ಜಿಎಸ್‌ಟಿಯಲ್ಲಿ ಮಹತ್ವದ ಬದಲಾವಣೆಗೆ ಶಿಫಾರಸು: ಯಾವುದು ಅಗ್ಗ, ಯಾವುದು ದುಬಾರಿ? ವಿಮೆ ಕಂತು ಪಾವತಿದಾರರಿಗೂ ಅನುಕೂಲ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜಿಎಸ್‌ಟಿಯಲ್ಲಿ ಮಹತ್ವದ ಬದಲಾವಣೆಗೆ ಶಿಫಾರಸು: ಯಾವುದು ಅಗ್ಗ, ಯಾವುದು ದುಬಾರಿ? ವಿಮೆ ಕಂತು ಪಾವತಿದಾರರಿಗೂ ಅನುಕೂಲ

ಜಿಎಸ್‌ಟಿಯಲ್ಲಿ ಮಹತ್ವದ ಬದಲಾವಣೆಗೆ ಶಿಫಾರಸು: ಯಾವುದು ಅಗ್ಗ, ಯಾವುದು ದುಬಾರಿ? ವಿಮೆ ಕಂತು ಪಾವತಿದಾರರಿಗೂ ಅನುಕೂಲ

GST Changes: ಪ್ಯಾಕೇಜ್ಡ್‌ ನೀರು, ಬೈಸಿಕಲ್‌, ಎಕ್ಸರ್‌ಸೈಸ್‌ ನೋಟ್‌ಬುಕ್‌ ಸೇರಿದಂತೆ ಅನೇಕ ಅಗತ್ಯ ವಸ್ತುಗಳಿಗೆ ಜಿಎಸ್‌ಟಿ ದರ ಇಳಿಕೆ ಮಾಡಲು ಮತ್ತು ಹಿರಿಯ ನಾಗರಿಕರ ಆರೋಗ್ಯ ಮತ್ತು ಟರ್ಮ್‌ ಜೀವ ವಿಮಾ ಪ್ರೀಮಿಯಂಗಳಿಗೆ ತೆರಿಗೆ ರಿಲೀಫ್‌ ನೀಡುವುದು ಸೇರಿದಂತೆ ಜಿಎಸ್‌ಟಿ ಪರಿಷ್ಕರಣೆಗೆ ಜಿಎಸ್‌ಟಿ ಕುರಿತಾದ ಸಚಿವರ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿದೆ.

ಜಿಎಸ್‌ಟಿಯಲ್ಲಿ ಮಹತ್ವದ ಬದಲಾವಣೆಗೆ ಶಿಫಾರಸು: ಯಾವುದು ಅಗ್ಗ, ಯಾವುದು ದುಬಾರಿ? (PTI)
ಜಿಎಸ್‌ಟಿಯಲ್ಲಿ ಮಹತ್ವದ ಬದಲಾವಣೆಗೆ ಶಿಫಾರಸು: ಯಾವುದು ಅಗ್ಗ, ಯಾವುದು ದುಬಾರಿ? (PTI) (HT_PRINT)

ಬೆಂಗಳೂರು: ಕೆಲವೊಂದು ವಿಮಾ ಕಂತುಗಳ ಮೇಲೆ ವಿಧಿಸಲಾಗಿರುವ ಜಿಎಸ್‌ಟಿ ತೆಗೆದುಹಾಕುವ ಕುರಿತು ಮತ್ತು ಸಾರ್ವಜನಿಕರಿಗೆ ಪ್ರಯೋಜನಕಾರಿಯಾಗುವಂತೆ ಪ್ಯಾಕ್‌ ಮಾಡಿರುವ ನೀರು, ಬೈಸಿಕಲ್‌ ಮುಂತಾದ ವಸ್ತುಗಳ ಮೇಲಿನ ತೆರಿಗೆ ಇಳಿಸಬೇಕೆಂದು ಜಿಎಸ್‌ಟಿ ಕುರಿತಾದ ಸಚಿವರ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿದೆ.

ಹಿರಿಯ ನಾಗರಿಕರಿಗೆ ಟರ್ಮ್‌ ಲೈಫ್‌ ಇನ್ಸುರೆನ್ಸ್‌ ಮತ್ತು ಇನ್ಸುರೆನ್ಸ್‌ ಪ್ರೀಮಿಯಂ ಅನ್ನು ಜಿಎಸ್‌ಟಿಯಿಂದ ಹೊರಗಿಡಬೇಕೆಂದು ಸಮಿತಿ ಶಿಫಾರಸು ಮಾಡಿದೆ. ಇಷ್ಟು ಮಾತ್ರವಲ್ಲದೆ ಪ್ರತಿಯೊಬ್ಬರ 5 ಲಕ್ಷ ರೂಪಾಯಿವರೆಗಿನ ಹೆಲ್ತ್‌ ಕವರೇಜ್‌ ಅನ್ನು ತೆರಿಗೆಮುಕ್ತಗೊಳಿಸಬೇಕು ಎಂದು ತಿಳಿಸಲಾಗಿದೆ. ಆದರೆ, 5 ಲಕ್ಷ ರೂಪಾಯಿಗಿಂತ ಮೇಲಿನ ಆರೋಗ್ಯ ವಿಮೆಗಳಿಗೆ ಶೇಕಡ 18ರಷ್ಟು ಜಿಎಸ್‌ಟಿ ಇರಲಿದೆ.

