Kerala Lottery: ಕಾಸರಗೋಡು ವ್ಯಕ್ತಿಗೆ 12 ಕೋಟಿ ರೂ. ಕೇರಳ ಲಾಟರಿ: ಮಾರಿದ ದಂಪತಿಗೂ ಬಂಪರ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kerala Lottery: ಕಾಸರಗೋಡು ವ್ಯಕ್ತಿಗೆ 12 ಕೋಟಿ ರೂ. ಕೇರಳ ಲಾಟರಿ: ಮಾರಿದ ದಂಪತಿಗೂ ಬಂಪರ್‌

Kerala Lottery: ಕಾಸರಗೋಡು ವ್ಯಕ್ತಿಗೆ 12 ಕೋಟಿ ರೂ. ಕೇರಳ ಲಾಟರಿ: ಮಾರಿದ ದಂಪತಿಗೂ ಬಂಪರ್‌

Kerala Lottery updates ದೀಪಾವಳಿ ಅಂಗವಾಗಿ ನಡೆಸಿದ ಕೇರಳ ಬಂಪರ್‌ ಲಾಟರಿ( Kerala Lottery) ಈ ಬಾರಿ ಕಾಸರಗೋಡು( Kasaragod) ಮೂಲದವರಿಗೆ ಬಂದಿದೆ. ಮಾರಾಟ ಮಾಡಿದ ದಂಪತಿಗೂ ಅದೃಷ್ಟ ಖುಲಾಯಿಸಿದೆ.

ಬಂಪರ್‌ ಟಿಕೆಟ್‌ ಮಾರಾಟ ಮಾಡಿದ ಕೇರಳ ಕಾಸರಗೋಡಿನ ಪತಿ ಜೋಸೆಫ್‌ ಹಾಗೂ ಪತ್ನಿ ಮೇರಿಕುಟ್ಟಿ ಇಬ್ಬರಿಗೂ ಭಾರೀ ಮೊತ್ತ ಲಭಿಸಿದೆ.
ಬಂಪರ್‌ ಟಿಕೆಟ್‌ ಮಾರಾಟ ಮಾಡಿದ ಕೇರಳ ಕಾಸರಗೋಡಿನ ಪತಿ ಜೋಸೆಫ್‌ ಹಾಗೂ ಪತ್ನಿ ಮೇರಿಕುಟ್ಟಿ ಇಬ್ಬರಿಗೂ ಭಾರೀ ಮೊತ್ತ ಲಭಿಸಿದೆ. (on manorama)

ಕಾಸರಗೋಡು: ಕೇರಳ ಲಾಟರಿಗೆ ಈಗಲೂ ಭಾರೀ ಬೇಡಿಕೆ. ಜನರೂ ಲಾಟರಿ ಟಿಕೆಟ್‌ ಖರೀದಿಸಿ ತಮ್ಮ ಅದೃಷ್ಠ ಪರೀಕ್ಷೆ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅದೃಷ್ಟು ಚೆನ್ನಾಗಿದ್ದರೆ ಕೋಟಿ ಕೋಟಿ ಹಣ ಲಾಟರಿ ಹೊಡೆಯಲೂ ಬಹುದು. ಈ ಬಾರಿಯೂ ದೀಪಾವಳಿ ಅಂಗವಾಗಿ ನಡೆದ ಪೂಜಾ ಬಂಪರ್‌ ಲಾಟರಿಯಲ್ಲಿ ವ್ಯಕ್ತಿಯೊಬ್ಬರಿಗೆ 12 ಕೋಟಿ ರೂ. ಲಾಟರಿ ಬಂದಿದೆ. ಅವರು ಕಾಸರಗೋಡಿನವರು.

ಕೇರಳ ಸರ್ಕಾರದ ಲಾಟರಿ ವಿಭಾಗವು ನಡೆಸುವ ಲಾಟರಿಯನ್ನು ಪ್ರಕಟಿಸಲಾಗಿದ್ದು. ಕಾಸರಗೋಡಿನ ವ್ಯಕ್ತಿಗೆ ಬಂಪರ್‌ ಬಹುಮಾನ ಬಂದಿದೆ. ಆದರೆ ಅವರು ಯಾರು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

ಜೆಸಿ 253199 ಸಂಖ್ಯೆಯ ಲಾಟರಿಗೆ ಬಂಪರ್‌ ಬಹುಮಾನ ಲಭಿಸಿದೆ. ಈ ಲಾಟರಿ ಕಾಸರಗೋಡಿನಲ್ಲಿ ಮಾರಾಟವಾಗಿತ್ತು. 12 ಕೋಟಿ ರೂ. ಬಂಪರ್‌ ಲಾಟರಿಯಿದು. ತೆರಿಗೆಯೆಲ್ಲಾ ಕಡಿತಗೊಳಿಸಿ 7.56 ಕೋಟಿ ರೂ. ಹಣ ವಿಜೇತರಿಗೆ ಲಭಿಸಲಿದೆ ಎನ್ನುವುದು ಕೇರಳ ಲಾಟರಿ ವಿಭಾಗದ ಅಧಿಕಾರಿಗಳ ವಿವರಣೆ.

