World's richest people: ಜಗತ್ತಿನ ಅಗ್ರ ಶ್ರೀಮಂತರ ಪಟ್ಟಿ ಪ್ರಕಟ, ಅದಾನಿಯನ್ನು ಹಿಂದಿಕ್ಕಿದ ಜೆಫ್‌ ಬಿಜೋಸ್‌, ಇಲ್ಲಿದೆ ಕುಬೇರರ ಪಟ್ಟಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  World's Richest People: ಜಗತ್ತಿನ ಅಗ್ರ ಶ್ರೀಮಂತರ ಪಟ್ಟಿ ಪ್ರಕಟ, ಅದಾನಿಯನ್ನು ಹಿಂದಿಕ್ಕಿದ ಜೆಫ್‌ ಬಿಜೋಸ್‌, ಇಲ್ಲಿದೆ ಕುಬೇರರ ಪಟ್ಟಿ

World's richest people: ಜಗತ್ತಿನ ಅಗ್ರ ಶ್ರೀಮಂತರ ಪಟ್ಟಿ ಪ್ರಕಟ, ಅದಾನಿಯನ್ನು ಹಿಂದಿಕ್ಕಿದ ಜೆಫ್‌ ಬಿಜೋಸ್‌, ಇಲ್ಲಿದೆ ಕುಬೇರರ ಪಟ್ಟಿ

World's richest people: ಈ ಪಟ್ಟಿಯಲ್ಲಿ ಫ್ರಾನ್ಸ್‌ನ ಬರ್ನಾರ್ಡ್‌ ಆರ್ನಾಟ್‌ (188 ಬಿಲಿಯನ್‌ ಡಾಲರ್‌) ಅವರು ನಂಬರ್‌ ಒನ್‌ ಸ್ಥಾನ ಪಡೆದಿದ್ದಾರೆ. ಎರಡನೇ ಸ್ಥಾನವನ್ನು ಎಲಾನ್‌ ಮಸ್ಕ್‌ ಪಡೆದಿದ್ದಾರೆ.

<p>ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ</p>
ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ

ಶತಕೋಟ್ಯಧಿಪತಿ ಗೌತಮ್‌ ಅದಾನಿಯವರು ಈಗ ಜಗತ್ತಿನ ಅಗ್ರ ಮೂರನೇ ಶ್ರೀಮಂತರಾಗಿ ಉಳಿದಿಲ್ಲ. ಗೌತಮ್‌ ಅದಾನಿಯವರು ಶ್ರೀಮಂತರ ಪಟ್ಟಿಯಲ್ಲಿ ಈಗ ಅಗ್ರ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಅಮೆಜಾನ್‌ ಸ್ಥಾಪಕ ಜೆಫ್‌ ಬಿಜೋಸ್‌ ಅವರು ಈಗ ಅಗ್ರ ಮೂರನೇ ಶ್ರೀಮಂತರಾಗಿದ್ದಾರೆ.

ಬ್ಲೂಮ್‌ಬರ್ಗ್‌ ಬಿಲಿಯನೇರ್‌ ಇಂಡೆಕ್ಸ್‌ ಪ್ರಕಾರ, ಅಮೆಜಾನ್‌ನ ಸ್ಥಾಪಕ ಜೆಫ್‌ ಬಿಜೋಸ್‌ ಅವರು ಜಗತ್ತಿನ ಅಗ್ರ ಮೂರನೇ ಶ್ರೀಮಂತ ವ್ಯಕ್ತಿ. ಜಗತ್ತಿನ ಅಗ್ರ ಶ್ರೀಮಂತರಾಗಿ ಲೂಯಿಸ್‌ ವಿಟ್ಟೊನ್‌ನ ಬರ್ನಾರ್ಡ್‌ ಆರ್ನಾಲ್ಟ್‌ (ಮೊದಲ ಸ್ಥಾನ) ಮತ್ತು ಎಲಾನ್‌ ಮಸ್ಕ್‌ (ಟೆಸ್ಲಾ, ಸ್ಪೇಸ್‌ ಎಕ್ಸ್‌, ಟ್ವಿಟ್ಟರ್‌) ಹೊರಹೊಮ್ಮಿದ್ದಾರೆ. ಇವರಿಬ್ಬರ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಇದೇ ಸಂದರ್ಭದಲ್ಲಿ ರಿಲಯೆನ್ಸ್‌ ಗ್ರೂಪ್‌ನ ಮುಖೇಶ್‌ ಅಂಬಾನಿಯ ಸ್ಥಾನವೂ ಕುಸಿದಿದೆ. ಅವರು ಜಗತ್ತಿನ ಅಗ್ರ 12 ಸ್ಥಾನಕ್ಕೆ ಕುಸಿದಿದ್ದಾರೆ. ಈ ಮೊದಲು ಅವರು ಅಗ್ರ 11ನೇ ಸ್ಥಾನದಲ್ಲಿದ್ದರು.

