆ ನಿಮ್ಮ ಪರಿಸ್ಥಿತಿ. ನೆನೆಸಿಕೊಂಡ್ರೆ ಭಯ ಆಗುತ್ತೆ ಅಲ್ವಾ? ಈ ವಿಡಿಯೊದಲ್ಲೂ ಅದೇ ಪರಿಸ್ಥಿತಿ. ತಾಯಿ, ಮಗು ಊಟದ ಟೇಬಲ್‌ ಮುಂದೆ ಕುಳಿತು ಫೋಟೊ ತೆಗಿಸಿಕೊಳ್ಳುವಾಗ ಇದ್ದಕ್ಕಿದ್ದಂತೆ ಕರಡಿ ನುಗ್ಗುತ್ತದೆ. ಆ ಕ್ಷಣಕ್ಕೆ ಗಾಬರಿಯಾದ ತಾಯಿ ಮಗನನ್ನು ಕರಡಿಯಿಂದ ರಕ್ಷಿಸುತ್ತಾಳೆ. ಈ ಘಟನೆ ನಡೆದಿದ್ದು ಮೆಕ್ಸಿಕೊದ ನ್ಯೂವೋ ಲಿಯಾನ್‌ ರಾಜ್ಯದ ಚಿಂಪಿಕ್‌ ಉದ್ಯಾನವನದಲ್ಲಿ. ಈ ವಿಡಿಯೊ ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಆದಾಗಿನಿಂದ ಈವರೆಗೆ ಹಲವರು ಕಾಮೆಂಟ್‌ ಮಾಡುವ ಮೂಲಕ ಭಯ ವ್ಯಕ್ತಪಡಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಈ ವಿಡಿಯೊದಲ್ಲಿ ಕರಡಿಯು ಪಾರ್ಕ್‌ನ ಬೆಂಚಿನ ಮೇಲೆ ಇರಿಸಲಾಗಿದ್ದ ತಿನಿಸುಗಳನ್ನು ತಿನ್ನುವುದನ್ನು ಕಾಣಬಹುದಾಗಿದೆ. ವಿಡಿಯೊದಲ್ಲಿ ತಾಯಿ ತಮ್ಮ ಮಗನ ಕಣ್ಣುಗಳನ್ನು ಕೈಗಳಿಂದ ಮುಚ್ಚಿರುವುದನ್ನು ಕಾಣಬಹುದಾಗಿದೆ. ಅಲ್ಲದೆ ಕರಡಿಯ ಟೇಬಲ್‌ ಮೇಲಿರುವ ತಿನಿಸುಗಳನ್ನು ತಿನ್ನುತ್ತಾ ಒಮ್ಮೆ ತಾಯಿ, ಮಗುವನ್ನು ಮೂಸಿ ನೋಡುವುದನ್ನು ಕಾಣಬಹುದಾಗಿದೆ. ಟೇಬಲ್‌ ಇರುವ ತಿನಿಸನ್ನು ಪೂರ್ತಿ ತಿಂದ ಬಳಿಕ ಕರಡಿ ಹಾರಿ ಕೆಳಗಿಳಿದು ಹೋಗುತ್ತದೆ.

ಈ ವಿಡಿಯೊ ಕ್ಲಿಪ್‌ ಅನ್ನು ಮೊದಲು ಟಿಕ್‌ಟಾಕ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿತ್ತು. ನಂತರ ಇತರ ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಹರಿ ಬಿಡಲಾಗಿದೆ. ಸೆಪ್ಟೆಂಬರ್‌ 27 ರಂದು ಈ ವಿಡಿಯೊ ಕ್ಲಿಪ್‌ ಅನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ ಮಾಡಿದಾಗಿನಿಂದ 9ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 4 ಸಾವಿರಕ್ಕೂ ಅಧಿಕ ಮಂದಿ ಇದನ್ನು ಶೇರ್‌ ಮಾಡಿದ್ದಾರೆ. ಹಲವರು ಕಾಮೆಂಟ್‌ ವಿಭಾಗದಲ್ಲಿ ತಮ್ಮ ಪ್ರತಿಕ್ರಿಯೆಯನ್ನು ವಿವರಿಸಿದ್ದಾರೆ.