ಇನ್ನೊಂದು ಪ್ರತ್ಯೇಕ ಸಭೆಯಲ್ಲಿ ಪ್ರತಿದಿನ ಬಳಸುವ ಅಗತ್ಯವಸ್ತುಗಳ ತೆರಿಗೆ ಪರಿಷ್ಕರಣೆ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ. ಅಂದರೆ, ಬೈಸಿಕಲ್‌, ಎಕ್ಸರ್‌ಸೈಸ್‌ ನೋಟ್‌ಬುಕ್‌ಗಳು, ಕೈಗಡಿಯಾರಗಳು, ಶೂಗಳಿಗೆ ತೆರಿಗೆ ಪರಿಷ್ಕರಣೆ ಮಾಡಬೇಕೆಂದು ಸೂಚಿಸಲಾಗಿದೆ. ಈ ಬದಲಾವಣೆ ಶಿಫಾರಸುಗಳನ್ನು ಮುಂದಿನ ತಿಂಗಳು ನಡೆಯಲಿರುವ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವರು ನೇತೃತ್ವ ವಹಿಸುವ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಮುಂದಿಡಲಾಗುತ್ತದೆ.

"ಸಮಿತಿಯ ಪ್ರತಿಯೊಬ್ಬ ಸದಸ್ಯರು ಜನರಿಗೆ ಕೊಂಚ ತೆರಿಗೆ ವಿನಾಯಿತಿ ನೀಡುವಂತೆ ಮತ್ತು ಹಿರಿಯ ನಾಗರಿಕರ ಕುರಿತು ವಿಶೇಷ ಗಮನ ನೀಡುವಂತೆ ಸಲಹೆ ನೀಡಿದ್ದಾರೆ" ಎಂದು ಬಿಹಾರದ ಉಪಮುಖ್ಯಮಂತ್ರಿ ಸಮರ್ಥ್‌ ಚೌಧರಿ ಹೇಳಿದ್ದಾರೆ.

ಯಾವುದೆಲ್ಲ ಅಗ್ಗವಾಗಲಿದೆ?

  • ಎಲ್ಲಾದರೂ ಜಿಎಸ್‌ಟಿ ಕೌನ್ಸಿಲ್‌ ಈ ಶಿಫಾರಸುಗಳಿಗೆ ಒಪ್ಪಿದರೆ ಈ ಮುಂದಿನ ವಸ್ತುಗಳಿಗೆ ಜಿಎಸ್‌ಟಿ ಕಡಿಮೆಯಾಗಲಿದೆ.
  • ಪ್ಯಾಕೇಜ್ಡ್‌ ವಾಟರ್‌ (20 ಲೀಟರ್‌ ಮತ್ತು ಮೇಲ್ಪಟ್ಟ): ಶೇಕಡ 18 ಇದ್ದ ಜಿಎಸ್‌ಟಿ ಶೇಕಡ 5ಕ್ಕೆ ಇಳಿಯಲಿದೆ.
  • 10 ಸಾವಿರ ರೂಪಾಯಿಗಿಂತ ಕಡಿಮೆ ದರದ ಸೈಕಲ್‌ಗಳ ಜಿಎಸ್‌ಟಿಯು ಈಗಿನ ಶೇಕಡ 12ರಿಂದ ಶೇಕಡ 5ಕ್ಕೆ ಇಳಿಯಲಿದೆ.
  • ಎಕ್ಸರ್‌ಸೈಸ್‌ ನೋಟ್‌ಬುಕ್‌ಗಳ ಜಿಎಸ್‌ಟಿಯು ಈಗಿನ ಶೇಕಡ 12ರಿಂದ ಶೇಕಡ 5ಕ್ಕೆ ಇಳಿಯಲಿದೆ.

ಯಾವುದು ದುಬಾರಿಯಾಗಲಿದೆ?

25 ಸಾವಿರ ರೂಪಾಯಿಗಿಂತ ಹೆಚ್ಚು ದರದ ಕೈಗಡಿಯಾರಗಳ ಜಿಎಸ್‌ಟಿ ದರವು ಶೇಕಡ 18ರಿಂದ 28ಕ್ಕೆ ಏರಿಕೆ ಕಾಣಲಿದೆ.

15 ಸಾವಿರ ರೂಪಾಯಿಗಿತ ದುಬಾರಿ ದರದ ಶೂಗಳ ಜಎಸ್‌ಟಿ ದರ ಶೇಕಡ 18ರಿಂದ ಶೇಕಡ 28ಕ್ಕೆ ಹೆಚ್ಚಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.