ಕನ್ನಡ ಸುದ್ದಿ  /  Photo Gallery  /  Bengaluru News Bmtc Bhojana Bandi Innovative Mobile Canteen By Its Staff Check Pics Uks

ಬೆಂಗಳೂರಲ್ಲಿ ಗಮನಸೆಳೆಯುತ್ತಿದೆ ಬಿಎಂಟಿಸಿ ಭೋಜನ ಬಂಡಿ, ಬನ್ನಿ ಕುಳಿತು ಊಟ ಮಾಡೋಣ ಎಂಬ ಆಹ್ವಾನ, ಇಲ್ಲಿದೆ ಒಂದು ಚಿತ್ರನೋಟ

ಬೆಂಗಳೂರಲ್ಲಿ ಗಮನಸೆಳೆಯುತ್ತಿದೆ ಬಿಎಂಟಿಸಿ ಭೋಜನ ಬಂಡಿ, ಬನ್ನಿ ಕುಳಿತು ಊಟ ಮಾಡೋಣ ಎಂಬ ಆಹ್ವಾನ. ಬಿಎಂಟಿಸಿ ಉದ್ಯೋಗಿಗಳು ಹಳೆಯ ಬಸ್‌ ಅನ್ನು ಭೋಜನ ಬಂಡಿಯನ್ನಾಗಿ ಪರಿವರ್ತಿಸಿದ್ದು, ಅದರ ವಿವರವನ್ನು ಒದಗಿಸುವ ಒಂದು ಚಿತ್ರನೋಟ ಇಲ್ಲಿದೆ. 

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉದ್ಯೋಗಿಗಳ ಗುಂಪು ವಿನೂತನ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ತಮ್ಮ ಸಹೋದ್ಯೋಗಿಗಳ ಅಗತ್ಯಗಳನ್ನು ಪೂರೈಸಲು ಹಳೆಯ ಬಸ್ ಅನ್ನು ಸಂಚಾರಿ ಕ್ಯಾಂಟೀನ್ ಆಗಿ ಪರಿವರ್ತಿಸಿದೆ. 
icon

(1 / 7)

ದಾಸನಪುರದ ಕೇಂದ್ರೀಯ ಘಟಕದ ಡಿಪೋದಲ್ಲಿರುವ ನಾಲ್ವರು ಉದ್ಯೋಗಿಗಳ ತಂಡ ಈ ಉಪಕ್ರಮವನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ ಮಾಡಿ ತೋರಿಸಿದೆ. ಇದಕ್ಕಾಗಿ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರ ಅನುಮೋದನೆಯನ್ನು ಪಡೆದಿದ್ದರು. ಈ ಬಸ್‌ 10,64,298 ಕಿಲೋಮೀಟರ್‌ ಸಂಚರಿಸಿದ ಬಳಿಕ ನಿರುಪಯುಕ್ತವಾಗಿ ಮೂಲೆಗುಂಪಾಗಿತ್ತು.
icon

(2 / 7)

ಈಗ ಸಂಚಾರಿ ಕ್ಯಾಂಟೀನ್ ಆಗಿ ಸೇವೆ ಸಲ್ಲಿಸಲು ಸಜ್ಜಾಗಿರುವ ನವೀಕೃತ ಬಸ್ ಪೀಣ್ಯ ಮತ್ತು ಯಶವಂತಪುರ ಡಿಪೋಗಳಲ್ಲಿ ಬಿಎಂಟಿಸಿ ಉದ್ಯೋಗಿಗಳಿಗೆ ಬಳಕೆಗೆ ಸಿಗಲಿದೆ. ಇದು ಸಾಂಪ್ರದಾಯಿಕ ಕ್ಯಾಂಟೀನ್ ಸೌಲಭ್ಯಗಳ ಕೊರತೆಯಿರುವ ಘಟಕಗಳು ಮತ್ತು ಬಸ್ ನಿಲ್ದಾಣಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಉಪಹಾರ ಮತ್ತು ಊಟವನ್ನು ಒದಗಿಸುತ್ತದೆ.
icon

(3 / 7)

ಸುದ್ದಿ ಫಟಾಫಟ್‌ ಅಪ್ಡೇಟ್ ಆಗುತ್ತೆ, ಖುಷಿ ಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ.
icon

(4 / 7)

ಬಿಎಂಟಿಸಿಯ ಸಿಬ್ಬಂದಿಯ ಊಟದ ಅನುಕೂಲಕ್ಕಾಗಿ ನಿರ್ಮಿಸಲ್ಪಟ್ಟಿರುವ ಭೋಜನ ಬಂಡಿಯಲ್ಲಿ ಮೊಬೈಲ್ ಕ್ಯಾಂಟೀನ್‌ನಲ್ಲಿರುವ ಎಲ್ಲ ಸೌಕರ್ಯಗಳೂ ಇವೆ.
icon

(5 / 7)

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್. ಇತ್ತೀಚೆಗೆ ಹೊಸದಾಗಿ ರೂಪಾಂತರಗೊಂಡ ಬೋಜನ ಬಂಡಿಯನ್ನು ಪರಿಶೀಲಿಸಿದರು, ಇದು ಆಕರ್ಷಕ ಅಡಿಬರಹವನ್ನು ಹೊಂದಿದೆ - "ಬನ್ನಿ, ಕುಳಿತುಕೊಳ್ಳಿ ಮತ್ತು ಊಟ ಮಾಡಿ." ತಾಂತ್ರಿಕ ಸಿಬ್ಬಂದಿಯ ಕೌಶಲ ಮತ್ತು ಅವರ ನವೀನ ಪ್ರಯತ್ನಗಳನ್ನು ಶ್ಲಾಘಿಸಿದ ಅವರು ಅದನ್ನು ಮುಂದುವರಿಸಲು ಉತ್ತೇಜಿಸಿದರು.
icon

(6 / 7)

ಬಿಎಂಟಿಸಿ ಭೋಜನ ಬಂಡಿ, ಬನ್ನಿ ಕುಳಿತು ಊಟ ಮಾಡೋಣ ಪ್ರಾಯೋಗಿಕವಾಗಿ ಯಶಸ್ವಿಯಾದರೆ ಕಂಪನಿಯ ವಿವಿಧ ಘಟಕಗಳಲ್ಲಿರುವ ಉದ್ಯೋಗಿಗಳಿಗೆ ಇದರ ಪ್ರಯೋಜನ ಸಿಗಲಿದೆ.
icon

(7 / 7)

IPL_Entry_Point

ಇತರ ಗ್ಯಾಲರಿಗಳು