ಬೆಕ್ಕು ಎಂದುಕೊಂಡು ಕರಿಚಿರತೆ ಸಾಕಿದ ಯುವತಿ; ಧೈರ್ಯಕ್ಕೆ ಸಲಾಂ ಎಂದ ನೆಟ್ಟಿಗರು
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಕ್ಕು ಎಂದುಕೊಂಡು ಕರಿಚಿರತೆ ಸಾಕಿದ ಯುವತಿ; ಧೈರ್ಯಕ್ಕೆ ಸಲಾಂ ಎಂದ ನೆಟ್ಟಿಗರು

ಬೆಕ್ಕು ಎಂದುಕೊಂಡು ಕರಿಚಿರತೆ ಸಾಕಿದ ಯುವತಿ; ಧೈರ್ಯಕ್ಕೆ ಸಲಾಂ ಎಂದ ನೆಟ್ಟಿಗರು

ರಷ್ಯಾದ ಯುವತಿಯೊಬ್ಬಳು ರಸ್ತೆ ಬದಿಯಲ್ಲಿ ಸಿಕ್ಕ ಬೆಕ್ಕಿನ ಮರಿಯೊಂದನ್ನು ಮನೆಗೆ ಎತ್ತಿಕೊಂಡು ಬಂದು ಸಾಕಿ ಸಲಹುತ್ತಾಳೆ. ಆದರೆ ಆ ಮರಿ ಬೆಳೆದು ದೊಡ್ಡದಾದ ಮೇಲೆ ತಿಳಿಯುತ್ತದೆ ಎಂದು ಬೆಕ್ಕಲ್ಲ, ಕರಿಚಿರತೆ ಎಂದು. ಏನಿದು ಸ್ಟೋರಿ ನೋಡಿ.

ಬೆಕ್ಕು ಎಂದುಕೊಂಡು ಕರಿಚಿರತೆ ಸಾಕಿದ ಯುವತಿ
ಬೆಕ್ಕು ಎಂದುಕೊಂಡು ಕರಿಚಿರತೆ ಸಾಕಿದ ಯುವತಿ

ಕೆಲವೊಮ್ಮೆ ನಾವು ಊಹಿಸುವುದೇ ಒಂದು, ನಡೆಯುವುದೇ ಒಂದು. ನಾವು ಊಹಿಸದೇ ನಡೆಯುವ ಘಟನೆಗಳು ಕೆಲವು ಶಾಕ್‌ ನೀಡಿದರೆ, ಇನ್ನೂ ಕೆಲವು ನಗು ತರಿಸಬಹುದು. ರಷ್ಯಾದಲ್ಲಿ ಇಂಥಹದ್ದೇ ಒಂದು ಘಟನೆ ನಡೆದಿದೆ.

ರಷ್ಯಾದ ಯುವತಿಯೊಬ್ಬಳು ರಸ್ತೆ ಬದಿಯಲ್ಲಿ ಸಿಕ್ಕ ಅನಾಥವಾದ ಚಿಕ್ಕ ಮರಿಯೊಂದನ್ನು ಮನೆಗೆ ಎತ್ತಿಕೊಂಡು ಬರುತ್ತಾಳೆ. ಆ ಮರಿಯನ್ನು ಬೆಕ್ಕು ಎಂದುಕೊಂಡೇ ಅವಳು ಸಾಕಿ ಸಲಹುತ್ತಾಳೆ, ಆದರೆ ಮುಂದೆ ನಡೆಯುವುದೇ ಬೇರೆ. ಆಕೆ ಎತ್ತಿಕೊಂಡು ಬಂದಿದ್ದು ಬೆಕ್ಕಾಗಿರದೇ ಕರಿಚಿರತೆ ಆಗಿರುತ್ತದೆ. ಆದರೂ ರಸ್ತೆಯಲ್ಲಿ ಸಿಕ್ಕ ಮರಿಯನ್ನು ಯಾವ ಪ್ರಾಣಿ ಎಂದು ಲೆಕ್ಕಿಸದೇ ಮನೆಗೆ ತಂದು ಸಾಕಿ ಸಲಹಿದ ಆಕೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ ಈ ಘಟನೆಯು ವೈರಲ್‌ ಆಗಿದೆ.

ಆಕೆ ಮರಿಯನ್ನು ಎತ್ತಿಕೊಂಡು ಬಂದು ದೊಡ್ಡದಾಗುವವರೆಗೂ ಸಾಕಿ ಸಲಹಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು ಈ ವಿಡಿಯೊ ಆಗ ಸಾಕಷ್ಟು ವೈರಲ್‌ ಆಗಿದೆ.

ಏನಿದೆ ವಿಡಿಯೊದಲ್ಲಿ?

