ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೋರ್ಟ್‌ ವಿಚಾರಣೆಗಾಗಿ ಬೆಂಗಳೂರಿಗೆ ಬಂದ ರಾಹುಲ್ ಗಾಂಧಿ ಅವರ ದಿನಚರಿ ಹೀಗಿತ್ತು- ಫೋಟೋ ವರದಿ ಇಲ್ಲಿದೆ

ಕೋರ್ಟ್‌ ವಿಚಾರಣೆಗಾಗಿ ಬೆಂಗಳೂರಿಗೆ ಬಂದ ರಾಹುಲ್ ಗಾಂಧಿ ಅವರ ದಿನಚರಿ ಹೀಗಿತ್ತು- ಫೋಟೋ ವರದಿ ಇಲ್ಲಿದೆ

ಬಿಜೆಪಿ ಮಾನಹಾನಿ ಪ್ರಕರಣದ ವಿಚಾರಣೆಗೆ ಎಂದು ಕೋರ್ಟ್‌ಗೆ ಹಾಜರಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು (ಜೂನ್ 7) ಬೆಂಗಳೂರಿಗೆ ಬಂದಿದ್ದರು. ಅವರ ಬೆಂಗಳೂರು ದಿನಚರಿ ಹೀಗಿತ್ತು. ಫೋಟೋ ವರದಿ ಇಲ್ಲಿದೆ.

ಬೆಂಗಳೂರು ವಿಶೇಷ ಕೋರ್ಟ್‌ನಲ್ಲಿ ಬಿಜೆಪಿ ದಾಖಲಿಸಿದ್ದ ಮಾನಹಾನಿ ದಾವೆಯ ವಿಚಾರಣೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು (ಜೂನ್ 7) ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್ ಅವರನ್ನು ವಿಮಾನ ನಿಲ್ಧಾಣದಲ್ಲಿ ಬರಮಾಡಿಕೊಂಡರು.
icon

(1 / 7)

ಬೆಂಗಳೂರು ವಿಶೇಷ ಕೋರ್ಟ್‌ನಲ್ಲಿ ಬಿಜೆಪಿ ದಾಖಲಿಸಿದ್ದ ಮಾನಹಾನಿ ದಾವೆಯ ವಿಚಾರಣೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು (ಜೂನ್ 7) ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್ ಅವರನ್ನು ವಿಮಾನ ನಿಲ್ಧಾಣದಲ್ಲಿ ಬರಮಾಡಿಕೊಂಡರು.(ANI)

ವಿಮಾನ ನಿಲ್ಧಾಣದಿಂದ ಖಾಸಗಿ ಹೋಟೆಲ್‌ಗೆ ತೆರಳಿದ ರಾಹುಲ್ ಗಾಂಧಿ ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು 11 ಗಂಟೆಗೆ ಕೋರ್ಟ್‌ಗೆ ಹಾಜರಾದರು. ಕರ್ನಾಟಕದ ವಿಧಾನಸಭೆ ಚುನಾವಣೆಗೆ ಮೊದಲು ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಮತ್ತು ಪೇಸಿಎಂ ಅಭಿಯಾನ ನಡೆಸಿ ಪಕ್ಷದ ವರ್ಚಸ್ಸಿಗೆ ಹಾನಿ ಎಸಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ಕೇಶವ ಪ್ರಸಾದ್ ದಾವೆ ಹೂಡಿದ್ದಾರೆ. ಇದರ ವಿಚಾರಣೆಗೆ ರಾಹುಲ್ ಗಾಂಧಿ ಬಂದಿದ್ದರು.
icon

(2 / 7)

ವಿಮಾನ ನಿಲ್ಧಾಣದಿಂದ ಖಾಸಗಿ ಹೋಟೆಲ್‌ಗೆ ತೆರಳಿದ ರಾಹುಲ್ ಗಾಂಧಿ ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು 11 ಗಂಟೆಗೆ ಕೋರ್ಟ್‌ಗೆ ಹಾಜರಾದರು. ಕರ್ನಾಟಕದ ವಿಧಾನಸಭೆ ಚುನಾವಣೆಗೆ ಮೊದಲು ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಮತ್ತು ಪೇಸಿಎಂ ಅಭಿಯಾನ ನಡೆಸಿ ಪಕ್ಷದ ವರ್ಚಸ್ಸಿಗೆ ಹಾನಿ ಎಸಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ಕೇಶವ ಪ್ರಸಾದ್ ದಾವೆ ಹೂಡಿದ್ದಾರೆ. ಇದರ ವಿಚಾರಣೆಗೆ ರಾಹುಲ್ ಗಾಂಧಿ ಬಂದಿದ್ದರು.(Savitha)

