Viral Video: ಮಕ್ಕಳೂ ಅಲ್ಲ, ಬೆಕ್ಕು-ನಾಯಿನೂ ಅಲ್ಲ.. ಹೋಗ್ಲಿ ಗರ್ಲ್ಫ್ರೆಂಡೂ ಅಲ್ಲ; ಹಸುವನ್ನ ಮುಂದೆ ಕೂರಿಸಿಕೊಂಡು ಯುವಕನ ಬೈಕ್ ಸವಾರಿ
Viral Video: ಅಲ್ಲ, ಬೈಕ್ಗಿಂತ ದನ-ಹೋರಿಗಳೇ ದೊಡ್ಡದಿರುತ್ತವೆ. ಹೀಗಿರುವಾಗ ಹೇಗಪ್ಪ ಈ ಯುವಕ ಬೈಕ್ನಲ್ಲಿ ಹಸುವನ್ನ ಕೂರಿಸಿಕೊಂಡು ಗಾಡಿ ಓಡಿಸಿದ್ದಾನೆ ಅಂತ ಯೋಚನೆ ಮಾಡ್ತಾ ಇದ್ದೀರಾ? ಈ ವಿಡಿಯೋ ನೋಡಿ.
ಸಮಾನ್ಯವಾಗಿ ಬೈಕ್ನಲ್ಲಿ ಮುಂದೆ ಯಾರನ್ನ ಕೂರಿಸಿಕೊಳ್ತೀವಿ ಹೇಳಿ. ಪುಟ್ಟ ಮಕ್ಕಳು, ಇಲ್ಲ ಅಂದ್ರೆ ಸಾಕಿದ ಬೆಕ್ಕು-ನಾಯಿನ ಕೂರಿಸಿಕೊಳ್ತೀವಿ. ಕೆಲ ಯುವಕರು ಕ್ರೇಜ್ಗೆ ತಮ್ಮ ಗರ್ಲ್ಫ್ರೆಂಡ್ನ ಕೂರಿಸಿಕೊಳ್ಳೋದು ಉಂಟು. ಆದರೆ ಇಲ್ಲೊಬ್ಬ ಯುವಕ ಹಸುವನ್ನು ಮುಂದೆ ಕೂರಿಸಿಕೊಂಡು ಬೈಕ್ ಸವಾರಿ ಮಾಡಿದ್ದಾನೆ.
ಅಲ್ಲ, ಬೈಕ್ಗಿಂತ ದನ-ಹೋರಿಗಳೇ ದೊಡ್ಡದಿರುತ್ತವೆ. ಹೀಗಿರುವಾಗ ಹೇಗಪ್ಪ ಈ ಯುವಕ ಬೈಕ್ನಲ್ಲಿ ಹಸುವನ್ನ ಕೂರಿಸಿಕೊಂಡು ಗಾಡಿ ಓಡಿಸಿದ್ದಾನೆ ಅಂತ ಯೋಚನೆ ಮಾಡ್ತಾ ಇದ್ದೀರಾ? ಈ ವಿಡಿಯೋ ನೋಡಿ.
ನರೇಶ್ ನಂಬೀಸನ್ ಎನ್ನುವವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ಕಂಡ ನೆಟ್ಟಿಗರು ಬೆರಗಾಗಿದ್ದಾರೆ. ಆ ಹಸು ಹೇಗೆ ಅಷ್ಟು ಶಾಂತ ರೀತಿಯಲ್ಲಿ ಸುಮ್ಮನೆ ಕುಳಿತಿದೆ ಎಂದು ಆಶ್ಚರ್ಯಚಕಿತರಾಗಿದ್ದಾರೆ.
ಅದೇ ರಸ್ತೆಯಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದವರು ಹಸುವಿನ ಜೊತೆ ಯುವಕನ ಬೈಕ್ ರೈಡ್ನ ವಿಡಿಯೋ ಮಾಡಿದ್ದಾರೆ. “ಇದು ತಮಾಷೆಯ ವಿಷಯವಲ್ಲ, ಬೇರೆ ಯಾವುದಾದರೂ ಈ ಬೈಕ್ಗೆ ತಾಗಿದರೆ ಅಥವಾ ಈ ಬೈಕ್ ಸ್ಕಿಡ್ ಆಗಿ ಬಿದ್ದರೆ ಹಸು ಮತ್ತು ಯುವಕ ಇಬ್ಬರಿಗೂ ಗಾಯವಾಗುತ್ತದೆ. ಇದನ್ನ ಆತ ಯೋಚಿಸಬೇಕಿತ್ತು” ಎಂದು ಕೆಲವರು ವಿಡಿಯೋ ಕಂಡು ಕಿಡಿಕಾರಿದ್ದಾರೆ. “ಆ ಹಸುವನ್ನು ನೋಡಿದರೆ ಬೇಸರ ಎನಿಸುತ್ತಿದೆ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
“ಆ ಹಸುವನ್ನು ಆ ಯುವಕ ಎಲ್ಲಿಗೆ ಕರೆದೊಯ್ಯುತ್ತಿರಬಹುದು? ಕಸಾಯಿಖಾನೆಗಾ” ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ನವೆಂಬರ್ 10 ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, 2 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಅಂದ ಹಾಗೆ ಇದು ಭಾರತದಲ್ಲಿ ನಡೆದ ಘಟನೆಯ ವಿಡಿಯೋ ಅಲ್ಲ. ಬೇರೆ ಯಾವುದೋ ದೇಶದ್ದಾಗಿದೆ.