Child care: ಮಕ್ಕಳು ಟಿವಿ ಮುಂದೆ ಹೆಚ್ಚು ಸಮಯ ಕೂರುತ್ತಾರಾ? ಹಾಗಿದ್ರೆ ಪೋಷಕರು ಮಾಡಬೇಕಾದ್ದು ಇಷ್ಟು
ಟಿವಿ ನೋಡುವ ಸಮಯ ಹೆಚ್ಚಾದಂತೆ, ಮಕ್ಕಳು ಆಟದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಇದರೊಂದಿಗೆ ಕಲಿಕೆಯಲ್ಲಿ ಹಿಂದೆ ಬೀಳಬಹುದು. ಅವರು ನೋಡುತ್ತಿರುವ ಕಾರ್ಯಕ್ರಮಗಳಿಂದ ಇಂತಹ ಸಮಸ್ಯೆಗಳು ಉಂಟಾಗಬಹುದು ಎಂದು ಸಂಶೋಧಕರು ಹೇಳುತ್ತಾರೆ. ಆದರೆ ಪಾಲಕರು ತಮ್ಮ ಮಕ್ಕಳೊಂದಿಗೆ ಟಿವಿ ನೋಡುವುದರಿಂದ ಅವರ ಕಲಿಕೆಯ ಕೌಶಲ ಹೆಚ್ಚುವುದಲ್ಲದೆ ಅವರ ಸಂಭಾಷಣಾ ಕೌಶಲ್ಯವೂ ಹೆಚ್ಚುತ್ತದೆ ಎಂದು ಅಧ್ಯಯನವೊಂದು ಹೇಳಿದೆ.
ಈಗಿನ ಮಕ್ಕಳು ಆಟ ಮತ್ತು ಊಟದಲ್ಲಿ ಭಾರಿ ಹಿಂದೆ. ಅದರ ಬದಲು ದಿನಪೂರ್ತಿ ಟಿವಿ ಮುಂದೆಯೋ ಅಥವಾ ಮೊಬೈಲ್ ಹಿಡಿದೋ ಕೂರುತ್ತಾರೆ. ಪೋಷಕರು ಹೇಳಿದಂತೆ ಮಕ್ಕಳು ಕೇಳುವ ಬದಲು, ಮಕ್ಕಳು ಹೇಳಿದಂತೆ ಹೆತ್ತವರು ಕೇಳಬೇಕಾದ ಪರಿಸ್ಥಿತಿ ಇದೆ. ಆಟವಾಡುತ್ತಾ ಇರಬೇಕಾದ ಮಕ್ಕಳು ಜಾಸ್ತಿ ಇಲೆಕ್ಟ್ರಾನಿಕ್ ವಸ್ತುಗಳನ್ನು ನೆಚ್ಚಿಕೊಳ್ಳುತ್ತಾರೆ. ಮನೆಯಲ್ಲಿ ಟಿವಿ ಮುಂದೆ ಕೂತು ಮಕ್ಕಳ ಚಾನೆಲ್‌ಗಳು ಅಥವಾ OTTಯಲ್ಲಿ ಚಲನಚಿತ್ರಗಳನ್ನು ನೋಡುತ್ತಾ ಸಮಯ ಕಳೆಯುತ್ತಾರೆ.
ಕೊರೊನಾ ಕಾಲದಿಂದ ಈ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಆನ್‌ಲೈನ್ ತರಗತಿಗಯಿಂದಾಗಿ ಮನೆಯವರೇ ಮಕ್ಕಳಿಗೆ ಅನಿವಾರ್ಯವಾಗಿ ಸ್ಮಾರ್ಟ್ ಫೋನ್, ಟ್ಯಾಬ್, ಲ್ಯಾಪ್‌ಟಾಪ್‌ಗಳನ್ನು ಕೊಡಬೇಕಾಗಿ ಬಂತು. ಇದು ಈಗ ಪೋಷಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈಗ ಮೊಬೈಲ್ ಮಕ್ಕಳಿಗೆ ಅಭ್ಯಾಸವಾಗಿದೆ. ತರಗತಿಗಳು ನಡೆಯದಿದ್ದರೂ, ಫೋನಿನಲ್ಲಿ ಏನನ್ನೋ ನೋಡುತ್ತಲೇ ಕೂರುತ್ತಾರೆ. ಕೊರೊನಾ ಸಮಯದಲ್ಲಿ ಹೊರಗೆ ಆಟವಾಡಲು ಅವಕಾಶವಿಲ್ಲದ ಕಾರಣ ಅನೇಕ ಮಕ್ಕಳು ಟಿವಿ ಚಾನೆಲ್‌ಗಳನ್ನು ನೋಡುತ್ತಾ ಕಾಲ ಕಳೆದರು. ಇದು ಅವರಿಗೆ ಚಟವೂ ಆಯಿತು.
