ರಸ್ತೆ ಮೇಲೆ ಕಾಣಸಿಕ್ತು ತಲೆಕೆಳಗಾದ ಕಾರು, ಅಪಘಾತವಾಗಿಲ್ಲ, ಪಲ್ಟಿಯಾಗಿಲ್ಲ, ಕುತೂಹಲ ಕೆರಳಿಸಿದೆ ಈ ವೈರಲ್ ವಿಡಿಯೋ
ರಸ್ತೆ ಮೇಲೆ ಥಟ್ಟಂತ ಗಮನಸೆಳೆಯುವ ವಿಷಯಗಳು ಅನೇಕ. ಅವುಗಳು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುವಂಥವೂ ಹೌದು. ಅಂತೆಯೇ ರಸ್ತೆ ಮೇಲೆ ಕಾಣಸಿಕ್ತು ತಲೆಕೆಳಗಾದ ಕಾರು. ಆದರೆ ಆ ಕಾರಿಗೆ ಅಪಘಾತವಾಗಿಲ್ಲ, ಪಲ್ಟಿಯಾಗಿಲ್ಲ, ಕುತೂಹಲ ಕೆರಳಿಸಿದೆ ಈ ವೈರಲ್ ವಿಡಿಯೋ. ಸೋಷಿಯಲ್ ಮೀಡಿಯಾದಲ್ಲಿ ಅದರದ್ದೇ ಚರ್ಚೆ.
ನವದೆಹಲಿ/ಬೆಂಗಳೂರು: ರಸ್ತೆಯಲ್ಲಿ ತಲೆಕೆಳಗಾದ ಕಾರು ನೋಡಿದ್ರೆ ಹೇಗಾಗಬೇಡ ಹೇಳಿ. ಅರೆ ಇದೇನು ಅಪಘಾತವಾಗಿದೆಯಾ? ಅದರೊಳಗೆ ಇಬ್ಬರು ಕುಳಿತಿದ್ದಾರಲ್ಲ, ತಲೆಕೆಳಗಾದರೆ ಕುಳಿತವರೂ ಉಲ್ಟಾ ತಲೆಕೆಳಗಾಗಿ ಬಿದ್ದುಕೊಂಡಿರಬೇಕಿತ್ತಲ್ಲ, ಹೀಗೆ ಹತ್ತಾರು ಪ್ರಶ್ನೆಗಳೊಂದಿಗೆ ತಲೆಗೆ ಹುಳಬಿಟ್ಕೊಂಡವರಂತೆ ಪರಪರ ಪರಚುತ್ತ ಹತ್ತಾರು ಬಾರಿ ನೋಡುವಂತೆ ಮಾಡಿದೆ ಈ ಕಾರು.
ಈ ತಲೆಕೆಳಗಾದ ಕಾರು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ವಿಡಿಯೋಗಳ ಪೈಕಿ ಗಮನಸೆಳೆದಿದೆ. ಸಿಗ್ನಲ್‌ನಲ್ಲಿ ಈ ಕಾರಿದ್ದ ಕಾರಣ, ಸುತ್ತಮುತ್ತ ನಿಂತವರಿಗೆಲ್ಲ ಕುತೂಹಲ. ತಲೆಕೆಳಗಾದ ಕಾರು ಚಲಿಸುವುದು ಬಹಳ ವಿಲಕ್ಷಣ ದೃಶ್ಯ. ಹೀಗಾಗಿಯೇ ಸ್ಥಳದಲ್ಲಷ್ಟೇ ಅಲ್ಲ, ಇದರ ವಿಡಿಯೋ ಸೋಷಿಯಲ್ ಮೀಡಿಯಾಕ್ಕೆ ಬಂದಾಗಲೂ ಸಂಚಲನ ಮೂಡಿಸಿದ್ದೂ ಇದೇ ಕಾರಣಕ್ಕೆ.
ಇತರೆ ಕಾರುಗಳಂತೆಯೇ ಸಂಚರಿಸುವ ತಲೆಕೆಳಗಾದ ಕಾರು!
ರಸ್ತೆ ಬದಿ, ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಿದ್ದವರ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನ ಸವಾರರು ಹುಬ್ಬೇರಿಸಿ ನೋಡುವಂತೆ ಮಾಡಿತ್ತು ಈ ತಲೆಕೆಳಗಾದ ಕಾರು. ಈ ವಿಡಿಯೋವನ್ನು ಕಾರ್ ರಿಪೇರ್ ಯುಎಸ್‌ಎ ಎಂಬ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಶೇರ್ ಮಾಡಲಾಗಿದೆ.
