ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Wspd 2022: ಭಾರತದಲ್ಲಿ ಆತ್ಮಹತ್ಯೆ ಪ್ರಕರಣ; Top 10ರ ಪಟ್ಟಿಯಲ್ಲಿ ಕರ್ನಾಟಕ ಎಲ್ಲಿದೆ? ಯಾಕೆ?

WSPD 2022: ಭಾರತದಲ್ಲಿ ಆತ್ಮಹತ್ಯೆ ಪ್ರಕರಣ; Top 10ರ ಪಟ್ಟಿಯಲ್ಲಿ ಕರ್ನಾಟಕ ಎಲ್ಲಿದೆ? ಯಾಕೆ?

World Suicide Prevention Day 2022 Today : ಇಂದು ವಿಶ್ವ ಆತ್ಮಹತ್ಯೆ ತಡೆ ದಿನ. ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳ ವಿವರ ನೋಡಿದಾಗ, ಎನ್‌ಸಿಆರ್‌ಬಿ 2021ರ ಡೇಟಾ ಪ್ರಕಾರ ಕಳೆದ ವರ್ಷ 1,50,000 ಕ್ಕೂ ಹೆಚ್ಚು ಆತ್ಮಹತ್ಯೆ ಪ್ರಕರಣವಿದೆ. ಮಹಾರಾಷ್ಟ್ರ ನಂಬರ್‌ 1 ಸ್ಥಾನದಲ್ಲಿದ್ದರೆ, ಕರ್ನಾಟಕ ಐದನೇ ಸ್ಥಾನದಲ್ಲಿದೆ. ಇದರ ಒಂದು ಅವಲೋಕನ ಇಲ್ಲಿದೆ.

ಎನ್‌ಸಿಆರ್‌ಬಿ ಪ್ರಕಟಿಸಿರುವ 2021ರ ಡೇಟಾ ಪ್ರಕಾರ ಒಂದು ವರ್ಷದ ಅವಧಿಯಲ್ಲಿ 1,50,000 ಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರ ಆತ್ಮಹತ್ಯೆ ಪ್ರಕರಣದಲ್ಲಿ ನಂಬರ್‌ 1 ಸ್ಥಾನದಲ್ಲಿದ್ದರೆ, ಕರ್ನಾಟಕ ಐದನೇ ಸ್ಥಾನದಲ್ಲಿದೆ.
ಎನ್‌ಸಿಆರ್‌ಬಿ ಪ್ರಕಟಿಸಿರುವ 2021ರ ಡೇಟಾ ಪ್ರಕಾರ ಒಂದು ವರ್ಷದ ಅವಧಿಯಲ್ಲಿ 1,50,000 ಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರ ಆತ್ಮಹತ್ಯೆ ಪ್ರಕರಣದಲ್ಲಿ ನಂಬರ್‌ 1 ಸ್ಥಾನದಲ್ಲಿದ್ದರೆ, ಕರ್ನಾಟಕ ಐದನೇ ಸ್ಥಾನದಲ್ಲಿದೆ. (NCRB)

ಸಾಮಾಜಿಕವಾಗಿ, ಕೌಟುಂಬಿಕವಾಗಿ ನೋಡುವಾಗ ಆತ್ಯಹತ್ಯೆ ನಿಜಕ್ಕೂ ಕಳವಳಕಾರಿ. ತಮ್ಮ ಸಾವನ್ನು ಅಪಾಯಕಾರಿ ರೀತಿಯಲ್ಲಿ ತಾವೇ ತಂದುಕೊಳ್ಳುವ ಈ ಪ್ರವೃತ್ತಿ ಅವರಿಗಷ್ಟೇ ಅಲ್ಲ, ಅವರ ಕುಟುಂಬಕ್ಕೂ ಉಂಟುಮಾಡುವ ಹಾನಿ ಬಹುದೊಡ್ಡದು. ಇದು ಆತ್ಮಹತ್ಯೆ ಮಾಡಿಕೊಂಡವರ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಸಮುದಾಯಗಳನ್ನು ಬಾಧಿಸುತ್ತದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ ಸರಾಸರಿ ಒಂದು ಲಕ್ಷಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ದಾಖಲೆ ಇದೆ.