ಕಾಮೆಂಟ್‌ಗಳು ಹೀಗಿದೆ

ʼಆ ತಾಯಿಗೆ ಒಂದು ನಮನ. ಕರಡಿ ಹತ್ತಿರವೇ ಸುಳಿದರೂ ಶಾಂತಿಯಿಂದ ಇದ್ದು, ಮಗನನ್ನು ಗಟ್ಟಿಯಾಗಿ ಹಿಡಿದು ಕುಳಿತಿದ್ದಾರೆ. ಕರಡಿ ಎದುರಿನಲ್ಲೇ ಇದ್ದರೂ ಮಗನನ್ನು ರಕ್ಷಿಸಲು ಆಕೆ ತೋರಿದ ಧೈರ್ಯ ಮಾತೃಪ್ರೇಮವನ್ನು ಸೂಚಿಸುತ್ತದೆʼ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

ʼಅವರು ನಿಜಕ್ಕೂ ಲಕ್ಕಿ, ಆ ಕರಡಿ ಅವರಿಬ್ಬರಿಗೂ ಏನೂ ಮಾಡಿಲ್ಲ. ದೇವರು ದೊಡ್ಡವನುʼ ಎಂದು ಕಾಮೆಂಟ್‌ ಮಾಡಿದ್ದಾರೆ. ʼಇದು ಮರಿ ಕರಡಿ ಅನ್ನಿಸುತ್ತಿದೆ. ಇದು ತಿಂಡಿಯ ಸಲುವಾಗಿಯೇ ಬಂದಿದೆ ಹೊರತು ಜನರಿಗೆ ಹಾನಿ ಮಾಡುವ ಉದ್ದೇಶದಿಂದ ಅಲ್ಲʼ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಅಯ್ಯೋ, ಅವರಿಬ್ಬರು ಅದ್ಹೇಗೆ ಅಷ್ಟು ಶಾಂತವಾಗಿದ್ದರು, ನಮ್ಮಿಂದಾದರೆ ಖಂಡಿತ ಅದು ಅಸಾಧ್ಯʼ ಎಂದು ಟ್ವಿಟರ್‌ ಬಳಕೆದಾರರೊಬ್ಬರು ಕಾಮೆಂಟ್‌ ಮೂಲಕ ಭಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ

ಬೆಕ್ಕು ಎಂದುಕೊಂಡು ಕರಿಚಿರತೆ ಸಾಕಿದ ಯುವತಿ; ಧೈರ್ಯಕ್ಕೆ ಸಲಾಂ ಎಂದ ನೆಟ್ಟಿಗರು

ರಷ್ಯಾದ ಯುವತಿಯೊಬ್ಬಳು ರಸ್ತೆ ಬದಿಯಲ್ಲಿ ಸಿಕ್ಕ ಅನಾಥವಾದ ಚಿಕ್ಕ ಮರಿಯೊಂದನ್ನು ಮನೆಗೆ ಎತ್ತಿಕೊಂಡು ಬರುತ್ತಾಳೆ. ಆ ಮರಿಯನ್ನು ಬೆಕ್ಕು ಎಂದುಕೊಂಡೇ ಅವಳು ಸಾಕಿ ಸಲಹುತ್ತಾಳೆ, ಆದರೆ ಮುಂದೆ ನಡೆಯುವುದೇ ಬೇರೆ. ಆಕೆ ಎತ್ತಿಕೊಂಡು ಬಂದಿದ್ದು ಬೆಕ್ಕಾಗಿರದೇ ಕರಿಚಿರತೆ ಆಗಿರುತ್ತದೆ. ಆದರೂ ರಸ್ತೆಯಲ್ಲಿ ಸಿಕ್ಕ ಮರಿಯನ್ನು ಯಾವ ಪ್ರಾಣಿ ಎಂದು ಲೆಕ್ಕಿಸದೇ ಮನೆಗೆ ತಂದು ಸಾಕಿ ಸಲಹಿದ ಆಕೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ ಈ ಘಟನೆಯು ವೈರಲ್‌ ಆಗಿದೆ.

Whats_app_banner