Adani vs. Ambani: ಮತ್ತೆ ಅದಾನಿ, ಅಂಬಾನಿ ಮುಖಾಮುಖಿ, ಈ ಬಾರಿ ಗೆಲುವು ಯಾರಿಗೆ?
- ರಿಲಯೆನ್ಸ್ ಇಂಡಸ್ಟ್ರೀಸ್ ನೇತೃತ್ವದ ಮುಕೇಶ್ ಅಂಬಾನಿ ಮತ್ತು ಅದಾನಿ ಪವರ್‌ನ ಗೌತಮ್ ಅದಾನಿ ನಡುವೆ ಮತ್ತೊಂದು ಕದನ ಆರಂಭವಾಗಿದೆ. ಲ್ಯಾನ್ಕೊ ಅಮರ್‌ಕಂಟಕ್ ಪವರ್ ಸ್ವಾಧೀನಪಡಿಸಿಕೊಳ್ಳುವ ಸಲುವಾಗಿ ಇವರು ಮತ್ತೆ ಮುಖಾಮುಖಿಯಾಗಲಿದ್ದಾರೆ.
- ರಿಲಯೆನ್ಸ್ ಇಂಡಸ್ಟ್ರೀಸ್ ನೇತೃತ್ವದ ಮುಕೇಶ್ ಅಂಬಾನಿ ಮತ್ತು ಅದಾನಿ ಪವರ್‌ನ ಗೌತಮ್ ಅದಾನಿ ನಡುವೆ ಮತ್ತೊಂದು ಕದನ ಆರಂಭವಾಗಿದೆ. ಲ್ಯಾನ್ಕೊ ಅಮರ್‌ಕಂಟಕ್ ಪವರ್ ಸ್ವಾಧೀನಪಡಿಸಿಕೊಳ್ಳುವ ಸಲುವಾಗಿ ಇವರು ಮತ್ತೆ ಮುಖಾಮುಖಿಯಾಗಲಿದ್ದಾರೆ.
(1 / 5)
ಇದು ದೇಶದ ಅಗ್ರ ಶ್ರೀಮಂತ ಮತ್ತು ದೇಶದ ಎರಡನೇ ಅಗ್ರ ಶ್ರೀಮಂತನ ನಡುವೆ ನಡೆಯುವ ಮುಖಾಮುಖಿ ವ್ಯಾಪಾರ ಇದಾಗಿದೆ. ನವೆಂಬರ್ 25ರಂದು ಥರ್ಮಲ್ ಪವರ್ ಕಂಪನಿಯಾದ ಲ್ಯಾಂಕೊ ಅಮರ್‌ಕಂಟಕ್ ಸ್ವಾಧೀನಕ್ಕಾಗಿ ಹರಾಜು ನಡೆಯಲಿದೆ.(Reuters)
(2 / 5)
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಮತ್ತು ಅದಾನಿ ಪವರ್ ಈ ಹರಾಜಿನಲ್ಲಿ ಭಾಗವಹಿಸಲಿವೆ. ಲ್ಯಾಂಕೊ ಅಮರ್‌ಕಂಟಕ್ ಈಗ ದಿವಾಳಿತನ ಎದುರಿಸುತ್ತಿದೆ.(Twitter)
(3 / 5)
ಈ ರೀತಿ ಇವೆರಡು ಕಂಪನಿಗಳು ಮುಖಾಮುಖಿಯಾಗುವುದು ಇದು ಮೊದಲಲ್ಲ. ಇವೆರಡು ಕಂಪನಿಗಳು ಮಾತ್ರವಲ್ಲದೆ ಪವರ್ ಫೈನಾನ್ಸ್ ಕಾರ್ಪೊರೇಷನ್, ರೆಕ್ ಲಮಿಟೆಡ್ ಸೇರಿದಂತೆ ಮೂರು ಇತರೆ ಕಂಪನಿಗಳೂ ಹರಾಜಿನಲ್ಲಿ ಪಾಲ್ಗೊಳ್ಳಲಿವೆ.(ANI)
(4 / 5)
ಎಲ್ಲಾದರೂ ಈ ಹರಾಜಿನಲ್ಲಿ ರಿಲಯೆನ್ಸ್ ಗೆಲುವು ಪಡೆದರೆ ಕಂಪನಿಯು ಥರ್ಮಲ್ ಪವರ್ ವಲಯಕ್ಕೆ ಪ್ರವೇಶಿಸಿದಂತೆ ಆಗುತ್ತದೆ. ಈ ಕ್ಷೇತ್ರದಲ್ಲಿ ಅದಾನಿ ಪವರ್ ಈಗಾಗಲೇ ಇದೆ.(Reuters)
ಇತರ ಗ್ಯಾಲರಿಗಳು