ಭಾರತದ ಜಿಡಿಪಿ ಬೆಳವಣಿಗೆ ಶೇ 7.2, ಗ್ರಾಹಕ ಹಣದುಬ್ಬರ ಶೇ 4.5; ಆರ್‌ಬಿಐ ವಿತ್ತೀಯ ನೀತಿ ಸಭೆ ತೀರ್ಮಾನಿಸಿದ ಪ್ರಮುಖ ಅಂಶಗಳಿವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತದ ಜಿಡಿಪಿ ಬೆಳವಣಿಗೆ ಶೇ 7.2, ಗ್ರಾಹಕ ಹಣದುಬ್ಬರ ಶೇ 4.5; ಆರ್‌ಬಿಐ ವಿತ್ತೀಯ ನೀತಿ ಸಭೆ ತೀರ್ಮಾನಿಸಿದ ಪ್ರಮುಖ ಅಂಶಗಳಿವು

ಭಾರತದ ಜಿಡಿಪಿ ಬೆಳವಣಿಗೆ ಶೇ 7.2, ಗ್ರಾಹಕ ಹಣದುಬ್ಬರ ಶೇ 4.5; ಆರ್‌ಬಿಐ ವಿತ್ತೀಯ ನೀತಿ ಸಭೆ ತೀರ್ಮಾನಿಸಿದ ಪ್ರಮುಖ ಅಂಶಗಳಿವು

ಭಾರತೀಯ ರಿಸರ್ವ್‌ ಬ್ಯಾಂಕ್‌ನ ವಿತ್ತೀಯ ನೀತಿ ಸಭೆಯ ನಿರ್ಧಾರಗಳು ಪ್ರಕಟವಾಗಿದ್ದು, ರೆಪೋದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಭಾರತದ ಜಿಡಿಪಿ ಬೆಳವಣಿಗೆ ಶೇ 7.2, ಗ್ರಾಹಕ ಹಣದುಬ್ಬರ ಶೇ 4.5 ಎಂದು ಪ್ರಕಟಿಸಿದ ಆರ್‌ಬಿಐ ಗವರ್ನರ್‌, ವಿತ್ತೀಯ ನೀತಿ ಸಭೆ ತೀರ್ಮಾನಿಸಿದ ಪ್ರಮುಖ ಅಂಶಗಳನ್ನು ವಿವರಿಸಿದರು.

ಭಾರತೀಯ ರಿಸರ್ವ್‌ ಬ್ಯಾಂಕ್‌ ಹಣಕಾಸು ನೀತಿ: ವಿತ್ತೀಯ ನೀತಿ ದರಗಳಿಂದ ಹಿಡಿದು ಬೆಳವಣಿಗೆ ಮುನ್ಸೂಚನೆ ತನಕ ಹಲವು ವಿಚಾರಗಳು ಚರ್ಚೆಗೊಳಗಾದವು. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್‌ ಅಧ್ಯಕ್ಷತೆಯನ್ನು ಸಭೆ ನಡೆಯಿತು.
ಭಾರತೀಯ ರಿಸರ್ವ್‌ ಬ್ಯಾಂಕ್‌ ಹಣಕಾಸು ನೀತಿ: ವಿತ್ತೀಯ ನೀತಿ ದರಗಳಿಂದ ಹಿಡಿದು ಬೆಳವಣಿಗೆ ಮುನ್ಸೂಚನೆ ತನಕ ಹಲವು ವಿಚಾರಗಳು ಚರ್ಚೆಗೊಳಗಾದವು. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್‌ ಅಧ್ಯಕ್ಷತೆಯನ್ನು ಸಭೆ ನಡೆಯಿತು. (Photo: PTI)

