ಅರ್ಹತೆ ಇದ್ದರೂ ಒಮ್ಮೆಯೂ ನಾಯಕತ್ವ ಸಿಗದ ಟೀಮ್ ಇಂಡಿಯಾ ದಿಗ್ಗಜರಿವರು; ಆರ್ ಅಶ್ವಿನ್ ಜೊತೆಗೆ ಇನ್ನೂ ನಾಲ್ವರು
- ಆರ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಭಾರತ ತಂಡದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಕ್ರಿಕೆಟಿಗ, ಟೀಮ್ ಇಂಡಿಯಾ ಕಂಡ ದಂತಕಥೆಗಳಲ್ಲಿ ಒಬ್ಬರಾಗಿ ವೃತ್ತಿಜೀವನಕ್ಕೆ ಪೂರ್ಣವಿರಾಮ ಕೊಟ್ಟರು. ಮೈದಾನದಲ್ಲಿ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲೂ ಹಲವು ದಾಖಲೆ ಬರೆದಿರುವ ಅವರು, ಎಲ್ಲಾ ಸಾಧನೆ ಮಾಡಿದರೂ, ಈ ಒಂದು ಕೊರತೆ ನೀಗಿಸಲಾಗಿಲ್ಲ.
- ಆರ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಭಾರತ ತಂಡದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಕ್ರಿಕೆಟಿಗ, ಟೀಮ್ ಇಂಡಿಯಾ ಕಂಡ ದಂತಕಥೆಗಳಲ್ಲಿ ಒಬ್ಬರಾಗಿ ವೃತ್ತಿಜೀವನಕ್ಕೆ ಪೂರ್ಣವಿರಾಮ ಕೊಟ್ಟರು. ಮೈದಾನದಲ್ಲಿ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲೂ ಹಲವು ದಾಖಲೆ ಬರೆದಿರುವ ಅವರು, ಎಲ್ಲಾ ಸಾಧನೆ ಮಾಡಿದರೂ, ಈ ಒಂದು ಕೊರತೆ ನೀಗಿಸಲಾಗಿಲ್ಲ.
(1 / 7)
ಅಶ್ವಿನ್ ಒಬ್ಬ ಅನುಭವಿ ಹಾಗೂ ತಂಡವನ್ನು ಮುನ್ನಡೆಸಬಲ್ಲ ಸಾಮರ್ಥ್ಯವಿರುವ ಆಟಗಾರ. ಆದರೆ, ಟೀಮ್ ಇಂಡಿಯಾ ಪರ ಅವರು ನಾಯಕನಾಗುವ ಅವಕಾಶವೇ ಸಿಕ್ಕಿಲ್ಲ. ಅರ್ಹತೆ ಇದ್ದರೂ, ನಾಯಕನ ಸ್ಥಾನ ಸಿಗಲಿಲ್ಲ. ಏಕೆಂದರೆ ಅಶ್ವಿನ್ ತಂಡದಲ್ಲಿದ್ದಾಗ ಎಂಎಸ್ ಧೋನಿ, ವಿರಾಟ್ ಕೊಹ್ಲಿಯಂಥಾ ಆಟಗಾರರು ಮುನ್ನೆಲೆಯಲ್ಲಿದ್ದರು.(PTI)
(2 / 7)
ಭಾರತ ತಂಡ ಕಂಡ ಹಲವು ದಿಗ್ಗಜ ಕ್ರಿಕೆಟಿಗರು ಟೀಮ್ ಇಂಡಿಯಾ ನಾಯಕತ್ವ ಪಡೆದಿಲ್ಲ. ಹಲವು ಮಹತ್ವದ ದಾಖಲೆ ಸೇರಿದಂತೆ ದಿಗ್ಗಜ ಕೆಕೆಟಿಗರ ಪಟ್ಟಿಯಲ್ಲಿ ಸೇರಿದರೂ, ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಸಿಗದ ಪ್ರಮುಖ ಕ್ರಿಕೆಟಿಗರ ಪಟ್ಟಿ ಇಲ್ಲಿದೆ.(ANI)
