Gold Rate Today: ಚಿನ್ನದ ಬೆಲೆ ಏರಿಕೆಗೆ ಬ್ರೇಕ್; ಮಂಗಳವಾರ ತಟಸ್ಥವಾಗಿದೆ ಚಿನ್ನದ ದರ; ಬೆಳ್ಳಿ ಬೆಲೆ ತುಸು ಇಳಿಕೆ
ಆಭರಣ ಪ್ರಿಯರು ಕೊಂಚ ನಿಟ್ಟುಸಿರುವ ಬಿಡುವ ಸುದ್ದಿ ಇಲ್ಲಿದೆ. ಕಳೆದ ಒಂದಿಷ್ಟು ದಿನಗಳಿಂದ ಏರುತ್ತಿದ್ದ ಚಿನ್ನದ ದರ ಇಂದು ತಟಸ್ಥವಾಗಿದೆ. ಬೆಳ್ಳಿ ದರದಲ್ಲೂ ತುಸು ಇಳಿಕೆಯಾಗಿದೆ. ಇಂದು ದೇಶದಲ್ಲಿ ಹಳದಿಲೋಹದ ಬೆಲೆ ಎಷ್ಟಿದೆ ಗಮನಿಸಿ.
ಬೆಂಗಳೂರು: ಮಾರ್ಚ್ ತಿಂಗಳಲ್ಲಿ ಚಿನ್ನದ ಬೆಲೆ ಏರಿಕೆಯಾದರೆ ಆಭರಣ ಪ್ರಿಯರಿಗೆ ನಿರಾಸೆ ಕಾಡುವುದು ಸಹಜ. ಅದರಲ್ಲೂ ಭಾರತದಲ್ಲಿ ಮಾರ್ಚ್, ಏಪ್ರಿಲ್ ತಿಂಗಳ ಎಂದರೆ ಶುಭಕಾರ್ಯಗಳು ನಡೆಯುವ ಕಾಲ. ಹಾಗಾಗಿ ಚಿನ್ನ ಖರೀದಿ ಭರದಿಂದ ನಡೆಯುತ್ತದೆ. ಆದರೆ ಈ ವರ್ಷ ಮಾರ್ಚ್ ತಿಂಗಳಲ್ಲಿ ಬೆಲೆ ಏರಿಕೆಯ ಪ್ರಮಾಣ ಹೆಚ್ಚಿದೆ. ಕಳೆದ ವಾರದಲ್ಲಿ ಬಹುತೇಕ ಚಿನ್ನದ ದರ ಏರುತ್ತಲೇ ಇದ್ದು, ಬೆಳ್ಳಿ ದರವೂ ಹೆಚ್ಚಳವಾಗಿತ್ತು. ಇಂದು ದೇಶದಲ್ಲಿ ಚಿನ್ನದ ಬೆಲೆ ಸ್ಥಿರವಾಗಿದ್ದರೆ, ಬೆಳ್ಳಿ ದರ ಇಳಿಕೆಯಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 6,075 ರೂ. ಇದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 48,600 ರೂ. ನೀಡಬೇಕು. 10 ಗ್ರಾಂ ಚಿನ್ನಕ್ಕೆ 60,750 ರೂ ಆಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,07,500 ರೂ. ನೀಡಬೇಕು.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 6,627 ರೂ. ಇದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,016 ರೂ. ನೀಡಬೇಕು. ಇಂದು 10 ಗ್ರಾಂ ಚಿನ್ನಕ್ಕೆ 66,270 ನೀಡಬೇಕು. 100 ಗ್ರಾಂ ಚಿನ್ನದ ಬೆಲೆ 6,62,700 ರೂ. ಇದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 60,750 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 66,270 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 61,500 ರೂ. 24 ಕ್ಯಾರೆಟ್‌ಗೆ 67,100 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,750 ರೂ. 24 ಕ್ಯಾರೆಟ್‌ಗೆ 66,270 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,900 ರೂ. 24 ಕ್ಯಾರೆಟ್‌ಗೆ 66,420 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,750 ರೂ. 24 ಕ್ಯಾರೆಟ್‌ಗೆ 66,270 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,750 ರೂ. ಇದ್ದರೆ, 24 ಕ್ಯಾರೆಟ್‌ಗೆ 66,270 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,750 ರೂ. 24 ಕ್ಯಾರೆಟ್‌ಗೆ 66,270 ರೂ. ಆಗಿದೆ.
ಬೆಳ್ಳಿ ದರ
ಬೆಳ್ಳಿ ದರ ಕೊಂಚ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 74.90 ರೂ. ಇದೆ. 8 ಗ್ರಾಂಗೆ 599.20 ರೂ ಇದ್ದರೆ, 10 ಗ್ರಾಂಗೆ 749 ರೂ. ಇದೆ. 100 ಗ್ರಾಂಗೆ 7,490 ರೂ. ಹಾಗೂ 1 ಕಿಲೋಗೆ 74,900 ರೂ. ಬೆಲೆ ನಿಗದಿ ಆಗಿದೆ.
ಇದನ್ನೂ ಓದಿ
Breaking News: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದ ಕೇಂದ್ರ ಸರ್ಕಾರ, ಅಧಿಸೂಚನೆ ಜಾರಿ
CAA ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪೌರತ್ವ ತಿದ್ದುಪಡಿ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ. ನಾಲ್ಕು ವರ್ಷಗಳ ಹಿಂದೆಯೇ ಇದಕ್ಕೆ ಒಪ್ಪಿಗೆ ನೀಡಿದ್ದರೂ ಜಾರಿಯಾಗಿರಲಿಲ್ಲ.