ಇಂದು ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಪ್ರಮಾಣ, ನೇರ ಪ್ರಸಾರ ಯಾವಾಗ, ಎಲ್ಲಿ ವೀಕ್ಷಿಸಬಹುದು - ಇಲ್ಲಿದೆ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇಂದು ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಪ್ರಮಾಣ, ನೇರ ಪ್ರಸಾರ ಯಾವಾಗ, ಎಲ್ಲಿ ವೀಕ್ಷಿಸಬಹುದು - ಇಲ್ಲಿದೆ ವಿವರ

ಇಂದು ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಪ್ರಮಾಣ, ನೇರ ಪ್ರಸಾರ ಯಾವಾಗ, ಎಲ್ಲಿ ವೀಕ್ಷಿಸಬಹುದು - ಇಲ್ಲಿದೆ ವಿವರ

ಹೊಸ ಎನ್‌ಡಿಎ ಸರ್ಕಾರ ರಚನೆಗೆ ಕ್ಷಣಗಣನೆ ಶುರುವಾಗಿದೆ. ಇಂದು ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಪ್ರಮಾಣ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ. ಈ ಕಾರ್ಯಕ್ರಮದ ನೇರ ಪ್ರಸಾರ ಯಾವಾಗ, ಎಲ್ಲಿ ವೀಕ್ಷಿಸಬಹುದು ಎಂಬಿತ್ಯಾದಿ ವಿವರ ಇಲ್ಲಿದೆ.

ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟದ ಪ್ರಮಾಣ ಇಂದು. (ಕಡತ ಚಿತ್ರ)
ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟದ ಪ್ರಮಾಣ ಇಂದು. (ಕಡತ ಚಿತ್ರ) (Raj K Raj/HT photo)

ನವದೆಹಲಿ: ನರೇಂದ್ರ ಮೋದಿ ಅವರು ಇಂದು (ಜೂನ್ 9) ರಾಷ್ಟ್ರಪತಿ ಭವನದಲ್ಲಿ ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾತ್ರಿ 7:15 ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನರೇಂದ್ರ ಮೋದಿಯವರಿಗೆ ಪ್ರಮಾಣ ವಚನವನ್ನು ಬೋಧಿಸಲಿದ್ದು, ಈ ಕಾರ್ಯಕ್ರಮ ದೇಶಾದ್ಯಂತ ನೇರ ಪ್ರಸಾರವಾಗಲಿದೆ.

ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಮತ್ತು ಕೇಂದ್ರ ಸಚಿವ ಸಂಪುಟದ ಇತರ ಸದಸ್ಯರಿಗೆ ರಾಷ್ಟ್ರಪತಿಗಳು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

ಬಿಜೆಪಿ ಸಂಸದೀಯ ಪಕ್ಷದ ನಾಯಕರಾಗಿ ಮೋದಿ ಅವರ ಆಯ್ಕೆಯನ್ನು ದೃಢೀಕರಿಸುವ ಪತ್ರವನ್ನು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸಲ್ಲಿಸಿದ ಕೂಡಲೇ ಅಧ್ಯಕ್ಷ ಮುರ್ಮು ಶುಕ್ರವಾರ ಮೋದಿಯವರನ್ನು ನಿಯೋಜಿತ ಪ್ರಧಾನಿಯಾಗಿ ನೇಮಿಸಿದರು. ಮೋದಿ ಅವರಲ್ಲದೆ, ಹೊಸ ಎನ್‌ಡಿಎ ಸರ್ಕಾರದ ಮಂತ್ರಿಮಂಡಲವೂ ಇಂದೇ (ಭಾನುವಾರ) ರಾತ್ರಿ ಪ್ರಮಾಣವಚನ ಸ್ವೀಕರಿಸಲಿದೆ.

ಬಿಜೆಪಿಯ ಹಿರಿಯ ನಾಯಕರಾದ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತೆಲುಗು ದೇಶಂ ಪಕ್ಷದ ಎನ್ ಚಂದ್ರಬಾಬು ನಾಯ್ಡು, ಜೆಡಿಯುನ ನಿತೀಶ್ ಕುಮಾರ್ ಮತ್ತು ಶಿವಸೇನೆಯ ಏಕನಾಥ್ ಶಿಂಧೆ ಸೇರಿದಂತೆ ಮಿತ್ರಪಕ್ಷಗಳೊಂದಿಗೆ ಸರ್ಕಾರದಲ್ಲಿ ತಮ್ಮ ಪ್ರಾತಿನಿಧ್ಯವನ್ನು ಅಂತಿಮಗೊಳಿಸಲು ಸಮಾಲೋಚನೆ ನಡೆಸುತ್ತಿದ್ದಾರೆ.

