Womens Day 2024: ಕರ್ನಾಟಕದಲ್ಲಿ 11 ಮಹಿಳಾ ಜಿಲ್ಲಾಧಿಕಾರಿಗಳ ಆಡಳಿತ, ಯಾವ ಜಿಲ್ಲೆಗಳಲ್ಲಿ ಯಾರು ಡಿಸಿ -Photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Womens Day 2024: ಕರ್ನಾಟಕದಲ್ಲಿ 11 ಮಹಿಳಾ ಜಿಲ್ಲಾಧಿಕಾರಿಗಳ ಆಡಳಿತ, ಯಾವ ಜಿಲ್ಲೆಗಳಲ್ಲಿ ಯಾರು ಡಿಸಿ -Photos

Womens Day 2024: ಕರ್ನಾಟಕದಲ್ಲಿ 11 ಮಹಿಳಾ ಜಿಲ್ಲಾಧಿಕಾರಿಗಳ ಆಡಳಿತ, ಯಾವ ಜಿಲ್ಲೆಗಳಲ್ಲಿ ಯಾರು ಡಿಸಿ -Photos

  • ಆಡಳಿತದಲ್ಲಿ ಜಿಲ್ಲಾಧಿಕಾರಿಗಳ ಪಾತ್ರ ದೊಡ್ಡದು. ಆಯಾ ಜಿಲ್ಲೆಯ ಆಡಳಿತದ ಮುಖ್ಯಸ್ಥರಾಗಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಡಿಸಿಗಳು ಮುಖ್ಯರಾಗುತ್ತಾರೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಅತಿ ಹೆಚ್ಚಿನ ಸಂಖ್ಯೆಯ ಮಹಿಳಾ ಐಎಎಸ್‌ ಅಧಿಕಾರಿಗಳು ಡಿಸಿ ಹೊಣೆ ಹೊತ್ತಿದ್ದಾರೆ. ಯಾವ ಜಿಲ್ಲೆ, ಯಾರು ಡಿಸಿ ಇದ್ದಾರೆ ಎನ್ನುವ ವಿವರ ಇಲ್ಲಿದೆ.

ಐಎಎಸ್‌ ಅಧಿಕಾರಿ ಫೌಜಿಯಾ ತರನ್ನುಮ್‌(Fouzia Tarannum) ಈಗ ಕಲಬುರಗಿ ಜಿಲ್ಲಾಧಿಕಾರಿ. ಬೆಂಗಳೂರು ಮೂಲದವರು. ಕೊಳ್ಳೇಗಾಲ, ಚಿಕ್ಕಬಳ್ಳಾಪುರ, ಕೊಪ್ಪಳದಲ್ಲಿ ಕೆಲಸ ಮಾಡಿದ ಅನುಭವವಿದೆ. 
icon

(1 / 11)

ಸುಭ ಕಲ್ಯಾಣ್‌( Subha Kalyan)  ಈ ಹಿಂದೆ ತುಮಕೂರು ಜಿಲ್ಲಾಪಂಚಾಯಿತಿ ಸಿಇಒ ಆಗಿ ಕೆಲಸ ಮಾಡಿದರು. ಈಗ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ತುಮಕೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
icon

(2 / 11)

ಹಾಸನ ಮೂಲದವರಾದ ಶಿಲ್ಪಾನಾಗ್‌( Shilpa Nag) ಮದುವೆಯಾದ ಬಳಿಕ ಯುಪಿಎಸ್‌ಸಿ ಪರೀಕ್ಷೆ ಎದುರಿಸಿ ಐಎಎಸ್‌ ಪಾಸಾದವರು. ಕುಂದಾಪುರ, ಹಾವೇರಿ, ಮೈಸೂರಿನಲ್ಲಿ ಕೆಲಸ ಮಾಡಿದವರು. ಈಗ ಚಾಮರಾಜನಗರ ಜಿಲ್ಲಾಧಿಕಾರಿ
icon

(3 / 11)

