Ganesha Temples Karnataka; ಗಣೇಶ ಹಬ್ಬದ ವೇಳೆ ಭೇಟಿ ನೀಡಬಹುದಾದ ಕರ್ನಾಟಕದ 9 ಪ್ರಮುಖ ಗಣಪತಿ ದೇವಾಲಯಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ganesha Temples Karnataka; ಗಣೇಶ ಹಬ್ಬದ ವೇಳೆ ಭೇಟಿ ನೀಡಬಹುದಾದ ಕರ್ನಾಟಕದ 9 ಪ್ರಮುಖ ಗಣಪತಿ ದೇವಾಲಯಗಳಿವು

Ganesha Temples Karnataka; ಗಣೇಶ ಹಬ್ಬದ ವೇಳೆ ಭೇಟಿ ನೀಡಬಹುದಾದ ಕರ್ನಾಟಕದ 9 ಪ್ರಮುಖ ಗಣಪತಿ ದೇವಾಲಯಗಳಿವು

Ganesha Temples in Karnataka; ಗೌರಿ ಗಣೇಶ ಹಬ್ಬ ಹತ್ತಿರದಲ್ಲೇ ಇದೆ. ವಾರಾಂತ್ಯವಾದ ಕಾರಣ ರಜೆಗಳೂ ಇವೆ. ಕರ್ನಾಟಕದ ಗಣಪತಿ ದೇವಾಲಯಗಳಿಗೆ ಹೋಗುವ ಯೋಜನೆ ಇದ್ದರೆ, ನೀವು ಗಣೇಶ ಹಬ್ಬದ ವೇಳೆ ಭೇಟಿ ನೀಡಬಹುದಾದ ಕರ್ನಾಟಕದ 9 ಪ್ರಮುಖ ಗಣಪತಿ ದೇವಾಲಯಗಳಿವು-ಕಿರು ಚಿತ್ರನೋಟ.

ಕರ್ನಾಟಕ ಗಣಪತಿ ದೇವಸ್ಥಾನ ಎಂದಾಗ ಬಹುತೇಕರಿಗೆ ಮೊದಲು ನೆನಪಿಗೆ ಬರುವ ದೇವಸ್ಥಾನ ಗೋಕರ್ಣ ಗಣಪತಿ. ಪುರಾಣ ಕಥೆಗಳ ಮೂಲಕ ಜನಜನಿತವಾಗಿರುವ ಈ ಗಣಪತಿಯ ದೇವಸ್ಥಾನ ಅತ್ಯಂತ ಪುರಾತನವಾದುದು. 4ನೇ ಶತಮಾನದ ಮೂರ್ತಿ ಇದಾಗಿದ್ದು, ಕದಂಬರ ಕಾಲದ ನಿಂತ ಶೈಲಿಯ ಗಣಪನ ವಿಗ್ರಹ ಇದು.ಇದೇ ರೂಪದ ಗಣಪತಿ ಇಡಗುಂಜಿಯಲ್ಲೂ ಕಾಣಬಹುದು. ಈ ಚೌತಿ ಸಂದರ್ಭದಲ್ಲಿ ಗೋಕರ್ಣ ಹೋಗುವ ಯೋಜನೆ ಇದ್ದರೆ ಖಚಿತವಾಗಿ ಇಲ್ಲಿಗೆ ಭೇಟಿ ನೀಡಬಹುದು. 
icon

(1 / 9)

ಕುಂದಾಪುರ ಸಮೀಪದ ಆನೆಯಾಕಾರದ ಬೆಟ್ಟದ ಮೇಲೆ ಇರುವ ದೇವಸ್ಥಾನ ಇದು. ಹೀಗಾಗಿ ಆನುಗುಡ್ಡೆ ಗಣಪತಿ ಎಂಬ ಹೆಸರು. ಇಲ್ಲಿ ಎಳನೀರು ಅಭಿಷೇಕ ವಿಶೇಷ. ಪುರಾಣ ಕಥೆ ಪ್ರಕಾರ ಇಲ್ಲಿ ಕುಂಭಾಸುರ ಎಂಬ ರಾಕ್ಷಸನ ವಧೆ ಆಗಿದ್ದು, ಕುಂಭಾಶಿ ಎಂಬ ಹೆಸರೂ ಇದೆ. ಹೀಗಾಗಿ ಕುಂಭಾಶಿ ಗಣಪತಿ ಎಂದೂ ಪ್ರಸಿದ್ಧ.
icon

(2 / 9)

