ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ ಕೇಂದ್ರ ಸರ್ಕಾರಿ ನೌಕರರು, ಯಾವಾಗ ಘೋಷಣೆ, ಎಷ್ಟು ಹೆಚ್ಚಳವಾಗಬಹುದು
ತುಟ್ಟಿಭತ್ಯೆ (ಡಿಎ) ಹೆಚ್ಚಳದ ಘೋಷಣೆಗಾಗಿ ಕೇಂದ್ರ ಸರ್ಕಾರಿ ನೌಕರರು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಹಾಗಾದರೆ, ಸರ್ಕಾರಿ ನೌಕರರಿಗೆ ಡಿಎ ಯಾವಾಗ ಘೋಷಣೆಯಾಗಬಹುದು, ಎಷ್ಟು ಹೆಚ್ಚಳವಾಗಬಹುದು ಎಂಬಿತ್ಯಾದಿ ನಿರೀಕ್ಷೆಗಳ ಕಡೆಗೆ ಒಂದು ನೋಟ.
(1 / 9)
ವರ್ಷಂಪ್ರತಿಯಂತೆ ಈ ಬಾರಿ ಕೂಡ ತುಟ್ಟಿಭತ್ಯೆ (ಡಿಎ) ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ ಕೇಂದ್ರ ಸರ್ಕಾರಿ ನೌರರು. ಆದರೆ ಕೇಂದ್ರ ಸರ್ಕಾರ ಇನ್ನೂ ಅಧಿಕೃತವಾಗಿ ಈ ಬಗ್ಗೆ ಪ್ರಕಟಣೆ ಹೊರಡಿಸಿಲ್ಲ. ನೌಕರರ ನಿರೀಕ್ಷೆ ಪ್ರಕಾರ ಇದೇ ತಿಂಗಳು ಅಂದರೆ ಅಕ್ಟೋಬರ್‌ನಲ್ಲೇ ತುಟ್ಟಿಭತ್ಯೆ (ಡಿಎ) ಹೆಚ್ಚಳವಾಗಬಹುದು. (Pixabay)
(2 / 9)
ವಿವಿಧ ಮಾಧ್ಯಮ ವರದಿಗಳೂ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಹೆಚ್ಚಳ ಇದೇ ತಿಂಗಳು ಘೋಷಣೆಯಾಗಬಹುದು ಎನ್ನುತ್ತಿವೆ. ದೀಪಾವಳಿಗೂ ಮುಂಚಿತವಾಗಿ ಈ ಪ್ರಕಟಣೆ ಹೊರಬೀಳಬಹುದು. ಶೇಕಡ 3 ರಿಂದ 4 ರಷ್ಟು ಡಿಎ ಹೆಚ್ಚಳವಾಗಬಹುದು ಎಂದು ಹೇಳಿವೆ.
(3 / 9)
ಕಳೆದ ವರ್ಷ ಅಂದರೆ 2023ರಲ್ಲಿ ಕೂಡ ಅಕ್ಟೋಬರ್ ತಿಂಗಳಲ್ಲೇ ಕೇಂದ್ರ ಸರ್ಕಾರಿ ನೌಕರರ ಡಿಎ ಹೆಚ್ಚಳ ಪ್ರಕಟವಾಗಿತ್ತು.
(4 / 9)
ತುಟ್ಟಿಭತ್ಯೆ (ಡಿಎ) ಎನ್ನುವುದು ಉದ್ಯೋಗಿಗಳಿಗೆ ಅವರ ಜೀವನ ವೆಚ್ಚದ ಮೇಲೆ ಹಣದುಬ್ಬರದ ಪರಿಣಾಮವನ್ನು ಸರಿದೂಗಿಸಲು ಪಾವತಿಸುವ ಮೂಲ ವೇತನದ ಶೇಕಡಾವಾರು ಮೊತ್ತ. ಇದನ್ನು ನಿಯತವಾಗಿ ಸರಿಹೊಂದಿಸಲಾಗುತ್ತದೆ, ಸಾಮಾನ್ಯವಾಗಿ ಪ್ರತಿ ಆರು ತಿಂಗಳಿಗೊಮ್ಮೆ, ಜೀವನ ವೆಚ್ಚದ ಸೂಚ್ಯಂಕದಲ್ಲಿನ ಬದಲಾವಣೆಗಳನ್ನು ಗಣನೆಗೆ ತೆಗೆದುಕೊಂಡು ಈ ಹೆಚ್ಚಳವನ್ನು ಸರ್ಕಾರ ಪ್ರಕಟಿಸುತ್ತದೆ.
(5 / 9)
ಡಿಎ ಹೆಚ್ಚಳವು ಹಣದುಬ್ಬರ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚವನ್ನು ಸರಿದೂಗಿಸಲು ಆಯಾ ನೌಕರರ ಮೂಲ ವೇತನದ ಶೇಕಡಾವಾರು ಮೊತ್ತವಾಗಿದ್ದು, ವರ್ಷಕ್ಕೆ ಎರಡು ಸಲ ಹೆಚ್ಚಳ ಪ್ರಕಟಿಸುತ್ತದೆ.
(6 / 9)
ನ್ಯೂಸ್ 18 ವರದಿ ಪ್ರಕಾರ, 30,000 ರೂಪಾಯಿ ವೇತನ ಇದ್ದವರಿಗೆ ಮೂಲ ವೇತನ 18,000 ರೂಪಾಯಿ ಎಂದಾದರೆ ಅವರ ಡಿಎ ಮೊತ್ತ 9,000 ರೂಪಾಯಿ. ಅಂದರೆ ಅದು ಈಗ ಅವರ ಮೂಲ ವೇತನದ ಶೇಕಡ 50 ರಷ್ಟು ಇದೆ.
(7 / 9)
ಈಗ ಕೇಂದ್ರ ಸರ್ಕಾರ ಶೇಕಡ 3 ಡಿಎ ಹೆಚ್ಚಳ ಘೋಷಿಸಿದರೆ ಆಗ ಈ ಮೊತ್ತವು 9540 ರೂಪಾಯಿ. ಒಂದೊಮ್ಮೆ ಶೇಕಡ 4 ಡಿಎ ಹೆಚ್ಚಳ ಪ್ರಕಟಿಸಿದರೆ ಆಗ ಈ ಮೊತ್ತವು 9720 ರೂಪಾಯಿ ಆಗಲಿದೆ.
(8 / 9)
ವಾಡಿಕೆಯಂತೆ ಕೇಂದ್ರ ಸರ್ಕಾರವು ದೀಪಾವಳಿಯ ಸಮೀಪದಲ್ಲಿ ಡಿಎ ಹೆಚ್ಚಳ ಪ್ರಕಟಿಸುತ್ತದೆ. ಅದೇ ರೀತಿ ಇನ್ನೊಮ್ಮೆ ಮಾರ್ಚ್ ತಿಂಗಳಲ್ಲಿ ಹೋಳಿ ಹಬ್ಬದ ಆಸುಪಾಸಿನಲ್ಲಿ ತುಟ್ಟಿಭತ್ಯೆ ಏರಿಕೆಯನ್ನು ಕೇಂದ್ರ ಸರ್ಕಾರ ಘೋಷಿಸುತ್ತದೆ.
ಇತರ ಗ್ಯಾಲರಿಗಳು