ಹಬ್ಬದ ಡೀಲ್; ರಿಯಾಯಿತಿ, ಡಿಸ್ಕೌಂಟ್ ಚೆಕ್ ಮಾಡಿಲ್ವ, ಐಸಿಐಸಿಐ ಬ್ಯಾಂಕ್‌ನಿಂದ ಎಸ್‌ಬಿಐ ತನಕದ ಬ್ಯಾಂಕ್‌ಗಳ ಫೆಸ್ಟಿವ್ ಆಫರ್ ವಿವರ
ಹಬ್ಬದ ಸೀಸನ್ ಇದು. ದಸರಾ, ದುರ್ಗಾಪೂಜೆ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳು ಶುರುವಾಗಿವೆ. ಹಬ್ಬದ ಸಂದರ್ಭದ ವ್ಯಾಪಾರವೂ ಜೋರಾಗಿದೆ. ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್‌ಗಳೂ ಚಾಲ್ತಿಯಲ್ಲಿವೆ. ಇದರ ಲಾಭವನ್ನು, ಪ್ರಯೋಜನವನ್ನು ಪಡೆಯಲು ಬ್ಯಾಂಕುಗಳು ಕೂಡ ಮುಂದಾಗಿದ್ದು, ಗ್ರಾಹಕರಿಗೆ ವಿಶೇಷ ರಿಯಾಯಿತಿ, ಕ್ಯಾಶ್‌ಬ್ಯಾಕ್ ಘೋಷಿಸಿವೆ. ಅವುಗಳ ಕಡೆಗೊಂದು ನೋಟ ಇಲ್ಲಿದೆ.
(1 / 12)
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕ್‌ಗಳಂತಹ ಪ್ರಮುಖ ಬ್ಯಾಂಕ್‌ಗಳಲ್ಲದೆ, ಸಣ್ಣ ಹಣಕಾಸು ಬ್ಯಾಂಕ್‌ಗಳು ಈ ಹಬ್ಬದ ಋತುವಿನಲ್ಲಿ ವಿಶೇಷ ಕೊಡುಗೆಗಳನ್ನು ನೀಡುತ್ತಿವೆ.
(2 / 12)
ಒನ್‌ಪ್ಲಸ್, ಗೂಗಲ್ ಪಿಕ್ಸೆಲ್, ಷಒಮಿ, ರಿಯಲ್‌ಮಿ ಮುಂತಾದ ಮೊಬೈಲ್ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ರಿಯಾಯಿತಿ, ಇಎಂಐಗಳನ್ನು ಐಸಿಐಸಿಐ ಬ್ಯಾಂಕ್ ಪ್ರಕಟಿಸಿದೆ. ಮಿಂತ್ರಾ, ಟಾಟಾ ಕ್ಲಿಕ್‌ನಲ್ಲಿ ಆನ್‌ಲೈನ್ ಶಾಪಿಂಗ್ ಮಾಡುವಾಗ ಶೇಕಡ 10 ರಿಯಾಯಿತಿಯನ್ನು ಐಸಿಐಸಿಐ ಬ್ಯಾಂಕ್ ನೀಡುತ್ತಿದೆ. ಇದಲ್ಲದೆ, ಗೃಹ ಸಾಲ, ವಾಹನ ಸಾಲ, ಶಿಕ್ಷಣ ಸಾಲಗಳ ಮೇಲೆಯೂ ಬ್ಯಾಂಕ್ ವಿಶೇಷ ಕೊಡುಗೆ ಘೋಷಿಸಿದೆ.
(3 / 12)
ಐಫೋನ್ 16 ಖರೀದಿಗೆ ಸಾಲ ಮತ್ತು ಇಎಂಐಗೆ 5000 ರೂಪಾಯಿ ತನಕದ ಕ್ಯಾಶ್‌ಬ್ಯಾಕ್ ಅನ್ನು ಕೂಡ ಐಸಿಐಸಿಐ ಬ್ಯಾಂಕ್ ಪ್ರಕಟಿಸಿದೆ. ಕ್ರೆಡಿಟ್ ಕಾರ್ಡ್ ಹೊಂದಿದವರು ಆಪಲ್‌ನ ಐಫೋನ್ ಫಾರ್ ಲೈಫ್ ಪ್ರೋಗ್ರಾಂಗೆ ನೋಂದಾಯಿಸಿದರೆ 24 ತಿಂಗಳ ಬಡ್ಡಿ ರಹಿತ ಇಎಂಐ ಸೌಲಭ್ಯ ಸಿಗುತ್ತದೆ.