ಉಡುಪಿ ಕೇಂದ್ರ ಸ್ಥಾನದಿಂದ 30 ಕಿ.ಮೀ. ದೂರದಲ್ಲಿದೆ ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನ. ಇಲ್ಲಿ ಗಣಪತಿ ಸ್ವಯಂಭೂ. ಅಂದರೆ, ಬೃಹತ್‌ ಬಂಡೆಯಲ್ಲಿಮೂಡಿದ ಕಾಲು ಮಡಿಚಿ ಕುಳಿತಿರುವ ಮೂರ್ತಿ. ವಿಗ್ರಹವನ್ನು ಯಾರೂ ಕೆತ್ತಿಲ್ಲ.ಈ ಪ್ರಕೃತಿ ನಿರ್ಮಿತ ಮೂರ್ತಿ ಕಂಠ ಮಟ್ಟ ನೀರಿನಲ್ಲಿ ಮುಳುಗಿದೆ. ತಾಮ್ರದ ಬಟ್ಟಲಿನಿಂದ ನೀರನ್ನು ಹೊರ ಹಾಕಿ ಪಂಚಾಮೃತ ಹಾಗು ವಿವಿಧ ಪೂಜೆಗಳನ್ನು ನೆರೆವೇರಿಸಿದ ನಂತರ ಪುನಹ ಮರುದಿನ ಶಿಲ್ಪ ಜಲ ಸಮಾಧಿಯಾಗುವುದು ವಿಶೇಷ. 
icon

(3 / 9)

ಕುಂದಾಪುರ ಸಮೀಪದ ಇನ್ನೊಂದು ಗಣಪತಿ ಕ್ಷೇತ್ರ ಹಟ್ಟಿಯಂಗಡಿ ಗಣೇಶನದ್ದು. ಅಲ್ಲಿ ಗಣಪತಿ ಕುಳಿತ ವಿಶಿಷ್ಟ ಭಂಗಿಯಲ್ಲಿದ್ದು, ಎರಡೇ ಕೈಗಳಿರುವುದು. ಗೋಕರ್ಣ ಮತ್ತು ಉಳಿದ ಕ್ಷೇತ್ರಗಳಲ್ಲಿ ನಾಲ್ಕು ಕೈಗಳ ಗಣಪತಿ ಇರುವಂಥದ್ದು. ವಿಶೇಷ ಎಂದರೆ ದ್ವಿಭುಜ ಗಣಪತಿ ಕ್ಷಿಪ್ರ ಫಲದಾಯಕ ಎಂಬುದು ಆಸ್ತಿಕರ ನಂಬಿಕೆ. 
icon

(4 / 9)

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಗಣಪತಿ ಕ್ಷೇತ್ರಗಳ ಪೈಕಿ ಸೌತಡ್ಕ ಗಣಪತಿ ಪ್ರಮುಖವಾದುದು. ಇದು ಬಯಲು ಆಲಯ. ಬೆಳ್ತಂಗಡಿ ತಾಲೂಕಿನಲ್ಲಿದ್ದು, ಧರ್ಮಸ್ಥಳಕ್ಕೆ ಹತ್ತಿರದಲ್ಲಿದೆ. ಅಂದಾಜು 800 ವರ್ಷಗಳ ಇತಿಹಾಸ ಇರುವ ದೇವಸ್ಥಾನದಲ್ಲಿ ಭಕ್ತರು ಗಣಪತಿಗೆ ಗಂಟೆ ಹರಕೆ ಒಪ್ಪಿಸುವುದು ವಾಡಿಕೆ. ಸೌತೆಕಾಯಿ ಹೇರಳವಾಗಿ ಬೆಳೆಯತ್ತಿದ್ದ ಪ್ರದೇಶ ಇದಾಗಿದ್ದು, ಸೌತಡ್ಕ ಹೆಸರು ಚಾಲ್ತಿಗೆ ಬಂದಿದೆ. ಶತ್ರುಗಳು ದೇವಾಲಯ ನಾಶ ಮಾಡುವ ಸಂದರ್ಭದಲ್ಲಿ ಗೋಪಾಲಕರು ಗಣಪತಿಯನ್ನು ತಂದು ಇಲ್ಲಿ ಕೂರಿಸಿದ್ದಾಗಿ ಐತಿಹ್ಯ.  
icon

(5 / 9)

ಶಿರಸಿಯಲ್ಲಿ ಮಾರಿಕಾಂಬ ದೇಗುಲದಂತೆಯೇ ಮಹಾಗಣಪತಿ ದೇವಸ್ಥಾನವೂ ಪ್ರಸಿದ್ಧವಾದುದು. ಇದು ಶಿರಸಿಯ ರಾಯರಪೇಟೆಯಲ್ಲಿದೆ. ಮೂರು ಕೂಡ ಬೃಹದಾಕಾರವಿದ್ದು 1.8 ಮೀಟರ್ ಎತ್ತರ, 1.6 ಮೀಟರ್ ಅಗಲವಿದೆ.
icon

