Gold Rate Today: ಚಿನಿವಾರ ಪೇಟೆಯಲ್ಲಿ ಹಾವು ಏಣಿ ಆಟ; ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ದುಪ್ಪಟ್ಟು ಏರಿಕೆ; ಬೆಳ್ಳಿ ದರ ಇಳಿಕೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ಚಿನಿವಾರ ಪೇಟೆಯಲ್ಲಿ ಹಾವು ಏಣಿ ಆಟ; ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ದುಪ್ಪಟ್ಟು ಏರಿಕೆ; ಬೆಳ್ಳಿ ದರ ಇಳಿಕೆ

Gold Rate Today: ಚಿನಿವಾರ ಪೇಟೆಯಲ್ಲಿ ಹಾವು ಏಣಿ ಆಟ; ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ದುಪ್ಪಟ್ಟು ಏರಿಕೆ; ಬೆಳ್ಳಿ ದರ ಇಳಿಕೆ

ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಹಲವು ಬದಲಾವಣೆಗಳು ಚಿನಿವಾರ ಪೇಟೆಯ ಮೇಲೂ ಪರಿಣಾಮ ಬೀರುತ್ತಿದೆ. ಆ ಕಾರಣಕ್ಕೆ ಕಳೆದ ಹದಿನೈದು ದಿನಗಳಿಂದ ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ ನಡೆಯುತ್ತಿದೆ. ನಿನ್ನೆ ಕೊಂಚ ಬೆಲೆ ಕಡಿಮೆಯಾಗಿದ್ದು ಆಭರಣ ಪ್ರಿಯರ ಸಂತಸಕ್ಕೆ ಕಾರಣವಾಗಿದ್ದ ಬಂಗಾರ ಇಂದು ಬೆಲೆ ಏರಿಕೆಯಾಗುವ ಮೂಲಕ ಭಾರವಾಗಿದೆ.

ಅಕ್ಟೋಬರ್‌ 19ರ ಚಿನ್ನ ಬೆಳ್ಳಿ ದರ
ಅಕ್ಟೋಬರ್‌ 19ರ ಚಿನ್ನ ಬೆಳ್ಳಿ ದರ (AFP)

ಬೆಂಗಳೂರು: ಇಸ್ರೇಲ್‌-ಪ್ಯಾಲೆಸ್ಟೀನ್‌ ಸಂಘರ್ಷ, ಚೀನಾದ ಜಿಡಿಪಿ ದರದಲ್ಲಿನ ಹೆಚ್ಚಳ, ಅಮೆರಿಕದ ಹಣಕಾಸು ನೀತಿ ಹೀಗೆ ಹಲವು ವಿಚಾರಗಳು ಜಾಗತಿಕ ಮಟ್ಟದ ವ್ಯವಹಾರಗಳಲ್ಲಿನ ವ್ಯತ್ಯಯಕ್ಕೆ ಕಾರಣವಾಗುತ್ತಿದೆ. ಇದರಿಂದ ಚಿನ್ನದ ಬೆಲೆಯಲ್ಲೂ ಏರಿಳಿತ ಸಾಮಾನ್ಯವಾಗಿದೆ. ನವರಾತ್ರಿ ಆರಂಭದಲ್ಲಿ ಏರಿಕೆ ಕಂಡು ಬೇಸರ ಮೂಡಿಸಿದ್ದ ಚಿನ್ನದ ಬೆಲೆ ನಿನ್ನೆ ಇಳಿಕೆಯಾಗಿತ್ತು. ಆದರೆ ಇಂದು ದುಪ್ಪಟ್ಟು ಏರಿಕೆಯಾಗುವ ಮೂಲಕ ಇನ್ನಷ್ಟು ನಿರಾಸೆ ಮೂಡಿಸಿದೆ. ಇಂದು 1 ಗ್ರಾಂ ಚಿನ್ನದ ಮೇಲೆ 50 ರೂ ಹೆಚ್ಚಾಗಿದೆ. ಬೆಳ್ಳಿ ದರ ನಿನ್ನೆ ಏರಿಕೆ ಕಂಡಿದ್ದು ಇಂದು ಇಳಿಕೆಯಾಗಿದೆ. ಚಿನಿವಾರ ಪೇಟೆಯಲ್ಲಿ ಇಂದು ಚಿನ್ನ, ಬೆಳ್ಳಿ ದರ ಎಷ್ಟಿದೆ ತಿಳಿಯೋಣ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,545 ರೂ. ಆಗಿದೆ. ನಿನ್ನೆ 5,495 ರೂ. ಇದ್ದು ಈ ದರಕ್ಕೆ ಹೋಲಿಸಿದರೆ ಇಂದು 50 ರೂ. ಏರಿಕೆಯಾಗಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 44,360 ರೂ ಇದೆ. ನಿನ್ನೆ 43,960 ರೂ ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 400 ರೂ. ಹೆಚ್ಚಾಗಿದೆ. ಹತ್ತು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 55,450 ರೂ. ನೀಡಬೇಕು. ನಿನ್ನೆ 54,950 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 500 ರೂ. ಏರಿಕೆಯಾಗಿದೆ. ನೂರು ಗ್ರಾಂ ಚಿನ್ನಕ್ಕೆ 5,54,500 ರೂ. ಆಗಿದೆ. ನಿನ್ನೆ 5,49,500 ರೂ, ಇದು ಈ ದರಕ್ಕೆ ಹೋಲಿಸಿದರೆ ಇಂದು 5,000 ರೂ ಹೆಚ್ಚಾಗಿದೆ.