ಟ್ರೆಂಡಿಂಗ್​ ಸುದ್ದಿ

ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಕಾರಣಗಳು ಹಲವಾರು. ಕೌಟುಂಬಿಕ ಸಮಸ್ಯೆ, ಹಣಕಾಸು ಬಿಕ್ಕಟ್ಟು, ಒಂಟಿತನ, ಖಿನ್ನತೆ, ಶೋಷಣೆ, ಹಿಂಸೆ, ಮಾನಸಿಕ ಕಾಯಿಲೆ, ಮದ್ಯಪಾನ, ಅನಾರೋಗ್ಯ ಮುಂತಾದ ಕಾರಣಗಳು ಆತ್ಮಹತ್ಯೆ ನಿರ್ಧಾರ ಹಿಂದೆ ಇರುವುದು ದಾಖಲೆಗಳಲ್ಲಿ ಉಲ್ಲೇಖವಾಗಿದೆ. ನ್ಯಾಷನಲ್‌ ಕ್ರೈಮ್‌ ರೆಕಾರ್ಡ್‌ ಬ್ಯೂರೋ (ಎನ್‌ಸಿಆರ್‌ಬಿ) ಈ ದಾಖಲೆಗಳನ್ನು ನಿರ್ವಹಿಸುತ್ತಿದ್ದು, ಪ್ರತಿ ವರ್ಷ ಇದರ ವರದಿಯನ್ನು ಜಾಗೃತಿಗಾಗಿ ಪ್ರಕಟಿಸುತ್ತಿರುತ್ತದೆ.

ಎನ್‌ಸಿಆರ್‌ಬಿಯ 2021ರ ವರದಿ ಪ್ರಕಾರ, ದೇಶದಲ್ಲಿ 1,64,033 ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. 2020ರ ವರದಿಗೆ ಹೋಲಿಸಿದರೆ ಶೇಕಡ 7.2 ಹೆಚ್ಚಳ ಕಂಡುಬಂದಿದೆ. ಆತ್ಮಹತ್ಯೆ ದರವನ್ನು ಪರಿಗಣಿಸಿದರೆ 2020ಕ್ಕೆ ಹೋಲಿಸಿದರೆ ಶೇಕಡ 6.2 ಹೆಚ್ಚಳ ದಾಖಲಾಗಿದೆ. ಆತ್ಮಹತ್ಯೆ ದರವನ್ನು 2011ರ ಜನಗಣತಿಯ ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ.

ಐದೇ ರಾಜ್ಯಗಳಲ್ಲಿ ಶೇಕಡ 50ಕ್ಕೂ ಹೆಚ್ಚು ಪ್ರಕರಣ

ರಾಜ್ಯಗಳಲ್ಲಿ ಆತ್ಮಹತ್ಯೆ ಪ್ರಕರಣಗಳನ್ನು ಗಮನಿಸುವುದಾದರೆ, ದೇಶದ ಒಟ್ಟು ಆತ್ಮಹತ್ಯೆ ಪ್ರಕರಣಗಳ ಪೈಕಿ ಶೇಕಡ 50ಕ್ಕೂ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಐದೇ ರಾಜ್ಯಗಳ ಒಟ್ಟು ಪ್ರಕರಣಗಳಾಗಿವೆ. ಇದರಲ್ಲಿ ಕರ್ನಾಟಕವೂ ಸೇರಿರುವುದು ಕಳವಳಕಾರಿ.

ಮಹಾರಾಷ್ಟ್ರದಲ್ಲಿ ಗರಿಷ್ಠ ಆತ್ಮಹತ್ಯೆ ಪ್ರಕರಣ ದಾಖಲಾಗಿವೆ. ತಮಿಳುನಾಡು, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ ನಂತರದ ಸ್ಥಾನಗಳಲ್ಲಿವೆ. ದೇಶದ ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಈ ಐದು ರಾಜ್ಯಗಳ ಪಾಲು ಶೇಕಡ 50.4ರಷ್ಟಿದೆ. ಉಳಿದ 23 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳ ಪಾಲು ಶೇಕಡ 49.6 ಇದೆ.

ಮಹಾರಾಷ್ಟ್ರದಲ್ಲಿ 22,207, ತಮಿಳುನಾಡಲ್ಲಿ 18,925, ಮಧ್ಯಪ್ರದೇಶದಲ್ಲಿ 14,965, ಪಶ್ಚಿಮ ಬಂಗಾಳದಲ್ಲಿ 13,500, ಕರ್ನಾಟಕದಲ್ಲಿ 13,056 ಆತ್ಮಹತ್ಯೆ ಪ್ರಕರಣಗಳು ಕಳೆದ ವರ್ಷ ದಾಖಲಾಗಿವೆ. ದೇಶದ ಒಟ್ಟು ಆತ್ಮಹತ್ಯೆ ಪ್ರಕರಣಗಳ ಪೈಕಿ ಈ ಐದು ರಾಜ್ಯಗಳ ಶೇಕಡವಾರು ಪಾಲನ್ನು ಗಮನಿಸುವುದಾದರೆ, ಮಹಾರಾಷ್ಟ್ರದ ಪಾಲು ಶೇಕಡ 13.5, ತಮಿಳುನಾಡಿನ ಪಾಲು ಶೇಕಡ 11.5, ಮಧ್ಯಪ್ರದೇಶದ ಪಾಲು ಶೇಕಡ 9.1, ಪಶ್ಚಿಮ ಬಂಗಾಳದ ಪಾಲು ಶೇಕಡ 8.2 ಮತ್ತು ಕರ್ನಾಟಕದ ಪಾಲು ಶೇಕಡ 8 ಇದೆ.

