ಬಸವ ಜಯಂತಿ 2024; ಬಸವಣ್ಣನವರ ಶ್ರೇಷ್ಠ ವಚನಗಳೊಂದಿಗೆ ಶುಭಾಶಯ ಹೇಳೋಣ; ಇಲ್ಲಿವೆ ಆಯ್ದ 5 ವಚನಗಳನ್ನು ಒಳಗೊಂಡ ಶುಭಾಶಯಗಳು
ನಾಡಿನ ಉದ್ದಗಲಕ್ಕೂ ಇಂದು ಬಸವ ಜಯಂತಿ (Basava Jayanti 2024) ಆಚರಣೆಯ ಸಂಭ್ರಮ. ಮಹಾನ್ ಮಾನವತಾವಾದಿಯಾಗಿದ್ದ ಬಸವಣ್ಣನವರನ್ನು ಸ್ಮರಿಸುತ್ತ ಅವರ ಜೀವನಾದರ್ಶನಗಳನ್ನು ಪಾಲಿಸಲು ಪ್ರೇರಣೆ ಪಡೆಯುವ ದಿನ. ಬಸವಣ್ಣನವರ ಶ್ರೇಷ್ಠ ವಚನಗಳೊಂದಿಗೆ ಶುಭಾಶಯ ಹೇಳೋಣ. ಇಲ್ಲಿವೆ ಆಯ್ದ 5 ವಚನಗಳನ್ನು ಒಳಗೊಂಡ ಶುಭಾಶಯಗಳು, ಶೇರ್ ಮಾಡಿ ಶುಭ ಹಾರೈಸೋಣ.
(1 / 5)
ಬಸವ ಜಯಂತಿ 2024: ತನ್ನ ವಿಚಾರಿಸಲೊಲ್ಲದುಇದಿರ ವಿಚಾರಿಸ ಹೋಹುದೀ ಮನವು.ಏನು ಮಾಡುವೆನೀ ಮನವನು:ಎಂತು ಮಾಡುವೆನೀ ಮನವನು-ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಬೆಂದ ಮನವನು?ಬಸವ ಜಯಂತಿಯ ಶುಭಾಶಯಗಳು
(2 / 5)
ಬಸವ ಜಯಂತಿ 2024: ಒಂದು ಮೊಲಕ್ಕೆ ನಾಯನೊಂಬತ್ತ ಬಿಟ್ಟಂತೆಎನ್ನ ಬಿಡು, ತನ್ನ ಬಿಡೆಂಬುದು ಕಾಯವಿಕಾರ;ಎನ್ನ ಬಿಡು, ತನ್ನ ಬಿಡೆಂಬುದು ಮನೋವಿಕಾರ.ಕರಣೇಂದ್ರಿಯಗಳೆಂಬ ಸೊಣಗ ಮುಟ್ಟದ ಮುನ್ನಮನ ನಿಮ್ಮನೆಯ್ದುಗೆ ಕೂಡಲಸಂಗಮದೇವ.ಬಸವ ಜಯಂತಿಯ ಶುಭಾಶಯಗಳು
(3 / 5)
ಬಸವ ಜಯಂತಿ 2024: ವಚನದ ಹುಸಿ-ನುಸುಳೆಂತು ಮಾಬುದೆನ್ನ ?ಮನದ ಮರ್ಕಟತನವೆಂತು ಮಾಬುದೆನ್ನ ?ಹೃದಯದ ಕಲ್ಮಷವೆಂತು ಮಾಬುದೆನ್ನ ?ಕಾಯವಿಕಾರಕ್ಕೆ ತರಿಸಲುವೋದೆನು!ಎನಗಿದು ವಿಧಿಯೇ, ಕೂಡಲಸಂಗಮದೇವ ?ಬಸವ ಜಯಂತಿಯ ಶುಭಾಶಯಗಳು
(4 / 5)
ಬಸವ ಜಯಂತಿ 2024: ತನ್ನಿಚ್ಛೆಯ ನುಡಿದರೆ ಮೆಚ್ಚುವುದೀ ಮನವು.ಇದಿರಿಚ್ಛೆಯ ನುಡಿದರೆ ಮೆಚ್ಚದೀ ಮನವುಕೂಡಲಸಂಗನ ಶರಣರ ನಚ್ಚದ ಮೆಚ್ಚದ ಮನವನುಕಿಚ್ಚಿನೊಳಿಕ್ಕುವೆನು.ಬಸವ ಜಯಂತಿಯ ಶುಭಾಶಯಗಳು
(5 / 5)
ಬಸವ ಜಯಂತಿ 2024: ಸುಡಲೀ ಮನವೆನ್ನ (ಮುಡುಬನ) ಮಾಡಿತ್ತು ನಡೆವಲ್ಲಿ;ನುಡಿವಲ್ಲಿ ಅಧಿಕನೆಂದೆನಿಸಿತ್ತು.ಬೆಡಗಿನ ಕೀಲು ಕಳೆದು, ಕೆಡೆದ ಬಳಿಕ,ಕಡುಗೂಪ ಮಡದಿ ತಾ ಮುಟ್ಟಲಮ್ಮಳು;ಒಡಲನುರಿಗೊಂಬುದು: ಒಡವೆಯನರಸು ಕೊಂಬ;ಕಡುಗೂಪ ಮಡದಿಯ ಮತ್ತೊಬ್ಬ ಚೆನ್ನಿಗ ಕೊಂಬ.ಮುನ್ನ ಮಾಡಿದ ಪಾಪ ತನ್ನ ಬೆನ್ನ ಬಿಡದನ್ನಕಇನ್ನು ಬಯಸಿದರೊಳವೆ ಕೂಡಲಸಂಗಮದೇವ ?ಬಸವ ಜಯಂತಿಯ ಶುಭಾಶಯಗಳು
ಇತರ ಗ್ಯಾಲರಿಗಳು