Abhishek Ambareesh Birthday: ಬರ್ತ್‌ಡೇ ಸಂಭ್ರಮದಲ್ಲಿ ಯಂಗ್ ರೆಬೆಲ್ ಸ್ಟಾರ್...ನಾಲ್ಕನೇ ಚಿತ್ರದ ಪೋಸ್ಟರ್ ರಿಲೀಸ್
- ಕನ್ನಡ ಚಿತ್ರರಂಗದ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್‌ಗೆ ಇಂದು ಜನ್ಮದಿನದ ಸಂಭ್ರಮ. ಅಭಿಮಾನಿಗಳು ರೆಬಲ್ ಸ್ಟಾರ್ ಮನೆ ಮುಂದೆ ಜಮಾಯಿಸಿ ಅಭಿಷೇಕ್‌ಗೆ ಹುಟ್ಟುಹಬ್ಬದ ಶುಭ ಕೋರಲು ಕಾಯುತ್ತಿದ್ದಾರೆ.
- ಕನ್ನಡ ಚಿತ್ರರಂಗದ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್‌ಗೆ ಇಂದು ಜನ್ಮದಿನದ ಸಂಭ್ರಮ. ಅಭಿಮಾನಿಗಳು ರೆಬಲ್ ಸ್ಟಾರ್ ಮನೆ ಮುಂದೆ ಜಮಾಯಿಸಿ ಅಭಿಷೇಕ್‌ಗೆ ಹುಟ್ಟುಹಬ್ಬದ ಶುಭ ಕೋರಲು ಕಾಯುತ್ತಿದ್ದಾರೆ.
(1 / 10)
ಸೋಷಿಯಲ್ ಮೀಡಿಯಾ ಮೂಲಕವೂ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಅಭಿಷೇಕ್‌ಗೆ ಶುಭಾಶಯ ತಿಳಿಸುತ್ತಿದ್ದಾರೆ. (PC: Abhishek Ambareesh Army Facebook)
(3 / 10)
ತಂದೆ ಅಂಬರೀಶ್ ಹಾಗೂ ತಾಯಿ ಸುಮಲತಾ ಇಬ್ಬರೂ ಚಿತ್ರರಂಗದಲ್ಲಿ ಇದ್ದಿದ್ದರಿಂದ ಅಭಿಷೇಕ್ ಬಾಲ್ಯದಿಂದಲೂ ಚಿತ್ರರಂಗದ ನಂಟಿನೊಂದಿಗೆ ಬೆಳೆದರು. (PC: Abhishek Ambareesh Army Facebook)
(4 / 10)
ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಭಿಷೇಕ್ ಲಂಡನ್‌ನ ವೆಸ್ಟ್ ಮಿನಿಸ್ಟರ್ ವಿವಿಯಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದರು(PC: Abhishek Ambareesh Army Facebook)
(5 / 10)
ವಿದ್ಯಾಭ್ಯಾಸದ ನಂತರ ನಟನೆಯತ್ತ ಆಕರ್ಷಿತರಾದ ಅಭಿಷೇಕ್, 'ಅಮರ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. (PC: Abhishek Ambareesh Army Facebook)
(6 / 10)
ನಾಗಶೇಖರ್ ನಿರ್ದೇಶನದ 'ಅಮರ್' ಸಿನಿಮಾ 2019 ರಲ್ಲಿ ತೆರೆ ಕಂಡಿತು. ಮೊದಲ ಚಿತ್ರದಲ್ಲೇ ಅಭಿಷೇಕ್ ಸಿನಿಪ್ರಿಯರ ಮೆಚ್ಚುಗೆ ಗಳಿಸಿದರು. ( PC: Abhishek Ambareesh Army Facebook)
(7 / 10)
'ಅಮರ್' ನಂತರ ಅಭಿಷೇಕ್ 'ಬ್ಯಾಡ್ ಮ್ಯಾನರ್ಸ್' ಚಿತ್ರವನ್ನು ಘೋಷಿಸಿದರು. ಈ ಸಿನಿಮಾ ಶೀಘ್ರದಲ್ಲೆ ಬಿಡುಗಡೆಯಾಗಲಿದೆ. ( PC: Abhishek Ambareesh Army Facebook)
(8 / 10)
ಇಂದು ಅಭಿಷೇಕ್ ಹುಟ್ಟುಹಬ್ಬದ ವಿಶೇಷವಾಗಿ 'ಬ್ಯಾಡ್ ಮ್ಯಾನರ್ಸ್' ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ( PC: Abhishek Ambareesh Army Facebook)
(9 / 10)
'ಕಾಳಿ' ಎಂಬ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ನಟಿಸುತ್ತಿದ್ದಾರೆ. ಇದು ಅವರ ಮೂರನೇ ಸಿನಿಮಾವಾಗಿದೆ. ಈ ಚಿತ್ರವನ್ನು ಸ್ವಪ್ನಕೃಷ್ಣ ನಿರ್ಮಿಸುತ್ತಿದ್ದಾರೆ. ಪೈಲ್ವಾನ್ ನಿರ್ದೇಶಕ ಕೃಷ್ಣ ನಿರ್ದೇಶಿಸುತ್ತಿದ್ದಾರೆ.(Pc: ಕೃಷ್ಣ / Krishna Facebook)
ಇತರ ಗ್ಯಾಲರಿಗಳು