ಇದಲ್ಲದೇ ನಾಲ್ಕು ಟಿಕೆಟ್‌ಗಳಿಗೆ ತಲಾ ಒಂದು ಕೋಟಿ ರೂ. ಕೂಡ ಲಭಿಸಿದೆ. ಅದರಲ್ಲಿ ಜೆಡಿ 504106, ಜೆಸಿ 748835, ಜೆಸಿ 293247, and ಜೆಸಿ 781889 ಸಂಖ್ಯೆಯ ಲಾಟರಿಗಳಿಗೆ ತಲಾ ಒಂದು ಕೋಟಿ ರೂ. ಸಿಗಲಿದೆ.

ಇದಲ್ಲದೇ 10 ಲಾಟರಿಗಳಿಗೆ ತಲಾ 10 ಲಕ್ಷ ರೂ. ಬಹುಮಾನ ಸಿಗಲಿದೆ. ಜೆಎ 269609, ಜೆಬಿ 117859, ಜೆಸಿ 284717, ಜೆಡಿ 239603, ಜೆಇ 765533, ಜೆಎ 538789, ಜೆಬಿ 271191, ಜೆಸಿ 542383, ಜೆಡಿ 899020, ಜೆಇ 588634 ಸಂಖ್ಯೆಯ ಲಾಟರಿಗಳು ತಲಾ 10 ಲಕ್ಷ ರೂ. ಬಹುಮಾನಕ್ಕೆ ಆಯ್ಕೆಯಾಗಿವೆ.

ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಕೇರಳ ಸರ್ಕಾರದ ಲಾಟರಿ ವಿಭಾಗವು ಹಲವಾರು ಬಂಪರ್‌ ಲಾಟರಿ ನಡೆಸುತ್ತದೆ. ಇದರಲ್ಲಿ ಪೂಜಾ ಬಂಪರ್‌, ಸ್ತ್ರೀಶಕ್ತಿ, ವಿನ್‌ ವಿನ್‌, ಅಕ್ಷಯಾ, ಕಾರುಣ್ಯ, ನಿರ್ಮಲ್‌ , ಕಾರುಣ್ಯ ಪ್ಲಸ್‌, ಫಿಪ್ಟಿ ಫಿಪ್ಟಿ ಪ್ರಮುಖವಾದ ಲಾಟರಿಗಳು.

ದಂಪತಿಗೂ ಅದೃಷ್ಟ

ಇನ್ನು ಈ ಬಾರಿಯ ಲಾಟರಿ ಮಾರಾಟ ಮಾಡಿದ ಕಾಸರಗೋಡಿನ ಮಂಜೇಶ್ವರದ ದಂಪತಿಗೂ ಬಂಪರ್‌ ಒಲಿದಿದೆ. ಏಕೆಂದರೆ ಜೋಸೆಫ್‌ ಹಾಗೂ ಮೇರಿಕುಟ್ಟಿ ದಂಪತಿ ಮಾರಾಟ ಮಾಡಿದ ಎರಡು ಲಾಟರಿಗಳು ಬಂಪರ್‌ ಬಹುಮಾನ ಪಡೆದಿವೆ. ಅದರಲ್ಲಿ ಮೇರಿಕುಟ್ಟಿ ಮಾರಾಟ ಮಾಡಿದ ಲಾಟರಿಗೆ 12 ಕೋಟಿ ರೂ. ಬಹುಮಾನ ಲಭಿಸಿದೆ. ಪತಿ ಜೋಸೆಫ್‌ ಮಾರಿದ್ದ ಲಾಟರಿಗೆ 1 ಕೋಟಿ ರೂ. ಬಹುಮಾನ ಲಭಿಸಿದೆ.

ಕೇರಳದಲ್ಲಿ ಲಾಟರಿ ಮಾರಾಟ ಮಾಡುವವರಿಗೂ ಶೇ. 10 ರಷ್ಟು ಮೊತ್ತ ನೀಡಲಾಗುತ್ತದೆ. ಈಗ ಪತ್ನಿಗೆ 1.20 ಕೋಟಿ ರೂ. ಹಾಗೂ ಪತಿಗೆ 10 ಲಕ್ಷ ರೂ. ಹಣ ಸಿಗಲಿದೆ.

ಮೂಲತಃ ಕಣ್ಣೂರಿನವರಾದರೂ ಅನಾರೋಗ್ಯದ ಕಾರಣದಿಂದ ಕಾಸರಗೋಡು ಜಿಲ್ಲೆ ಮಂಜೇಶ್ವರಕ್ಕೆ ಬಂದು ನೆಲೆಸಿದ ಮೇರಿಕುಟ್ಟಿ ಹಾಗೂ ಜೋಸೆಫ್‌ ದಂಪತಿ ಐದು ವರ್ಷದಿಂದ ಲಾಟರಿ ಟಿಕೆಟ್‌ ಮಾರಾಟ ಮಾಡಿ ಬದುಕು ನಡೆಸುತ್ತಿದ್ದಾರೆ. ಮೊದಲ ಬಾರಿಗೆ ಅವರು ಮಾರಾಟ ಮಾಡಿದ ಟಿಕೆಟ್‌ಗೆ ಬಂಪರ್‌ ಲಭಿಸಿ ದಂಪತಿಗೂ ಭಾರೀ ಮೊತ್ತ ಲಭಿಸಿದೆ.

ಇದನ್ನೂ ಓದಿರಿ

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.