<p>ದೇಶದ ಒಟ್ಟು ಆತ್ಮಹತ್ಯೆ ಪ್ರಕರಣಗಳ ಪೈಕಿ ಈ ಐದು ರಾಜ್ಯಗಳ ಶೇಕಡವಾರು ಪಾಲನ್ನು ಕರ್ನಾಟಕದ ಪಾಲು ಶೇಕಡ 8 ಇದೆ.</p>
ದೇಶದ ಒಟ್ಟು ಆತ್ಮಹತ್ಯೆ ಪ್ರಕರಣಗಳ ಪೈಕಿ ಈ ಐದು ರಾಜ್ಯಗಳ ಶೇಕಡವಾರು ಪಾಲನ್ನು ಕರ್ನಾಟಕದ ಪಾಲು ಶೇಕಡ 8 ಇದೆ.

ಆತ್ಮಹತ್ಯೆ ಪ್ರಮಾಣದಲ್ಲಿ ಏರಿಕೆ ಮತ್ತು ಇಳಿಕೆ

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2020ರಲ್ಲಿ ದಾಖಲಾದ ಮತ್ತು 2021ರಲ್ಲಿ ದಾಖಲಾದ ಆತ್ಮಹತ್ಯೆ ಪ್ರಕರಣ ಗಮನಿಸುವುದಾದರೆ, ತೆಲಂಗಾಣದಲ್ಲಿ ಶೇಕಡ 26.2, ಉತ್ತರ ಪ್ರದೇಶದಲ್ಲಿ ಶೇಕಡ 23.5, ಪುದುಚೆರಿಯಲ್ಲಿ ಶೇಕಡ 23.5, ಆಂಧ್ರಪ್ರದೇಶದಲ್ಲಿ 14.5, ಕೇರಳದಲ್ಲಿ ಶೇಕಡ 12.3, ತಮಿಳುನಾಡಿನಲ್ಲಿ ಶೇಕಡ 12.1, ಮಹಾರಾಷ್ಟ್ರದಲ್ಲಿ ಶೇಕಡ 11.5, ಮಣಿಪುರದಲ್ಲಿ ಶೇಕಡ 11.4ರಷ್ಟು ಏರಿಕೆ ಕಂಡುಬಂದಿದೆ.

ಇದೇ ಅವಧಿಯಲ್ಲಿ ಲಕ್ಷದ್ವೀಪದಲ್ಲಿ ಶೇಕಡ 50, ಉತ್ತರಾಖಂಡದಲ್ಲಿ ಶೇಕಡ 24, ಜಾರ್ಖಂಡದಲ್ಲಿ ಶೇಕಡ 15, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇಕಡ 13.9 ಮತ್ತು ಅಂಡಮಾನ್‌ ನಿಕೋಬಾರ್‌ ದ್ವೀಪಗಳಲ್ಲಿ ಶೇಕಡ 11.7ರಷ್ಟು ಆತ್ಮಹತ್ಯೆ ಪ್ರಕರಣ ಇಳಿಕೆಯಾಗಿದೆ.

<p>ರಾಜ್ಯವಾರು ಆತ್ಮಹತ್ಯೆ ಪ್ರಕರಣಗಳು ಶೇಕಡಾವಾರು ಲೆಕ್ಕಾಚಾರದಲ್ಲಿ, ಕರ್ನಾಟಕದ್ದು ಶೇಕಡ 19.50 ಇದೆ.&nbsp;</p>
ರಾಜ್ಯವಾರು ಆತ್ಮಹತ್ಯೆ ಪ್ರಕರಣಗಳು ಶೇಕಡಾವಾರು ಲೆಕ್ಕಾಚಾರದಲ್ಲಿ, ಕರ್ನಾಟಕದ್ದು ಶೇಕಡ 19.50 ಇದೆ.&nbsp;

