Asian Games: 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಗೆದ್ದ ಪಾರುಲ್ ಚೌಧರಿ, ಪ್ರೀತಿಗೆ ಕಂಚು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Asian Games: 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಗೆದ್ದ ಪಾರುಲ್ ಚೌಧರಿ, ಪ್ರೀತಿಗೆ ಕಂಚು

Asian Games: 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಗೆದ್ದ ಪಾರುಲ್ ಚೌಧರಿ, ಪ್ರೀತಿಗೆ ಕಂಚು

  • ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಪದಕ ಬೇಟೆ ಮುಂದುವರೆಸಿದ್ದಾರೆ. ಮಹಿಳೆಯರ 3,000 ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಭಾರತಕ್ಕೆ ಎರಡು ಪದಕಗಳು ಒಲಿದಿವೆ. ಪಾರುಲ್ ಚೌಧರಿ ಬೆಳ್ಳಿ ಗೆದ್ದರೆ, ಪ್ರೀತಿ ಕಂಚು ಜಯಿಸಿದರು.

ಸೋಮವಾರ ನಡೆದ ಏಷ್ಯನ್ ಗೇಮ್ಸ್‌ನ ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಭಾರತ ಎರಡು ಪದಕಗಳನ್ನು ಗೆದ್ದಿದೆ. ಪಾರುಲ್ ಚೌಧರಿ ರಜತ ಪದಕ ಗೆದ್ದರೆ, ಪ್ರೀತಿ ಕಂಚಿನ ಪದಕದ ಸಾಧನೆ ಮಾಡಿದರು.
icon

(1 / 5)

ಬಹ್ರೇನ್‌ನ ವಿಶ್ವ ಚಾಂಪಿಯನ್ ವಿನ್‌ಫ್ರೆಡ್ ಯಾವಿ ಚಿನ್ನದ ಪದಕ ಗೆದ್ದರು. ಜೊತೆಗೆ ಏಷ್ಯನ್ ಗೇಮ್ಸ್ ದಾಖಲೆಯನ್ನು ಸಹ ಮುರಿದರು.  
icon

(2 / 5)

ಚಿನ್ನದ ಪದಕ ಗೆದ್ದ ಬಹ್ರೇನ್‌ನ ವಿಶ್ವ ಚಾಂಪಿಯನ್ ವಿನ್‌ಫ್ರೆಡ್ ಯಾವಿ, 9:18.28 ಸಮಯವನ್ನು ದಾಖಲಿಸಿದರೆ, ಪಾರುಲ್ 9:27.63ರಲ್ಲಿ ಗುರಿ ತಲುಪಿ ನೂತನ ವೈಯಕ್ತಿಕ ದಾಖಲೆ ಮಾಡಿದರು.
icon

(3 / 5)

ಮತ್ತೊಂದೆಡೆ ಬಹ್ರೇನ್‌ನ ಗೆಟ್ನೆಟ್ ಮೆಕೊನ್ನೆನ್ ವಿರುದ್ಧ ಪ್ರೀತಿಗೆ ಇದು ಬಹುತೇಕ ಫೋಟೋ ಫಿನಿಶ್ ಆಗಿತ್ತು. ಆದರೆ, 9:43.32ರಲ್ಲಿ ಗುರಿ ತಲುಪಿ ಕಂಚಿನ ಪದಕದೊಂದಿಗೆ ನೂತನ ವೈಯಕ್ತಿಕ ಅತ್ಯುತ್ತಮ ದಾಖಲೆ ನಿರ್ಮಿಸಿದರು.
icon

(4 / 5)

ಈ ಎರಡು ಗೆಲುವುಗಳೊಂದಿಗೆ ಅಥ್ಲೆಟಿಕ್ಸ್‌ನಲ್ಲಿ ಭಾರತದ ಪದಕ ಸಂಖ್ಯೆ 14ಕ್ಕೆ ಏರಿದೆ. ಮಹಿಳೆಯರ ಶಾಟ್‌ಪುಟ್‌ನಲ್ಲಿ ಕಂಚು ಗಲ್ಲುವ ಮೂಲಕ, ಭಾರತದ ಕಿರಣ್ ಬಲಿಯಾನ್ ಹ್ಯಾಂಗ್‌ಝೌನಲ್ಲಿ ಪದಕ ಗೆದ್ದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆದರು.
icon

(5 / 5)

ಇತರ ಗ್ಯಾಲರಿಗಳು