ಕನ್ನಡ ಸುದ್ದಿ  /  Nation And-world  /  Business News Gold Silver Rate Today Feb 27h 2024 India Gold Rate Bengaluru Mangaluru Mysure Davanagere Rst

Gold Rate: ಮಂಗಳವಾರ ಇಳಿಕೆಯಾಯ್ತು ಚಿನ್ನದ ದರ, ಬೆಳ್ಳಿ ಬೆಲೆ ತುಸು ಹೆಚ್ಚಳ; ಆಭರಣ ಖರೀದಿಸುವುದಿದ್ದರೆ ಇಂದಿನ ದರ ಗಮನಿಸಿ

ಚಿನ್ನದ ಬೆಲೆಯಲ್ಲಿ ಪ್ರತಿದಿನ ಏರಿಳಿತವಾಗುತ್ತಿದೆ. ಇಂದು (ಫೆ.27) ಚಿನ್ನದ ದರ ಇಳಿಕೆಯಾಗಿದೆ. ಫೆಬ್ರುವರಿ ತಿಂಗಳ ಅಂತ್ಯ ಸಮೀಪಿಸಿದ್ದು, ಚಿನ್ನ ಖರೀದಿ ಮಾಡಲು ಬಯಸುವವರು ಈ ದಿನ ಆಭರಣದ ಮಳಿಗೆಗೆ ಭೇಟಿ ನೀಡಬಹುದು. ಬೆಳ್ಳಿ ಇಂದು ತುಸು ಏರಿಕೆಯಾಗಿದೆ.

ಮಂಗಳವಾರ ಇಳಿಕೆಯಾಯ್ತು ಚಿನ್ನದ ದರ, ಬೆಳ್ಳಿ ದರ ತುಸು ಏರಿಕೆ; ಆಭರಣ ಖರೀದಿಸುವುದಿದ್ದರೆ ಇಂದಿನ ದರ ಗಮನಿಸಿ
ಮಂಗಳವಾರ ಇಳಿಕೆಯಾಯ್ತು ಚಿನ್ನದ ದರ, ಬೆಳ್ಳಿ ದರ ತುಸು ಏರಿಕೆ; ಆಭರಣ ಖರೀದಿಸುವುದಿದ್ದರೆ ಇಂದಿನ ದರ ಗಮನಿಸಿ (REUTERS)

ಬೆಂಗಳೂರು: ಭಾರತದಲ್ಲಿ ಚಿನ್ನದ ಬೆಲೆ ಕಡಿಮೆಯಾಯಿತು ಎಂದರೆ ಆಭರಣ ಪ್ರಿಯರಲ್ಲಿ ಸಂತಸ ಹೆಚ್ಚುತ್ತದೆ. ಫೆಬ್ರುವರಿ ತಿಂಗಳ ಅಂತ್ಯ ಸಮೀಪಿಸಿದ್ದು, ಇದೀಗ ಫೆ. 27 ರಂದು ಚಿನ್ನದ ದರ ಕೊಂಚ ಇಳಿಕೆಯಾಗಿದೆ. ಸದಾ ತಟಸ್ಥವಾಗಿರುತ್ತಿದ್ದ ಬೆಳ್ಳಿ ದರ ಇಂದು ಕೊಂಚ ಏರಿಕೆಯಾಗಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇಂದು 1 ಗ್ರಾಂ, 8 ಗ್ರಾಂ, 10 ಗ್ರಾಂ ಹಾಗೂ 100 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 5,760 ರೂ. ಆಗಿದೆ. ನಿನ್ನೆ 5,770 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 10 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 46,080 ರೂ. ನೀಡಬೇಕು. ನಿನ್ನೆ 46,160 ರೂ ಇದ್ದು ಈ ದರಕ್ಕೆ ಹೋಲಿಸಿದರೆ 80 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನಕ್ಕೆ 57,600 ರೂ ಆಗಿದ್ದು, ನಿನ್ನೆ 57,700 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 100 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 5,76,000 ರೂ. ನೀಡಬೇಕು. ನಿನ್ನೆ 5,77,000 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 1,100 ಹೆಚ್ಚಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 6,284 ರೂ. ಆಗಿದೆ. ನಿನ್ನೆ 6,295 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 11 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 50,272 ರೂ. ನೀಡಬೇಕು. ನಿನ್ನೆ 50,360 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 88 ರೂ ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 62,840 ನೀಡಬೇಕು. ನಿನ್ನೆ 62,950 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 110 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 6,28,400 ರೂ. ಇದೆ. ನಿನ್ನೆ 6,29,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 1,100 ರೂ. ಕಡಿಮೆಯಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 57,600 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 62,840 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 58,100 ರೂ. 24 ಕ್ಯಾರೆಟ್‌ಗೆ 63,380 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,600 ರೂ. 24 ಕ್ಯಾರೆಟ್‌ಗೆ 62,840 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,750 ರೂ. 24 ಕ್ಯಾರೆಟ್‌ಗೆ 62,940 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,600 ರೂ. 24 ಕ್ಯಾರೆಟ್‌ಗೆ 62,840 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,600 ರೂ. ಇದ್ದರೆ, 24 ಕ್ಯಾರೆಟ್‌ಗೆ 62,840 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,600 ರೂ. 24 ಕ್ಯಾರೆಟ್‌ಗೆ 62,840 ರೂ. ಇದೆ.

ಬೆಳ್ಳಿ ದರ

ಇಂದು ಬೆಳ್ಳಿ ಬೆಲೆ ತುಸು ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 72 ರೂ. ಇದೆ. 8 ಗ್ರಾಂಗೆ 576 ರೂ ಇದ್ದರೆ, 10 ಗ್ರಾಂಗೆ 720 ರೂ. ಇದೆ. 100 ಗ್ರಾಂಗೆ 7,200 ರೂ. ಹಾಗೂ 1 ಕಿಲೋಗೆ 72,000 ರೂ. ಬೆಲೆ ನಿಗದಿ ಆಗಿದೆ.

IPL_Entry_Point