ಚಿತ್ರಗಳು: ಹೊಸ ಮಾರುತಿ ಡಿಜೈರ್ ಬಿಡುಗಡೆಯಾಯ್ತು, ದರ ಕಡಿಮೆ, ಡಿಸೈನ್ ಸೂಪರ್, ಎಂಜಿನ್ ಹೇಗಿದೆ, ಸ್ಥಳಾವಕಾಶ ಎಷ್ಟಿದೆ? ಇಲ್ಲಿದೆ ವಿವರ
- 2024 Maruti Suzuki Dzire launched: ಬಹುನಿರೀಕ್ಷಿತ ಮಾರುತಿ ಸುಜುಕಿ ಡಿಜೈರ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಹೊಸ ಡಿಜೈರ್ ದರವೆಷ್ಟು? ಫೀಚರ್‌ಗಳೇನಿದೆ? ಯಾವೆಲ್ಲ ಬಣ್ಣಗಳಲ್ಲಿ ಲಭ್ಯ, ಎಂಜಿನ್ ಹೇಗಿದೆ, ಸ್ಥಳಾವಕಾಶ ಎಷ್ಟಿದೆ? ಹೀಗೆ ನಿಮ್ಮಲ್ಲಿರಬಹುದಾದ ಹಲವು ಪ್ರಶ್ನೆಗಳಿಗೆ ಇಲ್ಲಿ ಚಿತ್ರ ಸಮೇತ ಉತ್ತರ ನೀಡಲಾಗಿದೆ.
- 2024 Maruti Suzuki Dzire launched: ಬಹುನಿರೀಕ್ಷಿತ ಮಾರುತಿ ಸುಜುಕಿ ಡಿಜೈರ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಹೊಸ ಡಿಜೈರ್ ದರವೆಷ್ಟು? ಫೀಚರ್‌ಗಳೇನಿದೆ? ಯಾವೆಲ್ಲ ಬಣ್ಣಗಳಲ್ಲಿ ಲಭ್ಯ, ಎಂಜಿನ್ ಹೇಗಿದೆ, ಸ್ಥಳಾವಕಾಶ ಎಷ್ಟಿದೆ? ಹೀಗೆ ನಿಮ್ಮಲ್ಲಿರಬಹುದಾದ ಹಲವು ಪ್ರಶ್ನೆಗಳಿಗೆ ಇಲ್ಲಿ ಚಿತ್ರ ಸಮೇತ ಉತ್ತರ ನೀಡಲಾಗಿದೆ.
(1 / 7)
2024 Maruti Suzuki Dzire launched: ಮಾರುತಿ ಸುಜುಕಿ ಕಂಪನಿಯ ಹೊಸ ಡಿಜೈರ್‌ಗಾಗಿ ಕಾಯುವಿಕೆ ಅಂತ್ಯವಾಗಿದೆ. ಕೊನೆಗೂ ದೇಶದ ಮಾರುಕಟ್ಟೆಗೆ ಹೊಸ ಡಿಜೈರ್ ಕಾರು ಹೊಸ ರೂಪದಲ್ಲಿ ಆಗಮಿಸಿದೆ. ಈ ಕಾರಿಗೆ ಈ ವರ್ಷದ ಡಿಸೆಂಬರ್‌ವರೆಗೆ ದರ ತುಸು ಕಡಿಮೆ ಇರಲಿದೆ. ಈ ಕಾರಿನ ಎಲ್ಲಾ ಆವೃತ್ತಿಗಳ ದರ, ತಾಂತ್ರಿಕ ವಿವರಗಳು ಸೇರಿದಂತೆ ಹೆಚ್ಚಿನ ವಿವರವನ್ನು ಇಲ್ಲಿ ನೀಡಲಾಗಿದೆ.
(2 / 7)
ನಾಲ್ಕನೇ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ ಬಿಡುಗಡೆಯಾಗಿದೆ. ಈ ಕಾರಿನ ಆರಂಭಿಕ ಎಕ್ಸ್ ಶೋರೂ ದರ 6.79 ಲಕ್ಷ ರೂ. ಇದೆ. ಇದು ಪರಿಚಯಾತ್ಮಕ ಮತ್ತು ಎಕ್ಸ್ ಶೋರೂಂ ದರ. ಡಿಸೆಂಬರ್ 31, 2024ರವರೆಗೆ ಮಾತ್ರ ಈ ದರ ಇರುತ್ತದೆ.
(3 / 7)
ಮ್ಯಾನುಯಲ್ ಗಿಯರ್‌ನ ಡಿಜೈರ್ ವಿಎಕ್ಸ್ಐ 7.79 ಲಕ್ಷ ರೂ., ಎಜಿಎಸ್ ಹೊಂದಿರುವ ವಿಎಕ್ಸ್ಐಗೆ 8.24 ಲಕ್ಷ ರೂ., ಮ್ಯಾನುಯಲ್ ಗಿಯರ್‌ನ ಝಡ್ಎಕ್ಸ್ಐ ದರ 8.89 ಲಕ್ಷ ರೂ. ಇದೆ. ಇದೇ ರೀತಿ, ಎಜಿಎಸ್ ಹೊಂದಿರುವ ಝಡ್ಎಕ್ಸ್ಐ ದರ 9.34 ಲಕ್ಷ ರೂ., ಎಂಟಿ ಝಡ್ಎಕ್ಸ್ಐ + ದರ 9.69 ಲಕ್ಷ ರೂ., ಎಜಿಎಸ್ ಹೊಂದಿರುವ ಝಡ್ಎಕ್ಸ್ಐ + ದರ 10.14 ಲಕ್ಷ ರೂ. ಇದೆ. ಇವೆಲ್ಲ ಈ ವರ್ಷದ ದರ.
(4 / 7)
2024ರ ಮಾರುತಿ ಸುಜುಕಿ ಡಿಜೈರ್ ಸಂಪೂರ್ಣವಾಗಿ ಹೊಸ ವಿನ್ಯಾಸವನ್ನು ಹೊಂದಿದೆ. ಇತ್ತೀಚಿನ ಸ್ವಿಫ್ಟ್ ಮಾದರಿಗೂ ಈ ಕಾರಿಗೂ ಯಾವುದೇ ಹೋಲಿಕೆ ಇಲ್ಲ. ಇದೇ ಮೊದಲ ಬಾರಿಗೆ ಸ್ವಿಫ್ಟ್ ಮತ್ತು ಡಿಜೈರ್‌ಎಂಬ ಎರಡು ಮಾದರಿಗಳ ವಿನ್ಯಾಸವನ್ನು ಪ್ರತ್ಯೇಕಿಸಲಾಗಿದೆ. ಮುಖದ ಮೇಲಿನ ಗ್ರಿಲ್, ತೆಳುವಾದ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಫಾಗ್‌ಲ್ಯಾಂಪ್‌ಗಳು ಸಂಪೂರ್ಣ ಹೊಸತು.
(5 / 7)
ಹಿಂಬದಿಯ ಟೈಲ್ ಲೈಟ್‌ಗಳನ್ನು ಸಹ ಬದಲಾಯಿಸಲಾಗಿದೆ. ಹಿಂಭಾಗದಲ್ಲಿ ಟ್ರಂಕ್ ಮುಚ್ಚಳದ ಮೇಲ್ಭಾಗದಲ್ಲಿ ನಯವಾದ ಲಿಪ್ ಸ್ಪಾಯ್ಲರ್ ಕೂಡ ಇದೆ. ಶಾರ್ಕ್-ಫಿನ್ ಆಂಟೆನಾ ಇದೆ. 15 ಇಂಚಿನ ಅಲಾಯ್ ವೀಲ್ ಕೂಡ ಗಮನ ಸೆಳೆಯುತ್ತದೆ.
(6 / 7)
2024 ರ ಮಾರುತಿ ಸುಜುಕಿ ಡಿಜೈರ್ ನ ಬೂಟ್ ಸ್ಪೇಸ್ 372 ಲೀಟರ್ ಇದೆ. ಹಿಂದಿನ ಮಾದರಿಯ 368 ಲೀಟರ್ ಸ್ಥಳಾವಕಾಶಕ್ಕೆ ಹೋಲಿಸಿದರೆ ಸ್ವಲ್ಪ ಹೆಚ್ಚಾಗಿದೆ.
(7 / 7)
ಹೊಸ ಮಾರುತಿ ಡಿಜೈರ್ 1.2-ಲೀಟರ್, ಮೂರು ಸಿಲಿಂಡರ್‌ನ ಪೆಟ್ರೋಲ್ ಎಂಜಿನ್ ಹೊಂದಿದೆ. ಇದೇ ಎಂಜಿನ್ 2024 ರ ಮೇ ತಿಂಗಳಲ್ಲಿ ಬಿಡುಗಡೆಯಾದ ಸ್ವಿಫ್ಟ್ ಕಾರಿನಲ್ಲೂ ಇದೆ. ಈ ಕಾರು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗಿಯರ್ ಬಾಕ್ಸ್‌ನಲ್ಲಿ ದೊರಕುತ್ತದೆ. ಕೆಂಪು, ನೀಲಿ ಮತ್ತು ಕಂದು ಎಂಬ ಮೂರು ಹೊಸ ಛಾಯೆಗಳೊಂದಿಗೆ ಅನೇಕ ಬಣ್ಣಗಳ ಆಯ್ಕೆಗಳಲ್ಲಿ ದೊರಕುತ್ತದೆ. ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯವಿಲ್ಲ.
ಇತರ ಗ್ಯಾಲರಿಗಳು