ವಿಡಿಯೊ ಆರಂಭವಾದಾಗ ರಸ್ತೆಬದಿಯಲ್ಲಿ ಮಣ್ಣು, ಕೆಸರಿನ ನಡುವೆ ಸಿಲುಕಿದ್ದ ಪುಟ್ಟದಾದ ಮರಿಯೊಂದನ್ನು ಆಕೆ ಎತ್ತುತ್ತಿರುವ ದ್ರಶ್ಯವನ್ನು ಕಾಣಬಹುದಾಗಿದೆ. ನಂತರ ಆಕೆ ಆ ಕರಿ ಚಿರತೆಯ ಮರಿಯನ್ನು ಎತ್ತಿಕೊಂಡು ಬಂದು ಮನೆಯಲ್ಲಿ ಸಾಕುತ್ತಾಳೆ. ನಮ್ಮ ಮನೆಯ ನಾಯಿಯೊಂದಿಗೆ ಇದನ್ನೂ ಬೆಳೆಸುತ್ತಾರೆ. ಆದರೆ ಬೆಕ್ಕು ಎಂದುಕೊಂಡು ಬೆಳೆಸಿದ್ದ ಆ ಮರಿ ದೊಡ್ಡದಾರ ಮೇಲೆ ಅದು ಕರಿಚಿರತೆ ಎಂಬುದು ಅವಳಿಗೆ ಅರಿವಿಗೆ ಬರುತ್ತದೆ. ಈ ವಿಡಿಯೊದಲ್ಲಿ ಆ ಚಿರತೆ ತನ್ನನ್ನು ಸಾಕಿದ ಯುವತಿ ಹಾಗೂ ನಾಯಿಯ ಜೊತೆ ಆತ್ಮೀಯವಾಗಿರುವುದನ್ನು ಕಾಣಬಹುದಾಗಿದೆ. @factmayor ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. @luna_the_pantera. ಎಂಬ ಖಾತೆಯಲ್ಲಿ ಈ ವಿಡಿಯೊವನ್ನು ಈ ಮೊದಲೇ ಹಂಚಿಕೊಳ್ಳಲಾಗಿದೆ.

ಸೆಪ್ಟೆಂಬರ್‌ 21 ರಂದು ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೊ ಪೋಸ್ಟ್‌ ಮಾಡಿದಾಗಿನಿಂದ ಸುಮಾರು 9.1 ಮಿಲಿಯನ್‌ ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ ಈ ವಿಡಿಯೊವನ್ನು ಹಲವರು ಶೇರ್‌ ಮಾಡಿದ್ದಾರೆ. ಕಾಮೆಂಟ್‌ ಕೂಡ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

ಕಾಮೆಂಟ್‌ನಲ್ಲಿ ಮೆಚ್ಚುಗೆಯ ಮಹಾಪೂರ

ʼಮರಿಯನ್ನು ಎತ್ತಿಕೊಂಡು ಬಂದು ಸಾಕಿದ್ದಕ್ಕೆ ದೇವರು ನಿಮಗೆ ಒಳ್ಳೆಯದೇ ಮಾಡುತ್ತಾನೆ. ಬಹುಶಃ ನೀವು ಮೂವರು ಬಹಳ ಸಂತೋಷದಿಂದ ಬದುಕುತ್ತಿದ್ದೀರಿ ಎನ್ನಿಸುತ್ತದೆʼ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಯಪ್ಪಾ ತಿಳಿಯದೇ ಕರಿಚಿರತೆ ಮನೆಗೆ ಬಂದರೆ ನಾವು ಎಷ್ಟು ಭಯ ಪಡುತ್ತೇವೆ ಊಹಿಸಿ, ಅಂಥದ್ರಲ್ಲಿ ನೀವು ಬ್ಲ್ಯಾಕ್‌ ಪ್ಯಾಂಥರ್‌ನೊಂದಿಗೆ ಪ್ರತಿದಿನ ಮುಖಾಮುಖಿಯಾಗುವುದು. ಗ್ರೇಟ್‌ʼ ಎಂದು ಎರಡನೇ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ.

ʼಇದೊಂಥರ ಅದ್ಭುತʼ ಎಂದು ಮೂರನೇ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ.

ʼಆ ಮರಿಯನ್ನು ಕಾಪಾಡಿದ್ದಕ್ಕೆ ಧನ್ಯವಾದʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼನಿಮ್ಮ ಬಾಂಧವ್ಯವನ್ನು ನೋಡಿ ಖುಷಿ ಎನ್ನಿಸುತ್ತಿದೆ. ಯಾವಾಗಲೂ ಖುಷಿಯಾಗಿರಿʼ ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ.

Whats_app_banner