(6 / 9)

ಬಯಲು ಸೀಮೆ ಭಾಗದ ಪ್ರಸಿದ್ಧ ಗಣಪತಿ ದೇವಸ್ಥಾನ ಇದು. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲೇ ಇರುವಂಥದ್ದು. ಇಲ್ಲಿ ಕೂಡ ದೊಡ್ಡ ಗಣಪತಿಯೇ ಇರುವಂಥದ್ದು. 1475ರಲ್ಲಿ ಹೊಳಲ್ಕೆರೆ ಪಾಳೇಗಾರರು ಸ್ಥಾಪಿಸಿದ ಮೂರ್ತಿ ಇದಾಗಿದ್ದು, ಸುಮಾರು 20 ಅಡಿ ಎತ್ತರ ಇದೆ. ಬಯಲು ಗಣಪತಿಯನ್ನು ಪಾಳೇಗಾರ ದೊಡ್ಡ ತಿಮ್ಮನಾಯಕ ಪ್ರತಿಷ್ಠಾಪಿಸಿದ ಎಂಬ ಉಲ್ಲೇಖವಿದೆ. ಈ ದೇವರನ್ನು ಪ್ರಸನ್ನಗಣಪತಿ ಎಂದೂ ಕರೆಯುತ್ತಾರೆ. 
icon

(7 / 9)

ಬೆಂಗಳೂರಿನ ಬಸವನಗುಡಿ ಕಡ್ಲೆಕಾಯಿ ಪರಿಷೆ ಆಗೋ ಜಾಗವೂ ಇದೇ. ಬುಲ್ ಟೆಂಪಲ್ ಅಂತಾನೇ ಫೇಮಸ್‌ ಈ ಜಾಗ. ಇಲ್ಲಿರುವುದೇ ಶ್ರೀ ದೊಡ್ಡಗಣಪತಿ ದೇವಸ್ಥಾನ. ಹೆಸರಿಗೆ ತಕ್ಕಂತೆ ದೊಡ್ಡ ಗಾತ್ರದ ದೇವರು. ಬರೋಬ್ಬರಿ 18 ಅಡಿ ಎತ್ತರ ಮತ್ತು 16 ಅಡಿ ಅಗಲ. 
icon

(8 / 9)

ಬೆಂಗಳೂರು ಸಮೀಪ ಇರುವ ಇನ್ನೊಂದು ಪ್ರಸಿದ್ಧ ಗಣಪತಿ ಕ್ಷೇತ್ರ ಕೋಲಾರ ಜಿಲ್ಲೆ ಮುಳುಬಾಗಿಲಿನದ್ದು. ಕುರುಡುಮಲೆ ಶ್ರೀ ವಿನಾಯಕಸ್ವಾಮಿ ದೇವಸ್ಥಾನ ಇದು. ವಿನಾಯಕನ ಮೂರ್ತಿ ರಾಮಾಯಣದ ಕಾಲದ್ದು ಎಂಬುದು ಸ್ಥಳೀಯರ ನಂಬಿಕೆ. ಗಣಪತಿ ಮೂರ್ತಿ ಅಂಕುಶ, ಪಾಶ ಮೋದಕ ಮತ್ತು ದಂತ ಹಿಡಿದಿರುವಂತಿದೆ. 13.5 ಅಡಿ ಎತ್ತರದ ಗಣಪತಿ ಮೂರ್ತಿ. ದೇವಾಲಯದ ವಿನ್ಯಾಸವನ್ನು ಎರಡು ವಿಭಿನ್ನ ಶೈಲಿಗಳಲ್ಲಿವೆ. ಪುರಾಣ ಕಥೆಗಳ ಪ್ರಕಾರ, ಪ್ರಸಿದ್ಧ ಶಿಲ್ಪಿಗಳಾದ ಜಕಣಾಚಾರಿ ಮತ್ತು ಅವರ ಪುತ್ರ ಡಕಣಾಚಾರಿ ಈ ಮೂರ್ತಿ ಕೆತ್ತಿದರು ಎಂಬ ಉಲ್ಲೇಖವಿದೆ. .ಈ ದೇವಸ್ಥಾನಕ್ಕೆ ಮುಳುಬಾಗಿಲಿನಿಂದ ಶ್ರೀನಿವಾಸಪುರ ರಸ್ತೆಯಲ್ಲಿಸುಮಾರು 8 ಕಿ ಮೀ ದೂರ. 
icon

(9 / 9)

ಇತರ ಗ್ಯಾಲರಿಗಳು