ಆಲಿಯಾ ಭಟ್, ಜಾಹ್ನವಿ ಕಪೂರ್ ಸೇರಿದಂತೆ ಮನಿಷ್ ಮಲ್ಹೋತ್ರಾ ದೀಪಾವಳಿ ಪಾರ್ಟಿ ರಂಗೇರಿಸಿದ ಬಾಲಿವುಡ್ ತಾರೆಯರು
ಖ್ಯಾತ ಫ್ಯಾಷನ್ ಡಿಸೈನರ್ ಮನಿಷ್ ಮಲ್ಹೋತ್ರಾ ಬಾಲಿವುಡ್ ಸೆಲಬ್ರಿಟಿಗಳಿಗಾಗಿ ಏರ್ಪಡಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ಆಲಿಯಾ ಭಟ್, ತಮನ್ನಾ, ಜಾಹ್ನವಿ ಕಪೂರ್ ಸೇರಿದಂತೆ ವಿವಿಧ ಸೆಲಬ್ರಿಟಿಗಳು ಹಾಜರಿದ್ದರು.
(1 / 8)
ಬಾಲಿವುಡ್ನಲ್ಲಿ ಈಗಾಗಲೇ ದೀಪಾವಳಿ ಸಂಭ್ರಮ ಶುರುವಾಗಿದೆ. ಹಬ್ಬಕ್ಕೆ ಒಂದು ವಾರ ಇರುವಾಗಲೇ ಖ್ಯಾತ ಡಿಸೈನರ್ ಬಾಲಿವುಡ್ ಸೆಲಬ್ರಿಟಿಗಳಿಗಾಗಿ ಅದ್ದೂರಿ ಪಾರ್ಟಿಯೊಂದನ್ನು ಆಯೋಜಿಸಿದ್ದರು. ಈ ಪಾರ್ಟಿಗೆ ಬಾಲಿವುಡ್ ತಾರೆಯರು ಸ್ವತ: ಮನಿಷ್ ಮಲ್ಹೋತ್ರಾ ಡಿಸೈನ್ ಮಾಡಿದ್ದ ಕಾಸ್ಟ್ಯೂಮ್ ಧರಿಸಿ, ಪಾರ್ಟಿ ಅಂದವನ್ನು ಮತ್ತಷ್ಟು ಹೆಚ್ಚಿಸಿದರು. ಬಾಲಿವುಡ್ ಕ್ಯೂಟಿ ಆಲಿಯಾ ಭಟ್ ಪಿಂಕ್ ಬಣ್ಣದ ಲೆಹಂಗಾ ಧರಿಸಿ ಗಮನ ಸೆಳೆದರು.
(2 / 8)
ಧಡಕ್, ದೇವರ ಚೆಲುವೆ ಜಾಹ್ನವಿ ಕಪೂರ್ ನೇರಳೆ ಬಣ್ಣದ ಮಿನುಗುವ ಸೀರೆ ಧರಿಸಿ ಹಾಟ್ ಆಗಿ ಕಾಣಿಸುತ್ತಿದ್ದರು. ಪೋಸ್ ಕೇಳಿದ ಪತ್ರಕರ್ತರಿಗೆ ಸ್ಮೈಲ್ ನೀಡುತ್ತಾ ಪೋಸ್ ನೀಡಿದರು.
(3 / 8)
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಪಿಂಕ್ ಹಾಗೂ ಕಂದು ಬಣ್ಣದ ಔಟ್ಫಿಟ್ ಧರಿಸಿದ್ದರೆ, ಕೃಷ್ಣ ಸುಂದರಿ ಕಾಜೊಲ್ ಡಾರ್ಕ್ ಪಿಂಕ್ ಬಣ್ಣದ ಶಿಮ್ಮರ್ ಡ್ರೆಸ್ನಲ್ಲಿ ಕಂಗೊಳಿಸುತ್ತಿದ್ದರು.
(5 / 8)
ಶಾರುಖ್ ಖಾನ್ ಪುತ್ರಿ ಸುಹಾನಾ ಕೆಂಪು ಬಣ್ಣದ ಲೆಹಂಗಾ ಧರಿಸಿ ಎಲ್ಲರ ಕಣ್ಣು ಕುಕ್ಕಿದರೆ, ಅನನ್ಯಾ ಪಾಂಡೆ ಬಿಳಿ ಬಣ್ಣದ ಟ್ರಾನ್ಸ್ಪರೆಂಟ್ ಸೀರೆ ಧರಿಸಿ ಗ್ಲಾಮರಸ್ ಆಗಿ ಕಾಣುತ್ತಿದ್ದರು.
(6 / 8)
ಬಾಲಿವುಡ್ ಕ್ಯೂಟ್ ಕಪಲ್ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ತ ಮಲ್ಹೋತ್ರಾ ಕಂದು ಬಣ್ಣದ ಮ್ಯಾಚಿಂಗ್ ಔಟ್ ಫಿಟ್, ಶಾಹಿದ್ ಕಪೂರ್ ಹಾಗೂ ಮೀರಾ ರಾಜ್ಪೂತ್ ಕೂಡಾ ಬಿಳಿ ಶಿಮ್ಮರ್ ಮ್ಯಾಚಿಂಗ್ ಡ್ರೆಸ್ನಲ್ಲಿ ಪಾರ್ಟಿ ಕಳೆಯನ್ನು ಹೆಚ್ಚಿಸಿದರು.
(7 / 8)
ಶಾರುಖ್ ಖಾನ್ ಪ್ರೀತಿಯ ಪತ್ನಿ ಗೌರಿ ಖಾನ್ ದೀಪಾವಳಿ ಪಾರ್ಟಿಗೆ ಕಪ್ಪು ಹಾಗೂ ಗೋಲ್ಡ್ ಕಲರ್ ಸೀರೆ, ಬ್ಲೌಸ್ ಧರಿಸಿದ್ದರೆ, ಶ್ರೀದೇವಿ ಎರಡನೇ ಪುತ್ರಿ ಖುಷಿ ಕಪೂರ್ ಕೂಡಾ ಕಪ್ಪು ಔಟ್ಫಿಟ್ನಲ್ಲಿ ಪಾರ್ಟಿಗೆ ಆಗಮಿಸಿದ್ದರು.
ಇತರ ಗ್ಯಾಲರಿಗಳು