(4 / 12)
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗ್ಯಾಜೆಟ್‌ಗಳು, ಫ್ಯಾಷನ್, ಎಲೆಕ್ಟ್ರಾನಿಕ್ ವಸ್ತುಗಳು, ಜೀವನಶೈಲಿ, ಆಭರಣಗಳು, ಪ್ರಯಾಣ ಮತ್ತು ಹೆಚ್ಚಿನವುಗಳ ಮೇಲೆ ರಿಯಾಯಿತಿಗಳು ಮತ್ತು ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಆಪಲ್ ಉತ್ಪನ್ನಗಳ ಮೇಲೆ 10,000 ರೂಪಾಯಿವರೆಗೆ ತತ್‌ಕ್ಷಣದ ರಿಯಾಯಿತಿಯನ್ನು ನೀಡುತ್ತಿದೆ,
(5 / 12)
ಇದರ ಜೊತೆಗೆ ಎಸ್‌ಬಿಐ, ಹೈಯರ್, ಬಾಷ್, ಎಚ್‌ಪಿ, ಎಲ್‌ಜಿ ಮತ್ತು ಇತರ ಬ್ರಾಂಡ್‌ಗಳ ಉತ್ಪನ್ನಗಳಿಗೂ ಕೊಡುಗೆ ಪ್ರಕಟಿಸಿದೆ. ಗ್ರಾಹಕರು ಲೈಫ್‌ಸ್ಟೈಲ್, ಫ್ಯಾಷನ್ ಫ್ಯಾಕ್ಟರಿ ಮತ್ತು ಟ್ರೆಂಡ್‌ಗಳು ಸೇರಿ ವಿವಿಧ ಫ್ಯಾಷನ್ ಬ್ರ್ಯಾಂಡ್‌ಗಳ ಮೇಲೆ ರಿಯಾಯಿತಿಗಳನ್ನು ಸಹ ಪಡೆಯಬಹುದು.'
(6 / 12)
ಬ್ಯಾಂಕ್ ಆಫ್ ಇಂಡಿಯಾ ಒಂದು ಕೋಟಿ ಗಿಂತ ಹೆಚ್ಚು ಮೂರು ಕೋಟಿ ರೂಪಾಯಿ ಒಳಗಿನ ಮೊತ್ತದ 400 ದಿನಗಳ ವಿಶೇಷ ಅವಧಿ ಠೇವಣಿಯನ್ನು ಪರಿಚಯಿಸಿದೆ. ಇದರಲ್ಲಿ ಸಾಮಾನ್ಯರಿಗೆ ಶೇಕಡ 7.45, ಹಿರಿಯ ನಾಗರಿಕರಿಗೆ ಶೇ 7.95 ಮತ್ತು ಅತ್ಯಂತ ಹಿರಿಯ ನಾಗರಿಕರಿಗೆ ಶೇ 8.10 ಬಡ್ಡಿದರವನ್ನು ಪ್ರಕಟಿಸಿದೆ. ಯಾವಾಗ ಬೇಕಾದರೂ ಹಿಂಪಡೆಯಬಹುದಾದ ಅವಕಾಶವನ್ನೂ ಈ ಠೇವಣಿಯನ್ನ ಇನ್ನೊಂದು ಮಾದರಿಗೆ ಒದಗಿಸಿದ್ದು, ಅದರಲ್ಲಿ ಅತ್ಯಂತ ಹಿರಿಯ ನಾಗರಿಕರಿಗೆ ಶೇ 7.95, ಹಿರಿಯ ನಾಗರಿಕರಿಗೆ ಶೇಕಡ 7.80, ಸಾಮಾನ್ಯ ನಾಗರಿಕರ ಠೇವಣಿಗೆ ಶೇಕಡ 7.30 ಬಡ್ಡಿ ಘೋಷಿಸಿದೆ.
(7 / 12)
ಆಕ್ಸಿಸ್ ಬ್ಯಾಂಕ್‌ನ ಹಬ್ಬದ ಋತುವಿನ ಪ್ರಚಾರವು ಶಾಪಿಂಗ್, ಎಲೆಕ್ಟ್ರಾನಿಕ್ಸ್, ಐಷಾರಾಮಿ ಜೀವನಶೈಲಿ, ಊಟ ಮತ್ತು ದಿನಸಿ ಸೇರಿ ವಿವಿಧ ವರ್ಗಗಳ ಮೇಲೆ ಶೇಕಡ 25 ರಷ್ಟು ರಿಯಾಯಿತಿ ಪ್ರಕಟಿಸಿದೆ. ಆಕರ್ಷಕ ಇಎಂಐ ಯೋಜನೆಗಳ ಜೊತೆಗೆ ಕ್ಲಿಯರ್ ಟ್ರಿಪ್, ಮೇಕ್ ಮೈ ಟ್ರಿಪ್ ಮುಂತಾದ ಪಾಲುದಾರ ಆಪ್‌ಗಳ ಮೂಲಕ ಪ್ರಯಾಣ ಬುಕಿಂಗ್‌ನಲ್ಲಿ ತತ್‌ಕ್ಷಣದ ಉಳಿತಾಯವನ್ನೂ ಪಡೆಯಬಹುದು.
