Best Christmas places: ಈ ಬಾರಿಯ ಕ್ರಿಸ್ಮಸ್‌ಗೆ ಫಾರಿನ್ ಟ್ರಿಪ್ ಯೋಜನೆಯಾ? ಸ್ಮರಣೀಯ ಅನುಭವಕ್ಕೆ ಇಲ್ಲಿವೆ ವಿಶ್ವದ ಅತ್ಯುತ್ತಮ ಸ್ಥಳಗಳು
ನ್ಯೂಯಾರ್ಕ್‌ನಿಂದ ಲಂಡನ್‌ವರೆಗೆ, ಕ್ರಿಸ್ಮಸ್ ಹಬ್ಬದ ಸ್ಮರಣೀಯ ಅನುಭವಕ್ಕಾಗಿ ಪ್ರಪಂಚದಾದ್ಯಂತದ ಇರುವ ಕೆಲವು ಸುಂದರ ಮತ್ತು ಅದ್ಭುತ ಸ್ಥಳಗಳ ಇವರ ಇಲ್ಲಿದೆ.
(1 / 9)
ಈ ಬಾರಿಯ ಕ್ರಿಸ್ಮಸ್ ಆಚರಣೆಗೆ ನೀವು ವಿದೇಶಕ್ಕೆ ಹೋಗುವ ಯೋಜನೆ ಇದ್ದರೆ, ಇಲ್ಲಿ ಕೆಲವೊಂಧು ಸ್ಥಳಗಳ ಮಾಹಿತಿ ಇದೆ. ಪ್ರಪಂಚದಾದ್ಯಂತ ಈ ಹಬ್ಬವನ್ನು ಉತ್ಸಾಹದಿಂದ ಆಚರಿಸಲಾಗುತ್ತದೆ. ಇದು ಸ್ಥಳ ಮತ್ತು ನಂಬಿಕೆಯ ಗಡಿಗಳನ್ನು ಮೀರಿದೆ. ಪ್ರಪಂಚದಾದ್ಯಂತದ ಕ್ರಿಸ್ಮಸ್ ಆಚರಣೆಗೆ ಕೆಲವು ಅತ್ಯುತ್ತಮ ಸ್ಥಳಗಳನ್ನು ಇಲ್ಲಿ ನೋಡಿ.
(Unsplash)(2 / 9)
ನ್ಯೂಯಾರ್ಕ್ ಸಿಟಿ, ಅಮೆರಿಕ: ನ್ಯೂಯಾರ್ಕ್ ನಗರದಲ್ಲಿ ಕ್ರಿಸ್ಮಸ್ ಆಚರಣೆಯು ಬೇರೆ ನಗರ ಅಥವಾ ದೇಶಗಳಿಗಿಂತ ಭಿನ್ನವಾಗಿದೆ.
(Unsplash)(3 / 9)
ವಿಯೆನ್ನಾ, ಆಸ್ಟ್ರಿಯಾ: ವಿಯೆನ್ನಾ ಸುಂದರವಾದ ಹಳೆಯ ಶೈಲಿಯಲ್ಲಿ ಕ್ರಿಸ್ಮಸ್ ಅನುಭವಿಸುವ ಅವಕಾಶವನ್ನು ನೀಡುತ್ತದೆ. ಇಲ್ಲಿ ಪ್ರವಾಸಿಗರು ಕರಕುಶಲ ವಸ್ತುಗಳು ಮತ್ತು ಆಭರಣಗಳನ್ನು ಖರೀದಿಸಬಹುದು. ಜೊತೆಗೆ ರುಚಿಕರವಾದ ಮಸಾಲೆಯುಕ್ತ ಮಲ್ಲ್ಡ್ ವೈನ್ ಆಸ್ವಾದಿಸಬಹುದು.
(istockphoto)(4 / 9)
ಲಂಡನ್, ಯುನೈಟೆಡ್ ಕಿಂಗ್‌ಡಮ್: ಲಂಡನ್‌ನಲ್ಲಿ ರಜಾದಿನಗಳನ್ನು ಕಳೆಯುವುದು ಒಂದು ರೀತಿಯ ವಿಶೇಷ ಅನುಭವ. ಹೊಳೆಯುವ ದೀಪಗಳು, ಕ್ರಿಸ್ಮಸ್ ಮಾರುಕಟ್ಟೆಗಳು ಮತ್ತು ಪಾಪ್-ಅಪ್ ಪಬ್‌ಗಳು ರಜಾದಿನಗಳಲ್ಲಿ ನಗರಕ್ಕೆ ಜೀವ ತುಂಬುತ್ತವೆ. ಇದು ನಿಸ್ಸಂದೇಹವಾಗಿ ಕ್ರಿಸ್ಮಸ್ ಗಮ್ಯಸ್ಥಾನಗಳಲ್ಲಿ ಒಂದಾಗಿದೆ.