ವಿಡಿಯೋದಲ್ಲಿರುವ ಮಾತುಗಳನ್ನು ಕೇಳಿದರೆ ಅಮೆರಿಕದ ಯಾವುದೋ ಟ್ರಾಫಿಕ್ ಸಿಗ್ನಲ್‌ನಲ್ಲಿ ಈ ಘಟನೆ ನಡೆದಿರುವಂತೆ ಇದೆ. ಈ ವಿಚಿತ್ರ ವಿನ್ಯಾಸದ ಕಾರು ಬಹುಬೇಗ ನೋಡುಗರ ಗಮನಸೆಳೆದು, ನೋಟವನ್ನು ತನ್ನಮೇಲೆಯೇ ಕೇಂದ್ರೀಕರಿಸುವಂತೆ ಮಾಡಿತು.
ಅಮೆರಿಕದ ರಸ್ತೆಯಲ್ಲಿ ಕಂಡ ತಲೆಕೆಳಗಾದ ಕಾರು!
ಸಿಗ್ನಲ್‌ನಲ್ಲಿ ವ್ಯಕ್ತಿಯೊಬ್ಬ ಇದರ ವಿಡಿಯೋ ಮಾಡಿದ್ದು, ಇದೇನಿದು ವಿನ್ಯಾಸ, ತಲೆಕೆಳಗಾದ ಕಾರು. ಕಾರಿನ ಹಿಂಭಾಗದಲ್ಲಿ ಆಕ್ಸೆಲ್ ಕೂಡ ಮೇಲಿದೆ. ಮುಂಭಾಗದಲ್ಲಿ ಎಂಜಿನ್ ಕೂಡ ಮೇಲೆಯೇ ಇದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ. ಆಗ ಕಾರಿನ ಒಳಗೆ ಕುಳಿತ ಜೋಡಿ ನಗುತ್ತಿರುವುದು ಕಂಡುಬಂದಿದೆ. ಮಹಿಳೆ ತನ್ನ ಮೊಬೈಲ್‌ನಲ್ಲಿ ಹೊರಗಿದ್ದು ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿಯ ವಿಡಿಯೋ ಮಾಡುತ್ತಿರುವ ದೃಶ್ಯವೂ ಅದರಲ್ಲಿದೆ. ನಂತರ ಸಿಗ್ನಲ್ ಮರೆಯಾಗಿ ಕಾರು ಹೊರಟಾಗ, ಸರಿ ಸವಾರಿ ಆನಂದಿಸಿ ಎಂದು ಹೇಳಿರುವುದು ಕಂಡುಬಂತು.
ಇನ್‌ಸ್ಟಾಗ್ರಾಂನಲ್ಲಿರುವ ಈ ವಿಡಿಯೋ ಆರೇಳು ದಿನಗಳ ಹಿಂದೆ ಪೋಸ್ಟ್ ಆಗಿದ್ದು, ಎರಡೂವರೆ ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು 850ಕ್ಕೂ ಹೆಚ್ಚು ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಬಹುತೇಕರು ಈ ಕಾರಿನ ವಿನ್ಯಾಸಕ್ಕೆ ಮನಸೋತರೆ, ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಜಿಫ್ ಇಮೇಜ್ ಹಾಕಿ ವಿಭಿನ್ನ ಭಾವ ವ್ಯಕ್ತಪಡಿಸಿರುವುದು ಕಂಡುಬಂದಿದೆ.
ಓದಬಹುದಾದ ಇನ್ನೆರಡು ಸ್ಟೋರಿಗಳು
1) KBC 16: ಕೌನ್ ಬನೇಗಾ ಕರೋಡ್‌ಪತಿ ಕ್ವಿಜ್ ಶೋಗೆ ಅರ್ಜಿ ಸಲ್ಲಿಕೆ ಆರಂಭ; ಕೋಟ್ಯಧಿಪತಿಯಾಗಲು ಬಯಸುವವರು ಹೀಗೆ ಅರ್ಜಿ ಸಲ್ಲಿಸಿ
2) ಹೇಟ್ ವಿರುದ್ಧ ಓಟ್ ಹಾಕಿದ ಪ್ರಕಾಶ್ ರಾಜ್, ನಾನು ಮತ ಹಾಕಿದವರೇ ಗೆಲ್ತಾರೆ ಅಂದ್ರು ರಕ್ಷಿತ್ ಶೆಟ್ಟಿ; ಶಿವಣ್ಣ, ಯಶ್, ರಚಿತಾ ಏನಂದ್ರು
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್‌ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಲೈಫ್‌ಸ್ಟೈಲ್ ವಿಭಾಗ ನೋಡಿ.
(This copy first appeared in Hindustan Times Kannada website. To read more like this please logon to kannada.hindustantimes.com)