ನಿಮ್ಮ ಮಕ್ಕಳು ಟಿವಿಯಲ್ಲಿ ಏನನ್ನು ವೀಕ್ಷಿಸುತ್ತಿದ್ದಾರೆ ಎಂಬುದನ್ನು ನೀವು ಗಮನಿಸುತ್ತಿರಬೇಕು. ಸಾಧ್ಯವಾದರೆ ಅವರ ಪಕ್ಕದಲ್ಲಿ ಕುಳಿತುಕೊಂಡು ಅವರಿಗೆ ಮಾರ್ಗದರ್ಶನ ನೀಡಿದರೆ ಒಳ್ಳೆಯದು. ಟಿವಿಯಲ್ಲಿ ಬರುವ ಕಾರ್ಯಕ್ರಮಗಳ ಬಗ್ಗೆ ಅವರಿಗೆ ಅರಿವು ಮೂಡಿಸಿ. ಸಾಧ್ಯವಾದಷ್ಟು ಅವರ ಜ್ಞಾನವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ತೋರಿಸಿ. ಅದು ಏನೆಂಬುದನ್ನು ಅವರಿಗೆ ವಿವರಿಸಿ. ಅವುಗಳ ಬಗ್ಗೆ ಚರ್ಚಿಸುವ ಮೂಲಕವೂ ಮಕ್ಕಳಲ್ಲಿ ಜ್ಞಾನವನ್ನು ಹೆಚ್ಚಿಸಬಹುದು. ಇದರಿಂದಾಗಿ ಮಕ್ಕಳು ಹೊರಗೆ ಹೋಗದೆ ಇದ್ದರೂ ಸಾಕಷ್ಟು ವಿಷಯಗಳನ್ನು ಕಲಿಯಬಹುದು. ಇದರಿಂದ ನಿಮ್ಮ ಮಕ್ಕಳಿಗೂ ಅನುಕೂಲವಾಗುತ್ತದೆ. ಮಕ್ಕಳಿಗೆ ಹೇಳಿಕೊಡುವ ಉದ್ದೇಶದಿಂದ ನೀವೂ ಕಲಿತಂತಾಗುತ್ತದೆ. ಇತ್ತೀಚಿನ ಹಲವು ಅಧ್ಯಯನಗಳು ಕೂಡಾ ಇದನ್ನೇ ಹೇಳಿವೆ. ತಮ್ಮ ಮಕ್ಕಳೊಂದಿಗೆ ಟಿವಿ ನೋಡುವ ವಯಸ್ಕರು ಅವರಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಂಡಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಟಿವಿ ನೋಡುವ ಸಮಯ ಹೆಚ್ಚಾದಂತೆ, ಮಕ್ಕಳು ಆಟದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಇದರೊಂದಿಗೆ ಕಲಿಕೆಯಲ್ಲಿ ಹಿಂದೆ ಬೀಳಬಹುದು. ಅವರು ನೋಡುತ್ತಿರುವ ಕಾರ್ಯಕ್ರಮಗಳಿಂದ ಇಂತಹ ಸಮಸ್ಯೆಗಳು ಉಂಟಾಗಬಹುದು ಎಂದು ಸಂಶೋಧಕರು ಹೇಳುತ್ತಾರೆ. ಆದರೆ ಪಾಲಕರು ತಮ್ಮ ಮಕ್ಕಳೊಂದಿಗೆ ಟಿವಿ ನೋಡುವುದರಿಂದ ಅವರ ಕಲಿಕೆಯ ಕೌಶಲ ಹೆಚ್ಚುವುದಲ್ಲದೆ ಅವರ ಸಂಭಾಷಣಾ ಕೌಶಲ್ಯವೂ ಹೆಚ್ಚುತ್ತದೆ ಎಂದು ಅಧ್ಯಯನವೊಂದು ಹೇಳಿದೆ.
