ಮುಖ್ಯ ದ್ವಾರದ ಹೊಸ್ತಿಲು ಮೇಲೆ ಏಕೆ ಕುಳಿತುಕೊಳ್ಳಬಾರದು, ಹಾಗೆ ಕೂರುವುದರಿಂದ ಏನು ಸಮಸ್ಯೆ? ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮುಖ್ಯ ದ್ವಾರದ ಹೊಸ್ತಿಲು ಮೇಲೆ ಏಕೆ ಕುಳಿತುಕೊಳ್ಳಬಾರದು, ಹಾಗೆ ಕೂರುವುದರಿಂದ ಏನು ಸಮಸ್ಯೆ? ಇಲ್ಲಿದೆ ಉತ್ತರ

ಮುಖ್ಯ ದ್ವಾರದ ಹೊಸ್ತಿಲು ಮೇಲೆ ಏಕೆ ಕುಳಿತುಕೊಳ್ಳಬಾರದು, ಹಾಗೆ ಕೂರುವುದರಿಂದ ಏನು ಸಮಸ್ಯೆ? ಇಲ್ಲಿದೆ ಉತ್ತರ

ಹೊಸ್ತಿಲು ಮುಖ್ಯದ್ವಾರದ ಪ್ರಮಖ ಭಾಗ ಮಾತ್ರವಲ್ಲ, ಧಾರ್ಮಿಕವಾಗಿಯೂ ಬಹಳ ಮಹತ್ವ ಪಡೆದಿದೆ. ಅದೇ ಕಾರಣಕ್ಕೆ ಹಿಂದೂಗಳು ಹೊಸ್ತಿಲು ಪೂಜೆ ಮಾಡುತ್ತಾರೆ. ಆದರೆ ಕೆಲವರು ತಿಳಿದೋ, ತಿಳಿಯದೆಯೋ ಹೊಸ್ತಿಲು ಪೂಜೆ ಮಾಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಬಹಳಷ್ಟು ಸಮಸ್ಯೆಗಳು ಎದುರಾಗುತ್ತದೆ.

ಹೊಸ್ತಿಲು ಮೇಲೆ ಕೂರುವುದರಿಂದ ಮನೆಯಲ್ಲಿ, ದೈಹಿಕ, ಮಾನಸಿಕವಾಗಿ ಬಹಳಷ್ಟು ಸಮಸ್ಯೆಗಳು ಉಂಟಾಗುತ್ತವೆ.
ಹೊಸ್ತಿಲು ಮೇಲೆ ಕೂರುವುದರಿಂದ ಮನೆಯಲ್ಲಿ, ದೈಹಿಕ, ಮಾನಸಿಕವಾಗಿ ಬಹಳಷ್ಟು ಸಮಸ್ಯೆಗಳು ಉಂಟಾಗುತ್ತವೆ.

ಹೊಸ್ತಿಲು, ಮನೆಯ ಬಾಗಿಲಿಗೆ ಸಂಬಂಧಿಸಿದ ಭಾಗ ಮಾತ್ರವಲ್ಲ, ಅದಕ್ಕೆ ಒಂದು ಧಾರ್ಮಿಕ ಸ್ಥಾನವನ್ನು ನೀಡಲಾಗಿದೆ. ಹೊಸ್ತಿಲ ವಿಚಾರದಲ್ಲಿ ಕೂಡಾ ನಾವು ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದ್ದೇವೆ. ಕೆಲವರು ಪ್ರತಿದಿನ, ಕೆಲವರು ಪ್ರತಿ ಶುಕ್ರವಾರ ಹೊಸ್ತಿಲಿಗೆ ಅರಿಶಿನ, ಕುಂಕುಮ ಹಚ್ಚಿ ಹೂವು ಇಟ್ಟು ಪೂಜೆ ಮಾಡುತ್ತಾರೆ. ಹೊಸ್ತಿಲು ಮನೆಗೆ ಅದೃಷ್ಟ ತರುತ್ತದೆ ಎಂದು ನಂಬಲಾಗಿದೆ.

ಹೊಸ್ತಿಲನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ, ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂಬ ನಂಬಿಕೆ ಇದೆ. ಆದ್ದರಿಂದ ಇದನ್ನು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ದೇವರನ್ನು ಪೂಜಿಸುವಂತೆಯೇ ಪೂಜಿಸುತ್ತಾರೆ. ಹೊಸ್ತಿಲು ಮಾತ್ರವಲ್ಲ, ಬಾಗಿಲಿನ ಮೇಲ್ಭಾಗಕ್ಕೂ ಅರಿಸಿನ, ಕುಂಕುಮ ಹೂ, ತೋರಣ ಇಟ್ಟು ಪೂಜಿಸುತ್ತಾರೆ. ಹೊಸ್ತಿಲನ್ನು ಪೂಜಿಸುವುದರಿಂದ ಮನೆಗೆ ದೇವತೆಗಳು ಪ್ರವೇಶಿಸುತ್ತಾರೆ, ಆಶೀರ್ವಾದ ಮಾಡಿ ಹಾರೈಸುತ್ತಾರೆ ಎಂಬ ನಂಬಿಕೆ ಇದೆ. ಆದರೆ ಕೆಲವರು ಹೊಸ್ತಿಲನ್ನು ತುಳಿಯುವುದು, ಹೊಸ್ತಿಲ ಮೇಲೆ ಕುಳಿತುಕೊಳ್ಳುವುದನ್ನು ಮಾಡುತ್ತಾರೆ. ಹೀಗೆ ಮಾಡುವುದು ತಪ್ಪು.