(8 / 12)
ಆಕ್ಸಿಸ್ ಬ್ಯಾಂಕ್ ಕಾರ್ಡ್‌ದಾರರು ಫ್ಲಿಪ್‌ಕಾರ್ಟ್‌ನಲ್ಲಿ ಮಾಡಿದ ಎಲ್ಲ ಖರೀದಿಗಳ ಮೇಲೆ ಹೆಚ್ಚುವರಿಯಾಗಿ 5 ಪ್ರತಿಶತ ಕ್ಯಾಶ್‌ಬ್ಯಾಕ್ ಪಡೆಯಬಹುದು. ಅಗ್ರ ಭಾರತೀಯ ಇ-ಕಾಮರ್ಸ್ ಸೈಟ್‌ಗಳ ಜೊತೆಗೆ 50 ಕ್ಕೂ ಹೆಚ್ಚು ಬ್ರಾಂಡ್‌ಗಳಲ್ಲಿ 50 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್‌ನೊಂದಿಗೆ ಡೀಲ್‌ಗಳಿವೆ.
(9 / 12)
ಫೆಡರಲ್ ಬ್ಯಾಂಕ್ ವಿಶೇಷ ಠೇವಣಿ ದರದ ಕೊಡುಗೆಗಳನ್ನು ಪರಿಚಯಿಸಿದೆ. ಗ್ರಾಹಕರು ಅವಧಿಯ ಠೇವಣಿಗಳ ಮೇಲೆ ಶೇಕಡಾ 7.55 ರವರೆಗಿನ ಬಡ್ಡಿದರ ಪಡೆಯಬಹುದು. ಹಿರಿಯ ನಾಗರಿಕರು ಹೆಚ್ಚುವರಿ 0.50 ಶೇಕಡಾ ಬಡ್ಡಿ ದರವನ್ನು ಪಡೆಯುತ್ತಾರೆ. ಪ್ರಯಾಣ, ಸೌಂದರ್ಯ, ಉಡುಪು, ಎಲೆಕ್ಟ್ರಾನಿಕ್ಸ್ ಮತ್ತು ಆಹಾರ ವಿತರಣಾ ವಿಭಾಗಗಳಲ್ಲಿ ವಿವಿಧ ಹಬ್ಬದ ಡೀಲ್‌ಗಳನ್ನು ಬ್ಯಾಂಕ್ ಪ್ರಕಟಿಸಿದೆ.
(10 / 12)
ಗ್ರಾಹಕರು ಯಾತ್ರಾ, ಕ್ಲಿಯರ್‌ಟ್ರಿಪ್ ಮತ್ತು ಅದಾನಿ ಒನ್‌ನಂತಹ ಪಾಲುದಾರರ ಮೂಲಕ ಪ್ರಯಾಣ ಬುಕಿಂಗ್‌ಗಳ ಜೊತೆಗೆ ಇಂಡಿಗೋ, ಅಜಿಯೊ ಮತ್ತು ಕ್ರೋಮಾದಂತಹ ಜನಪ್ರಿಯ ಬ್ರ್ಯಾಂಡ್‌ಗಳ ಮೇಲೆ ರಿಯಾಯಿತಿಗಳನ್ನು ಆನಂದಿಸಬಹುದು. ಜೊಮ್ಯಾಟೊ, ಸ್ವಿಗ್ಗಿ ಸಹ ಫೆಡರಲ್ ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ ನಿರ್ದಿಷ್ಟ ಮೊತ್ತದ ಮೇಲಿನ ಆರ್ಡರ್‌ಗಳ ಮೇಲೆ ರಿಯಾಯಿತಿ ನೀಡುತ್ತಿವೆ.
(11 / 12)
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಗೃಹ ಸಾಲ ಮಾರುಕಟ್ಟೆಯಲ್ಲಿ ಆಕರ್ಷಕ ಬಡ್ಡಿ ದರದ ಸಾಲ ಸೌಲಭ್ಯ ಘೋಷಿಸಿದೆ. ಇದು ಸಿಬಿಲ್ ಸ್ಕೋರ್ ಅನ್ನು ಆಧರಿಸಿ 8.35 ಪ್ರತಿಶತದಿಂದ ಪ್ರಾರಂಭವಾಗುತ್ತದೆ. ಹೊಸ/ಹಳೆಯ ಮನೆ ಫ್ಲಾಟ್‌ಗಳು/ಮನೆಗಳಿಗೆ ಗೃಹ ಸಾಲ ಸೌಲಭ್ಯ ಪ್ರಕಟಿಸಿದೆ. ಇದಲ್ಲದೆ, ಪ್ಲಾಟ್‌ಗಳ ಖರೀದಿ ಮತ್ತು ನಿರ್ಮಾಣಕ್ಕಾಗಿ ಸಂಯೋಜಿತ ಸಾಲವೂ ನೀಡುವುದಾಗಿ ತಿಳಿಸಿದೆ. ಯಾವುದೇ ಪೂರ್ವಪಾವತಿ ದಂಡವಿಲ್ಲದೆ 30 ವರ್ಷಗಳ ಅವಧಿಯವರೆಗೆ ಈ ಸಾಲ ಸೌಲಭ್ಯ ಪಡೆಯಬಹುದು
ಇತರ ಗ್ಯಾಲರಿಗಳು