ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Honda Cb200x: ಗೌರಿ ಗಣೇಶ ಹಬ್ಬಕ್ಕೆ 2023ರ ಸಿಬಿ200ಎಕ್ಸ್‌ ಬೈಕ್‌ ಪರಿಚಯಿಸಿದ ಹೋಂಡಾ, ದರ 1.47 ಲಕ್ಷ ರೂಪಾಯಿ, ಇಲ್ಲಿದೆ ಹೆಚ್ಚಿನ ವಿವರ

Honda CB200X: ಗೌರಿ ಗಣೇಶ ಹಬ್ಬಕ್ಕೆ 2023ರ ಸಿಬಿ200ಎಕ್ಸ್‌ ಬೈಕ್‌ ಪರಿಚಯಿಸಿದ ಹೋಂಡಾ, ದರ 1.47 ಲಕ್ಷ ರೂಪಾಯಿ, ಇಲ್ಲಿದೆ ಹೆಚ್ಚಿನ ವಿವರ

ಹಬ್ಬದ ಋತುವಿನ ಸಂದರ್ಭದಲ್ಲಿ ಹೋಂಡಾ ಕಂಪನಿಯು 2023 Honda CB200X ಬೈಕನ್ನು ದೇಶದ ರಸ್ತೆಗೆ ಪರಿಚಯಿಸಿದೆ. ಇದರ ಎಕ್ಸ್‌ ಶೋರೂಂ ದರ 1.47 ಲಕ್ಷ ರೂಪಾಯಿ ಇದೆ.

2023ರ ಸಿಬಿ200ಎಕ್ಸ್‌ ಬೈಕ್‌
2023ರ ಸಿಬಿ200ಎಕ್ಸ್‌ ಬೈಕ್‌

ಬೆಂಗಳೂರು: ಹೋಂಡಾ ಮೋಟಾರ್‌ಸೈಕಲ್‌ ಆಂಡ್‌ ಸ್ಕೂಟರ್‌ ಇಂಡಿಯಾವು (ಎಚ್‌ಎಂಎಸ್‌ಇ) ನೂತನ ಹೋಂಡಾ ಸಿಬಿ200ಎಕ್ಸ್‌ ಬೈಕನ್ನು ಪರಿಚಯಿಸಿದೆ. ಇದರ ದೆಹಲಿ ಎಕ್ಸ್‌ ಶೋರೂಂ ದರ 1.47 ಲಕ್ಷ ರೂಪಾಯಿ ಇದೆ. ಇದು ಬಿಎಸ್‌6 ಫೇಸ್‌ 2 ನಿಯಮಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸಲಾದ ಬೈಕ್‌. ಇದೀಗ ಒಬಿಡಿ2 ಇ20 ಮಾರ್ಗಸೂಚಿಯನ್ವಯ ಆಗಮಿಸಿದೆ. ಇದರಲ್ಲಿ ಹಾರ್ನೆಟ್‌ 2.0 ಟೆಕ್ನಾಲಜಿ ಇದೆ.

2023ರ ಹೋಂಡಾ ಸಿಬಿ200ಎಕ್ಸ್‌ನಲ್ಲಿ 184.4 ಸಿಸಿಯ ಸಿಂಗಲ್‌ ಸಿಲಿಂಡರ್‌ ಎಂಜಿನ್‌ ಇದೆ. ಇದು ಒಬಿಡಿ2 ನಿಯಮಗಳಿಗೆ ತಕ್ಕಂತೆ ಇದೆ. ಈ ಎಂಜಿನ್‌ 8,500 ಆವರ್ತನಕ್ಕೆ 17 ಅಶ್ವಶಕ್ತಿ ಮತ್ತು 6000 ಆವರ್ತನಕ್ಕೆ 15.9 ಎನ್‌ಎಂ ಟಾರ್ಕ್‌ ಒದಗಿಸುತ್ತದೆ. ಇದರಲ್ಲಿ 6 ಹಂತದ ಗಿಯರ್‌ಬಾಕ್ಸ್‌ ಇದೆ. ಉಳಿದಂತೆ ಯುಎಸ್‌ಡಿ ಫ್ರಂಟ್‌ ಫೋರ್ಕ್ಸ್‌ ಮತ್ತು ಹಿಂಭಾಗದ ಟೈರ್‌ಗೆ ಮೊನೊಸೊಕ್‌ ಇದೆ. ಸಿಂಗಲ್‌ ಚಾನೆಲ್‌ ಎಬಿಎಸ್‌ನ ಡಿಸ್ಕ್‌ ಬ್ರೇಕ್‌ ಇದೆ.

