ಐಪಿಎಲ್ನಲ್ಲಿ ಅತಿ ವೇಗದ ಶತಕ ಸಿಡಿಸಿದ ಆಟಗಾರರು; ಕ್ರಿಸ್ ಗೇಲ್ ಬಳಿಕ ಸ್ಥಾನ ಪಡೆದವರು ಯಾರು?
- Fastest centuries in IPL History: ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಆದರೆ ಅದಕ್ಕೂ ಮುನ್ನ ಶ್ರೀಮಂತ ಲೀಗ್ನಲ್ಲಿ ಅತ್ಯಂತ ವೇಗವಾಗಿ ಶತಕ ಸಿಡಿಸಿದ ಆಟಗಾರರ ಯಾರು ಎಂಬುದನ್ನು ಈ ಮುಂದೆ ನೋಡೋಣ.
- Fastest centuries in IPL History: ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಆದರೆ ಅದಕ್ಕೂ ಮುನ್ನ ಶ್ರೀಮಂತ ಲೀಗ್ನಲ್ಲಿ ಅತ್ಯಂತ ವೇಗವಾಗಿ ಶತಕ ಸಿಡಿಸಿದ ಆಟಗಾರರ ಯಾರು ಎಂಬುದನ್ನು ಈ ಮುಂದೆ ನೋಡೋಣ.
(1 / 7)
ಕ್ರಿಸ್ ಗೇಲ್ ಐಪಿಎಲ್ನಲ್ಲಿ ಅತಿವೇಗದ ಶತಕ ಸಿಡಿಸಿದ ಆಟಗಾರ ಎನಿಸಿದ್ದಾರೆ. 2023ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 30 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದಾರೆ. ಅಂದು 66 ಎಸೆತಗಳಲ್ಲಿ 13 ಬೌಂಡರಿ, 17 ಸಿಕ್ಸರ್ ಸಹಿತ ಅಜೇಯ 175 ಸಿಡಿಸಿದ್ದರು.
(2 / 7)
2010ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಯೂಸುಫ್ ಪಠಾಣ್ ಅವರು ಮುಂಬೈ ಇಂಡಿಯನ್ಸ್ ವಿರುದ್ಧ 37 ಎಸೆತಗಳಲ್ಲಿ ನೂರರ ಗಡಿ ದಾಟಿದ್ದರು. ಆ ಇನ್ನಿಂಗ್ಸ್ನಲ್ಲಿ 9 ಬೌಂಡರಿ, 8 ಸಿಕ್ಸರ್ ಸಿಡಿಸಿದ್ದರು. ಆ ಪಂದ್ಯದಲ್ಲಿ ಮುಂಬೈ 4 ರನ್ಗಳ ಅಂತರದಿಂದ ಗೆದ್ದಿತ್ತು.
(3 / 7)
2013ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಇಂದಿನ ಪಂಜಾಬ್ ಕಿಂಗ್ಸ್) ಡೇವಿಡ್ ಮಿಲ್ಲರ್ ಅವರು ಆರ್ಸಿಬಿ ವಿರುದ್ಧ 38 ಎಸೆತಗಳಲ್ಲಿ ಅಜೇಯ ಶತಕ ಸಿಡಿಸಿದ್ದರು. ಅವರು 8 ಬೌಂಡರಿ, 7 ಸಿಕ್ಸರ್ ಸಿಡಿಸಿ ಪಂಜಾಬ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
(4 / 7)
2008ರಲ್ಲಿ ಡೆಕ್ಕನ್ ಚಾರ್ಜಸ್ ಪರ ಆ್ಯಡಂ ಗಿಲ್ಕ್ರಿಸ್ಟ್ ಅವರು 42 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಐಪಿಎಲ್ನಲ್ಲಿ ಅತಿ ವೇಗದ ಶತಕ ಸಿಡಿಸಿದ ಆಟಗಾರರ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಂದು ಮುಂಬೈ ಇಂಡಿಯನ್ಸ್ ವಿರುದ್ಧ 47 ಎಸೆತಗಳಲ್ಲಿ 10 ಸಿಕ್ಸರ್, 9 ಬೌಂಡರಿ ಸಹಿತ ಅಜೇಯ 109 ರನ್ ಗಳಿಸಿದ್ದರು.
(5 / 7)
2016ರಲ್ಲಿ ಆರ್ಸಿಬಿ ಪರ ಎಬಿ ಡಿವಿಲಿಯರ್ಸ್ 43 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಇದು ಐಪಿಎಲ್ನಲ್ಲಿ ದಾಖಲಾದ 5ನೇ ವೇಗದ ಶತಕವಾಗಿದೆ. ಅಂದು ಗುಜರಾತ್ ಲಯನ್ಸ್ ವಿರುದ್ಧ 10 ಬೌಂಡರಿ, 12 ಸಿಕ್ಸರ್ ಸಹಿತ ಅಜೇಯ 129 ರನ್ ಗಳಿಸಿದ್ದರು.
(6 / 7)
ಡೇವಿಡ್ ವಾರ್ನರ್ ಸಹ ವೇಗದ ಶತಕ ಸಿಡಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2017ರಲ್ಲಿ ವಾರ್ನರ್ ಕೆಕೆಆರ್ ವಿರುದ್ಧ 43 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಅಂದು 59 ಎಸೆತಗಳಲ್ಲಿ 10 ಬೌಂಡರಿ, 8 ಸಿಕ್ಸರ್ ಸಹಿತ 126 ರನ್ ಗಳಿಸಿದ್ದರು.
ಇತರ ಗ್ಯಾಲರಿಗಳು