(3 / 7)
ಆರ್ ಅಶ್ವಿನ್ 2011ರಿಂದ 2017ರವರೆಗೆ ಭಾರತ ತಂಡದ ಪರ ಎಲ್ಲಾ ಮೂರು ಸ್ವರೂಪಗಳಲ್ಲಿಯೂ ಕಾಣಿಸಿಕೊಂಡ ಆಟಗಾರ. ಆದರೆ ಅವರು ಒಮ್ಮೆಯೂ ನಾಯಕ ಅಥವಾ ಉಪನಾಯಕರಾಗಿ ನೇಮಕಗೊಂಡಿಲ್ಲ. ಎಂಎಸ್ ಧೋನಿ ನಾಯಕರಾಗಿದ್ದಾಗ ವಿರಾಟ್ ಕೊಹ್ಲಿ ಉಪನಾಯಕರಾಗಿದ್ದರು. ಆ ನಂತರ ಕೊಹ್ಲಿ ನಾಯಕನಾದರು. ಈ ನಡುವೆ ಅಶ್ವಿನ್ ಸದಸ್ಯನಾಗಿ ಉಳಿದರು.(ANI)
(4 / 7)
ವಿವಿಎಸ್ ಲಕ್ಷ್ಮಣ್: ಭಾರತ ಟೆಸ್ಟ್ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾದ ವಿವಿಎಸ್ ಲಕ್ಷ್ಮಣ್, 134 ಟೆಸ್ಟ್‌ಗಳಲ್ಲಿ 8781 ರನ್ ಗಳಿಸಿದ್ದಾರೆ. ತಮ್ಮ ಸುದೀರ್ಘ ಟೆಸ್ಟ್ ವೃತ್ತಿಜೀವನದಲ್ಲಿ ಅವರು ಭಾರಿ ಯಶಸ್ಸು ಕಂಡರೂ, ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಸಿಗಲಿಲ್ಲ.(PTI)
(5 / 7)
ಯುವರಾಜ್ ಸಿಂಗ್ ದೀರ್ಘಕಾಲದವರೆಗೆ ಭಾರತದ ಉಪನಾಯಕರಾಗಿದ್ದರು. ಒಮ್ಮೆ ವೈಟ್-ಬಾಲ್ ನಾಯಕರಾಗಿ ಹೆಸರಿಸಲ್ಪಟ್ಟರು. ಆದರೆ ಎಂಎಸ್ ಧೋನಿ ಆ ಸ್ಥಾನ ತುಂಬಿದರು. 2007ರ ಟಿ20 ವಿಶ್ವಕಪ್‌ನಲ್ಲಿ ಧೋನಿ ಭಾರತವನ್ನು ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದರು. ಆ ನಂತರ ಯುವಿಗೆ ನಾಯಕನಾಗುವ ಅವಕಾಶವೇ ಸಿಗಲಿಲ್ಲ.
(6 / 7)
ಚೇತೇಶ್ವರ ಪೂಜಾರ ಭಾರತದ ಪ್ರಮುಖ ಟೆಸ್ಟ್ ಆಟಗಾರ. ಕನ್ನಡಿಗ ರಾಹುಲ್ ದ್ರಾವಿಡ್ ನಿವೃತ್ತಿ ನಂತರ ಅವರ ಸ್ಥಾನ ತುಂಬಿದರು. 2012ರಿಂದ 2022ರವರೆಗೆ ಟೀಮ್ ಇಂಡಿಯಾ ಪರ 3ನೇ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡಿದ ಪೂಜಾರ, ಟೆಸ್ಟ್ ತಂಡದ ನಾಯಕನಾಗಿಲ್ಲ. ಅಜಿಂಕ್ಯ ರಹಾನೆ ನಾಯಕನಾದಾಗ, ಉಪನಾಯಕನಾಗಿ ಆಯ್ಕೆಯಾಗಿದ್ದರು. ಆದರೆ ಟೀಮ್ ಇಂಡಿಯಾವನ್ನು ಮುನ್ನಡೆಸುವ ಅವಕಾಶ ಸಿಗಲಿಲ್ಲ.(HT_PRINT)
ಇತರ ಗ್ಯಾಲರಿಗಳು