"ಹೋಂಡಾದ ಲೆಜೆಂಡರಿ ಸಿಬಿ ಸರಣಿಯಲ್ಲಿ ಇಂದು 2023ರ ಸಿಬಿ200ಎಕ್ಸ್‌ ಪರಿಚಯಿಸುವ ಮೂಲಕ ಪ್ರಮುಖ ಮೈಲ್‌ಸ್ಟೋನ್‌ಗೆ ಬಂದಿದ್ದೇವೆ. ಮೊದಲ ಬಾರಿಗೆ 2021ರಲ್ಲಿ ಪರಿಚಯಿಸಿದ ಬಳಿಕ ಸಿಬಿ200ಎಕ್ಸ್‌ಗೆ ಮಾರುಕಟ್ಟೆಯಲ್ಲಿ ಅನನ್ಯ ಪ್ರತಿಕ್ರಿಯೆ ದೊರಕಿದೆ. ಪ್ರತಿನಿತ್ಯ ಬಳಸುವವರಿಗೆ ಮಾತ್ರವಲ್ಲದೆ ಸಿಟಿಯಿಂದ ಹೊರಕ್ಕೆ ವಾರಾಂತ್ಯಗಳಲ್ಲಿ ಹೋಗುವವರಿಗೂ ಸೂಕ್ತವಾದ ಬೈಕಿದು ಎಂದು ಎಚ್‌ಎಂಎಸ್‌ಐನ ಸಿಇಒ ಮತ್ತು ಅಧ್ಯಕ್ಷ ತುಟ್ಸುಮು ಒಟಾನಿ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

2023ರ ಸಿಬಿ200ಎಕ್ಸ್‌
2023ರ ಸಿಬಿ200ಎಕ್ಸ್‌

"ಒಬಿಡಿ2 ನಿಯಮದ ಎಂಜಿನ್‌, ಸೊಗಸಾದ ಗ್ರಾಫಿಕ್ಸ್‌, ಹೊಸ ಸ್ಲಿಪ್ಪರ್‌ ಕ್ಲಚ್‌ನೊಂದಿಗೆ 2023ರ ಸಿಬಿ200ಎಕ್ಸ್‌ ಪರಿಚಯಿಸಲು ನಾವು ಸಂತೋಷ ಪಡುತ್ತಿದ್ದೇವೆ. 180-200cc ಮೋಟಾರ್‌ಸೈಕಲ್ ವಿಭಾಗದಲ್ಲಿ ಈಗಾಗಲೇ ಸಿಬಿ200ಎಕ್ಸ್‌ ಗ್ರಾಹಕರ ಮೆಚ್ಚುಗೆ ಪಡೆದಿದೆ. ಇದೀಗ ನೂತನ ಬೈಕ್‌ ಗ್ರಾಹಕರಿಗೆ ಇನ್ನಷ್ಟು ಖುಷಿ ನೀಡಲಿದೆ" ಎಂದು ಎಚ್‌ಎಂಎಸ್‌ಐನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕರಾದ ಯೋಗೇಶ್‌ ಮಾಥೂರ್‌ ಹೇಳಿದ್ದಾರೆ.

ನೂತನ ಹೋಂಡಾ ಸಿಬಿ200ಎಕ್ಸ್‌ನ ವಿನ್ಯಾಸದಲ್ಲಿ ಮಹತ್ವದ ಬದಲಾವಣೆಯಾಗಿಲ್ಲ. ಆದರೆ, ಸಿಬಿ200ಎಕ್ಸ್‌ಗೆ ಸಿಬಿ500ಎಕ್ಸ್‌ನಿಂದ ಸ್ಟೈಲಿಂಗ್‌ ಅಂಶಗಳು ದೊರಕಿವೆ. ಜತೆಗೆ, ಎಲ್ಲಾ ಎಲ್‌ಇಡಿ ಲೈಟಿಂಗ್‌ ಇದೆ. ಹೊಸ ಅಸಿಸ್ಟ್‌ ಮತ್ತು ಸ್ಲಿಪ್ಪರ್‌ ಕ್ಲಚ್‌ ಇದೆ. ಡಿಜಿಟಲ್‌ ಇನ್‌ಸ್ಟ್ರುಮೆಂಟ್‌ ಕನ್ಸೋಲ್‌ ಇತ್ಯಾದಿ ಹಲವು ಬದಲಾವಣೆಗಳನ್ನು ಗುರುತಿಸಬಹುದು. ನೂತನ ಬೈಕ್‌ ಮೂರು ಬಣ್ಣಗಳಲ್ಲಿ ದೊರಕುತ್ತದೆ. ಡೀಸೆಂಟ್‌ ಬ್ಲೂಮೆಟಾಲಿಕ್‌, ಪರ್ಲ್‌ ನೈಟ್‌ಸ್ಟಾರ್‌ ಬ್ಲಾಕ್‌ ಮತ್ತು ಸ್ಪೋರ್ಟ್ಸ್‌ ರೆಡ್‌ ಬಣ್ಣಗಳ ಆಯ್ಕೆಯಲ್ಲಿ ದೊರಕುತ್ತದೆ. ಈ ಬೈಕ್‌ ಖರೀದಿಗೆ ಕಂಪನಿಯು 10 ವರ್ಷದ ವಾರೆಂಟಿ (ಮೂರು ವರ್ಷ ಸ್ಟಾಂಡರ್ಡ್‌ ಮತ್ತು 7 ವರ್ಷ ಐಚ್ಛಿಕ) ನೀಡುತ್ತದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.