ಮುಂಬಯಿ: ಮಾರುಕಟ್ಟೆಯ ವಿಸ್ತೃತ ನಿರೀಕ್ಷೆಗಳಿಗೆ ಅನುಗುಣವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ವಿತ್ತೀಯ ನೀತಿ ಸಭೆಯ ತೀರ್ಮಾನಗಳು ಪ್ರಕಟವಾಗಿವೆ. ಇದರಂತೆ, ರೆಪೋ ರೇಟ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಹಣದುಬ್ಬರದ ಅಪಾಯವನ್ನು ಉಲ್ಲೇಖಿಸಿದ ಆರ್‌ಬಿಐ, ವಿತ್‌ಡ್ರಾವಲ್ ಆಫ್ ಅಕಮೊಡೇಷನ್‌ ನಿಲುವನ್ನು ತಟಸ್ಥ ಎಂದು ನಮೂದಿಸಿದೆ. ಪ್ರಸಕ್ತ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ಮತ್ತು ಹಣದುಬ್ಬರ ಪ್ರಮಾಣವನ್ನೂ ಅಂದಾಜಿಸಿರುವ ಆರ್‌ಬಿಐ ವಿತ್ತೀಯ ನೀತಿ ಸಭೆ, ಹಣದುಬ್ಬರದ ಅಪಾಯವನ್ನು ಎತ್ತಿ ತೋರಿಸಿದೆ. ಅಲ್ಲದೆ, ಇಂಧನ ದರ ಏರಿಕೆ ಮತ್ತು ಪೂರಕವಲ್ಲದ ಬೆಳವಣಿಗೆಗಳ ಕಾರಣ ಗ್ರಾಹಕ ಹಣದುಬ್ಬರ ಸೂಚ್ಯಂಕದಲ್ಲಿ ಏರಿಕೆ ದಾಖಲಾಗಿದೆ ಎಂದು ವಿವರಿಸಿದೆ.

ಆರ್‌ಬಿಐ ವಿತ್ತೀಯ ನೀತಿ ಸಭೆಯ ಪ್ರಮುಖಾಂಶಗಳು

1) ರೆಪೋ ರೇಟ್‌ ಶೇ 6.5: ಸೆಪ್ಟೆಂಬರ್‌ನಲ್ಲಿ ಯುಎಸ್ ಫೆಡ್ ದರಗಳನ್ನು 50 ಬಿಪಿಎಸ್ ಕಡಿತಗೊಳಿಸಿದ್ದರೂ ಆರ್‌ಬಿಐ ರೆಪೊ ದರಗಳನ್ನು ಶೇಕಡ 6.5 ರಲ್ಲೇ ಸ್ಥಿರವಾಗಿ ಇಟ್ಟುಕೊಂಡಿದೆ. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕೂಡ ಅಮೆರಿಕದ ಕೇಂದ್ರ ಬ್ಯಾಂಕ್ ಬಡ್ಡಿ ದರಗಳನ್ನು ಕಡಿತಗೊಳಿಸುತ್ತದೆ ಎಂಬ ನಂಬಿಕೆ ಮಾರುಕಟ್ಟೆಯಲ್ಲಿ ಬಲವಾಗಿ ಇದೆ. ಆದಾಗ್ಯೂ, ಆರ್‌ಬಿಐ ತನ್ನ ನೀತಿ ನಿಲುವನ್ನು "ತಟಸ್ಥ" ಎಂದು ಬದಲಾಯಿಸಿದೆ. ಸಮಿತಿಯ ಎಲ್ಲ ಆರು ಸದಸ್ಯರು ನೀತಿಯ ನಿಲುವನ್ನು ಬದಲಾಯಿಸಲು ಒಲವು ತೋರಿದರು. ಆದರೆ, ಆರು ಸದಸ್ಯರಲ್ಲಿ ಐವರು ಮಾತ್ರವೇ ರೆಪೊ ದರವನ್ನು ಯಥಾಸ್ಥಿತಿಯಲ್ಲಿಡಲು ಅನಮೋದಿಸಿದರು.

2) ಹಣದುಬ್ಬರವೇ ಕಳವಳಕಾರಿ: ಪ್ರಸಕ್ತ ಹಣಕಾಸು ವರ್ಷಕ್ಕಾಗಿ ಆರ್‌ಬಿಐ ತನ್ನ ಹಣದುಬ್ಬರ ಅಂದಾಜನ್ನು ಏರಿಕೆಯಲ್ಲಿರುವುದನ್ನು ಪರಿಷ್ಕರಿಸಿಲ್ಲ. ಆದಾಗ್ಯೂ, ಹಣದುಬ್ಬರವು ಆಹಾರ ಮತ್ತು ಇಂಧನ ಬೆಲೆ ಏರಿಳಿತದ ಅಪಾಯವನ್ನು ಅದು ಎತ್ತಿ ತೋರಿಸಿದೆ. ಗ್ರಾಹಕ ಹಣದುಬ್ಬರ ಸೂಚ್ಯಂಕದ ಪ್ರಕಾರ ಹಣದುಬ್ಬರ ಪ್ರಮಾಣವನ್ನು ಪ್ರಸಕ್ತ ವರ್ಷಕ್ಕೆ ಶೇಕಡ 4.5 ಎಂದು ಸ್ಥಿರವಾಗಿ ಉಳಿಸಿಕೊಂಡಿದೆ. ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇಕಡ 4.4 ರಿಂದ ಶೇಕಡ 4.1ಕ್ಕೆ ಇಳಿಸಿತ್ತು. ಮೂರನೇ ತ್ರೈಮಾಸಿಕಕ್ಕೆ ಶೇಕಡ 4.7 ರಿಂದ ಶೇಕಡ 4.8ಕ್ಕೆ ಏರಿಸಿದೆ. ಆದಾಗ್ಯೂ ಹಣದುಬ್ಬರ ಪ್ರಮಾಣದ ಅಂದಾಜನ್ನು ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕಕ್ಕೆ ಮತ್ತು ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಅನುಕ್ರಮವಾಗಿ ಶೇಕಡ 4.3 ರಿಂದ ಶೇಕಡ 4.2ಕ್ಕೆ ಮತ್ತು ಶೇಕಡ 4.4 ರಿಂದ ಶೇಕಡ 4.3ಕ್ಕೆ ಇಳಿಸಿದೆ.