ಟಿವಿಯಲ್ಲಿನ ಕೆಲವು ಕಾರ್ಯಕ್ರಮಗಳ ಮಾಹಿತಿ ಮತ್ತು ಅರ್ಥವನ್ನು ಮಕ್ಕಳಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅವುಗಳನ್ನು ಸರಳೀಕರಿಸುವಲ್ಲಿ ಮಕ್ಕಳು ತೊಂದರೆ ಅನುಭವಿಸಬಹುದು. ಆದರೆ ದೊಡ್ಡವರು ಮಕ್ಕಳೊಂದಿಗೆ ಒಟ್ಟಿಗೆ ಟಿವಿ ನೋಡಿ ಅದರ ಬಗ್ಗೆ ವಿವರಿಸಿದರೆ ಮತ್ತು ತಿಳಿಯದ ವಿಷಯಗಳ ಬಗ್ಗೆ ಮಾತನಾಡಿದರೆ, ವಿಷಯವನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಶೇಷವಾಗಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ ಮಕ್ಕಳಿಗೆ ಅಂತಹ ಸಹಭಾಗಿತ್ವದ ಅಗತ್ಯವಿದೆ.
ಪ್ಯಾರಿಸ್ ಮೂಲದ ಸಂಶೋಧಕ ಡಾ.ಬಾಹಿಯಾ ಗುಲ್ಲೈ, ಪೋಷಕರು ಮಕ್ಕಳಿಗೆ ಶಿಕ್ಷಣ ನೀಡಲು ಹೊಸ ತಂತ್ರಜ್ಞಾನವನ್ನು ಬಳಸಬೇಕು ಎಂದು ಸಲಹೆ ನೀಡುತ್ತಾರೆ. ಸ್ಮಾರ್ಟ್ ಫೋನ್ ಮತ್ತು ದೂರದರ್ಶನಗಳು ಮಕ್ಕಳಲ್ಲಿ ಸಾಮಾಜಿಕ ಸಂವಹನವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಆದರೆ ಅವು ದೊಡ್ಡವರಿಗೆ ಪರ್ಯಾಯವಲ್ಲ ಎಂಬುದನ್ನು ಮರೆಯಬಾರದು ಎಂಬ ಮಹತ್ವದ ಸಲಹೆಯನ್ನೂ ನೀಡಿದ್ದಾರೆ.
ಈಗಿನ ಪೀಳಿಗೆ ಮತ್ತು ಮುಂಬರುವ ಪೀಳಿಗೆ ಕೂಡ, ನಾವು ಒಂದು ದಿನದಲ್ಲಿ ಎಷ್ಟು ಹೊತ್ತು ಟಿವಿ ಅಥವಾ ಮೊಬೈಲ್ ಸ್ಕ್ರೀನ್ ಮುಂದೆ ಸಮಯ ವಿನಿಯೋಗಿಸಬೇಕು ಎಂಬುದು ಜೀವನದಲ್ಲಿ ಕಲಿಯಬೇಕಾದ ಮತ್ತೊಂದು ಕೌಶಲ್ಯ. ಸಾಂಕ್ರಾಮಿಕ ಸಮಯದಲ್ಲಿ ಲಾಕ್‌ಡೌನ್‌ಗಳಿಂದ ಟಿವಿ ಅಥವಾ ಮೊಬೈಲ್ ವೀಕ್ಷಣೆಯ ಸಮಯ ಹೆಚ್ಚಿದೆ.
ವಿಭಾಗ