National Games: ಅತಿದೊಡ್ಡ ಕ್ರೀಡಾಹಬ್ಬಕ್ಕೆ ಚಾಲನೆ, ವರ್ಣರಂಜಿತ ಕಾರ್ಯಕ್ರಮದ ಫೋಟೋಗಳು ಹೀಗಿವೆ
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ 36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ದೇಶದ ಅತಿದೊಡ್ಡ ಕ್ರೀಡಾಹಬ್ಬಕ್ಕೆ, ದೇಶದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.
(1 / 8)
ಗುರುವಾರ ಸಂಜೆ ನಡೆದ ಅದ್ಧೂರಿ ಸಮಾರಂಭದಲ್ಲಿ 36ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಕ್ರೀಡಾಕೂಟವನ್ನು ಸೆಪ್ಟೆಂಬರ್ 29ರಿಂದ ಅಕ್ಟೋಬರ್ 12ರವರೆಗೆ ಆಯೋಜಿಸಲಾಗುತ್ತಿದೆ.(ANI)
(3 / 8)
36 ಕ್ರೀಡಾ ವಿಭಾಗಗಳಲ್ಲಿ ಸುಮಾರು 15,000ಕ್ಕೂ ಹೆಚ್ಚು ಕ್ರೀಡಾಪಟುಗಳು ಹಾಗೂ ತರಬೇತುದಾರರು ಭಾಗವಹಿಸುವ ಇದುವರೆಗಿನ ಅತಿದೊಡ್ಡ ರಾಷ್ಟ್ರೀಯ ಕ್ರೀಡಾಕೂಟ ಇದಾಗಿದೆ.(PTI)
(4 / 8)
ಅಹಮದಾಬಾದ್, ಗಾಂಧಿನಗರ, ಸೂರತ್, ವಡೋದರಾ, ರಾಜ್‌ಕೋಟ್ ಮತ್ತು ಭಾವನಗರ ಸೇರಿದಂತೆ ಗುಜರಾತ್‌ನ ಆರು ನಗರಗಳಲ್ಲಿ ಈ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.(PTI)
(5 / 8)
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 7000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವ ಮೂಲಕ 35000 ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಶಾಲೆಗಳು ಹಾಗೂ 50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ನೇರ ಸಂಪರ್ಕವು ರಾಷ್ಟ್ರೀಯ ಕ್ರೀಡಾಕೂಟದೊಂದಿಗೆ ಇರಲಿದೆ. ಹೀಗಾಗಿ ಇದು ಅದ್ಭುತ ಮತ್ತು ಅಭೂತಪೂರ್ವವಾಗಿದೆ ಎಂದರು.(PTI)
(6 / 8)
ಸರ್ದಾರ್ ಪಟೇಲ್ ಕ್ರೀಡಾ ಸಂಕೀರ್ಣವು ಫುಟ್‌ಬಾಲ್, ಹಾಕಿ, ಬಾಸ್ಕೆಟ್‌ಬಾಲ್, ಕಬಡ್ಡಿ, ಬಾಕ್ಸಿಂಗ್ ಮತ್ತು ಲಾನ್ ಟೆನ್ನಿಸ್‌ನಂತಹ ಅನೇಕ ಕ್ರೀಡೆಗಳಿಗೆ ಸೌಲಭ್ಯಗಳನ್ನು ಹೊಂದಿದೆ.(ANI/PIB)
(7 / 8)
ಈ ಕ್ರೀಡಾಕೂಟದಲ್ಲಿ ಆಟಗಾರರು ಪ್ರಬಲ ಪ್ರದರ್ಶನ ತೋರಿ ಪಡೆಯುವ ಗೆಲುವು, ಇತರ ಕ್ಷೇತ್ರಗಳಲ್ಲಿಯೂ ದೇಶದ ಗೆಲುವಿಗೆ ದಾರಿ ಮಾಡಿಕೊಡುತ್ತದೆ ಎಂದು ಮೋದಿ ಹೇಳಿದರು. ಕ್ರೀಡೆಯ ಮೃದು ಶಕ್ತಿಯು ರಾಷ್ಟ್ರದ ಗುರುತನ್ನು ಹಾಗೂ ರಾಷ್ಟ್ರದ ಬಹುಮುಖ ಚಿತ್ರಣವನ್ನು ಹೆಚ್ಚಿಸುತ್ತದೆ ಎಂದರು.(PTI)
ಇತರ ಗ್ಯಾಲರಿಗಳು