ಮೋದಿ 3.0 ಪ್ರಮಾಣ ನೇರ ಪ್ರಸಾರ ಯಾವ ಎಲ್ಲಿ ನೋಡಬೇಕು

ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಟಿವಿ ಸುದ್ದಿ ವಾಹಿನಿಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದು ಯೂಟ್ಯೂಬ್ ಮತ್ತು ಇತರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನೇರ ಪ್ರಸಾರವಾಗಲಿದೆ.

ನವದೆಹಲಿಯಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಭಾನುವಾರ ಸಂಜೆ 6 ಗಂಟೆ ಆಸುಪಾಸಿನಿಂದಲೇ ಎಲ್ಲಾ ರಾಷ್ಟ್ರೀಯ ಟೆಲಿವಿಷನ್ ಸುದ್ದಿ ವಾಹಿನಿಗಳು ಟಿವಿ ಮತ್ತು ತಮ್ಮ ಸಾಮಾಜಿಕ ಮಾಧ್ಯಮ ಚಾನೆಲ್ ಗಳಲ್ಲಿ ನೇರ ಪ್ರಸಾರ ಮಾಡಲಿವೆ. ಸಾರ್ವಜನಿಕ ಸೇವಾ ಪ್ರಸಾರಕ ದೂರದರ್ಶನವು ತಮ್ಮ ಟಿವಿ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಕೂಡ ಈ ಕಾರ್ಯಕ್ರಮದ ನೇರ ಪ್ರಸಾರ ಇರಲಿದೆ.

ಸಮಾರಂಭವನ್ನು ಭಾರತದ ರಾಷ್ಟ್ರಪತಿಗಳ ಯೂಟ್ಯೂಬ್ ಚಾನೆಲ್ ಮತ್ತು ಎಕ್ಸ್ ಖಾತೆಯಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಕ್ಯಾಬಿನೆಟ್ ಮಂತ್ರಿಗಳ ಪಟ್ಟಿ ನಾಳೆ

ಹೊಸದಾಗಿ ರಚನೆಯಾದ ಎನ್ಡಿಎ ಸರ್ಕಾರವು ಕ್ಯಾಬಿನೆಟ್ ಮಂತ್ರಿಗಳ ಪಟ್ಟಿಯನ್ನು ನಾಳೆ ಪ್ರಕಟಿಸಲಿದೆ. ಅಮಿತ್ ಶಾ ಮತ್ತು ಸಿಂಗ್ ಅವರಂತಹ ನಾಯಕರು ಹೊಸ ಕ್ಯಾಬಿನೆಟ್‌ನಲ್ಲಿ ಖಚಿತವಾಗಿ ಕಂಡುಬಂದರೆ, ಲೋಕಸಭಾ ಚುನಾವಣೆಯಲ್ಲಿ ಗೆದ್ದ ಮಾಜಿ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌಹಾಣ್, ಬಸವರಾಜ ಬೊಮ್ಮಾಯಿ, ಮನೋಹರ್ ಲಾಲ್ ಖಟ್ಟರ್ ಮತ್ತು ಸರ್ಬಾನಂದ ಸೋನೊವಾಲ್ ಅವರು ಸರ್ಕಾರ ಸೇರಲು ಪ್ರಬಲ ಸ್ಪರ್ಧಿಗಳಾಗಿದ್ದಾರೆ.

ಟಿಡಿಪಿಯ ರಾಮ್ ಮೋಹನ್ ನಾಯ್ಡು, ಜೆಡಿಯುನ ಲಾಲನ್ ಸಿಂಗ್, ಸಂಜಯ್ ಝಾ ಮತ್ತು ರಾಮ್ ನಾಥ್ ಠಾಕೂರ್ ಮತ್ತು ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಚಿರಾಗ್ ಪಾಸ್ವಾನ್ ಹೊಸ ಸರ್ಕಾರದ ಭಾಗವಾಗಬಹುದು ಎಂದು ಮೂಲಗಳು ತಿಳಿಸಿವೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.