ತಮಿಳುನಾಡು ಮೂಲದವರಾದ ದಿವ್ಯಪ್ರಭು( Divya Prabhu) ಅವರು ಹಿಂದೆ ಐಎಫ್‌ಎಸ್‌ ಅಧಿಕಾರಿ ಕರ್ನಾಟಕ ಸೇವೆಯಲ್ಲಿದ್ದರು. ನಂತರ ಮತ್ತೆ ಪರೀಕ್ಷೆ ಎದುರಿಸಿ ಐಎಎಸ್‌ ಅಧಿಕಾರಿಯಾಗಿದ್ದರು. ಮಂಡ್ಯ, ಚಿತ್ರದುರ್ಗ ಬಳಿಕ ಈಗ ಧಾರವಾಡ ಡಿಸಿ.
icon

(4 / 11)

ಕರ್ನಾಟಕದವರೇ ಆದ ಡಾ.ಸುಶೀಲಾ( Susheela) ಅವರು ಸದ್ಯ ಯಾದಗಿರಿ ಜಿಲ್ಲಾಧಿಕಾರಿ. ಈ ಹಿಂದೆ ಧಾರವಾಡ, ಗದಗ ಸಹಿತ ಹಲವು ಕಡೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
icon

(5 / 11)

ದಕ್ಷಿಣ ಕನ್ನಡ ಜಿಲ್ಲೆಯವರಾದ ಡಾ.ಕೆ.ವಿದ್ಯಾಕುಮಾರಿ ಅವರು ಈಗ ಉಡುಪಿ ಡಿಸಿ. ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ಪಡೆದವರು. ಹುಣಸೂರು, ಮೈಸೂರು, ತುಮಕೂರು ಸಹಿತ ಹಲವು ಕಡೆ ಕೆಲಸ ಮಾಡಿ ಒಳ್ಳೆಯ ಹೆಸರು ಪಡೆದಿದ್ದಾರೆ. 
icon

(6 / 11)

ಎಂ.ಎಲ್‌.ವೈಶಾಲಿ ಗದಗ ಜಿಲ್ಲಾಧಿಕಾರಿ ಹಾಗೂ ಪ್ರಭಾರ ಜಿಲ್ಲಾಪಂಚಾಯಿತಿ ಸಿಇಒ, ಮಲೆನಾಡಿನವರಾದ ವೈಶಾಲಿ ಅವರು ಈ ಹಿಂದೆ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದಾರೆ. 
icon

(7 / 11)

ಹಾಸನ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ಪಡೆದವರು. ಈ ಹಿಂದೆ ಕೊಳ್ಳೆಗಾಲ, ಚಿತ್ರದುರ್ಗ  ಸಹಿತ ಹಲವು ಕಡೆ ಕೆಲಸ ಮಾಡಿದ್ದಾರೆ. 
icon

(8 / 11)

ವಿಜಯಪುರ ಜಿಲ್ಲೆಯವರಾದ ಗಂಗೂಬಾಯಿ ಮಾನಕರ ಅವರು ಈಗ ಉತ್ತರ ಕನ್ನಡ ಜಿಲ್ಲಾಧಿಕಾರಿ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಯಾಗಿ ಆನಂತರ ಬಾಗಲಕೋಟೆ, ಬೆಂಗಳುರು ಸಹಿತ ಹಲವು ಕಡೆ ಕೆಲಸ ಮಾಡಿದ್ದಾರೆ.
icon

(9 / 11)

ಹಾಸನ ಜಿಲ್ಲೆಯವರಾದ ಕೆ.ಎಂ.ಜಾನಕಿ ಕಾಲೇಜು ಶಿಕ್ಷಣ ಇಲಾಖೆಯಲ್ಲಿದ್ದವರು. ಪರಿಶ್ರಮದಿಂದ ಕೆಎಎಸ್‌ ಉತ್ತೀರ್ಣರಾಗಿ ಆನಂತರ ಐಎಎಸ್‌ಗೆ ಬಡ್ತಿ ಪಡೆದವರು. ದಾವಣಗೆರೆ, ಬೆಂಗಳೂರು, ಹಾಸನ ಸಹಿತ ಹಲವು ಕಡೆ ಕೆಲಸ ಮಾಡಿ ಈಗ ಬಾಗಲಕೋಟೆ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 
icon

(10 / 11)

ಮೀನಾ ನಾಗರಾಜ್‌ ಈಗ ಚಿಕ್ಕಮಗಳೂರು ಜಿಲ್ಲಾಧಿಕಾರಿ. ಈ ಹಿಂದೆ ಬೆಂಗಳೂರಿನ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
icon

(11 / 11)

ಇತರ ಗ್ಯಾಲರಿಗಳು