ಬ್ಯೂಟಿಪಾರ್ಲರ್‌ಗೆ ಹೋಗದೆ ಮನೆಯಲ್ಲೇ ತ್ವಚೆಯ ಅಂದ ಹೆಚ್ಚಿಸಿ; ನೈಸರ್ಗಿಕ ಫೇಸ್‌ಪ್ಯಾಕ್ ಬಳಸಿ
- ತ್ವಚೆಯ ಅಂದ ಅರಳಲು ಫೇಷಿಯಲ್ ಅಥವಾ ಫೇಸ್‌ಪ್ಯಾಕ್‌ಗಳ ಸಹಕಾರಿ. ಇವು ಚರ್ಮದ ನಿರ್ಜೀವ ಕಣಗಳನ್ನು ತೊಡೆದು ಹಾಕಿ, ಮುಖಕ್ಕೆ ಹೊಳಪು ನೀಡುತ್ತವೆ. ಫೇಶಿಯಲ್ ಮಾಡಿಸಿ ಮುಖದ ಅಂದ ಹೆಚ್ಚಿಸಿಕೊಳ್ಳಲು ಪಾರ್ಲರ್‌ಗೆ ಹೋಗಬೇಕು ಎಂದೇನಿಲ್ಲ. ಮನೆಯಲ್ಲಿ ಸಿಗುವ ಹಣ್ಣುಗಳಿಂದಲೂ ಫೇಸ್‌ಪ್ಯಾಕ್ ತಯಾರಿಸಿ ಅಂದ ಹೆಚ್ಚಿಸಿಕೊಳ್ಳಬಹುದು.
- ತ್ವಚೆಯ ಅಂದ ಅರಳಲು ಫೇಷಿಯಲ್ ಅಥವಾ ಫೇಸ್‌ಪ್ಯಾಕ್‌ಗಳ ಸಹಕಾರಿ. ಇವು ಚರ್ಮದ ನಿರ್ಜೀವ ಕಣಗಳನ್ನು ತೊಡೆದು ಹಾಕಿ, ಮುಖಕ್ಕೆ ಹೊಳಪು ನೀಡುತ್ತವೆ. ಫೇಶಿಯಲ್ ಮಾಡಿಸಿ ಮುಖದ ಅಂದ ಹೆಚ್ಚಿಸಿಕೊಳ್ಳಲು ಪಾರ್ಲರ್‌ಗೆ ಹೋಗಬೇಕು ಎಂದೇನಿಲ್ಲ. ಮನೆಯಲ್ಲಿ ಸಿಗುವ ಹಣ್ಣುಗಳಿಂದಲೂ ಫೇಸ್‌ಪ್ಯಾಕ್ ತಯಾರಿಸಿ ಅಂದ ಹೆಚ್ಚಿಸಿಕೊಳ್ಳಬಹುದು.
(1 / 7)
ತರಕಾರಿ, ಹಣುಗಳಿಂದ ತಯಾರಿಸುವ ಫೇಸ್‌ಪ್ಯಾಕ್ ಚರ್ಮಕ್ಕೆ ಯಾವುದೇ ರೀತಿಯ ಹಾನಿಯುಂಟು ಮಾಡುವುದಿಲ್ಲ. ಆದರೆ ಈ ಫೇಸ್‌ಪ್ಯಾಕ್ ತಯಾರಿಸುವ ಮುನ್ನ ನಿಮ್ಮ ಚರ್ಮದ ಬಗ್ಗೆ ತಿಳಿದುಕೊಳ್ಳಿ. ತ್ವಚೆಯ ಅಂದ ಹೆಚ್ಚಿಸುವ, ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಕೆಲವು ಫೇಸ್‌ಪ್ಯಾಕ್‌ಗಳು ಕುರಿತು ಬರೆದಿದ್ದಾರೆ ಅಕ್ಷರ ಕಿರಣ್.
(2 / 7)
ತರಕಾರಿ, ಹಣುಗಳಿಂದ ತಯಾರಿಸುವ ಫೇಸ್‌ಪ್ಯಾಕ್ ಚರ್ಮಕ್ಕೆ ಯಾವುದೇ ರೀತಿಯ ಹಾನಿಯುಂಟು ಮಾಡುವುದಿಲ್ಲ. ಆದರೆ ಈ ಫೇಸ್‌ಪ್ಯಾಕ್ ತಯಾರಿಸುವ ಮುನ್ನ ನಿಮ್ಮ ಚರ್ಮದ ಬಗ್ಗೆ ತಿಳಿದುಕೊಳ್ಳಿ. ತ್ವಚೆಯ ಅಂದ ಹೆಚ್ಚಿಸುವ, ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಕೆಲವು ಫೇಸ್‌ಪ್ಯಾಕ್‌ಗಳು ಹೀಗಿವೆ.
(3 / 7)
ಸೇಬುಹಣ್ಣಿನ ತಿರುಳಿಗೆ ಎರಡು ಚಮಚ ಹಾಲಿನ ಕೆನೆ, ಒಂದು ಚಮಚ ನಿಂಬೆಹಣ್ಣಿನ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮುಖದ ಚರ್ಮಕ್ಕೆ ಹಚ್ಚಿ. ಹದಿನೈದು ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ವಾರಕ್ಕೊಮ್ಮೆ ಈ ಫೇಸ್‌ಪ್ಯಾಕ್ ಬಳಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.
(4 / 7)
ನಿಂಬೆರಸ ಹಾಗೂ ಜೇನುತುಪ್ಪವನ್ನು ಬೆರೆಸಿ ಸ್ನಾನಕ್ಕೆ ಹೋಗುವ ಮುನ್ನ ಮುಖಕ್ಕೆ ಹಚ್ಚಿ ಹತ್ತು ನಿಮಿಷ ಬಿಟ್ಟು ಸ್ನಾನ ಮಾಡಿ. ಹೀಗೆ ಪ್ರತಿನಿತ್ಯ ಮಾಡಿದರೆ, ಕೆಲವೇ ದಿನಗಳಲ್ಲಿ ನಿಮ್ಮ ಮುಖ ಹೊಳಪು ಹೆಚ್ಚುವುದನ್ನು ನೀವು ಗಮನಿಸಬಹುದು.
(5 / 7)
ಮಾಗಿದ ಬಾಳೆಹಣ್ಣನ್ನು ಸ್ಮ್ಯಾಶ್ ಮಾಡಿ. ಅದಕ್ಕೆ ಒಂದು ಟೀ ಚಮಚ ಜೇನುತುಪ್ಪ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. ಆದು ಆರಿದ ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ. ಇದು ಮಾಯಿಶ್ಚರೈಸರ್‌ನಂತೆ ಕೆಲಸ ಮಾಡಿ ನಿಮ್ಮ ಚರ್ಮವನ್ನು ಪಳ ಪಳ ಹೊಳೆಯುವಂತೆ ಮಾಡುತ್ತದೆ. ಇದು ಒಣ ಚರ್ಮದವರಿಗೆ ಹೇಳಿ ಮಾಡಿಸಿದ್ದು.
(6 / 7)
ಸೌತೆಕಾಯಿ ರಸದಲ್ಲಿ ಕಡ್ಲೆಹಿಟ್ಟು ಬೆರೆಸಿ ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಹೊತ್ತಿನ ನಂತರ ತಣ್ಣೀರಿನಿಂದ ಮುಖ ತೊಳೆದರೆ ಮುಖದ ಕಾಂತಿ ಇಮ್ಮಡಿಯಾಗುವುದು.
ಇತರ ಗ್ಯಾಲರಿಗಳು