ಮುಖ ಮಂಟಪದಲ್ಲಿ ಏಕೆ ಕುಳಿತುಕೊಳ್ಳಬಾರದು?

ಧಾರ್ಮಿಕ ಸಂಪ್ರದಾಯ, ಜ್ಯೋತಿಷ್ಯದ ಪ್ರಕಾರ ಹೊಸ್ತಿಲ ಮೇಲೆ ಕುಳಿತುಕೊಳ್ಳುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ದೇವತೆಗಳಿಗೆ ಅಪಮಾನ ಮಾಡಿದಂತೆ ಹಾಗೂ ನಕಾರಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶಿಸಲು ಅನುಕೂಲ ಮಾಡಿಕೊಟ್ಟಂತೆ ಎಂದು ನಂಬಲಾಗಿದೆ. ಆತ್ಮ ಶಕ್ತಿ ಮತ್ತು ದೈವಿಕ ರಕ್ಷಣೆ ಕುಸಿಯುತ್ತದೆ. ಇದಲ್ಲದೆ ಹೊಸ್ತಿಲಿನ ಮೇಲೆ ಕುಳಿತುಕೊಳ್ಳುವುದರಿಂದ ಆರ್ಥಿಕ ಅಭಿವೃದ್ಧಿಗೆ ತೊಂದರೆಯಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ವಿವರಿಸಲಾಗಿದೆ. ಇದು ವ್ಯಕ್ತಿಯ ಜೀವನದಲ್ಲಿ ನಕಾರಾತ್ಮಕತೆ ಮತ್ತು ದೋಷಗಳನ್ನು ಸೂಚಿಸುತ್ತದೆ. ಮಾನಸಿಕ ಶಾಂತಿ ಕದಡುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳ ಆಜ್ಞೆಗಳಿಗೆ ಮತ್ತು ಪ್ರಭಾವಗಳಿಗೆ ನಾವು ಒಳಗಾಗುತ್ತೇವೆ ಎಂಬ ನಂಬಿಕೆಯೂ ಇದೆ.

ಹೊಸ್ತಿಲ ಮೇಲೆ ಕೂರುವುದರಿಂದ ಎದುರಾಗುವ ಇನ್ನಷ್ಟು ಸಮಸ್ಯೆಗಳು

  • ಹೊಸ್ತಿಲ ಮೇಲೆ ಕುಳಿತುಕೊಳ್ಳುವುದರಿಂದ ಸಕಾರಾತ್ಮಕ ಶಕ್ತಿಗಳು ಮನೆಗೆ ಬರುವುದು ತಡೆಯುತ್ತದೆ. ಪರಿಣಾಮವಾಗಿ ದುಷ್ಟ ಶಕ್ತಿಗಳು ಮತ್ತು ನಕಾರಾತ್ಮಕ ಶಕ್ತಿಗಳು
  • ವ್ಯಕ್ತಿಯ ಆಧ್ಯಾತ್ಮಿಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ದುಷ್ಟ ಶಕ್ತಿಗಳ ಪ್ರಭಾವದಿಂದ ಚಡಪಡಿಕೆ ಮತ್ತು ಕಿರಿಕಿರಿಯಂತಹ ಸಮಸ್ಯೆಗಳು ಉದ್ಭವಿಸುತ್ತವೆ.
  • ಹೊಸ್ತಿಲ ಮೇಲೆ ಕೂರುವುದರಿಂದ ದೇಹಕ್ಕೆ ಸರಿಯಾದ ಬೆಂಬಲವನ್ನು ನೀಡುವುದಿಲ್ಲ, ಸಾಕಷ್ಟು ವಿಶ್ರಾಂತಿಯ ಕೊರತೆ, ದೈಹಿಕ ಆಯಾಸ, ಮೊಣಕಾಲು ನೋವು, ಮಾನಸಿಕ ಒತ್ತಡ, ನರಗಳ ಸಮಸ್ಯೆಗಳಂತ ದೈಹಿಕ ಕಾಯಿಲೆಗಳನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ .
  • ಅದೃಷ್ಟವನ್ನು ಕಡಿಮೆ ಮಾಡುತ್ತದೆ, ಎಲ್ಲಾ ಆರೋಗ್ಯ, ಹಣಕಾಸು, ವಿದ್ಯಾಭ್ಯಾಸ ಎಲ್ಲಾ ವಿಚಾರದಲ್ಲೂ ಸೋಲು ಕಾಡುತ್ತದೆ.
  • ಹೊಸ್ತಿಲ ಮೇಲೆ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಕ್ರಮೇಣ ದೈಹಿಕ ಸ್ವಾಧೀನ ಕಳೆದುಕೊಳ್ಳುತ್ತಾರೆ ಎನ್ನಲಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.