ಕರ್ನಾಟಕ ಬಿಜೆಪಿ ಘಟಕ ದಾಖಲಿಸಿದ್ದ ಕೇಸ್‌ನಲ್ಲಿ ಕೆಪಿಸಿಸಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಮತ್ತುಇತರರು ಪ್ರತಿಪಾದಿಗಳು. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಜೂನ್ 1ಕ್ಕೆ ವಿಚಾರಣೆಗೆ ಹಾಜರಾಗಿ ಜಾಮೀನು ಪಡೆದಿದ್ದರು. ರಾಹುಲ್ ಗಾಂಧಿ ಬಂದಿರಲಿಲ್ಲ. ಅವರ ಪರ ವಕೀಲರು ಸಮಯಾವಕಾಶ ಕೋರಿದ್ದರು. ಬಳಿಕ ಜೂನ್ 4ಕ್ಕೆ ಹಾಜರಾಗಲು ಕೋರ್ಟ್ ಹೇಳಿತ್ತಾದರೂ, ಫಲಿತಾಂಶ ಇರುವ ಕಾರಣ ಇಂದಿಗೆ ದಿನಾಂಕ ನಿಗದಿ ಮಾಡಿತ್ತು.
icon

(3 / 7)

ಕರ್ನಾಟಕ ಬಿಜೆಪಿ ಘಟಕ ದಾಖಲಿಸಿದ್ದ ಕೇಸ್‌ನಲ್ಲಿ ಕೆಪಿಸಿಸಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಮತ್ತುಇತರರು ಪ್ರತಿಪಾದಿಗಳು. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಜೂನ್ 1ಕ್ಕೆ ವಿಚಾರಣೆಗೆ ಹಾಜರಾಗಿ ಜಾಮೀನು ಪಡೆದಿದ್ದರು. ರಾಹುಲ್ ಗಾಂಧಿ ಬಂದಿರಲಿಲ್ಲ. ಅವರ ಪರ ವಕೀಲರು ಸಮಯಾವಕಾಶ ಕೋರಿದ್ದರು. ಬಳಿಕ ಜೂನ್ 4ಕ್ಕೆ ಹಾಜರಾಗಲು ಕೋರ್ಟ್ ಹೇಳಿತ್ತಾದರೂ, ಫಲಿತಾಂಶ ಇರುವ ಕಾರಣ ಇಂದಿಗೆ ದಿನಾಂಕ ನಿಗದಿ ಮಾಡಿತ್ತು.(PTI)

ರಾಹುಲ್ ಗಾಂಧಿ ಅವರು ಇಂದು ಬೆಳಗ್ಗೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ಗೆ ತಮ್ಮ ವಕೀಲರ ತಂಡದೊಂದಿಗೆ ತಲುಪಿದ ಸಂದರ್ಭ.
icon

(4 / 7)

ರಾಹುಲ್ ಗಾಂಧಿ ಅವರು ಇಂದು ಬೆಳಗ್ಗೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ಗೆ ತಮ್ಮ ವಕೀಲರ ತಂಡದೊಂದಿಗೆ ತಲುಪಿದ ಸಂದರ್ಭ.(ANI)

ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆವರಣಕ್ಕೆ ರಾಹುಲ್ ಗಾಂಧಿ ತಲುಪಿದಾಗ ಅಲ್ಲಿ ಕಂಡು ಬಂದ ದೃಶ್ಯ,
icon

(5 / 7)

ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆವರಣಕ್ಕೆ ರಾಹುಲ್ ಗಾಂಧಿ ತಲುಪಿದಾಗ ಅಲ್ಲಿ ಕಂಡು ಬಂದ ದೃಶ್ಯ,(PTI)

ಕಾಂಗ್ರೆಸ್ ಪಕ್ಷದ ನೂತನ ಚುನಾಯಿತ ಸಂಸದರ ಸಭೆ ನಡೆಸಿದಾಗ ಅಲ್ಲಿ ರಾಹುಲ್ ಗಾಂಧಿ ಅವರ ಜೊತೆಗೆ ಡಿಕೆ ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದ್ದರು.
icon

(6 / 7)

ಕಾಂಗ್ರೆಸ್ ಪಕ್ಷದ ನೂತನ ಚುನಾಯಿತ ಸಂಸದರ ಸಭೆ ನಡೆಸಿದಾಗ ಅಲ್ಲಿ ರಾಹುಲ್ ಗಾಂಧಿ ಅವರ ಜೊತೆಗೆ ಡಿಕೆ ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದ್ದರು.(DK Shivakumar X)

ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನಿಂದ ವಾಪಸ್ ಬಂದ ರಾಹುಲ್ ಗಾಂಧಿ, ಕಾಂಗ್ರೆಸ್ ಭವನಕ್ಕೆ ತಲುಪಿದರು. ಅಲ್ಲಿ ಡಿಕೆಶಿವಕುಮಾರ್, ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿದರು. ಬಳಿಕ ಚುನಾಯಿತ ಸಂಸದರ ಜೊತೆಗೂ ಮಾತುಕತೆ ನಡೆಸಿದರು.
icon

(7 / 7)

ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನಿಂದ ವಾಪಸ್ ಬಂದ ರಾಹುಲ್ ಗಾಂಧಿ, ಕಾಂಗ್ರೆಸ್ ಭವನಕ್ಕೆ ತಲುಪಿದರು. ಅಲ್ಲಿ ಡಿಕೆಶಿವಕುಮಾರ್, ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿದರು. ಬಳಿಕ ಚುನಾಯಿತ ಸಂಸದರ ಜೊತೆಗೂ ಮಾತುಕತೆ ನಡೆಸಿದರು.(ANI)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು