ದೀಪಿಕಾ ಪಡುಕೋಣೆ ನಟಿಸಿದ ಬ್ಲಾಕ್ ಬಸ್ಟರ್ ಸಿನಿಮಾದ ಸೀಕ್ವೆಲ್‌ನಲ್ಲಿ ರಶ್ಮಿಕಾ ಮಂದಣ್ಣ ಹೀರೋಯಿನ್; ಯಾವುದಾ ಚಿತ್ರ?
'ಅನಿಮಲ್' ಮತ್ತು 'ಪುಷ್ಪ 2' ಚಿತ್ರಗಳ ಮೂಲಕ ಬ್ಯಾಕ್ ಟು ಬ್ಯಾಕ್ ಹಿಟ್ ಪಡೆದುಕೊಂಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಈ ಎರಡು ಸಿನಿಮಾಗಳ ಯಶಸ್ಸಿನೊಂದಿಗೆ, ಬಾಲಿವುಡ್‌ನಲ್ಲಿಯೂ ರಶ್ಮಿಕಾ ಮಂದಣ್ಣಗೆ ಬೇಡಿಕೆ ಹೆಚ್ಚಿದೆ. ಈಗ ಇದೇ ನಟಿ, ದೀಪಿಕಾ ಪಡುಕೋಣೆ ನಟಿಸಿದ್ದ ಸಿನಿಮಾದ ಸೀಕ್ವೆಲ್‌ನಲ್ಲಿ ನಟಿಸಲಿದ್ದಾರೆ.
(1 / 6)
ಪುಷ್ಪ ಸಿನಿಮಾ ಸರಣಿಯ ಯಶಸ್ಸಿನೊಂದಿಗೆ ರಶ್ಮಿಕಾಗೆ ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾ ಆಫರ್ ಬರುತ್ತಿವೆ. ಇತ್ತೀಚೆಗೆ, ಈ ನಟಿ ಹಿಂದಿಯಲ್ಲಿ ನಿರ್ಮಾಣವಾಗಲಿರುವ ಸೀಕ್ವೆಲ್‌ವೊಂದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
(2 / 6)
2012 ರಲ್ಲಿ ತೆರೆಗೆ ಬಂದಿದ್ದ ದೀಪಿಕಾ ಪಡುಕೋಣೆ, ಸೈಫ್ ಅಲಿಖಾನ್ ನಟಿಸಿದ್ದ ಕಾಕ್‌ಟೈಲ್ ಸಿನಿಮಾ ಇದೀಗ ಸೀಕ್ವೆಲ್ ಆಗುತ್ತಿದೆ.
(3 / 6)
'ಕಾಕ್‌ಟೈಲ್ 2 ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
(4 / 6)
2012 ರಲ್ಲಿ ಕಾಕ್‌ಟೈಲ್ ಚಿತ್ರವನ್ನು 35 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗಿತ್ತು. 125 ಕೋಟಿ ಗಳಿಕೆ ಕಂಡು ಹಿಟ್ ಆಗಿತ್ತು.
(5 / 6)
ಕಾಕ್‌ಟೈಲ್ 2 ಚಿತ್ರದಲ್ಲಿ ಶಾಹಿದ್ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಚಿತ್ರದ ಚಿತ್ರೀಕರಣ 2025ರ ಮೇ ತಿಂಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.
ಇತರ ಗ್ಯಾಲರಿಗಳು