24 ಕ್ಯಾರೆಟ್‌ ಗೋಲ್ಡ್‌ ದರ

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 6,049 ರೂ. ಆಗಿದೆ. ನಿನ್ನೆ 5,995 ರೂ. ಇದ್ದು ಇಂದು 54 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 48,392 ರೂ., ನೀಡಬೇಕು. ನಿನ್ನೆ ಈ ದರ 47,960 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 432 ರೂ. ಹೆಚ್ಚಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 60,490 ರೂ. ಆಗಿದೆ. ನಿನ್ನೆ 59,950 ರೂ, ಇತ್ತು, ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 540 ರೂ. ಏರಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 6,04,900 ರೂ. ನೀಡಬೇಕು. ನಿನ್ನೆ 5,99,500 ರೂ ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 5,400 ರೂ. ಹೆಚ್ಚಾಗಿದೆ.

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 55,450 ರೂ. ಇದೆ. ಮಂಗಳೂರು 55,450 ರೂ., ಮೈಸೂರಿನಲ್ಲಿ 55,450 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 55,650 ರೂ., ಮುಂಬೈನಲ್ಲಿ 55,450 ರೂ., ದೆಹಲಿಯಲ್ಲಿ 55,600 ರೂ., ಕೋಲ್ಕತಾದಲ್ಲಿ 55,450 ರೂ., ಹೈದರಾಬಾದ್‌ 55,450 ರೂ., ಕೇರಳ 55,450 ರೂ., ಪುಣೆ 55,450 ರೂ., ಅಹಮದಾಬಾದ್‌ 55,500 ರೂ., ಜೈಪುರ 55,600 ರೂ., ಲಖನೌ 55,600 ರೂ., ಕೊಯಮುತ್ತೂರು 55,650 ರೂ., ಮಧುರೈ 55,650 ರೂ. ಹಾಗೂ ವಿಜಯವಾಡ 55,450 ರೂ., ಇದೆ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 60,490 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 60,710 ರೂ., ಮುಂಬೈನಲ್ಲಿ 60,490 ರೂ., ದೆಹಲಿಯಲ್ಲಿ 60,640 ರೂ., ಕೋಲ್ಕತಾದಲ್ಲಿ 60,490 ರೂ., ಹೈದರಾಬಾದ್‌ 60,490 ರೂ., ಕೇರಳ 60,490 ರೂ., ಪುಣೆ 60,490 ರೂ., ಅಹಮದಾಬಾದ್‌ 60,540 ರೂ., ಜೈಪುರ 60,640 ರೂ., ಲಖನೌ 60,640 ರೂ., ಕೊಯಮುತ್ತೂರು 60,710 ರೂ., ಮದುರೈ 60,710 ರೂ., ವಿಜಯವಾಡ 60,490 ರೂ. ಇದೆ.

ಬೆಳ್ಳಿ ದರ ಹೀಗಿದೆ

ಇಂದು ಬೆಳ್ಳಿ ದರ ಇಳಿಕೆ ಕಂಡಿದೆ. ಇಂದು 1 ಗ್ರಾಂ ಬೆಳ್ಳಿಗೆ 72.50 ರೂ., ಆಗಿದೆ. ನಿನ್ನೆ 74.50 ರೂ. ಇದ್ದು ಇಂದು 2 ರೂ. ಕಡಿಮೆಯಾಗಿದೆ. 8ಗ್ರಾಂ ಬೆಳ್ಳಿಗೆ ಇಂದು 580 ರೂ. ಆಗಿದ್ದು, ನಿನ್ನೆ 596 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 16 ರೂ ಕಡಿಮೆಯಾಗಿದೆ. 10ಗ್ರಾಂ ಬೆಳ್ಳಿ ಖರೀದಿ ಮಾಡುವುದಾದರೆ ಇಂದು 725 ರೂ. ನೀಡಬೇಕು. ನಿನ್ನೆ 745 ರೂ. ದರವಿತ್ತು. ಈ ದರಕ್ಕೆ ಹೋಲಿಸಿದರೆ ಇಂದು 20 ರೂ. ಇಳಿಕೆಯಾಗಿದೆ. 100 ಗ್ರಾಂ ಬೆಳ್ಳಿ ದರ 7,250 ರೂ ನೀಡಬೇಕು. ನಿನ್ನೆ 7,300 ರೂ ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 200 ರೂ. ಕಡಿಮೆಯಾಗಿದೆ. ಇಂದು 1 ಕೆಜಿ ಬೆಳ್ಳಿ ದರ 72,500 ರೂ., ಆಗಿದೆ, ನಿನ್ನೆ 74,500 ಇದ್ದು, ಇಂದು 2,000 ರೂ ಇಳಿಕೆಯಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.