3) ಬೆಳವಣಿಗೆಯ ಹಾದಿ: ಭಾರತೀಯ ರಿಸರ್ವ್ ಬ್ಯಾಂಕ್ ಆರ್ಥಿಕತೆಯ ನಿರೀಕ್ಷೆಗಳ ಬಗ್ಗೆ ಲವಲವಿಕೆಯನ್ನು ಉಳಿಸಿಕೊಂಡಿದೆ. ಎರಡನೇ ತ್ರೈಮಾಸಿಕ ಬೆಳವಣಿಗೆಯ ಅಂದಾಜನ್ನು ಕಡಿಮೆ ಮಾಡುವಾಗ, ಹಣಕಾಸು ವರ್ಷದ ಕೊನೆಯ ಎರಡು ತ್ರೈಮಾಸಿಕಗಳು ಮತ್ತು ಹಣಕಾಸು ವರ್ಷ 2026 ನ ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷೆಗಳನ್ನು ಹೆಚ್ಚಿಸುವ ಸಂದರ್ಭದಲ್ಲಿಹಣಕಾಸು ವರ್ಷ 25ಕ್ಕಾಗಿ ನೈಜ ಜಿಡಿಪಿ ಬೆಳವಣಿಗೆಯ ದರವು 7.2 ಶೇಕಡಾ ಎಂದು ಯೋಜಿಸಿದೆ.

4) ಯುಪಿಐ123 ಪೇ ಪಾವತಿ ಮಿತಿ ಹೆಚ್ಚಳ: ಯುಪಿಐ 123 ಪೇಯ ಪ್ರತಿ-ವಹಿವಾಟಿನ ಮಿತಿಯನ್ನು 5,000 ರಿಂದ 10,000 ರೂಪಾಯಿಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಆರ್‌ಬಿಐನ ವಿತ್ತೀಯ ಸಮಿತಿ ಸಭೆ ಅಂಗೀಕರಿಸಿದೆ. ಇದಲ್ಲದೆ, ಯುಪಿಐ ಲೈಟ್‌ ವ್ಯಾಲೆಟ್ ಮಿತಿಯನ್ನು 2000 ದಿಂದ 5000 ರೂಪಾಯಿಗೆ ಏರಿಸಲಾಗಿದೆ. ಯುಪಿಐ ಲೈಟ್‌ನ ಪ್ರತಿ ವಹಿವಾಟಿನ ಮಿತಿಯನ್ನು ಸಹ 100 ರಿಂದ 500 ರೂಪಾಯಿಗೆ ಹೆಚ್ಚಿಸಲಾಗಿದೆ.

5) ಅಸುರಕ್ಷಿತ ಸಾಲದ ಅಪಾಯಗಳ ಉಲ್ಲೇಖ: ಅಸುರಕ್ಷಿತ ಸಾಲ ವಿಭಾಗಗಳಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆಗಳನ್ನು ಒತ್ತಿ ಹೇಳಿದ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌, ಉದಾಹರಣೆಗಾಗಿ ಬಳಕೆಯ ಉದ್ದೇಶಗಳಿಗಾಗಿರುವ ಸಾಲಗಳನ್ನು ಉಲ್ಲೇಖಿಸಿದರು., ಮೈಕ್ರೋಫೈನಾನ್ಸ್, ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಸಾಲಗಳ ವಿವರ ನೀಡಿದರು. ಆರ್‌ಬಿಐ ಒಳಬರುವ ಮಾಹಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಗತ್ಯವೆಂದು ಪರಿಗಣಿಸಬಹುದಾದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.