ರಾಕುಲ್ ಪ್ರೀತ್ ಸಿಂಗ್‌ಗೆ ಮೈತುಂಬ ಕನ್ನಡಿ; ಹಚ್ಚ ಹಸಿರ ಉಡುಗೆಯಲ್ಲಿ ಮಿಂಚಿದ ಮದುವೆ ಹೆಣ್ಣು PHOTOS
ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಸದ್ಯ ಮದುವೆ ತಯಾರಿಯಲ್ಲಿ ಬಿಜಿಯಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ನಟಿ ಬಾಳ ಬಂಧನಕ್ಕೆ ಬಲಗಾಲಿಡಲಿದ್ದಾಳೆ. ಈ ನಡುವೆ ಸಾಲು ಸಾಲು ಫೋಟೋ ಗೊಂಚಲುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದೀಗ ಹಸಿರು ಉಡುಗೆಯಲ್ಲಿ ಎದುರಾಗಿದ್ದಾರೆ. ಇಲ್ಲಿವೆ ನೋಡಿ ಆ ಫೋಟೋಸ್.
(1 / 7)
ಬಹುಭಾಷಾ ನಟಿ ರಾಕುಲ್ ಪ್ರೀತ್ ಇದೀಗ ಹಸಿರು ಬಣ್ಣದ ಕಾಸ್ಟ್ಯೂಮ್‌ನಲ್ಲಿ ಎದುರಾಗಿದ್ದಾರೆ. (Instagram/@rakulpreet)
(2 / 7)
ಹಸಿರು ಉಡುಗೆಯ ಫೋಟೋ ಹಂಚಿಕೊಳ್ಳುತ್ತಿದ್ದಂತೆ, ನೆಟ್ಟಿಗ ವಲಯದಿಂದ ತರಹೇವಾರಿ ಕಾಮೆಂಟ್‌ಗಳು ಈ ನಟಿಗೆ ಸಂದಾಯವಾಗಿವೆ. (Instagram/@rakulpreet)
(3 / 7)
ಇದು ಬರೀ ಹಸಿರು ಬಣ್ಣದ ಕಾಸ್ಟೂಮ್ ಮಾತ್ರ ಅಲ್ಲ. ಇದೇ ಕಾಸ್ಟೂಮ್‌ನಲ್ಲಿ ಪುಟಾಣಿ ಕನ್ನಡಿಯ ತುಣುಕುಗಳನ್ನೂ ಅಳವಡಿಸಲಾಗಿದೆ. (Instagram/@rakulpreet)
(4 / 7)
ನೋಡೋಕೆ ತುಂಬ ಡಿಸೇಂಟ್ ಕಾಣುವ ಈ ಕಾಸ್ಟೂಮ್ ಬೆಲೆಯೂ ಅಷ್ಟೇ ತುಟ್ಟಿ. ಬರೋಬ್ಬರಿ 1ಲಕ್ಷ 28 ಸಾವಿರ ಇದರ ಮೊತ್ತ(Instagram/@rakulpreet)
(5 / 7)
ಇನ್ನು ಮದುವೆ ಬಗ್ಗೆ ಹೇಳುವುದಾದರೆ, ಬಾಲಿವುಡ್ ನಟ, ನಿರ್ಮಾಪಕ ಜಾಕಿ ಭಗ್ನಾನಿ ಜತೆಗೆ ಫೆ. 21ರಂದು ಗೋವಾದಲ್ಲಿ ರಾಕುಲ್ ಮದುವೆಯಾಗಲಿದ್ದಾರೆ. (Instagram/@rakulpreet)
ಇತರ ಗ್ಯಾಲರಿಗಳು