ಕಳೆದ 24 ತಿಂಗಳಲ್ಲಿ ಅದಾನಿಯವರ ನಿವ್ವಳ ಸಂಪತ್ತು 872 ದಶಲಕ್ಷ ಡಾಲರ್‌ನಷ್ಟು ಕಡಿಮೆಯಾಗಿದೆ. 2022ರ ಜನವರಿಯಿಂದ ಇವರ ಸಂಪತ್ತು 683 ದಶಲಕ್ಷ ಡಾಲರ್‌ ಕಡಿಮೆಯಾಗಿದೆ. ಹೀಗಿದ್ದರೂ, ಅದಾನಿ ಮತ್ತು ಮುಖೇಶ್‌ ಅಂಬಾನಿಯವರು ಏಷ್ಯಾದ ಶ್ರೀಮಂತ ವ್ಯಕ್ತಿಗಳಾಗಿ ಮುಂದುವರೆದಿದ್ದಾರೆ.

ಬ್ಲೂಮ್‌ಬರ್ಗ್‌ ಬಿಲಿಯನೇರ್‌ ಇಂಡಕ್ಸ್‌ ಜಗತ್ತಿನ 500 ಶ್ರೀಮಂತರ ಪಟ್ಟಿಯನ್ನು ಪ್ರತಿವರ್ಷ ಬ್ಲೂಮ್‌ಬರ್ಗ್‌ ನ್ಯೂಸ್‌ನಲ್ಲಿ ಪ್ರಕಟಿಸುತ್ತದೆ. ಮೊದಲ ಬಾರಿಗೆ 2012ರಲ್ಲಿ ಈ ಪಟ್ಟಿ ಪ್ರಕಟವಾದಗ ಕೇವಲ ಜಗತ್ತಿನ 20 ಶ್ರೀಮಂತರನ್ನು ಮಾತ್ರ ಪಟ್ಟಿ ಮಾಡಲಾಗಿತ್ತು. ಬಳಿಕ ಅಗ್ರ 100, 200, 300, 400, 500 ಶ್ರೀಮಂತರ ಪಟ್ಟಿ ಪ್ರಕಟಿಸಲು ಆರಂಭಿಸಿದೆ.

ಈ ಪಟ್ಟಿಯಲ್ಲಿ ಫ್ರಾನ್ಸ್‌ನ ಬರ್ನಾರ್ಡ್‌ ಆರ್ನಾಟ್‌ (188 ಬಿಲಿಯನ್‌ ಡಾಲರ್‌) ಅವರು ನಂಬರ್‌ ಒನ್‌ ಸ್ಥಾನ ಪಡೆದಿದ್ದಾರೆ. ಎರಡನೇ ಸ್ಥಾನವನ್ನು ಎಲಾನ್‌ ಮಸ್ಕ್‌ ಪಡೆದಿದ್ದಾರೆ. ಎಲಾನ್‌ ಮಸ್ಕ್‌ ಅವರ ಒಟ್ಟು ಸಂಪತ್ತು 145 ಬಿಲಿಯನ್‌ ಡಾಲರ್‌ ಇದೆ. 121 ಬಿಲಿಯನ್‌ ಡಾಲರ್‌ ಸಂಪತ್ತಿನ ಜೆಫ್‌ ಬಿಜೋಸ್‌ ಅಗ್ರ ಮೂರನೇ ಸ್ಥಾನದಲ್ಲಿದ್ದಾರೆ.