ಆತ್ಮಹತ್ಯಾ ದರ ಟಾಪ್‌ 10 ಪಟ್ಟಿಯಲ್ಲಿ ಕರ್ನಾಟಕ

ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಎಷ್ಟು ಆತ್ಮಹತ್ಯೆ ಪ್ರಕರಣ ದಾಖಲಾಗುತ್ತದೆ ಎಂಬುದನ್ನು ಆಧರಿಸಿ ಆತ್ಮಹತ್ಯಾ ದರವನ್ನು ನಿರ್ಣಯಿಸಲಾಗುತ್ತದೆ. ಇದರಂತೆ ಕಳೆದ ವರ್ಷ ಅಖಿಲ ಭಾರತ ಮಟ್ಟದ ಸೂಸೈಡ್‌ ದರವನ್ನು ಶೇಕಡ 12 ಎಂದು ನಿರ್ಧರಿಸಲಾಗಿದೆ. ಟಾಪ್‌ 10 ರಾಜ್ಯಗಳ ಗರಿಷ್ಠ ಆತ್ಮಹತ್ಯಾ ದರಗಳನ್ನು ಅವಲೋಕಿಸಿದರೆ ಕರ್ನಾಟಕ 10ನೇ ಸ್ಥಾನದಲ್ಲಿ ಕಂಡುಬಂದಿದೆ.

ಅಂಡಮಾನ್‌ ನಿಕೋಬಾರ್‌ ದ್ವೀಪಗಳಲ್ಲಿ ಗರಿಷ್ಠ ಶೇಕಡ 39.7, ಸಿಕ್ಕಿಂನಲ್ಲಿ ಶೇಕಡ 39.2, ಛತ್ತೀಸ್‌ಗಢ ಶೇಕಡ 31.8, ಪುದುಚೆರಿ ಶೇಕಡ 26.9, ಕೇರಳ ಶೇಕಡ 26.9, ತಮಿಳುನಾಡು 26.4, ತೆಲಂಗಾಣ ಶೇಕಡ 24.7, ತ್ರಿಪುರಾ ಶೇಕಡ 20.6, ಗೋವಾ ಶೇಕಡ 19.5, ಕರ್ನಾಟಕ ಶೇಕಡ 18.9 ಆತ್ಮಹತ್ಯಾದರ ಹೊಂದಿದೆ.

ಇನ್ನು ಕನಿಷ್ಠ ಆತ್ಮಹತ್ಯಾ ದರದ ಟಾಪ್‌ 10 ಪಟ್ಟಿಯಲ್ಲಿ ಬಿಹಾರ ನಂ.1 (ಶೇಕಡ 0.7) ಸ್ಥಾನದಲ್ಲಿದೆ. ಮಣಿಪುರ ಶೇಕಡ 1.5, ಉತ್ತರ ಪ್ರದೇಶ ಶೇಕಡ 1.5, ನಾಗಾಲ್ಯಾಂಡ್‌ ಶೇಕಡ 1.8, ಜಮ್ಮು ಮತ್ತು ಕಾಶ್ಮೀರ ಶೇಕಡ 2, ಲಡಾಖ್‌ ಶೇಕಡ 3.7, ಜಾರ್ಖಂಡ್‌ ಶೇಕಡ 4.7, ಮೇಘಾಲಯ ಶೇಕಡ 6.3, ರಾಜಸ್ಥಾನ ಶೇಕಡ 6.9, ಉತ್ತರಾಖಂಡ ಶೇಕಡ 7 ಆತ್ಮಹತ್ಯಾ ದರ ಹೊಂದಿವೆ.

----------------------------------------------------------------

World Suicide Prevention Day 2022 (WSPD 2022): ಇಂದು ವಿಶ್ವ ಆತ್ಮಹತ್ಯೆ ತಡೆ ದಿನ."ಕ್ರಿಯೆಯ ಮೂಲಕ ಭರವಸೆ ಮೂಡಿಸಿ" (Creating Hope Through Action) ಎಂಬುದು ಥೀಮ್‌. ಈ ಕುರಿತ ವಿಚಾರವನ್ನು HTಕನ್ನಡದ ಜತೆಗೆ ಶೇರ್‌ ಮಾಡಿದ್ದಾರೆ ಬೆಂಗಳೂರಿನ ESIC MH MC ಪಿಜಿಐಎಂಎಸ್‌ಆರ್‌ನ ಸೈಕ್ಯಾಟ್ರಿ ವಿಭಾಗದ ಸೀನಿಯರ್‌ ಸ್ಪೆಷಲಿಸ್ಟ್‌ ಡಾ.ಧನಂಜಯ ಎಸ್‌. - WSPD 2022: ಪ್ರಾಣ ತ್ಯಜಿಸದಂತೆ ಸೀತೇನ ತಡೆದಿದ್ದ ಹನುಮ; ನೀವೂ ಆಗಿ ಸೂಸೈಡ್‌ ಗೇಟ್‌ ಕೀಪರ್‌..

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

IPL_Entry_Point