(Unsplash)(5 / 9)
ನ್ಯೂರೆಂಬರ್ಗ್, ಜರ್ಮನಿ: ಕ್ರಿಸ್‌ಮಸ್ ಅನ್ನು ಕಳೆಯಲು ಜರ್ಮನಿಯ ಶ್ರೇಷ್ಠ ಸ್ಥಳಗಳಲ್ಲಿ ಒಂದಾದ ನ್ಯೂರೆಂಬರ್ಗ್, ವಿದೇಶಿಗರ ಫೇವರೆಟ್ ಸ್ಥಳ. ಇಲ್ಲಿನ ಕ್ರಿಸ್‌ಮಸ್ ಮಾರುಕಟ್ಟೆಯು ವರ್ಷಕ್ಕೆ ಸುಮಾರು ಎರಡು ಮಿಲಿಯನ್ ಸಂದರ್ಶಕರನ್ನು ಆಕರ್ಷಿಸುತ್ತದೆ.
(pixabay)(6 / 9)
ಡಬ್ಲಿನ್, ಐರ್ಲೆಂಡ್: ಡಬ್ಲಿನ್ ತನ್ನ ಇತಿಹಾಸ, ಪಾಕಪದ್ಧತಿ, ವಾಸ್ತುಶಿಲ್ಪ ಮತ್ತು ಪಬ್‌ಗಳಿಂದಾಗಿ ಪ್ರವಾಸಿಗರ ನೆಚ್ಚಿನ ತಾಣವಾಗಿ ಹೊರಹೊಮ್ಮಿದೆ. ಡಬ್ಲಿನ್ ಅಂತಾರಾಷ್ಟ್ರೀಯ ಮಟ್ಟದ ಮಹಾನಗರ ಮತ್ತು ರಾಜಧಾನಿಯಾಗಿದೆ. ಪಬ್‌ಗಳಿಂದ ಕೋಟೆಗಳವರೆಗೆ, ಚರ್ಚುಗಳಿಂದ ಹಿಡಿದು ಉದ್ಯಾನವನಗಳವರೆಗೆ ಇಲ್ಲಿ ಎಲ್ಲವೂ ಇದೆ.
(Unsplash)(7 / 9)
ಕೋಪನ್ ಹ್ಯಾಗನ್, ಡೆನ್ಮಾರ್ಕ್: ಕೋಪನ್ ಹ್ಯಾಗನ್ ನಲ್ಲಿರುವ ಟಿವೊಲಿ ಉದ್ಯಾನವನವು 170 ವರ್ಷಗಳಿಂದಲೂ ಪ್ರವಾಸಿಗರಿಗೆ ಕ್ರಿಸ್ಮಸ್ ಸಮಯದ ಜನಪ್ರಿಯ ತಾಣವಾಗಿದೆ. ಬೆರಗುಗೊಳಿಸುವ ಬೆಳಕಿನ ಪ್ರದರ್ಶನಗಳು, 60 ಕ್ಕೂ ಹೆಚ್ಚು ಬೂತ್‌ಗಳನ್ನು ಹೊಂದಿರುವ ಮಾರುಕಟ್ಟೆ ಮತ್ತು ಸಾವಿರಾರು ದೀಪಗಳಿಂದ ಅಲಂಕರಿಸಲ್ಪಟ್ಟ ಕ್ರಿಸ್ಮಸ್ ಮರಗಳಿಗೆ ಇದು ಹೆಸರುವಾಸಿ.
(istockphoto)(8 / 9)
ವ್ಯಾಟಿಕನ್, ಇಟಲಿ: ಇದು ವರ್ಷವಿಡೀ ಜಾಗತಿಕ ಪ್ರವಾಸಿಗರನ್ನು ಸ್ವಾಗತಿಸುವ ಸ್ಥಳಗಳಲ್ಲಿ ಒಂದು. ಕ್ರಿಸ್ಮಸ್ ಆಚರಣೆಯಂತೂ ಇಲ್ಲಿ ತುಂಬಾ ಜೋರು. ವ್ಯಾಟಿಕನ್ ಸಿಟಿಗೆ ಭೇಟಿ ನೀಡುವವರು ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಮಧ್ಯರಾತ್ರಿಯ ಪ್ರಾರ್ಥನೆಗೆ ಹಾಜರಾಗುತ್ತಾರೆ.
(istockphoto)ಇತರ ಗ್ಯಾಲರಿಗಳು