Bangalore Mysuru Highway: ಬೆಂಗಳೂರು ಮೈಸೂರು ಹೆದ್ದಾರಿ ಒಂದೇ ತಿಂಗಳಲ್ಲೇ 9 ಕೋಟಿ ರೂ. ದಂಡ ಪ್ರಯೋಗ,. ಬಿತ್ತು 1 .60 ಲಕ್ಷ ಪ್ರಕರಣ photo
- Karnataka Police ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ( Bangalore Mysore Highway) ವೇಗದ ಮಿತಿ ಹೇರಿದ ನಂತರವೂ ನಿಯಮ ಪಾಲಿಸದ ವಾಹನ ಸವಾರರ ಮೇಲೆ ಭಾರೀ ದಂಡವೇ ಬೀಳುತ್ತಿದೆ. ಇದರ ವಿವರ ಇಲ್ಲಿದೆ.
- Karnataka Police ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ( Bangalore Mysore Highway) ವೇಗದ ಮಿತಿ ಹೇರಿದ ನಂತರವೂ ನಿಯಮ ಪಾಲಿಸದ ವಾಹನ ಸವಾರರ ಮೇಲೆ ಭಾರೀ ದಂಡವೇ ಬೀಳುತ್ತಿದೆ. ಇದರ ವಿವರ ಇಲ್ಲಿದೆ.
(1 / 7)
ಬೆಂಗಳೂರಿನಿಂದ ಮೈಸೂರು ನಡುವೆ ಇರುವ 119 ಕಿ.ಮೀ. ಉದ್ದದ ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿವೇಗದ ಮಿತಿ ಗಂಟೆಗೆ 100 ಕಿ.ಮೀ. ನಿಗದಿಪಡಿಸಲಾಗಿದೆ. ಇದನ್ನು ಉಲ್ಲಂಘಿಸುವವರಿಗೆ ಮೂರು ಸಾವಿರ ರೂ. ವರೆಗೂ ದಂಡ ವಿಧಿಸಲಾಗುತ್ತಿದೆ.
(2 / 7)
ದಶ ಪಥ ನಿರ್ಮಾಣವಾದ ನಂತರ ಬೆಂಗಳೂರು–ಮೈಸೂರು ನಡುವಿನ ಪ್ರಯಾಣದ ಅವಧಿ 3 ಗಂಟೆಯಿಂದ ಸರಾಸರಿ 90 ನಿಮಿಷಕ್ಕೆ ಇಳಿದಿದೆ. ಹೀಗಿದ್ದರೂ ಮಿತಿಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುವುದರಿಂದ ಮಂಡ್ಯ, ರಾಮನಗರ ಭಾಗದಲ್ಲಿ ದಂಡ ವಿಧಿಸಲಾಗುತ್ತಿದೆ.
(3 / 7)
2024 ರ ಜೂನ್ 1ರಿಂದ 30ರವರೆಗೆ ಒಂದೇ ತಿಂಗಳಲ್ಲಿ 1,61,491 ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು, ಬರೋಬ್ಬರಿ ₹8.99 ಕೋಟಿ ದಂಡವನ್ನು ವಾಹನ ಸವಾರರ ಮೇಲೆ ವಿಧಿಸಲಾಗಿದೆ.
(4 / 7)
ಹೆದ್ದಾರಿಯಲ್ಲಿ ನಿಯಮ ಉಲ್ಲಂಘಿಸಿದ 9,003 ಪ್ರಕರಣಗಳಿಗೆ ಸಂಬಂಧಿಸಿ ₹48.23 ಲಕ್ಷ ದಂಡವಷ್ಟೇ ಸಂಗ್ರಹವಾಗಿದೆ. ಬಾಕಿ 1,52,488 ಪ್ರಕರಣಗಳ ₹8.51 ಕೋಟಿ ದಂಡವನ್ನು ವಾಹನ ಮಾಲೀಕರು ಪಾವತಿ ಮಾಡಿಲ್ಲ. ಇದಕ್ಕಾಗಿ ಪೊಲೀಸರು ಕ್ರಮ ವಹಿಸಿದ್ದಾರೆ.
(5 / 7)
ಸೀಟ್ ಬೆಲ್ಟ್ ಧರಿಸದಿದ್ದರೆ ಮತ್ತು ಪಥ ಶಿಸ್ತು ಉಲ್ಲಂಘನೆಗೆ ತಲಾ 500ರೂ., ಅತಿವೇಗಕ್ಕೆ 1,000 ರೂ. ಮತ್ತು ಚಾಲನೆ ವೇಳೆ ಮೊಬೈಲ್ ಬಳಕೆಗೆ 3,000 ರೂ. ದಂಡ ವಿಧಿಸಲಾಗುತ್ತಿದೆ. ಸೀಟ್ ಬೆಲ್ಟ್ ಧರಿಸದ ಪ್ರಕರಣಗಳೇ ಅತಿಹೆಚ್ಚು ಇರುವುದು ಕಂಡು ಬಂದಿದೆ.
(6 / 7)
ಕ್ಯಾಮರಾ ಕಣ್ಗಾವಲಿನಲ್ಲಿಯೇ ಬೆಂಗಳೂರು ಹಾಗೂ ಮೈಸೂರು ಹೆದ್ದಾರಿ ನಡುವೆ ತಪಾಸಣೆ ನಡೆದಿದೆ. ಇದನ್ನು ಜಾರಿಗೊಳಿಸಿದ ಎಡಿಜಿಪಿ ಅಲೋಕ್ ಕುಮಾರ್ ಅವರು ಆಗಾಗ ಮಾರ್ಗ ಮಧ್ಯೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸುತ್ತಾರೆ.
ಇತರ ಗ್ಯಾಲರಿಗಳು