ಗೌತಮ್‌ ಆದಾನಿಯವರ ಸಂಪತ್ತು 120 ಬಿಲಿಯನ್‌ ಇದ್ದು, ಅಗ್ರ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಬಿಲ್‌ ಗೇಟ್ಸ್‌ ಸಂಪತ್ತು 111 ಬಿಲಿಯನ್‌ ಡಾಲರ್‌ ಇದ್ದು, ಅಗ್ರ ಐದನೇ ಸ್ಥಾನ ಪಡೆದಿದ್ದಾರೆ. 108 ಬಿಲಿಯನ್‌ ಡಾಲರ್‌ ಸಂಪತ್ತು ಹೊಂದಿರುವ ವಾರೆನ್‌ ಬಫೆಟ್‌ ಅಗ್ರ ಆರನೇ ಸ್ಥಾನ ಪಡೆದಿದ್ದಾರೆ.

ಅರೇಕಲ್‌ನ ಲ್ಯಾರಿ ಎಲಿಸನ್‌ ಸಂಪತ್ತು 99.5 ಬಿಲಿಯನ್‌ ಇದ್ದು, ಅಗ್ರ ಏಳನೇ ಸ್ಥಾನ ಹೊಂದಿದ್ದಾರೆ. ಲ್ಯಾರಿ ಪೇಜ್‌ 92.3 ಸಂಪತ್ತು ಹೊಂದಿದ್ದು, ಅಗ್ರ 8ನೇ ಸ್ಥಾನ ಪಡೆದಿದ್ದಾರೆ. ಸರ್ಜಿ ಬ್ರಿನ್‌ ಒಂಬತ್ತನೇ ಸ್ಥಾನ ಪಡೆದಿದ್ದಾರೆ. ಸ್ಟೀವ್‌ ಬಾಲ್ಮೆರ್‌ ಹತ್ತನೇ ಸ್ಥಾನ ಪಡೆದಿದ್ದಾರೆ.

84.7 ಬಿಲಿಯನ್‌ ಸಂಪತ್ತಿನ ಒಡೆಯ ಮುಕೇಶ್‌ ಅಂಬಾನಿ ಅಗ್ರ ಹನ್ನೆರಡನೇ ಸ್ಥಾನ ಪಡೆದಿದ್ದಾರೆ. ಭಾರತದ ಶಪೂರ್‌ ಮಿಸ್ತ್ರಿಯವರು 29.2 ಬಿಲಿಯನ್‌ ಸಂಪತ್ತು ಹೊಂದಿದ್ದು, ಅಗ್ರ 45ನೇ ಸ್ಥಾನ ಪಡೆದಿದ್ದಾರೆ. ಶಿವ ನಾಡರ್‌ ಅವರು 26.5 ಬಿಲಿಯನ್‌ ಡಾಲರ್‌ ಸಂಪತ್ತಿನೊಂದಿಗೆ ಅಗ್ರ 51ನೇ ಸ್ಥಾನ ಪಡೆದಿದ್ದಾರೆ. ಲಕ್ಷ್ಮಿ ಮಿತ್ತಲ್‌ ಅವರು 19.4 ಬಿಲಿಯನ್‌ ಡಾಲರ್‌ ಸಂಪತ್ತು ಹೊಂದಿದ್ದು, ಅಗ್ರ 81ನೇ ಸ್ಥಾನ ಪಡೆದಿದ್ದಾರೆ. ಸೈರಸ್‌ ಪೊನಾವಾಲ ಅವರು 17.2 ಬಿಲಿಯನ್‌ ಡಾಲರ್‌ ಸಂಪತ್ತು ಹೊಂದಿದ್ದು ಅಗ್ರ 97ನೇ ಸ್ಥಾನ ಪಡೆದಿದ್ದಾರೆ. 16.8 ಬಿಲಿಯನ್‌ ಡಾಲರ್‌ ಸಂಪತ್ತು ಹೊಂದಿರುವ ರಾಧಾಕೃಷ್ಣನ್‌ ಧಾಮನಿಯವರು ಅಗ್ರ 100ನೇ ಸ್ಥಾನ ಪಡೆದಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.