Kadalekai Parishe: ಇಂದಿನಿಂದ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ಆರಂಭ; ಜಾತ್ರೆಯ ಫೋಟೊಸ್
ಬೆಂಗಳೂರಿನ ಬಸವನಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಆರಂಭವಾಗಿದೆ. ತಾಜಾ ತಾಜಾ ಕಡ್ಲೆಕಾಯಿ ಖರೀದಿಸಬೇಕೆಂದರೆ ಕೈ ಚೀಲದೊಂದಿಗೆ ಭೇಟಿ ಕೊಡಿ. ಜಾತ್ರೆಯ ಫೋಟೊಸ್ ಇಲ್ಲಿವೆ.
(1 / 8)
ಇಂದಿನಿಂದ (ಡಿಸೆಂಬರ್ 11, ಸೋಮವಾರ) ಬಸವನಗುಡಿ ಕಡಲೆಕಾಯಿ ಪರಿಷೆ ಆರಂಭವಾಗಿದ್ದು, ಮೂರು ದಿನಗಳ ವರೆಗೆ ನಡೆಯಲಿದೆ.
(2 / 8)
ಬಸವನಗುಡಿಯ ದೇವಸ್ಥಾನದಲ್ಲಿ ಬಸವ ಮೂರ್ತಿಗೆ ಹೂಗಳಿಂದ ಅಲಂಕರಿಸಲಾಗಿತ್ತು. ಬಸವನ ವಿಗ್ರಹಕ್ಕೆ ವಿಶೇಷ ಪೂಜೆ ಮೂಲಕ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಲಾಯಿತು.
(3 / 8)
ಜೀವಂತ ಬಸವಗಳು ಕಡ್ಲೆಕಾಯಿ ಪರಿಷೆಗೆ ಸಾಕ್ಷಿಯಾದವು. ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಬೆಂಗಳೂರಿನ ಐತಿಹಾಸಿಕ ಬಸವನಗುಡಿಯ ಕಡ್ಲೆಕಾಯಿ ಪರಿಷೆ ನಡೆಯುತ್ತದೆ.
(4 / 8)
ನೂರಾರು ಮಂದಿ ಕಡಲೆಕಾಯಿ ಪರಿಷೆಗೆ ಭೇಟಿ ನೀಡಿದ್ದು, ತಾಜಾ ತಾಜಾ ಕಡ್ಲೆಕಾಯಿ ಖರೀದಿಸಿದ್ದಾರೆ. ಪರಿಷೆಗೆ ಬನ್ನಿ ಕೈ ಚೀನ ತನ್ನಿ ಎಂಬ ಅಭಿಯಾನದೊಂದಿಗೆ ಜಾತ್ರೆ ಆಯೋಜಿಸಲಾಗಿದೆ.
(6 / 8)
ವ್ಯಾಪಾರಿಗಳ ಜೊತೆಗೆ ರೈತರೇ ಖುದ್ಧು ಕಡಲೆಕಾಯಿಯನ್ನು ಬಸವನಗುಡಿ ಕಡಲೆಕಾಯಿ ಪರಿಷೆಗೆ ತಂದು ಮಾರಾಟ ಮಾಡುತ್ತಿದ್ದಾರೆ. ಯಾವುದೇ ದಳ್ಳಾಳಿಗಳ ಹಾವಳಿ ಇಲ್ಲದ ಕಾರಣ ಕಡಿಮೆ ಬೆಲೆಗೆ ಗ್ರಾಹಕರಿಗೆ ತಾಜಾ ಕಡಲೆಕಾಯಿ ಸಿಗುತ್ತಿದೆ.
(7 / 8)
ಕಡಲೆಕಾಯಿ ಪರಿಷೆ ಸಂಭ್ರಮ ಮನೆ ಮಾಡಿದ್ದು, ನಿನ್ನೆ (ಡಿಸೆಂಬರ್ 10, ಭಾನುವಾರ) ರಜೆ ದಿನವಾಗಿದ್ದ ಕಾರಣ ನೂರಾರು ಮಂದಿ ಸೇರಿದ್ದರು. ವಿದ್ಯುತ್ ದೀಪಾಲಂಕಾರ ನೋಡುಗರ ಕಣ್ಮನ ಸೆಳೆಯಿತು.
ಇತರ ಗ್ಯಾಲರಿಗಳು